• Home
  • »
  • News
  • »
  • lifestyle
  • »
  • Weight Loss: ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ಹೇಗೆ ಸಹಕಾರಿ?

Weight Loss: ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ಹೇಗೆ ಸಹಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧ್ಯಂತರ ಉಪವಾಸವನ್ನು ಅನೇಕ ಸೆಲೆಬ್ರಿಟಿಗಳು ಫಾಲೋ ಮಾಡ್ತಿದ್ದಾರೆ. ಹೊಟ್ಟೆಯ ಕೊಬ್ಬನ್ನೂ ಸಹ ಮಧ್ಯಂತರ ಉಪವಾಸ ಡಯಟ್ ನಲ್ಲಿ ತ್ವರಿತವಾಗಿ ಕರಗಿಸಬಹುದು. ಯಾರೆಲ್ಲಾ ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ಮಾಡಲಿದ್ದಾರೋ ಅಂದ್ರೆ ಬಿಗಿನರ್ಸ್ ಗಳಿಗೆ ಕೆಲವು ಸಲಹೆ ಇಲ್ಲಿ ಹೇಳಲಾಗಿದೆ.

  • Share this:

    ತೂಕ ನಷ್ಟಕ್ಕೆ (Weight Loss) ಹಲವು ರೀತಿಯ ಡಯಟ್ (Diet) ಗಳಿವೆ. ಅವುಗಳಲ್ಲಿ ಹೆಚ್ಚು ಪ್ರಚಲಿತ ಮತ್ತು ತುಂಬಾ ಜನರ (People) ಫೇವರೆಟ್ ಡಯಟ್ ಅಂದ್ರೆ ಮಧ್ಯಂತರ ಉಪವಾಸ (Intermittent Fasting). ಯಾಕಂದ್ರೆ ಮಧ್ಯಂತರ ಉಪವಾಸ ಬೇಗ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮಧ್ಯಂತರ ಉಪವಾಸವನ್ನು ಅನೇಕ ಸೆಲೆಬ್ರಿಟಿಗಳು ಫಾಲೋ ಮಾಡ್ತಿದ್ದಾರೆ. ಹೊಟ್ಟೆಯ ಕೊಬ್ಬನ್ನೂ ಸಹ ಮಧ್ಯಂತರ ಉಪವಾಸ ಡಯಟ್ ನಲ್ಲಿ ತ್ವರಿತವಾಗಿ ಕರಗಿಸಬಹುದು. ಇನ್ನು ಕೆಲವರು ಬೊಜ್ಜು ಕರಗಿಸಲು ಯಾವುದೇ ತಜ್ಞರ ಸಲಹೆ ಪಡೆಯದೇ, ಯಾವುದೋ ಒಂದು ಡಯಟ್ ಮಾಡಲು ಮುಂದಾಗ್ತಾರೆ. ಅದು ತಮ್ಮ ದೇಹಕ್ಕೆ ಸರಿ ಹೊಂದುತ್ತದೆಯೋ ಇಲ್ಲವೋ ಎಂಬುದನ್ನೂ ಸಹ ಲೆಕ್ಕಿಸುವುದಿಲ್ಲ.


    ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ


    ಹೀಗಾದಾಗ ತೂಕ ನಷ್ಟದ ಬದಲು ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳು ಬೀರುತ್ತವೆ. ಹಾಗಾಗಿ ಇಂದು ನಾವು ಯಾರೆಲ್ಲಾ ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ಮಾಡಲಿದ್ದಾರೋ ಅಂದ್ರೆ ಬಿಗಿನರ್ಸ್ ಗಳಿಗೆ ಕೆಲವು ಸಲಹೆ ಇಲ್ಲಿ ಹೇಳಲಾಗಿದೆ.


    ತೂಕ ನಷ್ಟಕ್ಕೆ ಮಧ್ಯಂತರ ಉಪವಾಸ ವಿಧಾನವು ಸಂಪೂರ್ಣವಾಗಿ ವಿಭಿನ್ನವಾಗಿದೆ. ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬು, ಹೆಚ್ಚುವರಿ ಕ್ಯಾಲೊರಿ ಆಹಾರ ಸೇವನೆ, ತಾಲೀಮು ಮಾಡದೇ ಇರುವುದು ಮತ್ತು ಅತಿಯಾಗಿ ತಾಲೀಮು ಮಾಡುವುದು ದೇಹಕ್ಕೆ ಹಾನಿಕರ.




    ಮಧ್ಯಂತರ ಉಪವಾಸದಲ್ಲಿ ಎರಡು ಭಾಗಗಳಿವೆ


    ಪೌಷ್ಟಿಕ ತಜ್ಞೆ ಪೂನಂ ದುನೇಜಾ ಪ್ರಕಾರ, ತಡರಾತ್ರಿ ಆಹಾರ ಸೇವಿಸುವುದು ಬೊಜ್ಜು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೆ ಅಡ್ಡಿಯಾಗುತ್ತದೆ. ಮಧ್ಯಂತರ ಉಪವಾಸವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.


    ಒಂದು ತಿನ್ನುವ ಅವಧಿ ಮತ್ತು ಮತ್ತೊಂದು ಉಪವಾಸದ ಅವಧಿ. ತಿನ್ನುವ ಅವಧಿಯಲ್ಲಿ ಪ್ರತಿ ಮೂರರಿಂದ ನಾಲ್ಕು ಗಂಟೆಗೆ ಒಮ್ಮೆ ಊಟ ಮಾಡಬಹುದು. ಆಗ ಆಹಾರದಲ್ಲಿ ಉತ್ತಮ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಆಹಾರ ಸೇವಿಸಿ.


    ಇನ್ನೊಂದು ಭಾಗವಾದ ಉಪವಾಸದ ಅವಧಿಯಲ್ಲಿ ನೀರು ಮಾತ್ರ ಕುಡಿಯಬೇಕು. ಇದು ನಿಮ್ಮ ದೇಹದ ಸಮಸ್ಯೆ ಕಡಿಮೆ ಮಾಡುತ್ತದೆ. ಕೀಲು ನೋವು, ಊತ ಸಮಸ್ಯೆ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತವೆ.


    ಮಧ್ಯಂತರ ಉಪವಾಸದ ನಿಯಮಗಳು ಹೀಗಿವೆ


    ಮಧ್ಯಂತರ ಉಪವಾಸ, ಊಟದ ಯೋಜನೆ. ಇದು ಉಪವಾಸ ಮತ್ತು ಆಹಾರ ಸೇವನೆ ಎರಡನ್ನೂ ಹೊಂದಿದೆ. ಒಂದು ಹೊತ್ತು ಉಪವಾಸ ಮತ್ತೊಂದು ಹೊತ್ತು ಆಹಾರ ಸೇವನೆ ಈ ಪ್ರಕ್ರಿಯೆ ಬೇಗ ತೂಕ ಕಳೆದುಕೊಳ್ಳಲು ಸಹಕಾರಿ.


    ಸಾಂದರ್ಭಿಕ ಚಿತ್ರ


    ಇದು ಸ್ಥೂಲಕಾಯ ಸಮಸ್ಯೆ ಕಡಿಮೆ ಮಾಡುತ್ತದೆ. ಅನೇಕ ಪ್ರಮುಖ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಮಧ್ಯಂತರ ಉಪವಾಸಕ್ಕೆ ಯಾವುದೇ ನಿರ್ದಿಷ್ಟ ವಯಸ್ಸಿನ ಪ್ರಕಾರ ನಿರ್ಧರಿಸಿಲ್ಲ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಹೃದ್ರೋಗಿಗಳು ಮತ್ತು ಮಧುಮೇಹಿಗಳಿಗೆ ಹೊರತುಪಡಿಸಿ, ಯಾರು ಬೇಕಾದರೂ ತಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ಮಧ್ಯಂತರ ಉಪವಾಸ ಮಾಡಬಹುದು.


    ಆಹಾರ ಕ್ರಮ ಹೊಂದಿಸಿ


    ಮಧ್ಯಂತರ ಉಪವಾಸದಲ್ಲಿ ಕೆಲವರು ದಿನಕ್ಕೆ ಒಂದು ಊಟ ಮಾಡ್ತಾರೆ. ಇನ್ನು ಕೆಲವರು ದಿನಕ್ಕೆ ಎರಡು ಊಟ ಮಾಡ್ತಾರೆ. ನಿಮ್ಮ ದೇಹಕ್ಕೆ ಅನುಗುಣವಾಗಿ ಊಟದ ಆಯ್ಕೆ ಮಾಡಿ.


    ಆರಂಭದಲ್ಲಿ ಊಟದ ನಡುವೆ 8 ರಿಂದ 10 ಗಂಟೆಗಳ ಅಂತರವಿರುತ್ತದೆ. ನಂತರ ಅಂತರವು 12 ಗಂಟೆ ಹೆಚ್ಚಾಗುತ್ತದೆ. ನಂತರ 18 ಗಂಟೆ ಅಂತರ ಇರುತ್ತದೆ.


    ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ


    ಪೌಷ್ಟಿಕ ಪದಾರ್ಥ ಹಾಗೂ ಕಡಿಮೆ ಕ್ಯಾಲೋರಿ ಸೇವನೆ ಮಾಡಿ


    ತೂಕ ಇಳಿಕೆಗೆ ದೇಹದ ಪೋಷಣೆಗೆ ಆಹಾರದಲ್ಲಿ ಪೋಷಕಾಂಶ ಸಮೃದ್ಧ ಪದಾರ್ಥ ಸೇರಿಸಿ. ದೇಹಕ್ಕೆ ಎಷ್ಟು ಕ್ಯಾಲೊರಿಗಳು ಬೇಕು ಎಂದು ತಿಳಿಯಿರಿ. ಹಾಗೂ ವಯಸ್ಸು, ಆರೋಗ್ಯ ಮತ್ತು ತೂಕ ಪರಿಶೀಲಿಸಿ ಕ್ಯಾಲೋರಿ ಸೇವಿಸುವ ಪ್ರಮಾಣ ನಿರ್ಧರಿಸಿ.

    Published by:renukadariyannavar
    First published: