Kitchen Hacks: ಅಡುಗೆ ಮನೆಯ ಆಳವಾದ ಸ್ವಚ್ಛತೆಯ ಲಾಭಗಳು

ಜನರು ಸಾಮಾನ್ಯವಾಗಿ ಮನೆಯಲ್ಲಿ ಕೆಲವು ಸ್ಥಳಗಳನ್ನು ಶುಚಿಗೊಳಿಸುವಾಗ ಮರೆಯುತ್ತಾರೆ. ಕೆಲವೊಮ್ಮೆ ನಿರ್ಲಕ್ಷಿಸುತ್ತಾರೆ. ಕಸ, ಕೊಳೆ ಮತ್ತು ಕೀಟಾಣುಗಳು ಈ ಸ್ಥಳಗಳಲ್ಲಿ ಸಂಗ್ರಹವಾಗಿ, ವಿವಿಧ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತವೆ. ಅದಕ್ಕೆ ಅಡುಗೆ ಕೋಣೆಗೆ ಆಳವಾದ ಸ್ವಚ್ಛತೆಯ ಅಗತ್ಯವಿದೆ.

news18
Updated:July 16, 2019, 4:12 PM IST
Kitchen Hacks: ಅಡುಗೆ ಮನೆಯ ಆಳವಾದ ಸ್ವಚ್ಛತೆಯ ಲಾಭಗಳು
ಸ್ಚಚ್ಛವಾದ ಅಡುಗೆ ಕೋಣೆ
  • News18
  • Last Updated: July 16, 2019, 4:12 PM IST
  • Share this:
ಅಡುಗೆ ಮನೆಯ ಸಾಮಾನ್ಯ ಸ್ವಚ್ಛತೆ ಎಂದರೆ, ಕೋಣೆಯನ್ನು ಸಾಮಾನ್ಯವಾಗಿ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಒಂದು ಬಾರಿ ಸ್ವಚ್ಛಗೊಳಿಸಲಾಗುತ್ತದೆ. ಆಳವಾದ ಸ್ವಚ್ಛತೆ ಎಂದರೆ ಅತ್ಯಂತ ಸೂಕ್ಷ್ಮವಿಷಯಕ್ಕೂ ಪ್ರಾಮುಖ್ಯತೆ ನೀಡಲಾಗುತ್ತದೆ.

ಜನರು ಸಾಮಾನ್ಯವಾಗಿ ಮನೆಯಲ್ಲಿ ಕೆಲವು ಸ್ಥಳಗಳನ್ನು ಶುಚಿಗೊಳಿಸುವಾಗ ಮರೆಯುತ್ತಾರೆ. ಕೆಲವೊಮ್ಮೆ ನಿರ್ಲಕ್ಷಿಸುತ್ತಾರೆ. ಕಸ, ಕೊಳೆ ಮತ್ತು ಕೀಟಾಣುಗಳು ಈ ಸ್ಥಳಗಳಲ್ಲಿ ಸಂಗ್ರಹವಾಗಿ, ವಿವಿಧ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತವೆ.

ಆಳವಾದ ಸ್ವಚ್ಛತೆ ಈ ಸಮಸ್ಯೆಗಳನ್ನು ಸರಿಪಡಿಸುತ್ತದೆ ಮತ್ತು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುತ್ತದೆ. ಅಡುಗೆ ಕೋಣೆಯ ಯಾವ ಭಾಗವನ್ನೂ ಬಿಡದೆ ಸೂಕ್ತವಾಗಿ ಸ್ವಚ್ಛಗೊಳಿಸಲಾಗುತ್ತದೆ.

ಆಳವಾದ ಸ್ವಚ್ಛತೆಯ ಪ್ರಕ್ರಿಯೆ

• ಅಡುಗೆಮನೆಯಲ್ಲಿ ಆಳವಾದ ಸ್ವಚ್ಛತೆ ಎಂದರೆ ಚಿಮ್ನಿ, ಸಿಂಕ್, ಕ್ಯಾಬಿನೆಟ್, ಟೈಲ್ಸ್​ಗಳು, ಶೌಚಾಲಯದಲ್ಲಿ ವಾಶ್ ಬೇಸಿನ್, ಕನ್ನಡಿ, ಲಾಫ್ಟ್, ಸ್ಕರ್ಟಿಂಗ್ಸ್​ನಲ್ಲಿ ಇತ್ಯಾದಿಗಳಿಂದ ಕಠಿಣ ಕಲೆಗಳನ್ನು ತೆಗೆಯುವುದು.

• ಆಳವಾದ ಸ್ವಚ್ಛತೆಯ ಪ್ರಕ್ರಿಯೆಯಲ್ಲಿ ವಿಷರಹಿತ ರಾಸಾಯನಿಕ ಕ್ಲೆನ್ಸರ್​ಗಳನ್ನು ಬಳಸಲಾಗುತ್ತದೆ. ನೆಲವನ್ನು ವ್ಯಾಕ್ಯೂಂ ಮಾಡಿ ಒರೆಸುವುದು, ಸರಿಯಾಗಿ ಧೂಳು ತೆಗೆಯುವ ಮೂಲಕ ನೆಲ, ಕಾರ್ಪೆಟ್, ಕಿಟಕಿಗಳು, ಮರದ ವಸ್ತು, ದೀಪದ ಸ್ವಿಚ್​ಗಳು ಮತ್ತು ಗಾಜಿನ ವಸ್ತುಗಳನ್ನು ಕ್ರಮವಾಗಿ ಸ್ವಚ್ಛಗೊಳಿಸುವುದು ಸೇರಿರುತ್ತದೆ.

• ಹೆಚ್ಚು ಆರೈಕೆ ವಹಿಸಬೇಕಾದ ಸ್ಥಳಗಳಿಗೆ ವಿಶೇಷ ರಾಸಾಯನಿಕಗಳು ಮತ್ತು ಸ್ವಚ್ಛತೆಯ ಅಗತ್ಯವಿದೆ.ಆಳವಾದ ಸ್ವಚ್ಛತೆಗೆ ಹೆಚ್ಚಿನ ಕೆಲಸ ಮತ್ತು ಗಮನದ ಅಗತ್ಯವಿರುವುದರಿಂದ ಇದು ಸಾಮಾನ್ಯ ಸ್ವಚ್ಛತೆಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
First published:July 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ