Belly Fat: ಹೊಟ್ಟೆ ಬೊಜ್ಜು ಕರಗಿಸಲು ಆಪಲ್ ಸೈಡರ್ ವಿನೆಗರ್ ಹೇಗೆ ಸಹಕಾರಿ?

ಹೊಟ್ಟೆಯ ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟದ ಕೆಲಸ. ಎದೆ ಮತ್ತು ಸೊಂಟದ ನಡುವಿನ ಪ್ರದೇಶವನ್ನು ಮಿಡ್ರಿಫ್ ಎಂದು ಕರೆಯುತ್ತಾರೆ. ಮಿಡ್ರಿಫ್ ಸುತ್ತಲಿನ ಪ್ರದೇಶದಲ್ಲಿ ಕೊಬ್ಬಿನ ಶೇಖರಣೆ ಹೃದ್ರೋಗ ಅಥವಾ ಪಾರ್ಶ್ವವಾಯು ಅಪಾಯ ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೆಟ್ಟ ಜೀವನಶೈಲಿ (Bad Lifestyle), ಕಡಿಮೆ ದೈಹಿಕ ಚಟುವಟಿಕೆ (Activities), ತಪ್ಪು ಆಹಾರ (Food) ಪದ್ಧತಿ, ಆರೋಗ್ಯದ (Health) ಮೇಲೆ ಬಹಳಷ್ಟು ಅಡ್ಡ ಪರಿಣಾಮ ಬೀರುತ್ತದೆ. ಆರೋಗ್ಯದ ಕೊರತೆ ದೇಹದಲ್ಲಿ ಅನೇಕ ರೋಗಗಳು ಹುಟ್ಟಿಕೊಳ್ಳುತ್ತವೆ. ತೂಕ ಹೆಚ್ಚಾಗುವುದು, ಮಧುಮೇಹ, ಕೀಲು ನೋವು ಮುಂತಾದ ಎಲ್ಲಾ ಸಮಸ್ಯೆಗಳು ವ್ಯಕ್ತಿಯನ್ನು ತುಂಬಾ ದುರ್ಬಲಗೊಳಿಸಬಹುದು. ನಾವು ತೂಕ ಹೆಚ್ಚಾಗುವ ಬಗ್ಗೆ ಮಾತನಾಡಿದರೆ, ಇಂದಿನ ಕಾಲದಲ್ಲಿ ಅನೇಕ ಜನರು ಈ ಸಮಸ್ಯೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮತ್ತು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಅನೇಕ ಜನರು ತಮ್ಮ ಹೊಟ್ಟೆಯ ಕೊಬ್ಬಿನಿಂದ ಅಂದರೆ ಹೊಟ್ಟೆಯ ಫ್ಯಾಟ್ ನಿಂದ ತೊಂದರೆ ಪಡುತ್ತಾರೆ.

    ಹೊಟ್ಟೆಯ ಕೊಬ್ಬು ಕರಗಿಸುವುದು ಹೇಗೆ?

    ಏಕೆಂದರೆ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ತುಂಬಾ ಕಷ್ಟದ ಕೆಲಸ. ಎದೆ ಮತ್ತು ಸೊಂಟದ ನಡುವಿನ ಪ್ರದೇಶವನ್ನು ಮಿಡ್ರಿಫ್ ಎಂದು ಕರೆಯುತ್ತಾರೆ. ಮಿಡ್ರಿಫ್ ಸುತ್ತಲಿನ ಪ್ರದೇಶದಲ್ಲಿ ಕೊಬ್ಬಿನ ಶೇಖರಣೆ ಹೃದ್ರೋಗ ಅಥವಾ ಪಾರ್ಶ್ವವಾಯು ಅಪಾಯ ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

    ಇತ್ತೀಚಿನ ಸಂಶೋಧನೆ ಪ್ರಕಾರ, ಯಾವ ವ್ಯಕ್ತಿ ನಿರ್ದಿಷ್ಟ ಪಾನೀಯ ಪ್ರತಿದಿನ ಸೇವನೆ ಮಾಡುತ್ತಾರೋ ಅಂತವರ ಹಾಗೂ ನೀರು ಕುಡಿಯುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವೂ ಸಹ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಈ ವಿಶೇಷ ಪಾನೀಯ ಯಾವುದು ಎಂದು ತಿಳಿಯೋಣ.

    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

    ಹೊಟ್ಟೆಯ ಕೊಬ್ಬಿನ ಬಗ್ಗೆ ಮುಖ್ಯವಾಗಿ ತಿಳಿಯುವುದು ತುಂಬಾ ಮುಖ್ಯ

    ಹೊಟ್ಟೆಯ ಕೊಬ್ಬನ್ನು ಒಳಾಂಗ ಕೊಬ್ಬು ಎಂದು ಕರೆಯುತ್ತಾರೆ. ಈ ಕೊಬ್ಬನ್ನು ಹೊಟ್ಟೆಯ ಒಳಪದರದಲ್ಲಿ ಆಳವಾಗಿ ಸಂಗ್ರಹಿಸಲಾಗುತ್ತದೆ. ಹೆಚ್ಚಿನ ಕೊಬ್ಬು ಇದು ಯಕೃತ್ತು ಮತ್ತು ಕರುಳು ಸೇರಿದಂತೆ ಅನೇಕ ಅಂಗಗಳ ಸುತ್ತಲೂ ಹರಡುತ್ತದೆ. ಇದರಿಂದಾಗಿ ನೀವು ಅನೇಕ ಆರೋಗ್ಯ ಸಮಸ್ಯೆ ಎದುರಿಸುತ್ತೀರಿ. ಈ ಪಾನೀಯ ಸೇವನೆ ಮಾಡುವುದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

    ದಿ ಮಿರರ್ ಹೇಳುವ ಪ್ರಕಾರ, ಕಳಪೆ ಆಹಾರ, ಹೆಚ್ಚುವರಿ ಸಕ್ಕರೆ, ಸಂಸ್ಕರಿಸಿದ ಆಹಾರ, ಸ್ಯಾಚುರೇಟೆಡ್ ಕೊಬ್ಬು ಹೊಟ್ಟೆಯ ಕೊಬ್ಬು ಶೇಖರಣೆಗೆ ಪ್ರಮುಖ ಕಾರಣಗಳು ಆಗಿವೆ. ಕೆಲವು ಅಂಶಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡಲು ಆಪಲ್ ಸೈಡರ್ ವಿನೆಗರ್ ನ್ನು ಕುಡಿಯಲು ಕೆಲವು ಸಂಶೋಧನೆಗಳು ಸಲಹೆ ನೀಡುತ್ತವೆ.

    ಆಪಲ್ ಸೈಡರ್ ವಿನೆಗರ್ AMPK ಕಿಣ್ವ ಹೆಚ್ಚಿಸುವ ಆಮ್ಲ ಆಗಿದೆ

    ಈ ಕಿಣ್ವವು ಕೊಬ್ಬು ಕರಗಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಸಕ್ಕರೆಯ ಉತ್ಪಾದನೆ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸಂಶೋಧನೆ ಹೇಳುವ ಪ್ರಕಾರ, ಆಪಲ್ ಸೈಡರ್ ವಿನೆಗರ್ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆ. ಇದು ನಿಮ್ಮನ್ನು ಕಡಿಮೆ ಕ್ಯಾಲೊರಿ ಸೇವನೆ ಮಾಡುವಂತೆ ಮಾಡುತ್ತದೆ ಮತ್ತು ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

    ಸಂಶೋಧನೆಯ ಪ್ರಕಾರ, ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರ ಸೇವನೆ ಜೊತೆ ಸೇಬು ಸೈಡರ್ ವಿನೆಗರ್ ನ್ನು ಸೇವನೆ ಮಾಡುವುದರಿಂದ ಹಸಿವು ಕಡಿಮೆ ಆಗುತ್ತದೆ. ಇದರಿಂದ ಜನರು 200 ರಿಂದ 275 ಕಡಿಮೆ ಕ್ಯಾಲೊರಿ ಸೇವನೆ ಮಾಡುತ್ತಾರೆ.

    175 ಜನರ ಮೇಲೆ ನಡೆಸಿದ ಈ ಸಂಶೋಧನೆ ಹೇಳುವ ಪ್ರಕಾರ, ಆಪಲ್ ಸೈಡರ್ ವಿನೆಗರ್ ಅನ್ನು ಪ್ರತಿದಿನ ಸೇವನೆ ಮಾಡುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆ ಆಗುತ್ತದೆ. ಮತ್ತು ತೂಕವೂ ಕಡಿಮೆ ಆಗುತ್ತದೆ.

    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

    ಎಷ್ಟು ಆಪಲ್ ಸೈಡರ್ ವಿನೆಗರ್ ಸೇವನೆ ಮಾಡಬೇಕು?

    ಸಂಶೋಧನೆ ಪ್ರಕಾರ, ಒಂದು ಚಮಚ ವಿನೆಗರ್ ಸೇವಿಸಿದವರು ಮೂರು ತಿಂಗಳಲ್ಲಿ 1.2 ಕೆಜಿ ಮತ್ತು ಎರಡು ಚಮಚ ವಿನೆಗರ್ ಸೇವಿಸಿದವರು 1.7 ಕೆಜಿ ವೇಟ್ ಲಾಸ್ ಮಾಡಿದ್ದಾರೆ. ಪ್ರತಿದಿನ ಒಂದರಿಂದ ಎರಡು ಚಮಚ ಆಪಲ್ ಸೈಡರ್ ವಿನೆಗರ್ ನ್ನು ಸೇವಿಸುವುದರಿಂದ ಹೆಚ್ಚಿನ ಜನರಿಗೆ ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಸೇಬು ಸೈಡರ್ ವಿನೆಗರ್ ನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ.
    Published by:renukadariyannavar
    First published: