Memory Loss: ಸರಿಯಾಗಿ ನಿದ್ದೆ ಮಾಡದಿದ್ರೆ ನೆನಪಿನ ಶಕ್ತಿ ಕಳ್ಕೋತಿರಾ, ಹುಷಾರ್..!

ನಿದ್ರೆಯ ಕೊರತೆಯು ಮಧುಮೇಹ, ಹೃದಯ ಸಮಸ್ಯೆಗಳು, ಆತಂಕ ಮತ್ತು ಖಿನ್ನತೆಯಂತಹ ಕಾಯಿಲೆಗಳನ್ನು ಆಹ್ವಾನಿಸುತ್ತದೆ ಮತ್ತು ಸ್ಮರಣೆ ಹಾಗೂ ಕಲಿಕೆಗೆ ತೀವ್ರ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದಿನ ಸ್ಪರ್ಧಾತ್ಮಕ ಯುಗ(Competitive World )ದಲ್ಲಿ ಬಹುತೇಕರು ತಮ್ಮ ನಿದ್ರೆ ಕಡಿಮೆ ಮಾಡಿ ಹೆಚ್ಚು ಕೆಲಸ ಮಾಡುವುದರಿಂದ ಅವರು ತುಂಬಾ ಪರಿಶ್ರಮ(Effort)ದಿಂದ ಕೆಲಸ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಾರೆ. ಆದರೆ ನೀವು ಸರಿಯಾಗಿ ನಿದ್ರೆ(Sleep) ಮಾಡದೆ ಇರುವುದು ನಿಮ್ಮ ಆರೋಗ್ಯ(Health)ದ ಮೇಲೆ ಅನೇಕ ತರಹದ ಪರಿಣಾಮ ಬೀರುತ್ತದೆ. ನೀವು ಮಾಡುವ ನಿದ್ರೆಯು ನಿಮ್ಮ ಮಾನಸಿಕ(Mental) ಮತ್ತು ದೈಹಿಕ(Physical) ಚೇತರಿಕೆಯ ಅವಧಿಯನ್ನು ಒಳಗೊಂಡಿದೆ, ಇದು ನಿಮ್ಮನ್ನು ತುಂಬಾ ಉತ್ಸಾಹದಿಂದ, ಶಕ್ತಿಯುತ ಮತ್ತು ಸಂತೋಷದಿಂದ ನೀವು ದಿನದ ಕೆಲಸಗಳನ್ನು ಮಾಡಿಕೊಳ್ಳಲು ಕಾರಣವಾಗುತ್ತದೆ.

ಚೆನ್ನಾಗಿ ನಿದ್ರೆ ಮಾಡಿದ್ರೆ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುತ್ತೆ

2019ರಲ್ಲಿ ಯುಎಸ್ನ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆಸಿದ ಒಂದು ಸಂಶೋಧನೆಯು ಈ ವಿಷಯದ ಮೇಲೆ ಬೆಳಕು ಚೆಲ್ಲಿದೆ. ಈ ಸಂಶೋಧನೆಯಲ್ಲಿ ನಿರಂತರವಾಗಿ ಉತ್ತಮ ನಿದ್ರೆ ಮಾಡಿದ ವಿದ್ಯಾರ್ಥಿಗಳು ಮತ್ತು ಪರೀಕ್ಷೆಗಳಿಗೆ ರಾತ್ರಿಯಿಡೀ ನಿದ್ರೆ ತೊರೆದು ಓದಿದ ವಿದ್ಯಾರ್ಥಿಗಳನ್ನು ಹೋಲಿಸಿದರೆ ಅನಿಯಮಿತ ನಿದ್ರೆ ಅಭ್ಯಾಸ ಹೊಂದಿದ್ದವರಿಗಿಂತ ಉತ್ತಮ ನಿದ್ರೆ ಮಾಡಿದವರು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದರು.

ನಿದ್ದೆಗೂ ನೆನಪಿನ ಶಕ್ತಿಗೂ ಏನು ಸಂಬಂಧ?

ಸ್ಮರಣೆ ರಚನೆ ಮತ್ತು ಕಲಿಕೆಯು ಪ್ರಾಥಮಿಕವಾಗಿ ಮೂರು ಹಂತಗಳ ಪ್ರಕ್ರಿಯೆಯಾಗಿದ್ದು, ಮೊದಲಿಗೆ ಮಾಹಿತಿ ಸ್ವಾಧೀನ, ಕ್ರೋಢೀಕರಣ, ಮಾಹಿತಿ ನೆನಪು ಮಾಡಿಕೊಂಡು ಅಗತ್ಯಕ್ಕೆ ತಕ್ಕಂತೆ ಅನ್ವಯಿಸುವುದು ಆಗಿದೆ. ನಾವು ಎಚ್ಚರವಾಗಿರುವಾಗ ಮಾಹಿತಿ ಪಡೆಯುವುದು, ಬಳಸುವುದು ಮತ್ತು ಮರಳಿ ಪಡೆಯುವುದು ಸಂಭವಿಸುತ್ತದೆ, ಜ್ಞಾನದ ಸಂಯೋಜನೆ, ಹೊಸ ತಿಳುವಳಿಕೆಯನ್ನು ಮೊದಲೇ ಅಸ್ತಿತ್ವದಲ್ಲಿರುವ ದತ್ತಾಂಶದೊಂದಿಗೆ ಬಲಪಡಿಸುವುದು ಮತ್ತು ಸಂಯೋಜಿಸುವುದು ಪ್ರಾಥಮಿಕವಾಗಿ ನಾವು ನಿದ್ರೆಯಲ್ಲಿರುವಾಗ ಸಂಭವಿಸುತ್ತದೆ.

ಇದನ್ನೂ ಓದಿ:Sleeping Benefits: ನೀವು ಎಷ್ಟು ಗಂಟೆ ನಿದ್ರಿಸುತ್ತೀರಾ? ಯಾವ ವಯಸ್ಸಿಗೆ ಎಷ್ಟು ಗಂಟೆಗಳ ಕಾಲ ನಿದ್ದೆ ಅಗತ್ಯ? ವಿವರ ಇಲ್ಲಿದೆ

ನಿದ್ರೆ ನೆನಪಿನ ಶಕ್ತಿ ಹೆಚ್ಚಿಸುತ್ತೆ

ನಾವು ಮಾಹಿತಿ ಪಡೆದಾಗ, ಪ್ರಮುಖವಾಗಿ ಐದು ಜ್ಞಾನೇಂದ್ರಿಯಗಳ ಸಹಾಯದಿಂದ ಸಂವೇದನಾ ಸ್ಮರಣೆ ರೂಪುಗೊಳ್ಳುತ್ತದೆ. ಈ ಕಲಿಕೆಯನ್ನು ನರವ್ಯೂಹವು ಸಂಸ್ಕರಿಸುತ್ತದೆ ಮತ್ತು ಅಲ್ಪಾವಧಿಯ ಸ್ಮರಣೆಯಲ್ಲಿ ಇದನ್ನು ಶೇಖರಿಸುತ್ತದೆ. ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್ ಸೀಮಿತ ಶೇಖರಣಾ ಸಾಮರ್ಥ್ಯ ಹೊಂದಿರುವಂತೆಯೇ, ನಮ್ಮ ಅಲ್ಪಾವಧಿಯ ಸ್ಮರಣೆಯೂ ಹಾಗೆ. ಆದ್ದರಿಂದ, ಪ್ರಮುಖ ಮತ್ತು ಸಂಬಂಧಿತ ನೆನಪುಗಳನ್ನು ದೀರ್ಘಕಾಲೀನ ಸ್ಮರಣೆಗೆ ನಿರಂತರವಾಗಿ ವರ್ಗಾಯಿಸಬೇಕಾಗಿದೆ.

ಈ ವಿಷಯದಲ್ಲಿ ಇನ್ನೂ ಸಂಶೋಧನೆಗಳು ಮುಂದುವರೆದಿದ್ದು, ನಿದ್ರೆ ಮತ್ತು ಸ್ಮರಣೆಯ ನಡುವೆ ಸ್ವಲ್ಪ ಒಮ್ಮತವಿದೆ. ವಿಜ್ಞಾನಿಗಳು ಮತ್ತು ಸಂಶೋಧಕರು ಹೇಳುವಂತೆ ನಿದ್ರೆಯ ಪ್ರತಿಯೊಂದು ಹಂತವು ಸ್ಮರಣೆ ರಚನೆಯಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ.

ನಿದ್ರೆ ದೇಹಕ್ಕೆ ವಿಶ್ರಾಂತಿ ನೀಡುತ್ತೆ

ನಿದ್ರೆಯು ದೇಹಕ್ಕೆ ವಿಶ್ರಾಂತಿಯ ಸಮಯವಾಗಿದ್ದರೂ, ನಾವು ಅನೇಕ ನಿದ್ರೆಯ ಹಂತಗಳ ಮೂಲಕ ಹಾದು ಹೋಗುವಾಗ ಮೆದುಳು ಕಾರ್ಯನಿರತವಾಗಿರುತ್ತದೆ. ನಾವು ನಿದ್ರೆಗೆ ಜಾರುತ್ತಿದ್ದಂತೆ, ನಾವು ಮೊದಲು ಮೂರು ಹಂತಗಳನ್ನು ಒಳಗೊಂಡಿರುವ ಚಕ್ರವನ್ನು ಪ್ರವೇಶಿಸುತ್ತೇವೆ. ಒಂದನೇ ಹಂತದಲ್ಲಿ ನಾವು ನಿದ್ರೆಗೆ ಜಾರುತ್ತಿರುತ್ತೇವೆ, ಎರಡನೇ ಹಂತದಲ್ಲಿ ಗಾಢ ನಿದ್ರೆ ಇರುತ್ತದೆ ಮತ್ತು ಮೂರನೇ ಹಂತವು ತುಂಬಾ ಆಳವಾದ ನಿದ್ರೆ ಎಂದು ಹೇಳಬಹುದು.

ನೀವು ಎಂದಾದರೂ ಇದ್ದಕ್ಕಿದ್ದಂತೆ ಎಚ್ಚರಗೊಂಡಿದ್ದೀರಾ ಮತ್ತು ಸ್ವಲ್ಪ ಸಮಯದವರೆಗೆ ಗೊಂದಲಕ್ಕೊಳಗಾಗಿದ್ದೀರಾ ಎಂದುಕೊಳ್ಳಿ. ಆಗ ನೀವು ಮೂರನೇ ಹಂತದ ನಿದ್ರೆಯಿಂದ ಎಚ್ಚರಗೊಂಡಿರಬೇಕು. ಪ್ರತಿ ನಿದ್ರೆಯ ಹಂತವು ಸುಮಾರು 90-120 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಕಲಿಯುವ ಸಾಮರ್ಥ್ಯ ಸುಧಾರಿಸುತ್ತದೆ

ಸ್ಮರಣೆ ಮತ್ತು ಕಲಿಕೆಗೆ ನಿದ್ರೆ ಅನಿವಾರ್ಯ ಎಂಬುದರಲ್ಲಿ ಸಂದೇಹವಿಲ್ಲವಾದರೂ, ಅದರ ನಿಖರವಾದ ಪಾತ್ರವು ಚರ್ಚೆಗಳಿಗೆ ಮುಕ್ತವಾಗಿದೆ ಮತ್ತು ಸಂಬಂಧವನ್ನು ವಿವರಿಸಲು ಅನೇಕ ಸ್ಪರ್ಧಾತ್ಮಕ ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ನಮಗೆ ಖಚಿತವಾಗಿ ತಿಳಿದಿರುವುದು ಏನೆಂದರೆ, ಸಾಕಷ್ಟು ನಿದ್ರೆಯು ಕಲಿಯುವ ನಮ್ಮ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಮಾಹಿತಿಯನ್ನು ಉಳಿಸಿಕೊಳ್ಳುತ್ತದೆ ಮತ್ತು ನೆನಪಿಸಿಕೊಳ್ಳಲು ಸಹಾಯ ಮಾಡುತ್ತದೆ.

ನಿದ್ರೆಯ ಕೊರತೆ ಇತರೆ ರೋಗಗಳಿಗೆ ಆಹ್ವಾನ

ನಿದ್ರೆಯ ಕೊರತೆಯು ಮಧುಮೇಹ, ಹೃದಯ ಸಮಸ್ಯೆಗಳು, ಆತಂಕ ಮತ್ತು ಖಿನ್ನತೆಯಂತಹ ಕಾಯಿಲೆಗಳನ್ನು ಆಹ್ವಾನಿಸುತ್ತದೆ ಮತ್ತು ಸ್ಮರಣೆ ಹಾಗೂ ಕಲಿಕೆಗೆ ತೀವ್ರ ಪರಿಣಾಮ ಬೀರುತ್ತದೆ.
Published by:Latha CG
First published: