Sleep: ಒಬ್ಬ ವ್ಯಕ್ತಿ ನಿದ್ದೆ ಇಲ್ಲದೆ ಎಷ್ಟು ದಿನ ಬದುಕಬಹುದು ಗೊತ್ತಾ? ಇದು ಗೊತ್ತಾದ್ರೆ ನೀವು ನಿದ್ದೆಗೆಡೋಲ್ಲ

ನಿದ್ರೆ ಎನ್ನುವುದು ಮುನುಷ್ಯನಿಗೆ ತುಂಬಾನೇ ಮುಖ್ಯವಾದದ್ದು ಎಂದು ಹೇಳಬಹುದು. ಮತ್ತೆ ಕೆಲವು ಸಂದರ್ಭದಲ್ಲಿ ಆಫೀಸಿನ ಕೆಲಸ, ಮನೆಯ ಕೆಲಸ ಅಂತ ಸರಿಯಾಗಿ ನಿದ್ರೆಯೇ ಆಗುವುದಿಲ್ಲ. ಹೀಗೆ ಅನೇಕ ಕಾರಣಗಳಿಂದಾಗಿ ನಮಗೆ ನಿದ್ರೆಯ ಕೊರತೆ ಉಂಟಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ಮದುವೆ ಸಮಾರಂಭವಿದ್ದರೆ (Marriage Function) ಅಥವಾ ಯಾವುದೋ ಒಂದು ದೊಡ್ಡ ಪ್ರಮಾಣದ ಸಮಾರಂಭಗಳು ಇದ್ದರೆ, ಅದಕ್ಕೆ ಸಿದ್ದತೆಗಳನ್ನು ಮಾಡುವುದಕ್ಕೆ ಹಗಲು ರಾತ್ರಿ ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡ ರೀತಿಯಲ್ಲಿ ನಿದ್ರೆಯನ್ನು ತ್ಯಜಿಸಿ ಹಾಗೆಯೇ ಆ ಎಲ್ಲಾ ಸಿದ್ದತೆಗಳನ್ನು ನೋಡಿಕೊಳ್ಳುತ್ತಾ ಇರುತ್ತೇವೆ. ಆ ಸಮಾರಂಭ ಮುಗಿದ ನಂತರ ನಾವು ಯಾವಾಗ ಹಾಸಿಗೆಯ (Bed) ಮೇಲೆ ಬಿದ್ದಿರುತ್ತೇವೆ ನಮಗೆ ಗೊತ್ತಿರುವುದಿಲ್ಲ. ನಿದ್ರೆ ಎನ್ನುವುದು ಮುನುಷ್ಯನಿಗೆ ತುಂಬಾನೇ ಮುಖ್ಯವಾದದ್ದು ಎಂದು ಹೇಳಬಹುದು. ಮತ್ತೆ ಕೆಲವು ಸಂದರ್ಭದಲ್ಲಿ ಆಫೀಸಿನ ಕೆಲಸ (Office Work), ಮನೆಯ ಕೆಲಸ ಅಂತ ಸರಿಯಾಗಿ ನಿದ್ರೆಯೇ (Sleep) ಆಗುವುದಿಲ್ಲ. ಹೀಗೆ ಅನೇಕ ಕಾರಣಗಳಿಂದಾಗಿ ನಮಗೆ ನಿದ್ರೆಯ ಕೊರತೆ ಉಂಟಾಗುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಿದ್ರೆಯ ಪ್ರಾಮುಖ್ಯತೆ
ಮಾನವ ದೇಹದ ಪ್ರತಿಯೊಂದು ಅಂಗಾಂಗಗಳು ಅದರದ್ದೇ ಆದಂತಹ ಮಹತ್ವದ ಕಾರ್ಯವನ್ನು ಹೊಂದಿದೆ. ಬದುಕುಳಿಯಲು ಆಮ್ಲಜನಕ, ಆಹಾರ ಮತ್ತು ನೀರು ಹೇಗೆ ಅವಶ್ಯಕವೋ ಹಾಗೆಯೇ ನಿದ್ರೆಯ ಪ್ರಾಮುಖ್ಯತೆಯನ್ನು ನಿರ್ಲಕ್ಷಿಸಲಾಗುವುದಿಲ್ಲ. ವಿಜ್ಞಾನಿಗಳು ತಮ್ಮ ಅಧ್ಯಯನಗಳಲ್ಲಿ ಪದೇ ಪದೇ ಒಬ್ಬ ವ್ಯಕ್ತಿಯು ಮಲಗಿದಾಗ, ಅವನ ದೇಹಕ್ಕೆ ಒಂದು ರೀತಿಯ ಇಂಧನ ತುಂಬಿಸಿದಂತೆ ಎಂದು ಹೇಳುತ್ತಾರೆ ಮತ್ತು ಅದಕ್ಕಾಗಿಯೇ ಮರುದಿನ ಬೆಳಿಗ್ಗೆ ಅವನು ಎಚ್ಚರವಾದಾಗ ತುಂಬಾನೇ ತಾಜಾತನದ ಅನುಭವವನ್ನು ಅನುಭವಿಸುತ್ತಾನೆ.

ಸರಿಯಾಗಿ ನಿದ್ದೆ ಮಾಡದೆ ಇದ್ದರೆ ಏನಾಗುವುದು?
ಆದರೆ ನಿಮಗೆ ತಿಳಿದಿದೆಯೇ, ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ರೆ ಮಾಡದಿದ್ದರೆ, ಕೆಲವು ಆಘಾತಕಾರಿ ನಕಾರಾತ್ಮಕ ಪರಿಣಾಮಗಳಿಗೆ ಮತ್ತು ಅನಾರೋಗ್ಯಕ್ಕೆ ಸಹ ತುತ್ತಾಗಬೇಕಾಗುತ್ತದೆ ಎಂದು. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಪ್ರತಿ ದಿನ ರಾತ್ರಿ ಹೊತ್ತಿನಲ್ಲಿ 8 ಗಂಟೆಗಳವರೆಗೆ ನಿದ್ರಿಸುತ್ತಾನೆ, ಆದರೆ ಒಬ್ಬ ವ್ಯಕ್ತಿಯು ಇಷ್ಟು ಗಂಟೆಗಳ ಕಾಲ ನಿದ್ರಿಸದೆ ಇದ್ದರೆ ಹೇಗೆ? ಏನಾಗುತ್ತದೆ? ಎಂದು ನೀವು ಕೇಳಬಹುದು. ಇದು ಅವನ ದೇಹದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Health Tips: ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಲಿಚ್ಚಿ ಹಣ್ಣು! ಇದು ಆರೋಗ್ಯ ಗುಣಗಳ ಖನಿ

ನಾವು ಆಹಾರವನ್ನು ಸೇವಿಸದೆ ಇದ್ದರೆ ಮತ್ತು ನೀರನ್ನು ಕುಡಿಯದಿದ್ದರೆ ದೇಹವು ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲದಂತೆಯೇ, ಮಲಗುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದ್ದರಿಂದ ನಿದ್ರೆ, ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದು ಜೀವನದ ಅತ್ಯಗತ್ಯ ಚಟುವಟಿಕೆಗಳಾಗಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಇವುಗಳನ್ನು ಸರಿಯಾಗಿ ನಿರ್ವಹಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ.

ದೈನಂದಿನ ಚಟುವಟಿಕೆಗಳಿಂದ ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟಕ್ಕೆ ಅಡ್ಡಿಯಾದಾಗ, ಅದು ವ್ಯಕ್ತಿಯ ಆರೋಗ್ಯವನ್ನು ಹದಗೆಡಿಸುತ್ತದೆ. ನೀವು ನಿದ್ರಾಹೀನತೆಯಿಂದ ಬಳಲಬಹುದು, ಇದು ತುಂಬಾ ಸಾಮಾನ್ಯವಾದ ನಿದ್ರೆಯ ಅಸ್ವಸ್ಥತೆಯಾಗಿದೆ.

ಒಬ್ಬ ವ್ಯಕ್ತಿ ನಿದ್ರೆಯಿಲ್ಲದೆ ಎಷ್ಟು ದಿನಗಳವರೆಗೆ ಬದುಕಿರಬಹುದು?
ಆದರೆ ಒಬ್ಬ ವ್ಯಕ್ತಿಯು ಸತತ ಹನ್ನೊಂದು ದಿನಗಳ ಕಾಲ ನಿದ್ರೆ ಮಾಡದಿದ್ದರೆ, ಅವನು ಬದುಕುಳಿಯುವುದೇ ಕಷ್ಟ ಎಂಬುದು ನಿಮಗೆ ತಿಳಿದಿದೆಯೇ? ಒಬ್ಬ ವ್ಯಕ್ತಿಯು ನಿದ್ರೆಯಿಲ್ಲದೆ ಕೇವಲ 11 ದಿನಗಳವರೆಗೆ ಮಾತ್ರ ಬದುಕಿರಬಹುದು ಎಂದು ವಿಜ್ಞಾನಿಗಳು ಸೂಚಿಸುತ್ತಾರೆ.

ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಶೀತ ಕೆಮ್ಮಿನ ಸಮಸ್ಯೆಗೆ ಸುಲಭ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ನೋಡಿ ಟಿಪ್ಸ್

ಹಾರ್ವರ್ಡ್ ನಡೆಸಿದ ಅಧ್ಯಯನದ ಪ್ರಕಾರ "ನಿದ್ರಾಹೀನತೆಯು ಕರುಳು ಮತ್ತು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ದೇಹಕ್ಕೆ ಕೆಲವು ವ್ಯವಸ್ಥಿತ ಹಾನಿಗಳಿಂದಾಗಿ ಸಾವು ಸಂಭವಿಸಬಹುದು" ಎಂದು ತಿಳಿಸಿದೆ. ಒಬ್ಬ ವ್ಯಕ್ತಿಯು ತನ್ನ ಜೀವನದ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತಾನೆ. ಇದಲ್ಲದೆ, ನಾವು ಸಂತೋಷವಾಗಿ ಮತ್ತು ಉತ್ಸುಕರಾಗಿದ್ದಾಗ, ಎಷ್ಟೇ ಪ್ರಯತ್ನಿಸಿದರೂ ನಾವು ನಿದ್ರೆ ಮಾಡಲು ಸಾಧ್ಯವಿಲ್ಲ ಎಂದು ನಾವೆಲ್ಲರೂ ಗಮನಿಸಿದ್ದೇವೆ. ಸುಮಾರು 30 ಪ್ರತಿಶತದಷ್ಟು ಜನರು ದಿನದಲ್ಲಿ ಸತತವಾಗಿ ಏಳು ಗಂಟೆಗಳ ಕಾಲ ನಿದ್ರಿಸಿದರೆ, ಅವರು ಶೀತದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಬಹಿರಂಗಪಡಿಸಿದೆ.
Published by:Ashwini Prabhu
First published: