ತುಂಬಾ ಜನರು (People) ಸ್ಟೀರಾಯ್ಡ್ ಗಳನ್ನು (Steroids) ಸೇವನೆ ಮಾಡ್ತಾರೆ. ವೇಟ್ ಲಾಸ್ (Weight Loss) ಇರಬಹುದು, ಅಸ್ತಮಾ (Asthma) ಇರಬಹುದು, ವೇಟ್ ಗೇನ್ ಇರಬಹುದು ಹೀಗೆ ಹಲವು ಆರೋಗ್ಯ ಸಮಸ್ಯೆಗಳನ್ನು (Health Problems) ನಿವಾರಿಸಲು ಸ್ಟೀರಾಯ್ಡ್ ಬಳಕೆ ಮಾಡ್ತಾರೆ. ಆದರೆ ಈ ಸ್ಟೀರಾಯ್ಡ್‌ಗಳನ್ನು ದೀರ್ಘಕಾಲ ಬಳಕೆ ಮಾಡಿದರೆ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರುತ್ತವೆ. ತಜ್ಞರ ಪ್ರಕಾರ ಯಾವುದೇ ಸ್ಟೀರಾಯ್ಡ್ ಇರಬಹುದು, ಅವುಗಳ ದೀರ್ಘಕಾಲದ ಬಳಕೆ ಆರೋಗ್ಯ ಹದಗೆಡಿಸುತ್ತವೆ ಎಂದು ತಿಳಿಸುತ್ತಾರೆ. ಕೆಲವು ಸ್ಟೀರಾಯ್ಡ್ ಗಳು ಒತ್ತಡ, ಸಂಧಿವಾತ ಹಾಗೂ ಸ್ಥೂಲಕಾಯಕ್ಕೆ ಕಾರಣವಾಗುತ್ತವೆ.
ಸ್ಟೀರಾಯ್ಡ್ಸ್ ಮತ್ತು ಸ್ಥೂಲಕಾಯ ಸಮಸ್ಯೆ
ಅಸ್ತಮಾ ಸಮಸ್ಯೆ ನಿವಾರಣೆಗೆ ತೆಗೆದುಕೊಳ್ಳುವ ಸ್ಟೀರಾಯ್ಡ್‌ಗಳು ಸ್ಥೂಲಕಾಯ ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಕೆಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಕೆಲವು ಸ್ಟೀರಾಯ್ಡ್‌ಗಳನ್ನು ಸಾಮಾನ್ಯವಾಗಿ ವೈದ್ಯರು ಸೂಚಿಸುತ್ತಾರೆ.
ಅವುಗಳಲ್ಲಿ ಪ್ರೆಡ್ನಿಸೋನ್, ಪ್ರೆಡ್ನಿಸೋಲೋನ್, ಕಾರ್ಟಿಸೋನ್, ಹೈಡ್ರೋಕಾರ್ಟಿಸೋನ್, ಬುಡೆಸೊನೈಡ್ ಎಂಬ ಸ್ಟೀರಾಯ್ಡ್ ಗಳನ್ನು ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಸೇವಿಸಲಾಗುತ್ತದೆ.
ಸ್ಟೀರಾಯ್ಡ್‌ಗಳನ್ನು ಮುಖ್ಯವಾಗಿ ಉರಿಯೂತ ಕಡಿಮೆ ಮಾಡಲು, ಒತ್ತಡ ಕಡಿಮೆ ಮಾಡಲು, ಅಸ್ತಮಾ ಸಮಸ್ಯೆ, ಸಂಧಿವಾತ, ಲೂಪಸ್, ಕ್ರೋನ್ಸ್ ಕಾಯಿಲೆ, ಉಬ್ಬಸ, ಕ್ಯಾನ್ಸರ್, ಚರ್ಮದ ದದ್ದುಗಳ ಸಮಸ್ಯೆ ನಿವಾರಣೆಗೆ ತೆಗೆದುಕೊಳ್ಳಲಾಗುತ್ತದೆ.
ಇನ್ನು ಕೆಲವು ಸ್ಟೀರಾಯ್ಡ್‌ಗಳನ್ನು ತೂಕ ಇಳಿಕೆಗೂ ಸೇವಿಸುತ್ತಾರೆ. ಕಾರ್ಟಿಕೊಸ್ಟೆರಾಯ್ಡ್ ಮತ್ತು ಸ್ನಾಯುಗಳ ನಿರ್ಮಿಸಲು ಅನಾಬೊಲಿಕ್ ಸ್ಟೀರಾಯ್ಡ್ ಸೇವಿಸಲಾಗುತ್ತದೆ. ಆದರೆ ಇವೆರಡೂ ಒಂದಕ್ಕಿಂತ ಒಂದು ಭಿನ್ನವಾಗಿವೆ.
ದೀರ್ಘಕಾಲದ ಸ್ಟೀರಾಯ್ಡ್ ಸೇವನೆಯಿಂದ ತೂಕ ಹೆಚ್ಚಳ
ದೀರ್ಘಕಾಲದ ಸ್ಟೀರಾಯ್ಡ್ ಸೇವನೆಯು ಅಡ್ಡ ಪರಿಣಾಮ ಹೊಂದಿವೆ. ಇವುಗಳಲ್ಲಿ ತೂಕ ಹೆಚ್ಚಾಗುವುದು ಒಂದು. ಸ್ಟೀರಾಯ್ಡ್‌ಗಳು ಕೆಲವೊಮ್ಮೆ ದೇಹಕ್ಕೆ ಹಾನಿಯುಂಟು ಮಾಡುವ ಅಂಶಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದೇ ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡಿ ನಾಶ ಪಡಿಸುತ್ತವೆ. ಇದು ದೇಹದ ಅಂಗಾಂಶಗಳಿಗೆ ಹಾನಿ ಮಾಡುತ್ತದೆ. ಊತ ಉಂಟು ಮಾಡುತ್ತದೆ.
ತೂಕ ಹೆಚ್ಚಾಗುವುದು ಏಕೆ ?
ಸ್ಟೀರಾಯ್ಡ್ಗಳು ತೂಕ ಹೆಚ್ಚಳ ಸೇರಿದಂತೆ ಕೆಲವು ನಕಾರಾತ್ಮಕ ಅಡ್ಡ ಪರಿಣಾಮ ಬೀರುತ್ತವೆ. ಸ್ಟೀರಾಯ್ಡ್ ಬಳಕೆಯ ಅತ್ಯಂತ ಸಾಮಾನ್ಯ ಅಡ್ಡ ಪರಿಣಾಮ ಅಂದ್ರೆ ತೂಕ ಹೆಚ್ಚಳ ಎಂದು ಅನೇಕ ವರದಿಗಳು ಹೇಳುತ್ತವೆ.
ಸ್ಟೀರಾಯ್ಡ್‌ಗಳು ದೇಹದ ವಿದ್ಯುದ್ವಿಚ್ಛೇದ್ಯ ಮತ್ತು ನೀರಿನ ಅಸಮತೋಲನ ಉಂಟು ಮಾಡುವ ಮೂಲಕ ತೂಕ ಹೆಚ್ಚಳಕ್ಕೆ ಕಾರಣವಾಗಿವೆ.
ಚಯಾಪಚಯ, ಲಿಪಿಡ್, ಅಮೈನೋ ಆಮ್ಲ, ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಗ್ಲುಕೋಸ್ ಬಳಸುವ ಮತ್ತು ಸಂಗ್ರಹಿಸುವ ವಿಧಾನದಂತಹ ಅಂಶಗಳು ತೂಕ ಹೆಚ್ಚಳಕ್ಕೆ ಕಾರಣ ಆಗುತ್ತವೆ.
ಹಸಿವು ಹೆಚ್ಚಾಗುವುದು ಹಾಗೂ ನೀರು ಸೇವನೆಯಲ್ಲಿ ಬದಲಾವಣೆ ಆಗುವುದು ದೇಹವು ಕೊಬ್ಬನ್ನು ಸಂಗ್ರಹಿಸುವ ಸ್ಥಳದಲ್ಲಿ ಬದಲಾವಣೆ ಉಂಟಾಗುವುದರಿಂದ ತೂಕ ಹೆಚ್ಚಳವಾಗುತ್ತದೆ ಅಂತಾರೆ ತಜ್ಞರು.
ಸ್ಟೀರಾಯ್ಡ್ ತೆಗೆದುಕೊಳ್ಳುವ ಅನೇಕ ಜನರು ಹೊಟ್ಟೆ ಭಾಗ, ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹೆಚ್ಚು ಬೊಜ್ಜು ಹೊಂದಿರುತ್ತಾರೆ. ಸ್ಟೀರಾಯ್ಡ್ ಗಳ ಪರಿಣಾಮ ನಕಾರಾತ್ಮಕವಾಗಿರುತ್ತದೆ. ಹೀಗಾಗಿ ತೂಕ ಹೆಚ್ಚುತ್ತದೆ. ದೀರ್ಘಕಾಲದ ಸ್ಟೀರಾಯ್ಡ್ ಸೇವನೆಯು ಸಾಕಷ್ಟು ತೂಕ ಹೆಚ್ಚಿಸಲು ಕಾರಣವಾಗಬಹುದು.
ಅಸ್ತಮಾ ಮತ್ತು ಸ್ಟೀರಾಯ್ಡ್
ಸ್ಟೀರಾಯ್ಡ್ ಡೋಸ್ ಮತ್ತು ಅವಧಿಯು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರೆಡ್ನಿಸೋನ್ ಒಂದು ಪ್ರಿಸ್ಕ್ರಿಪ್ಷನ್ ಔಷಧಿ. ಇದು ಸ್ಟೀರಾಯ್ಡ್ಗಳು ಅಥವಾ ಕಾರ್ಟಿಕೊಸ್ಟೆರಾಯ್ಡ್ಗಳು ಎಂಬ ಔಷಧಿಗಳ ವರ್ಗಕ್ಕೆ ಸೇರಿದೆ.
ಇದನ್ನು ತೀವ್ರತರ ಅಸ್ತಮಾ ಚಿಕಿತ್ಸೆಗೆ ಮತ್ತು ಹಠಾತ್ ಅಸ್ತಮಾ ದಾಳಿಯಿಂದಾಗಿ ಹಾನಿಗೊಳಗಾದ ಶ್ವಾಸಕೋಶಗಳು ಗುಣವಾಗಿಸಲು ಸೇವಿಸಲಾಗುತ್ತದೆ. ಪ್ರೆಡ್ನಿಸೋನ್ ಇನ್ಹೇಲರ್ ನಲ್ಲಿ ಬಳಸುತ್ತಾರೆ.
ಸ್ಟೀರಾಯ್ಡ್ ಅಡ್ಡ ಪರಿಣಾಮಗಳು
ತಲೆನೋವು, ತಲೆತಿರುಗುವಿಕೆ, ಮಲಬದ್ಧತೆ, ಅತಿಸಾರ, ಹಸಿವು ಹೆಚ್ಚಾಗುವುದು, ಅಧಿಕ ರಕ್ತದೊತ್ತಡ, ನಿದ್ರಾಹೀನತೆ, ವಾಕರಿಕೆ, ಚಡಪಡಿಕೆ, ವಾಂತಿ, ರಕ್ತದ ಸಕ್ಕರೆ ಹೆಚ್ಚಬಹುದು.
ಸ್ಟೀರಾಯ್ಡ್‌ಗಳ ದೀರ್ಘಾವಧಿಯ ಬಳಕೆಯಿಂದ ಬೆಳವಣಿಗೆ ಕುಂಠಿತವಾಗುವುದು, ಕಣ್ಣಿನ ಪೊರೆಗೆ ಅಪಾಯವಾಗುವುದು, ಆಸ್ಟಿಯೊಪೊರೋಸಿಸ್ ಅಪಾಯ, ತೂಕ ಹೆಚ್ಚಾಗುವುದು, ಮನಸ್ಥಿತಿ ಬದಲಾವಣೆ, ಆತಂಕ ಮತ್ತು ಖಿನ್ನತೆ, ಚರ್ಮ ತೆಳುವಾಗುವ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್ ಕಾಯಿಲೆಯ ಸೂಚನೆಯಂತೆ!
ಹೇಗೆ ತೂಕ ಹೆಚ್ಚುತ್ತದೆ?
ಅಸ್ತಮಾ ರೋಗಿಗಳು ಅನಾರೋಗ್ಯಕರ ಜೀವನಶೈಲಿ, ವ್ಯಾಯಾಮ ಮಾಡಲು ಹಿಂಜರಿಕೆ, ಅಧಿಕ ತೂಕದಿಂದ ವ್ಯಾಯಾಮ ಮಾಡಲು ಸಾಧ್ಯವಾಗದೇ ಇರುವುದು, ಶ್ವಾಸಕೋಶವನ್ನು ಸಂಕುಚಿತಗೊಳಿಸುತ್ತದೆ. ಉಸಿರಾಟ ಕಷ್ಟವಾಗುತ್ತದೆ. ಹೀಗಾಗಿ ವೈದ್ಯರ ಸಲಹೆ ಅತೀ ಅಗತ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ