Weight Loss Reason: ಕರುಳಿನ ಬ್ಯಾಕ್ಟೀರಿಯಾಗಳು ತೂಕ ನಷ್ಟ ಪ್ರಕ್ರಿಯೆಯಲ್ಲಿ ಹೇಗೆ ಪ್ರಮುಖ ಪಾತ್ರವಹಿಸುತ್ತವೆ?

Weight Loss Tips in Kannada: ಧ್ಯಯನದ ತಜ್ಞರು ಕಂಡುಕೊಂಡಿರುವ ಮಾಹಿತಿ ಏನೆಂದರೆ ಕರುಳಿನ ಸೂಕ್ಷ್ಮಾಣುಜೀವಿಗಳ ಸಂಯೋಜನೆಯು ಸ್ಥೂಲಕಾಯ ಹಾಗೂ ಮಧುಮೇಹದಂತಹ ಕಾಯಿಲೆಗಳ ಮೇಲೆ ಪರಿಣಾಮಕಾರಿ ಎಂದೆನಿಸಿದ್ದು ಕರುಳಿನ ಸೂಕ್ಷ್ಮಜೀವಿಗಳು ಗ್ಲುಕೋಸ್ ಚಯಾಪಚಯ, ಹಸಿವು ಮತ್ತು ಕೊಬ್ಬಿನ ಶೇಖರಣೆಯನ್ನು ನಿಯಂತ್ರಿಸುವ ಮೂಲಕ ಶಕ್ತಿಯ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Weight Loss: ಕರುಳಿನ ಸೂಕ್ಷ್ಮಜೀವಿಯು ವಿವಿಧ ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳು ಹಾಗೂ ಜೀರ್ಣಾಂಗದಲ್ಲಿ ವಾಸಿಸುವ ಇತರ ಸೂಕ್ಷ್ಮಾಣುಗಳನ್ನು ಒಳಗೊಂಡಿರುತ್ತವೆ ಹಾಗೂ ಈ ಸಂಯೋಜನೆಯು ವ್ಯಕ್ತಿಗಳಲ್ಲಿ ಭಿನ್ನವಾಗಿರುತ್ತದೆ. ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿರುವ ಮಾಹಿತಿ ಏನೆಂದರೆ ಕರುಳಿನ ಸೂಕ್ಷ್ಮಜೀವಿಯು ವ್ಯಕ್ತಿಯ Digestion ಕ್ರಿಯೆ, ಪ್ರತಿರಕ್ಷಣಾ ಕಾರ್ಯ ಹಾಗೂ ಮಾನಸಿಕ ಆರೋಗ್ಯವನ್ನು ಮಾರ್ಪಡಿಸುವ ಮೂಲಕ ಯೋಗಕ್ಷೇಮದ ಮೇಲೆ ಪ್ರಭಾವ ಬೀರಲಿದೆ ಎಂದಾಗಿದೆ. ಅಧ್ಯಯನದ ತಜ್ಞರು ಕಂಡುಕೊಂಡಿರುವ ಮಾಹಿತಿ ಏನೆಂದರೆ ಕರುಳಿನ ಸೂಕ್ಷ್ಮಾಣುಜೀವಿಗಳ ಸಂಯೋಜನೆಯು ಸ್ಥೂಲಕಾಯ ಹಾಗೂ ಮಧುಮೇಹದಂತಹ ಕಾಯಿಲೆಗಳ ಮೇಲೆ ಪರಿಣಾಮಕಾರಿ ಎಂದೆನಿಸಿದ್ದು ಕರುಳಿನ ಸೂಕ್ಷ್ಮಜೀವಿಗಳು ಗ್ಲುಕೋಸ್ ಚಯಾಪಚಯ, ಹಸಿವು ಮತ್ತು ಕೊಬ್ಬಿನ ಶೇಖರಣೆಯನ್ನು ನಿಯಂತ್ರಿಸುವ ಮೂಲಕ ಶಕ್ತಿಯ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ.

    ಅನುವಂಶಿಕ ವಿಧಾನವನ್ನು ಅನುಸರಿಸುವುದು:

    ತೂಕ ಇಳಿಕೆಯ ಯೋಜನೆಯ ಮೊದಲು ಕರುಳಿನ ಅನುವಂಶಿಕದಲ್ಲಿ ಹೆಚ್ಚು ಹೇರಳವಾಗಿರುವ ವಂಶವಾಹಿನಿಗಳನ್ನು ಪತ್ತೆಹಚ್ಚಿದ್ದಾರೆ. ಇವುಗಳು ನಿರ್ವಹಿಸುವ ಜೈವಿಕ ಕ್ರಿಯೆಗಳನ್ನು ಆಧರಿಸಿ ಕರುಳಿನ ಸೂಕ್ಷ್ಮಜೀವಿಗಳ ಕಾರ್ಯಾಚರಣೆಗಳನ್ನು ಊಹಿಸಿದ್ದಾರೆ. ತೂಕನಷ್ಟ ಯೋಜನೆಯ ಆರಂಭದಲ್ಲಿ ಅನುವಂಶಿಕ ವಂಶವಾಹಿಗಳ ಕಾರ್ಯಾಚರಣೆಯು ತೂಕವನ್ನು ಕಳೆದುಕೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ಅಂದಾಜಿಸುತ್ತದೆ ಎಂಬುದನ್ನು ತಜ್ಞರು ಕಂಡುಕೊಂಡಿದ್ದಾರೆ. ತೂಕ ನಷ್ಟವಾದವರು ಹಾಗೂ ತೂಕ ನಷ್ಟವಾಗದವರ ಚಯಾಪಚಯ ಕ್ರಿಯೆಗಳ ಮೇಲೆ ಪ್ರಭಾವ ಬೀರುವ ಸೂಕ್ಷ್ಮಜೀವಿಗಳ ವಂಶವಾಹಿಗಳಲ್ಲಿ ವ್ಯತ್ಯಾಸವಿರುವುದನ್ನು ತಜ್ಞರು ಕಂಡುಹಿಡಿದಿದ್ದಾರೆ.

    ಇದನ್ನೂ ಓದಿ: Health Tips: ನೀವು PCOSನಿಂದ ಬಳಲುತ್ತಿದ್ದರೆ, ತೂಕ ಕಡಿಮೆ ಮಾಡಿಕೊಳ್ಳುವುದು ತುಂಬಾ ಮುಖ್ಯ

    ಮೂಲ Body Mass Index ಹಾಗೂ Weigh Loss:

    ಪ್ರಸ್ತುತ ಅಧ್ಯಯನದಲ್ಲಿ ಕಾರ್ಯಕ್ರಮದಕ್ಕೆ ದಾಖಲಾಗಿದ್ದ 105 ವ್ಯಕ್ತಿಗಳ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಭಾಗವಹಿಸುವವರ ಮಾಹಿತಿಯನ್ನು ಸಂಶೋಧಕರು ಸಂಗ್ರಹಿಸಿದರು ಅವರ ತೂಕ ಹಾಗೂ ಬಿಎಮ್‌ಐ ಮಟ್ಟವನ್ನು ಅಂದಾಜಿಸಿದರು. ಕಾರ್ಯಕ್ರಮ ಆರಂಭವಾಗಿ 6-12 ತಿಂಗಳ ನಂತರ ರಕ್ತದ ಮಾದರಿಗಳನ್ನು ವಿಶ್ಲೇಷಿಸಿದರು. ಅವರು ರಕ್ತದ ಮಾದರಿಗಳನ್ನು ವಿವಿಧ ಮೆಟಾಬೊಲೈಟ್‌ಗಳು ಮತ್ತು ಪ್ರೋಟೀನ್‌ಗಳ ಮಟ್ಟವನ್ನು ಮೌಲ್ಯಮಾಪನ ಮಾಡಲು ಬಳಸಿದರು ಮತ್ತು ಕರುಳಿನ ಮೈಕ್ರೋಬಯೋಟಾ ಸಂಯೋಜನೆ ಮತ್ತು ಕಾರ್ಯವನ್ನು ನಿರ್ಧರಿಸಲು ಮಲದ ಮಾದರಿಗಳನ್ನು ಬಳಸಿದರು.

    ಇದನ್ನೂ ಓದಿ: ಮನಸ್ಸು-ಮೆದುಳು ಎರಡೂ ಚನ್ನಾಗಿರಲು ಮೊಸರು-ಇಡ್ಲಿ-ಉಪ್ಪಿನಕಾಯಿ ಸಾಕಂತೆ.. ಏನಿದು ಸೂಪರ್ ಸುದ್ದಿ?

    ಭಾಗವಹಿಸಿದ 105 ಜನರಲ್ಲಿ 48 ವ್ಯಕ್ತಿಗಳು ಕನಿಷ್ಠ 1% ತೂಕವನ್ನು ಕಳೆದುಕೊಂಡರು. ಆದರೆ ಉಳಿದ 57 ಜನರ ತೂಕದಲ್ಲಿ ಯಾವುದೇ ಮಾರ್ಪಾಡುಗಳಾಗಲಿಲ್ಲ. ಸಂಶೋಧಕರು ಹೆಚ್ಚಿನ ತೂಕವನ್ನು ಕಳೆದುಕೊಂಡ 15 ವ್ಯಕ್ತಿಗಳನ್ನು ಮತ್ತು ತಮ್ಮ ತೂಕದಲ್ಲಿ ಕನಿಷ್ಠ ಮಹತ್ವದ ಬದಲಾವಣೆಯನ್ನು ತೋರಿಸಿದ ತೂಕವಿಲ್ಲದ ಗುಂಪಿನ 10 ಜನರನ್ನು ಗುರುತಿಸಿದ್ದಾರೆ. ತದನಂತರ 25 ವ್ಯಕ್ತಿಗಳ ಉಪಗುಂಪಿನಿಂದ ಮಾದರಿಗಳನ್ನು ಬಳಸಿಕೊಂಡು ಕರುಳಿನ ಸೂಕ್ಷ್ಮಸಂಯೋಜನೆಯ ಹಾಗೂ ಅದರ ಕಾರ್ಯವನ್ನು ನಿರ್ಧರಿಸಿದರು. ಎಲ್ಲಾ 105 ವ್ಯಕ್ತಿಗಳ ಮಾದರಿಗಳನ್ನು ತೂಕ ನಷ್ಟ ಮತ್ತು ಆಹಾರದ ಮಾದರಿಗಳು ಮತ್ತು ರಕ್ತದ ಚಯಾಪಚಯ ಕ್ರಿಯೆಗಳು ಮತ್ತು ಪ್ರೋಟೀನ್‌ಗಳಂತಹ ನಡುವಿನ ಸಂಬಂಧವನ್ನು ಪರೀಕ್ಷಿಸಲು ಬಳಸಿದರು.

    ರಕ್ತ ಚಯಾಪಚಯ ಗುರುತುಗಳಲ್ಲಿನ ಬದಲಾವಣೆಗಳು:

    ತೂಕನಷ್ಟದ ಅಧ್ಯಯನದ ಮೊದಲು ಹಾಗೂ ನಂತರದ ರಕ್ತದ ಮಾದರಿಗಳನ್ನು ಬಳಸಿ ತೂಕನಷ್ಟವಾದ ಹಾಗೂ ನಷ್ಟವಾಗದೇ ಇರುವ ಗುಂಪುಗಳಲ್ಲಿನ ಚಯಾಪಚಯ ಗುರುತುಗಳ ಮಟ್ಟದಲ್ಲಿ ಬದಲಾವಣೆಗಳನ್ನು ಹೋಲಿಸಿದರು. ಕೊಬ್ಬಿನ ಸಮಸ್ಯೆಯು ಅಡಿಪೋನೆಕ್ಟಿನ್ ಹಾರ್ಮೋನ್ ಅನ್ನು ಸ್ರವಿಸುತ್ತದೆ, ಮತ್ತು ಈ ಪ್ರೋಟೀನ್‌ನ ಮಟ್ಟದಲ್ಲಿನ ಹೆಚ್ಚಳವು ತೂಕ ನಷ್ಟಕ್ಕೆ ಸಂಬಂಧಿಸಿದೆ. ತೂಕ ನಷ್ಟವಾದವರು ಆರು ಪ್ರೊಟೀನ್ ಮಟ್ಟದಲ್ಲಿ ಇಳಿಕೆಯನ್ನು ಪ್ರದರ್ಶಿಸಿದೆ. ಆದ್ದರಿಂದ ತೂಕ ನಷ್ಟವು ವ್ಯಕ್ತಿಗಳ ಚಯಾಪಚಯ ಹಾಗೂ ರೋಗನಿರೋಧಕ ಸುಧಾರಣೆಗೆ ಸಂಬಂಧಿಸಿದೆ.

    ತೂಕ ಇಳಿಕೆ ಹಾಗೂ ಮೂಲ ಅಂಶಗಳಲ್ಲಿನ ವೈಶಿಷ್ಟ್ಯತೆಗಳು:

    ಆರಂಭ ಹಂತದ ಬಿಎಮ್‌ಐ, ವಯಸ್ಸು ಹಾಗೂ ಲಿಂಗವನ್ನು ನಿಯಂತ್ರಿಸಿದ ನಂತರ ತೂಕ ಇಳಿಕೆ ಹಾಗೂ ಅಧ್ಯಯನದ ಆರಂಭದಲ್ಲಿ ಅಳತೆ ಮಾಡಲಾದ ಬೇರೆ ಬೇರೆ ವೈಶಿಷ್ಟ್ಯಗಳನ್ನು ವಿಶ್ಲೇಷಿಸಿದ್ದಾರೆ. ಈ ವೈಶಿಷ್ಟ್ಯಗಳು ಆಹಾರದ ಮಾದರಿಗಳು, ರಕ್ತದ ಪ್ರೋಟೀನ್ ಹಾಗೂ ಮೆಟಮೊಲೈಟ್ ಮಟ್ಟಗಳು ಅಂತೆಯೇ ಕರುಳಿನ ಸೂಕ್ಷ್ಮಜೀವಿಗಳ ಸಂಯೋಜನೆ ಮತ್ತು ಕಾರ್ಯವನ್ನು ಒಳಗೊಂಡಿದೆ.

    ತೂಕನಷ್ಟಕ್ಕೆ ಒಳಗಾದವರು ಮೂಲ ಆಹಾರ ಪದ್ಧತಿ ಹಾಗೂ ಚಯಾಪಚಯ ಮಟ್ಟಗಳೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ಕಂಡುಕೊಂಡ ತಜ್ಞರು ರಕ್ತದಲ್ಲಿನ ಪ್ರೋಟೀನ್ ಅಂಶ KIT ligand ತೂಕ ನಷ್ಟಕ್ಕೆ ಧನಾತ್ಮಕ ಅಂಶವನ್ನು ಹೊಂದಿದೆ ಎಂದಾಗಿದೆ. ಚಯಾಪಚಯ ಅಂಶಗಳಿಂದ ತೂಕ ಇಳಿಕೆಯ ಕಾರಣಗಳನ್ನು ಪತ್ತೆಹಚ್ಚಬಹುದಾಗಿದ್ದು ಪ್ರಮುಖ ಆಹಾರ ನಮೂನೆಗಳು, ರಕ್ತದ ಮೆಟಾಬೊಲೈಟ್ ಮತ್ತು ಪ್ರೋಟೀನ್ ಮಟ್ಟಗಳಿಗಿಂತ ಈ ಅಂಶ ತೂಕ ಇಳಿಕೆಗೆ ಸಹಕಾರಿ ಎಂಬುದನ್ನು ಪ್ರಸ್ತುತಪಡಿಸಿದ್ದಾರೆ.

    ಮೈಕ್ರೋಬಯೋಮ್ ಕ್ರಿಯಾತ್ಮಕ ವಂಶವಾಹಿಗಳು - creatine gut microbiome:

    ಮೈಕ್ರೋಬಯೋಮ್ ವಂಶವಾಹಿಗಳ ವರ್ಗವು ತೂಕ ನಷ್ಟದ ಗುಂಪಿನಲ್ಲಿ ಹೇರಳವಾಗಿದ್ದು ಬ್ಯಾಕ್ಟೀರಿಯಾದ ಕೋಶ ಗೋಡೆಗಳ ಸಂಶ್ಲೇಷಣೆಗೆ ಸಂಬಂಧಿಸಿದೆ. ಕರುಳಿನಲ್ಲಿ ಹೆಚ್ಚಿರುವ ಪ್ರಿವೊಟೆಲ್ಲಾ ಹೊಂದಿರುವ ವ್ಯಕ್ತಿಗಳು ಅಧಿಕ ಪ್ರಮಾಣದ ಫೈಬರ್ ಆಹಾರ ಸೇವಿಸಿದಂತೆ ತೂಕ ಇಳಿಕೆಯಲ್ಲೂ ಬದಲಾವಣೆ ಕಂಡುಬರಲಿದೆ. ಈ ಮಟ್ಟಗಳು ಕಾರ್ಬೋಹೈಡ್ರೇಟ್‌ಗಳ ಮಟ್ಟವನ್ನು ತಗ್ಗಿಸಿ ಕೊಬ್ಬಿನಾಮ್ಲಗಳನ್ನು ಬಿಡುಗಡೆಗೊಳಿಸುತ್ತವೆ. ಈ ಆಮ್ಲಗಳು ಕಾರ್ಬೋಹೈಡ್ರೇಟ್‌ಗಳಿಗಿಂತ ಕಡಿಮೆ ಶಕ್ತಿಯನ್ನು ಹೊಂದಿರುತ್ತವೆ ಹಾಗೂ ಉರಿಯೂತವನ್ನು ಕಡಿಮೆ ಮಾಡುತ್ತದೆ.

    ಸಾಮರ್ಥ್ಯ ಹಾಗೂ ಮಿತಿಗಳು:

    ಹೆಚ್ಚಿನ Body Mass Index ಹೊಂದಿರುವವರು ಅಧಿಕ ತೂಕ ನಷ್ಟಕ್ಕೆ ಒಳಗಾಗುತ್ತಾರೆ. ಎಂಬುದನ್ನು ಕಂಡುಕೊಂಡಿದ್ದು ಅಧ್ಯಯನವೂ ಕೂಡ ಕೆಲವೊಂದು ಮಿತಿಗಳನ್ನು ಹಾಕಿಕೊಂಡಿತ್ತು. ಅಧ್ಯಯನಕಾರರಾದ ಡಾ. ಗಿಬ್ಬನ್ಸ್ ಜನರಿಗೆ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿರುವ ರೋಗ ನಿರ್ಣಯ ಹಾಗೂ ವೈಯಕ್ತಿಕ ಹಸ್ತಕ್ಷೇಪಗಳಿಗೆ ಸಂಬಂಧಿಸಿದಂತೆ ಕೆಲವೊಂದು ಪೂರಕ ಅಂಶಗಳನ್ನು ಅಭಿವೃದ್ಧಿಪಡಿಸಲು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
    Published by:Sharath Sharma Kalagaru
    First published: