Breast Feeding: ಮಗುವಿಗೆ ಎಷ್ಟು ಸಮಯ ಎದೆ ಹಾಲುಣಿಸಬೇಕು? ಎದೆ ಹಾಲಿನ ಪ್ರಯೋಜನಗಳಿವು..

Health Care: ಮಗುವಿಗೆ ಎರಡು ತಿಂಗಳು ತುಂಬಿದಾಗ ಪ್ರತಿ 3-4 ಗಂಟೆಗಳಿಗೊಮ್ಮೆ ಬೇಕಾಗುತ್ತದೆ. ಮಗುವಿಗೆ ಆರು ತಿಂಗಳು ತುಂಬುವ ಹೊತ್ತಿಗೆ, ಪ್ರತಿ ನಾಲ್ಕು-ಐದು ಗಂಟೆಗಳಿಗೊಮ್ಮೆ ಹಾಲು ನೀಡುವುದು ಒಳ್ಳೆಯ ಅಭ್ಯಾಸ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎದೆ ಹಾಲು ಉಣಿಸುವುದು (Breast Feeding) ಎಂದರೆ ಅದು ಸಾಮಾನ್ಯ ಸಂಗತಿ ಅಲ್ಲ. ಅದೊಂದು ವಿಭಿನ್ನ ಅನುಭವ. ಹೆಣ್ತನ ಪರಿಪೂರ್ಣವಾದಂತೆ. ಹುಟ್ಟಿದ ಮಗು ನಿರ್ದಿಷ್ಟ ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಕುಡಿಯಲು ಸಾಧ್ಯ. ಮಗುವಿನ ಆರೋಗ್ಯ ಬೆಳವಣಿಗೆಗೆ ಇದು ಹೆಚ್ಚು ಅಗತ್ಯ.  ಆದರೆ ಸಾಮಾನ್ಯವಾಗಿ ಎಷ್ಟು ಕಾಲ ಮಗುವಿಗೆ ಎದೆ ಹಾಲನ್ನು ನೀಡಬೇಕು ಎಂಬುದರ ಬಗ್ಗೆ ಗೊಂದಲವಿರುತ್ತದೆ. ಈ ಎದೆ ಹಾಲಿನ ಪ್ರಯೋಜನಗಳು, ಎಷ್ಟು ದಿನ ನೀಡಬೇಕು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಡಾ. ವೀಣಾ ಮಾಹಿತಿ ನೀಡಿದ್ದಾರೆ.

ಎದೆ ಹಾಲಿನ ಪ್ರಯೋಜನಗಳು

ಎದೆ ಹಾಲಿನಲ್ಲಿ ನವಜಾತ ಶಿಶುವಿಗೆ ಅಗತ್ಯ ಇರುವ ಎಲ್ಲಾ ಪೋಷಕಾಂಶಗಳು ಇರುತ್ತವೆ.
ಎದೆ ಹಾಲನ್ನು ನವಜಾತ ಶಿಶು ಸುಲಭವಾಗಿ ಜೀರ್ಣ ಮಾಡಿಕೊಳ್ಳಬಲ್ಲದು
ಬ್ರೆಸ್ಟ್ ಕ್ಯಾನ್ಸರ್ ಮತ್ತು ಒವೇರಿಯನ್ ಕ್ಯಾನ್ಸರ್​ನ‌ ಅಪಾಯದಿಂದ ರಕ್ಷಿಸುತ್ತದೆ.
ಎದೆ ಹಾಲು , ಪ್ರಸವದ ನಂತರ ಗರ್ಭಾಶಯದ ಗಾತ್ರವನ್ನು ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಸಹಾಯ ಮಾಡುತ್ತದೆ.ನ್ಯುಮೋನಿಯಾ ಮತ್ತು ಅತಿಸಾರದಂತಹ ಕಾಯಿಲೆಗಳು ಬರದಂತೆ ಕಾಪಾಡುತ್ತದೆ.ಮಗುವಿನ ಮೆದುಳಿನ ಬೆಳವಣಿಗೆ ಇದು ಸಹಾಯ ಮಾಡುತ್ತದೆ.
ಎದೆ ಹಾಲು ಯಾವಾಗಲೂ ಶಿಶುವಿಗೆ ಸೂಕ್ತವಾದ ತಾಪಮಾನ ಹೊಂದಿರುತ್ತದೆ.
ಎದೆ ಹಾಲಿನಿಂದ ನಿತ್ಯ ಸುಮಾರು 500 ಅಧಿಕ ಕ್ಯಾಲೋರಿಗಳು ಕರಗುತ್ತವೆ.
ಎದೆ ಹಾಲಿನಲ್ಲಿ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಮಗುವಿಗೆ ಒಮ್ಮೆ ಎಷ್ಟು ಸಮಯ ಹಾಲುಣಿಸಬೇಕು.

ಮಗುವಿಗೆ 6 ವರ್ಷ ಆಗುವವರೆಗೂ ಎದೆ ಹಾಗೂ ನೀಡಬೇಕು ಎಂದು ಹಲವಾರು ಹೇಳಿರುವುದನ್ನ ಕೇಳಿರುತ್ತೀರಿ, ಆದರೆ ಅದು ಅವರ ವೈಯಕ್ತಿಕ. ಅಷ್ಟು ಸಮಯದ ಕಾಲ ಹಾಲು ನೀಡುವುದು ಸಾಧ್ಯವಾಗುವುದಿಲ್ಲ. ಆದರೆ ನವಜಾತ ಶಿಶುವಿಗೆ ಕನಿಷ್ಟ ಮೊದಲ ಆರು ತಿಂಗಳಾದರೂ ಎದೆಹಾಲುಣಿಸುವುದು ಮಗುವಿನ ಆರೋಗ್ಯಕ್ಕೆ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2 ವರ್ಷದ ವರೆಗೆ ಉತ್ತಮ ಪೋಷಕಾಂಶಯುಕ್ತ ಆಹಾರದ ಜೊತೆ ಎದೆ ಹಾಲು ನೀಡುವುದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಫ್ಯಾಮಿಲಿ ಜೊತೆ ಡಿನ್ನರ್​ ಎಂಜಾಯ್​ ಮಾಡ್ಬೇಕು ಅಂದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ವಿಸಿಟ್​ ಮಾಡಿ

ಸಾಮಾನ್ಯವಾಗಿ ಶಿಶು ಹುಟ್ಟಿದ ಕೂಡಲೇ ಅಥವಾ ಒಂದು ಗಂಟೆಯ ಒಳಗೆ ಎದೆ ಹಾಲು ಕುಡಿಸಬೇಕು. ಆರಂಭದಲ್ಲಿ ಬರುವ ಹಳದಿ ಬಣ್ಣದ ಹಾಲು ಪೋಷಕಾಂಶಗಳ ಖಜಾನೆಯಾಗಿರುತ್ತದೆ.  ಹಳದಿ ಮಿಶ್ರಿತ ಹಾಲನ್ನು ಕೊಲಸ್ಟ್ರಮ್ ಎಂದು ಕರೆಯಲಾಗುತ್ತದೆ, ಇದು ಹೆರಿಗೆಯ ನಂತರ ಮೊದಲ ದಿನಗಳಲ್ಲಿ ಉತ್ಪತ್ತಿಯಾಗುತ್ತದೆ. ಕೊಲಸ್ಟ್ರಮ್ ನಲ್ಲಿ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಸಕ್ಕರೆ ಹೊಂದಿರುವುದರಿಂದ  ಜೀರ್ಣಾಂಗ ವ್ಯವಸ್ಥೆಯ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

3-5 ದಿನಗಳ ಬಳಿಕ ಬಿಳಿ ವರ್ಣ ಹಾಲು ಬರುತ್ತದೆ. ಕೆಲವು ತಾಯಂದಿರಲ್ಲಿ ಹಾಲಿನ ಪ್ರಮಾಣ ಕಡಿಮೆ ಇರುತ್ತದೆ. ಹಾಲು ಚೆನ್ನಾಗಿ ಉತ್ಪಾದನೆ ಆಗಬೇಕಾದರೆ, ಮಗುವಿಗೆ ನಿತ್ಯವೂ ಎದೆ ಹಾಲು ಕುಡಿಸಬೇಕು. ಪ್ರತೀ ಎರಡೂವರೆ ಗಂಟೆಗೊಮ್ಮೆ, ಎರಡೂ ಬದಿಯಿಂದ 20 ನಿಮಿಷ ಹಾಲುಣಿಸಬೇಕು. ಮಗುವಿಗೆ ಎರಡು ತಿಂಗಳು ತುಂಬಿದಾಗ ಪ್ರತಿ 3-4 ಗಂಟೆಗಳಿಗೊಮ್ಮೆ ಬೇಕಾಗುತ್ತದೆ. ಮಗುವಿಗೆ ಆರು ತಿಂಗಳು ತುಂಬುವ ಹೊತ್ತಿಗೆ, ಪ್ರತಿ ನಾಲ್ಕು-ಐದು ಗಂಟೆಗಳಿಗೊಮ್ಮೆ ಹಾಲು ನೀಡುವುದು ಒಳ್ಳೆಯ ಅಭ್ಯಾಸ.

ಇದನ್ನೂ ಓದಿ: ಹೆರಿಗೆಯ ನಂತರ ಮಹಿಳೆಯರು ಯಾವಾಗ ವ್ಯಾಯಾಮ ಮಾಡಬಹುದು? ತೂಕ ಇಳಿಸಲು ಏನು ಮಾಡ್ಬೇಕು?

ಎದೆ ಹಾಲು ಹೆಚ್ಚಾಗಲು ಹೀಗೆ ಮಾಡಿ

ಮೆಂತೆ ಸೊಪ್ಪು, ಕೊತ್ತಂಬರಿ ಬೀಜ ಮತ್ತು ಹಸಿರು ಸೊಪ್ಪುತರಕಾರಿಗಳನ್ನು ಸೇವಿಸುವುದರಿಂದ ಎದೆ ಹಾಲು ಚೆನ್ನಾಗಿ ಉತ್ಪಾದನೆ ಆಗುತ್ತದೆ. ನವಜಾತ ಶಿಶುವಿನ ತಾಯಂದಿರು ಪೋಷಕಾಂಶಯುಕ್ತ ಊಟ ಮಾಡಿ, ದಿನಕ್ಕೆ ಕನಿಷ್ಟ ಎರಡು ಲೋಟ ಹಾಲು ಕುಡಿಯಬೇಕು. ಈ ಸಂದರ್ಭದಲ್ಲಿ ಅತ್ಯಂತ ಕಡಿಮೆ ಕಾರ್ಬ್ ಆಹಾರ ಕ್ರಮವನ್ನು ಅನುಸರಿಸಲೇಬೇಡಿ.
Published by:Sandhya M
First published: