Breastfeeding: ಮಗುವಿಗೆ ಎಷ್ಟು ದಿನ ಹಾಲುಣಿಸಬೇಕು? ತಜ್ಞರು ಹೇಳೋದೇನು ಕೇಳಿ

Breastfeeding: ಸುಮಾರು 84 ಪ್ರತಿಶತದಷ್ಟು ತಾಯಂದಿರು ಜನನದ ನಂತರ ತಮ್ಮ ನವಜಾತ ಶಿಶುಗಳಿಗೆ ಹಾಲುಣಿಸುತ್ತಾರೆ. ಆದರೆ ತಾಯಿ ಮತ್ತು ಮಗುವಿಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳ ಹೊರತಾಗಿಯೂ, ಕೇವಲ 36 ಪ್ರತಿಶತದಷ್ಟು ಜನರು ಶಿಫಾರಸು ಮಾಡಿದ ಸಮಯಕ್ಕೆ ಮಕ್ಕಳಿಗೆ ಹಾಲುಣಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯಿಯ ಎದೆ  (Breast milk) ಹಾಲು ಮಗುವಿಗೆ (Baby) ಅಮೃತಕ್ಕೆ ಸಮನಾಗಿರುತ್ತದೆ. ಸ್ತನ್ಯಪಾನ ಮಾಡುವುದರಿಂದ ಮಗುವಿನ ಹಾಗೂ ತಾಯಿಯ ಇಬ್ಬರ ಆರೋಗ್ಯಕ್ಕೆ ಒಳ್ಳೆಯದು. ಮಗು ಹುಟ್ಟಿದಾಗಿನಿಂದ ಸುಮಾರು 2 ವರ್ಷಗಳವರೆಗೆ ಮಗುವಿಗೆ ಹಾಲುಣಿಸುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಸ್ತನ್ಯಪಾನಕ್ಕಾಗಿ (Breastfeeding) ಟೈಮ್ಲೈನ್‌ಗಳನ್ನು ಶಿಫಾರಸು ಮಾಡಿದ್ದರೂ, ಕೇವಲ ಮೂರನೇ ಒಂದು ಭಾಗದಷ್ಟು ತಾಯಂದಿರು ಮಾತ್ರ ಅವುಗಳನ್ನು ಅನುಸರಿಸುತ್ತಿದ್ದಾರಂತೆ.

ಹಾಗಾದರೆ ನಿಮ್ಮ ಮಗುವಿಗೆ ನೀವು ಎಷ್ಟು ಸಮಯದವರೆಗೆ ಹಾಲುಣಿಸಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ. ಶಿಶುಗಳಿಗೆ ಎದೆ ಹಾಲಿನ ಪ್ರಯೋಜನಗಳ ಬಗ್ಗೆ ಮರು ಮಾತಿಲ್ಲ. ತಾಯಿ ಹಾಲಿನಲ್ಲಿ ಹೆಚ್ಚು ಪ್ರೋಟಿನ್, ಖನಿಜಾಂಶಗಳು, ಎ ಜೀವಸತ್ವಗಳು ಹೇರಳವಾಗಿದ್ದು ಮಗುವಿನ ಸಂಪೂರ್ಣ ಆರೋಗ್ಯ ರಕ್ಷಣೆ ಮಾಡುತ್ತದೆ. ಮಗು ಜನಿಸಿದ ಆರು ತಿಂಗಳುಗಳವರೆಗೆ ಎದೆಹಾಲನ್ನು ಮಾತ್ರ ಕೊಡಬೇಕು. ಆರು ತಿಂಗಳ ನಂತರ ಪೂರಕ ಆಹಾರಗಳನ್ನು ಕೊಡುವ ಜೊತೆಗೆ 1 ವರ್ಷದವರೆಗೂ ಎದೆ ಹಾಲು ಉಣಿಸಬೇಕೆಂದು AAP ಮತ್ತು WHO ಶಿಫಾರಸ್ಸು ಮಾಡುತ್ತದೆ.

ತಾಯಿಯ ಎದೆ ಹಾಲು ಶಿಶುಗಳ ಅಸ್ತಮಾ, ಸ್ಥೂಲಕಾಯತೆ, ಹಠಾತ್ ಶಿಶು ಮರಣ ಸಿಂಡ್ರೋಮ್ (SIDS), ಜಠರಗರುಳಿನ ಸಮಸ್ಯೆಗಳು, ಕಿವಿ ಸೋಂಕುಗಳು ಮತ್ತು ನ್ಯುಮೋನಿಯಾದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅಲ್ಲದೇ ಸ್ತನ್ಯಪಾನವು ತಾಯಿಯ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮತ್ತು ಎದೆ ಹಾಲು ನೀಡುವುದರಿಂದ ತಾಯಿಯ ಶರೀರದ ಕೊಬ್ಬಿನಂಶ ಕರಗಿ ತಾಯಿಯ ಸೌಂದರ್ಯ ಹೆಚ್ಚುತ್ತದೆ.

ಇದನ್ನೂ ಓದಿ: ತೂಕ ಇಳಿಸಲು 10 ನಿಮಿಷ ಸ್ಕಿಪ್ಪಿಂಗ್ ಮಾಡಿ ಸಾಕು, ಬೊಜ್ಜು ಕರಗುತ್ತೆ ಹೃದಯವೂ ಆರೋಗ್ಯವಾಗಿರುತ್ತೆ

ಎಷ್ಟು ಸಮಯದವರೆಗೆ ಶಿಶುಗಳಿಗೆ ಹಾಲುಣಿಸಬೇಕು?
"ವಿಶ್ವ ಆರೋಗ್ಯ ಸಂಸ್ಥೆ "(WHO) ಮತ್ತು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (AAP) ಎರಡೂ ಶಿಶುಗಳು ಜೀವನದ ಮೊದಲ ಆರು ತಿಂಗಳವರೆಗೆ ಪ್ರತ್ಯೇಕವಾಗಿ ಎದೆಹಾಲು ನೀಡಬೇಕೆಂದು ಶಿಫಾರಸು ಮಾಡುತ್ತವೆ. ನಂತರ ತಾಯಂದಿರು ಒಂದು ವರ್ಷದವರೆಗೆ ಪೂರಕ ಆಹಾರಗಳೊಂದಿಗೆ ಸ್ತನ್ಯಪಾನವನ್ನು ಮುಂದುವರೆಸಬೇಕು ಎಂದು ತಜ್ಞರು ಶಿಫಾರಸ್ಸು ಮಾಡುತ್ತಾರೆ.

ಶಿಶುವಿನ ಮೊದಲ 6 ತಿಂಗಳು ಸಂಪೂರ್ಣ ತಾಯಿಯು ಎದೆ ಹಾಲು ನೀಡುವುದರಿಂದ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಪೋಷಣೆಯನ್ನು ಒದಗಿಸುತ್ತದೆ. ಆರು ತಿಂಗಳ ನಂತರ ಸಾಲಿಡ್ ಆಹಾರದ ಜೊತೆ ಸ್ತನ್ಯಪಾನ ಮುಂದುವರಿಸಬೇಕು.

ಮಗುವಿಗೆ ಒಂದು ವರ್ಷ ಆಗುವವರೆಗೂ ಮತ್ತು ನೀವು ಬಯಸಿದ್ದಲ್ಲಿ ಮುಂದುವರೆದು ಸಹ ಹಾಲು ಕುಡಿಸುವುದು ಉತ್ತಮ. ವಾಸ್ತವವಾಗಿ, ವಿಸ್ತೃತ ಸ್ತನ್ಯಪಾನವು ಮೆದುಳಿನ ಬೆಳವಣಿಗೆ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ತಾಯಿ-ಮಗುವಿನ ಬಾಂಧವ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ. ಸಿಡಿಸಿ ಸಂಗ್ರಹಿಸಿದ ಸ್ತನ್ಯಪಾನ ಅಂಕಿಅಂಶಗಳ ಪ್ರಕಾರ, ಕೇವಲ 15 ಪ್ರತಿಶತದಷ್ಟು ತಾಯಂದಿರು 18 ತಿಂಗಳುಗಳವರೆಗೆ ಮಾತ್ರ ಹಾಲುಣಿಸುತ್ತಾರೆ.

ಸುಮಾರು 84 ಪ್ರತಿಶತದಷ್ಟು ತಾಯಂದಿರು ಜನನದ ನಂತರ ತಮ್ಮ ನವಜಾತ ಶಿಶುಗಳಿಗೆ ಹಾಲುಣಿಸುತ್ತಾರೆ. ಆದರೆ ತಾಯಿ ಮತ್ತು ಮಗುವಿಗೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳ ಹೊರತಾಗಿಯೂ, ಕೇವಲ 36 ಪ್ರತಿಶತದಷ್ಟು ಜನರು ಶಿಫಾರಸು ಮಾಡಿದ ಸಮಯಕ್ಕೆ ಮಕ್ಕಳಿಗೆ ಹಾಲುಣಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸ್ತನ್ಯಪಾನ ಯಶಸ್ಸಿಗೆ ಸಲಹೆಗಳು
ಶಿಫಾರಸು ಮಾಡಿದ ಸಮಯದ ಚೌಕಟ್ಟಿನಲ್ಲಿ ನೀವು ಸ್ತನ್ಯಪಾನ ಮಾಡಲು ಬಯಸಿದರೆ,ಇವುಗಳ ಬಗ್ಗೆ ತಿಳಿದುಕೊಳ್ಳಿ..

1) ಅರಿವು ಪಡೆಯಿರಿ
ಸ್ತನ್ಯಪಾನ ಬೆಂಬಲ ಗುಂಪುಗಳಿಗೆ ಸೈನ್ ಅಪ್ ಮಾಡುವುದು ಅಥವಾ ಶುಶ್ರೂಷೆಯ ಬಗ್ಗೆ ಓದುವುದು ಹೊಸ ಅಮ್ಮಂದಿರಿಗೆ ಸಹಾಯ ಮಾಡುತ್ತದೆ. ಹಾಲುಣಿಸುವ ಪ್ರಕ್ರಿಯೆಯ ಸಂಭಾವ್ಯ ಎಡವಟ್ಟುಗಳನ್ನು ತಪ್ಪಿಸಲು ಮತ್ತು ಆತ್ಮವಿಶ್ವಾಸ ಪಡೆಯಲು ಸ್ತನ್ಯಪಾನದ ಬಗ್ಗೆ ಅರಿವಿರಬೇಕು.

2) ತಜ್ಞರ ಸಲಹೆ ಪಡೆಯಿರಿ
ತಾಯಂದಿರು ಹಾಲಿನ ಸೋರಿಕೆ, ಮೊಲೆತೊಟ್ಟುಗಳ ನೋವು, ಕಡಿಮೆ ಹಾಲು ಉತ್ಪಾದನೆಯಂತ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಯಾವುದೇ ಸಮಸ್ಯೆಗಳನ್ನು ನಿಭಾಯಿಸಲು ಲ್ಯಾಕ್ಟೇಷನ್ ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.

ಇದನ್ನೂ ಓದಿ: ತ್ವಚೆಯ ಸರ್ವ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿದೆ ಪರಿಹಾರ

3) ಆನ್ಲೈನ್ ಸಮುದಾಯವನ್ನು ಸಂಪರ್ಕಿಸಿ
ಹಾಲುಣಿಸುವ ಬಗೆ ಮತ್ತು ಸಮಯವನ್ನು ತಿಳಿದುಕೊಳ್ಳಲು ಆನ್ಲೈನ್‌ನಲ್ಲಿ ಹಾಲುಣಿಸುವ ಸಮುದಾಯವನ್ನು ಸಂಪರ್ಕಿಸಿ. ಈ ವೇದಿಕೆಯು ಇತರೆ ಅಮ್ಮಂದಿರೊಂದಿಗೆ ಚರ್ಚಿಸಲು ಸಹಾಯ ಮಾಡುತ್ತದೆ.
Published by:Sandhya M
First published: