PCOS Problem: ನಿಯಮಿತವಾಗಿ ಮುಟ್ಟಾಗ್ತಿಲ್ವಾ? ಪಿಸಿಒಎಸ್ ಇದ್ರೆ ಲೈಕೋರೈಸ್ ಆಹಾರ ಸೇವನೆ ಅಗತ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪಿಸಿಓಎಸ್ ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಹಾರ್ಮೋನ್ ಕಾಯಿಲೆ ಆಗಿದೆ. ಕಳಪೆ ಜೀವನಶೈಲಿಯಿಂದ ಪಿಸಿಓಎಸ್ ಅಸ್ವಸ್ಥತೆ ಉಂಟಾಗುತ್ತದೆ. ಹೀಗೆ ಉದ್ಭವಿಸುವ ಈ ಸಮಸ್ಯೆಯು ಹೆಚ್ಚಿನ ಮಹಿಳೆಯರಿಗೆ ದೀರ್ಘಕಾಲದವರೆಗೆ ಇದೇ ಸಮಸ್ಯೆ ಎಂದು ತಿಳಿಯುವುದೇ ಇಲ್ಲ.

  • Share this:

    ಮಹಿಳೆಯರಿಗೆ (Women) ಉಂಟಾಗುವ ಮುಖ್ಯ ಸಮಸ್ಯೆಗಳಲ್ಲಿ (Problems) ಪಿಸಿಒಎಸ್ (PCOS) ಸಮಸ್ಯೆ ತುಂಬಾ ಮುಖ್ಯವಾಗಿದೆ. ಇದು ಋತುಕ್ರಕ್ಕೆ (Menstrual) ಸಂಬಂಧಿಸಿದ ಸಮಸ್ಯೆ. ಇದಕ್ಕೆ ಸೂಕ್ತ ಚಿಕಿತ್ಸೆ (Treatment) ನೀಡದೇ ಹೋದರೆ ಇದು ಹಲವು ಆರೋಗ್ಯ (health) ಸಮಸ್ಯೆ ಹುಟ್ಟು ಹಾಕುತ್ತದೆ. ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಂದರೆ PCOS ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಹಾರ್ಮೋನ್ ಕಾಯಿಲೆ ಆಗಿದೆ. ಕಳಪೆ ಜೀವನಶೈಲಿಯಿಂದ ಪಿಸಿಓಎಸ್ ಅಸ್ವಸ್ಥತೆ ಉಂಟಾಗುತ್ತದೆ. ಹೀಗೆ ಉದ್ಭವಿಸುವ ಈ ಸಮಸ್ಯೆಯು ಹೆಚ್ಚಿನ ಮಹಿಳೆಯರಿಗೆ ದೀರ್ಘಕಾಲದವರೆಗೆ ಇದೇ ಸಮಸ್ಯೆ ಎಂದು ತಿಳಿಯುವುದೇ ಇಲ್ಲ. ಈ ರೋಗವು ಅನೇಕ ವಿಧಗಳಲ್ಲಿ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುತ್ತದೆ.


    ಪಿಸಿಒಎಸ್ ಸಮಸ್ಯೆ ತೊಡೆದು ಹಾಕುವುದು ಹೇಗೆ?


    PCOS ಸಮಸ್ಯೆ ತೊಡೆದು ಹಾಕಲು ಇರುವ ಉತ್ತಮ ಮಾರ್ಗ ಅಂದ್ರೆ ಉತ್ತಮ ಆಹಾರ ಸೇವನೆ ಮಾಡುವುದು. ಜೊತೆಗೆ ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಸೇವನೆ v ಸಮಸ್ಯೆಯಿಂದ ಹೊರ ಬರಲು ಉತ್ತಮ ಮಾರ್ಗ ಅಂತಾರೆ ತಜ್ಞೆ ರುಚಿ ಸೋನಿ.


    ಲೈಕೋರೈಸ್ ಆಹಾರ ಪದಾರ್ಥವನ್ನು PCOS ಇರುವ ಮಹಿಳೆಯರು ಆಹಾರದಲ್ಲಿ ಸೇರಿಸಿದರೆ ಅದರ ಸಮಸ್ಯೆ ನಿವಾರಣೆ ಆಗುತ್ತದೆ. PCOS ಸಮಸ್ಯೆಯಿಂದ ದೇಹದಲ್ಲಿ ಆಂಡ್ರೊಜೆನ್ ಮಟ್ಟ ಅಂದರೆ ಪುರುಷ ಹಾರ್ಮೋನ್ ಮಟ್ಟವು ಹೆಚ್ಚಾಗುತ್ತದೆ ಅಂತಾರೆ ತಜ್ಞೆ ರುಚಿ ಸೋನಿ.




    ಪಿಸಿಒಎಸ್ ಸಮಸ್ಯೆ ಇದ್ದಾಗ ಇದ್ದಕ್ಕಿದ್ದಂತೆ ದೇಹದ ಹಲವು ಅಂಗಗಳಲ್ಲಿ ಕೂದಲು ಬೆಳೆಯುತ್ತವೆ. ಈ ಸಮಸ್ಯೆ ತಡೆಗೆ ನೀವು ಲೈಕೋರೈಸ್ ಅನ್ನು ನೀರು ಅಥವಾ ಪುಡಿಯ ರೂಪದಲ್ಲಿ ಸೇವಿಸಿ. ಇದು ಆಂಡ್ರೊಜೆನ್ ಮಟ್ಟ ನಿಯಂತ್ರಿಸುತ್ತದೆ.


    ಲೈಕೋರೈಸ್‌ ನಲ್ಲಿ ಸಸ್ಯ ರಾಸಾಯನಿಕವಿದೆ. ಇದು ದೇಹದಲ್ಲಿ ಸ್ತ್ರೀ ಹಾರ್ಮೋನ್‌ ನಂತೆ ಕೆಲಸ ಮಾಡುತ್ತದೆ. ಲೈಕೋರೈಸ್ ಹಲವು ವಿಶೇಷ ಪ್ರಯೋಜನ ನೀಡುತ್ತದೆ. ಅನೇಕ ಸಮಸ್ಯೆ ಪರಿಹರಿಸುತ್ತದೆ.


    ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ


    ತಜ್ಞೆ ಡಾ. ರುಚಿ ಸೋನಿ ಮೂಲೇತಿ ಅಂದ್ರೆ ಲೈಕೋರೈಸ್ ಪದಾರ್ಥ ಹೇಗೆ ಪಿಸಿಓಎಸ್ ಸಮಸ್ಯೆ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ. ಮಹಿಳೆಯರಿಗೆ ಪಿಸಿಓಎಸ್ ಸಮಸ್ಯೆಯು ತೂಕ ಹೆಚ್ಚಾಗುವ ಸ್ಥಿತಿಗೆ ಕಾರಣವಾಗಿರುತ್ತದೆ.


    ಹಾಗಾಗಿ ತೂಕ ಇಳಿಕೆಗೂ ಸಾಕಷ್ಟು ತೊಂದರೆ ಉಂಟಾಗುತ್ತದೆ. ಬೇಗ ಕೊಬ್ಬು ಕರಗುವುದಿಲ್ಲ. ಹಾಗಾಗಿ ಈ ಸಮಸ್ಯೆ ಹೋಗಲಾಡಿಸಲು ಲೈಕೋರೈಸ್ ಅನ್ನು ನೀರಿನಲ್ಲಿ ಕುದಿಸಿ ಕುಡಿಯಬೇಕು ಅಂತಾರೆ ತಜ್ಞರು.


    ಲೈಕೋರೈಸ್ ಸೇವನೆಯಿಂದ ಪಿರಿಯಡ್ ಸೈಕಲ್ ನಿಯಮಿತವಾಗಿರುತ್ತದೆ


    ಪಿರಿಯೋಡ್ ಸೈಕಲ್ ಅನಿಯಮಿತವಾಗಲು ಪಿಸಿಓಎಸ್ ಕಾರಣ. ಹಾಗಾಗಿ ಲೈಕೋರೈಸ್ ಸೇವನೆಯು ಹಾರ್ಮೋನ್ ಅನ್ನು ಹಾಗೂ ಚಕ್ರವು ಚೇತರಿಕೆಗೆ ಸಹಾಯ ಮಾಡುತ್ತದೆ. ಗರ್ಭಾಶಯದಲ್ಲಿ ಉತ್ತೇಜಕ ಉತ್ಪತ್ತಿ ಆಗುತ್ತದೆ. ಋತುಚಕ್ರವು ನಿಯಮಿತವಾಗುತ್ತದೆ.


    ಸಾಂದರ್ಭಿಕ ಚಿತ್ರ


    ಅವಧಿ ಸೆಳೆತ ಕಡಿಮೆ ಮಾಡುತ್ತದೆ


    ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ಹೊಟ್ಟೆ ಹಾಗೂ ಸೊಂಟ ನೋವು ಹಾಗೂ ಸೆಳೆತವನ್ನು ಲೈಕೋರೈಸ್ ಕಡಿಮೆ ಮಾಡುತ್ತದೆ. ಲೈಕೋರೈಸ್ ನೀರು ಸೇವನೆಯು ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಎದುರಿಸುವ ವಾಂತಿ, ಮಲಬದ್ಧತೆ, ಅತಿಸಾರ ಅಥವಾ ಅಸಿಡಿಟಿ ಸಮಸ್ಯೆ ನಿವಾರಿಸುತ್ತದೆ. ಲೈಕೋರೈಸ್ ಪಾನೀಯದಲ್ಲಿ ಜೇನುತುಪ್ಪ ಬೆರೆಸಿ ಕುಡಿಯಬಹುದು.


    ಫಲವತ್ತತೆ ಹೆಚ್ಚಿಸುತ್ತದೆ


    ಅನೇಕ ಮಹಿಳೆಯರು ಮಗು ಮಾಡಿಕೊಳ್ಳಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಾರೆ. ನೀವು ಲೈಕೋರೈಸ್ ಸೇವನೆ ಮಾಡಿದಾಗ ದೇಹದಲ್ಲಿ ಸ್ತ್ರೀ ಹಾರ್ಮೋನ್ ಹೆಚ್ಚುತ್ತದೆ. ಇದು ಮಹಿಳೆಯರಿಗೆ ಬಹಳಷ್ಟು ಪ್ರಯೋಜನ ನೀಡುತ್ತದೆ.


    ಋತುಬಂಧದ ವೇಳೆ ದೇಹದಲ್ಲಿ ಆಂಡ್ರೊಜೆನ್ ಮಟ್ಟವು ಕಡಿಮೆಯಾಗುತ್ತದೆ. ಲೈಕೋರೈಸ್ ನೀರು ಸೇವನೆಯಿಂದ ಆಂಡ್ರೊಜೆನ್ ನಿಯಮಿತ ಪ್ರಮಾಣದಲ್ಲಿರುತ್ತದೆ.


    ಇದನ್ನೂ ಓದಿ: ಸ್ತ್ರೀಯರ ಎದೆಯ ಮೇಲೆ ದದ್ದುಗಳು ಉಂಟಾಗುವುದೇಕೆ? ಇದಕ್ಕೆ ಪರಿಹಾರ ಏನು?


    ಲೈಕೋರೈಸ್‌ನ ಇತರೆ ಪ್ರಯೋಜನಗಳು


    ಲೈಕೋರೈಸ್ ಕ್ಯಾಲ್ಸಿಯಂ ಮತ್ತು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ದೈಹಿಕ ಸಮಸ್ಯೆಗಳಿಂದ ರಕ್ಷಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ. ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ತೂಕ ಇಳಿಕೆ ಮತ್ತು ಮಧುಮೇಹ, ಕೂದಲು ಮತ್ತು ಚರ್ಮ ಸಮಸ್ಯೆ ನಿಭಾಯಿಸುತ್ತದೆ.

    Published by:renukadariyannavar
    First published: