Heart Health: ತರಕಾರಿ ತಿನ್ನಿ ಹಸಿ, ನಿಮ್ಮ ಹೃದಯಕ್ಕೆ ಆಗುತ್ತೆ ಖುಷಿ! ಯಾವೆಲ್ಲ ವೆಜಿಟೇಬಲ್ಸ್ ಬೆಸ್ಟ್ ಗೊತ್ತಾ?

ಹಸಿ ತರಕಾರಿಗಳ ಅನೇಕ ಪೋಷಕಾಂಶಗಳು ಮತ್ತು ಜೈವಿಕ ಕ್ರಿಯಾಶೀಲ ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿವೆ. ಪರಿಧಮನಿಯ ಹೃದಯ ಕಾಯಿಲೆಯಿಂದ ರಕ್ಷಿಸಲು ಇದು ಸಹಾಯಕಾರಿ. ಫೈಬರ್ ಮತ್ತು ಪೊಟ್ಯಾಸಿಯಮ್ ಕೂಡ ಹೇರಳವಾಗಿದೆ. ಇದು ರಕ್ತದೊತ್ತಡದ ಮಟ್ಟ ನಿಯಂತ್ರಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದಿನ ಒತ್ತಡದ ಜೀವನದಲ್ಲಿ (Life) ಹೆಚ್ಚಿನ ಜನರು (People) ಆರೋಗ್ಯದಿಂದಿರಲು (Health) ತಮ್ಮ ಆಹಾರದ (Food) ಬಗ್ಗೆ ವಿಶೇಷ ಕಾಳಜಿ (Care) ವಹಿಸುತ್ತಿದ್ದಾರೆ. ಫಿಟ್ (Fit) ಆಗಿರಲು ಜನರು ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ಜಂಕ್ ಫುಡ್‌ ಗಳನ್ನು ಬದಿಗಿರಿಸಿ, ಕಡಿಮೆ ಮಸಾಲೆ ಪದಾರ್ಥ, ಕುದಿಸಿದ ಹಾಗೂ ಕಚ್ಚಾ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುತ್ತಿದ್ದಾರೆ. ಇದನ್ನು ತಮ್ಮ ಆಹಾರದಲ್ಲಿ ಸೇರಿಸಿದ್ದಾರೆ. ಆದರೆ ಹೃದಯದ ಆರೋಗ್ಯದ ದೃಷ್ಟಿಯಿಂದ ಹಸಿ ತರಕಾರಿಗಳ ಸೇವನೆ ಹೆಚ್ಚು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆಯೇ ಎಂಬ ಬಗ್ಗೆ ನೋಡೋಣ.

  ಹಸಿ ತರಕಾರಿಗಳು ಮತ್ತು ಹೃದಯದ ಆರೋಗ್ಯ

  ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆ ಪ್ರಕಾರ, ಹಸಿ ತರಕಾರಿಗಳು ಅನೇಕ ಪೋಷಕಾಂಶಗಳು ಮತ್ತು ಜೈವಿಕ ಕ್ರಿಯಾಶೀಲ ಫೈಟೊಕೆಮಿಕಲ್‌ಗಳಲ್ಲಿ ಸಮೃದ್ಧವಾಗಿವೆ.

  ಪರಿಧಮನಿಯ ಹೃದಯ ಕಾಯಿಲೆಯಿಂದ ರಕ್ಷಿಸಲು ಇದು ಸಹಾಯಕಾರಿ. ಫೈಬರ್ ಮತ್ತು ಪೊಟ್ಯಾಸಿಯಮ್ ಕೂಡ ಹೇರಳವಾಗಿದ್ದು, ಇದು ರಕ್ತದೊತ್ತಡದ ಮಟ್ಟ ನಿಯಂತ್ರಿಸುತ್ತದೆ ಎಂದು ಹೇಳಿದೆ.

  ಇದನ್ನೂ ಓದಿ: ಕೂದಲ ಸೌಂದರ್ಯಕ್ಕೆ ಶಾಂಪೂ ಬೇಕಾ? ಬೇಡ್ವಾ? ಈ ಬಗ್ಗೆ ತಜ್ಞರ ಸಲಹೆ ಓದಿ

  ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಈ ಹಸಿ ತರಕಾರಿಗಳು

  ಸೌತೆಕಾಯಿ

  ಪ್ರತಿ ಋತುವಿನಲ್ಲಿ ಕಂಡು ಬರುವ ಸೌತೆಕಾಯಿ ಸಲಾಡ್‌ ಹಾಗೂ ಹಾಗೇ ಹಸಿಯಾಗಿ ಸೇವಿಸಲು ಜನರು ಇಷ್ಟ ಪಡುತ್ತಾರೆ. ನೀವು ಸೌತೆಕಾಯಿಯನ್ನು ಸಲಾಡ್ ರೂಪದಲ್ಲಿ ಅಥವಾ ಜ್ಯೂಸ್ ರೂಪದಲ್ಲಿ ಬಳಸಬಹುದು. ಇಂಟರ್ನ್ಯಾಷನಲ್ ಜರ್ನಲ್ ಆಫ್ ಕೆಮಿಸ್ಟ್ರಿ ಅಂಡ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಪ್ರಕಾರ, ಇದು ವಿವಿಧ ಜೀವಸತ್ವಗಳು ಮತ್ತು ಖನಿಜ ಹೊಂದಿದೆ. ಜೊತೆಗೆ ನೀರಿನಲ್ಲಿ ಸಮೃದ್ಧವಾಗಿದೆ. ಇದು ದೇಹವನ್ನು ಹೈಡ್ರೀಕರಿಸುತ್ತದೆ.

  ಟೊಮೆಟೊ

  ನೀವು ಟೊಮೆಟೊವನ್ನು ಹಸಿ ತರಕಾರಿಯಾಗಿ ಸೇವಿಸಬಹುದು. ಹಸಿ ಟೊಮೆಟೊದಲ್ಲಿ ವಿಟಮಿನ್-ಸಿ ಸಮೃದ್ಧವಾಗಿದೆ. ಅದನ್ನು ಬೇಯಿಸಿದ ನಂತರ, ಅದರಲ್ಲಿರುವ ವಿಟಮಿನ್-ಸಿ ಪ್ರಮಾಣವು ಕಡಿಮೆಯಾಗುತ್ತದೆ. ಹಾಗಾಗಿ ಟೊಮೆಟೊದಿಂದ ಹೆಚ್ಚಿನ ಪ್ರಯೋಜನ ಪಡೆಯಲು ಇದನ್ನು ಕಚ್ಚಾ ಸೇವಿಸುವುದು ಹೆಚ್ಚು ಪ್ರಯೋಜನಕಾರಿ.

  ಬೀಟ್ರೂಟ್

  ಹಸಿಯಾಗಿ ತಿನ್ನುವ ತರಕಾರಿಗಳ ಪಟ್ಟಿಯಲ್ಲಿ ಬೀಟ್ಗೆಡ್ಡೆ ಸೇರಿದೆ. ಬೀಟ್ರೂಟ್ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಅನೇಕ ಪ್ರಯೋಜನ ನೀಡುತ್ತದೆ. ಇದರ ಸೇವನೆಯು ಅಧಿಕ ರಕ್ತದೊತ್ತಡದ ಸಮಸ್ಯೆ ನಿವಾರಣೆಗೆ ಸಹಾಯಕ.

  ಸೊಪ್ಪು

  ಪಾಲಕ್ ಸೊಪ್ಪಿನಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಬೇಯಿಸಿ ಹಾಗೂ ಕಚ್ಚಾ ಸೇವಿಸಬಹುದು. ರಿಸರ್ಚ್ ಗೇಟ್ ನಡೆಸಿದ ಸಂಶೋಧನೆಯ ಪ್ರಕಾರ, ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ವಿಟಮಿನ್-ಕೆ, ವಿಟಮಿನ್ ಬಿ-6, ರೈಬೋಫ್ಲಾವಿನ್, ಫೋಲೇಟ್, ನಿಯಾಸಿನ್, ಫೈಬರ್, ಒಮೆಗಾ 3-ಫ್ಯಾಟಿ ಆಸಿಡ್ ಇದೆ.

  ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಹೇರಳವಾಗಿದೆ. ಆಸ್ಟಿಯೊಪೊರೋಸಿಸ್ ಸಮಸ್ಯೆ, ರಕ್ತಹೀನತೆಯ ಸಮಸ್ಯೆಯಿಂದ ರಕ್ಷಿಸುತ್ತದೆ.

  ಈರುಳ್ಳಿ

  ಪ್ರತಿದಿನ ಒಂದು ಹಸಿ ಈರುಳ್ಳಿ ಸೇವಿಸುವುದು ರಕ್ತ ಪರಿಚಲನೆ ಸರಿಯಾಗಿರುತ್ತದೆ. ಸೀನುವಿಕೆ ಮತ್ತು ಮೂಗು ಸೋರುವಿಕೆಗೆ ಪರಿಹಾರ ನೀಡುತ್ತದೆ. ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಸಿ ಈರುಳ್ಳಿಯ ಪ್ರಯೋಜನ ನೀಡುತ್ತದೆ. ಹಸಿ ಈರುಳ್ಳಿ ಚರ್ಮದ ಬಣ್ಣವನ್ನು ಸುಧಾರಿಸುತ್ತದೆ.

  ಕ್ಯಾರೆಟ್

  ಕ್ಯಾರೆಟ್‌ನಲ್ಲಿ ಕ್ಯಾರೋಟಿನ್, ಆಸ್ಕೋರ್ಬಿಕ್ ಆಮ್ಲ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಫೈಬರ್ ಜೊತೆಗೆ ಹಲವು ವಿಟಮಿನ್‌ಗಳಿವೆ. ಇದನ್ನು ಬೇಯಿಸಿ, ಹಸಿಯಾಗಿ ತಿನ್ನಬಹುದು. ಕ್ಯಾರೆಟ್ ಕ್ಯಾರೊಟಿನಾಯ್ಡ್‌, ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಇದು ಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.

  ಮೂಲಂಗಿ

  ಇದನ್ನು ಹೆಚ್ಚಾಗಿ ಕಚ್ಚಾ ಸೇವಿಸುತ್ತಾರೆ. ಪಬ್‌ಮೆಡ್ ಸೆಂಟ್ರಲ್‌ನ ಸಂಶೋಧನೆಯ ಪ್ರಕಾರ, ಮೂಲಂಗಿಯನ್ನು ಪಿತ್ತಗಲ್ಲು, ಜಾಂಡೀಸ್ ಸಮಸ್ಯೆ, ಯಕೃತ್ತಿನ ಕಾಯಿಲೆ, ಅಜೀರ್ಣ ಸಮಸ್ಯೆ, ಗ್ಯಾಸ್ಟ್ರಿಕ್ ನೋವು ಮತ್ತು ಇತರ ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಬಳಸುತ್ತಾರೆ.

  ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಾಗಬೇಕು ಅಂದ್ರೆ ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಹೊಕ್ಕಳಿಗೆ ಹಾಕಿ

  ಇದು ಕಾರ್ಬೋಹೈಡ್ರೇಟ್‌, ಸಕ್ಕರೆ, ಫೈಬರ್, ಪ್ರೋಟೀನ್ ಮತ್ತು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಸತು, ಪೊಟ್ಯಾಸಿಯಮ್ ಮತ್ತು ರಂಜಕ ಅನೇಕ ರೀತಿಯ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
  Published by:renukadariyannavar
  First published: