Weight Loss: ಹೊಟ್ಟೆಯ ಕೊಬ್ಬು ಕರಗಿಸಿ ತ್ವರಿತ ತೂಕ ಇಳಿಕೆ, ಆದರೆ ಆರೋಗ್ಯದ ಸ್ಥಿತಿ?

ತೂಕ ಕಳೆದುಕೊಳ್ಳಲು ಬಹುತೇಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ತೂಕ ಇಳಿಸಲು ಅನೇಕ ಜನರು ಕೆಲವು ತಪ್ಪು ನಿಯಮ ಫಾಲೋ ಮಾಡುತ್ತಾರೆ. ಇದರಿಂದ ತೂಕ ಇಳಿಸಿಕೊಳ್ಳುವವರು ತ್ವರಿತ ಫಲಿತಾಂಶ ಪಡೆಯಬಹುದು. ಆದರೆ ಈ ವಿಧಾನ ತಪ್ಪು ಎನ್ನುತ್ತಾರೆ ತಜ್ಞರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇತ್ತೀಚಿನ ದಿನಗಳಲ್ಲಿ ಬೊಜ್ಜು (Obesity) ಅತ್ಯಂತ ಗಂಭೀರ ಸಮಸ್ಯೆ (Serious Disease) ಆಗಿ ಪರಿಣಮಿಸಿದೆ. ಕಳಪೆ ಆಹಾರ (Food) ಪದ್ಧತಿ ಮತ್ತು ಜಡ ಜೀವನಶೈಲಿ (Lifestyle), ವ್ಯಾಯಾಮ ಮಾಡದೇ ಇರುವುದು ಬೊಜ್ಜು ಹೆಚ್ಚಾಗಲು ಕಾರಣವಾಗಿದೆ. ಅನೇಕ ಜನರು ತಮ್ಮ ಹೆಚ್ಚುತ್ತಿರುವ ತೂಕದಿಂದ ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ನಿಸ್ಸಂಶಯವಾಗಿ ಸ್ಥೂಲಕಾಯ ಸೌಂದರ್ಯ ಕಡಿಮೆ ಮಾಡುತ್ತದೆ. ಜೊತೆಗೆ ಬೊಜ್ಜು ಹೆಚ್ಚಾದಂತೆ ವ್ಯಕ್ತಿ ಚೆನ್ನಾಗಿ ಕಾಣುವುದಿಲ್ಲ. ಜೊತೆಗೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇದು ಮಧುಮೇಹ, ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಅಪಾಯ ಹೆಚ್ಚು ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

    ತೂಕ ಕಳೆದುಕೊಳ್ಳಲು ಬಹುತೇಕರು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ತೂಕ ಇಳಿಸಲು ಅನೇಕ ಜನರು ಕೆಲವು ತಪ್ಪು ನಿಯಮ ಫಾಲೋ ಮಾಡುತ್ತಾರೆ. ಇದರಿಂದ ತೂಕ ಇಳಿಸಿಕೊಳ್ಳುವವರು ತ್ವರಿತ ಫಲಿತಾಂಶ ಪಡೆಯಬಹುದು. ಆದರೆ ಈ ವಿಧಾನ ತಪ್ಪು ಎನ್ನುತ್ತಾರೆ ತಜ್ಞರು.

    ಆತುರದ ವಿಧಾನ, ತ್ವರಿತ ಫಲಿತಾಂಶ ನೀಡುವ ಕೆಲವು ವಿಧಾನಗಳು ನಿಮಗೆ ಫಲಿತಾಂಶ ನೀಡಬಹುದು. ಆದರೆ ಇದು ದೀರ್ಘಾವಧಿಯಲ್ಲಿ ನಿಮಗೆ ಅನೇಕ ಅಡ್ಡ ಪರಿಣಾಮ ಉಂಟು ಮಾಡಬಹುದು.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಒಂದು ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

    ಕೇವಲ ಒಂದು ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ ಅಂದ್ರೆ ತೂಕ ಇಳಿಸುವ ತರಬೇತುದಾರ ಡಾ.ಸ್ನೇಹಲ್ ಎನ್ನುತ್ತಾರೆ. ಉತ್ತರ ತಿಳಿಯಲು ಮೊದಲನೆಯದಾಗಿ, ನಿಮ್ಮ ದೇಹದಲ್ಲಿ ಕೊಬ್ಬು ಎಷ್ಟು ದಿನಗಳಲ್ಲಿ ಸಂಗ್ರಹವಾಗಿದೆ ಎಂಬುದರ ಮೇಲೆ 1 ವರ್ಷ, 5 ವರ್ಷ ಅಥವಾ 10 ವರ್ಷ ಎಷ್ಟು ವರ್ಷಗಳಲ್ಲಿ ಕೊಬ್ಬು ಕರಗಿಸುವುದು ಎಂದು ತಿಳಿದು ಫಾಲೋ ಮಾಡಬೇಕು.

    ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುವಾಗ ಅದೇ ನಿಯಮ ಅನ್ವಯಿಸುತ್ತದೆ. ಅಂದರೆ ಕೊಬ್ಬು ಹೆಚ್ಚಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ, ಅಷ್ಟೇ ಸಮಯದಲ್ಲಿ ಅದನ್ನು ಕಡಿಮೆ ಮಾಡಲು ಸಮಯ ತೆಗೆದುಕೊಳ್ಳಬಹುದು.

    ಒಂದು ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದೇ?

    ಒಂದು ವಾರ ಅಥವಾ ಒಂದು ತಿಂಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂಬುದು ಸರಳವಾದ ಉತ್ತರ. ಯಾವುದೇ ಆಹಾರ, ವ್ಯಾಯಾಮ, ಔಷಧಗಳು ಅಥವಾ ಯಂತ್ರಗಳು ಕೆಲಸ ಮಾಡುವುದಿಲ್ಲ. ತೂಕ ನಷ್ಟ ರೂಪಾಂತರದ ಪ್ರಯಾಣದಲ್ಲಿ, ನೀವು ತಾಳ್ಮೆ ವಹಿಸಬೇಕು ಎಂಬುದನ್ನು ನೆನಪಿಡುವುದು ಬಹಳ ಮುಖ್ಯ. ಈ ವಿಷಯದಲ್ಲಿ ಯಾವುದೇ ರೀತಿಯ ಆತುರವು ಆರೋಗ್ಯಕ್ಕೆ ಹಾನಿಕರ.

    ತೂಕ ಇಳಿಸುವ ಆತುರವು ಆರೋಗ್ಯಕ್ಕೆ ಮಾರಕ

    ಅನೇಕ ಬಾರಿ ಜನರು ತ್ವರಿತವಾಗಿ ತೂಕ ಇಳಿಸಲು ಪ್ರಯತ್ನಿಸುತ್ತಾರೆ. ಮತ್ತು ಈ ಸಮಯದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಇದು ದೀರ್ಘಾವಧಿಯಲ್ಲಿ ಅವರ ಆರೋಗ್ಯ ಹಾನಿ ಮಾಡುತ್ತದೆ. ತಪ್ಪಾದ ರೀತಿಯಲ್ಲಿ ತೂಕ ಕಳೆದುಕೊಳ್ಳುವುದು ಅಥವಾ

    ಹೆಚ್ಚು ತೂಕ ಕಳೆದುಕೊಳ್ಳುವುದು ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತದೆ. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ಉತ್ತಮ ಮಾರ್ಗ. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ತಾಳ್ಮೆ ಮತ್ತು ಹಾನಿಯಾಗದಂತೆ ತೂಕ ಇಳಿಸಬೇಕು.

    ತೂಕ ಇಳಿಸುವ ತಪ್ಪು ದಾರಿ ಮತ್ತೆ ತೂಕ ಹೆಚ್ಚಿಸಬಹುದು

    ನೀವು ತೂಕ ಇಳಿಸಲು ಆತುರದಲ್ಲಿ ಕೆಲವು ತಪ್ಪು ವಿಧಾನ ಪ್ರಯತ್ನಿಸಿದರೆ, ಅದು ನಿಮಗೆ ತ್ವರಿತ ಫಲಿತಾಂಶ ನೀಡುತ್ತದೆ. ಕೆಲವು ದಿನಗಳ ನಂತರ, ಕೊಬ್ಬು ನಿಮ್ಮ ದೇಹದಲ್ಲಿ ಮತ್ತೆ ಸಂಗ್ರಹವಾಗಬಹುದು.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಆರೋಗ್ಯಕರ ಆಹಾರ ಸೇವನೆ ಮಾಡಿ

    ವೈದ್ಯರ ಪ್ರಕಾರ ತೂಕ ಇಳಿಸಲು ತಿನ್ನುವುದು ಮತ್ತು ಕುಡಿಯುವುದರ ಮೇಲೆ ಗಮನವಿರಲಿ. ಆರೋಗ್ಯಕರ ಆಹಾರ ಸೇವಿಸಿ. ಊಟ ಬಿಡಬೇಡಿ. ಆರೋಗ್ಯಕರ ಆಹಾರ ಸೇವನೆ, ವ್ಯಾಯಾಮ ಮಾಡುವುದು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.
    Published by:renukadariyannavar
    First published: