• Home
  • »
  • News
  • »
  • lifestyle
  • »
  • Child Care: ಮಕ್ಕಳಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ, ಭವಿಷ್ಯದ ಖಿನ್ನತೆಯ ಸೂಚನೆ ಇದು

Child Care: ಮಕ್ಕಳಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ, ಭವಿಷ್ಯದ ಖಿನ್ನತೆಯ ಸೂಚನೆ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Future Depression Signs: ಈಗ ನಡೆದಿರುವ ಅಧ್ಯಯನವು ಒಂದು ಹೊಸ ಬಗೆಯದ್ದಾಗಿದ್ದು ವಿವಿಧ ಸಂದರ್ಭಗಳಿಗೆ ತಕ್ಕಂತೆ ಪ್ರತಿಕ್ರಯಿಸುವ ವಿವಿಧ ಬಗೆಯ ಮೆದುಳುಗಳ ಬಗ್ಗೆ ಮಾಹಿತಿಯನ್ನು ಇದು ಹೊಂದಿದೆ.

  • Share this:

ಖಿನ್ನತೆ (Depression) ಎಂಬುದು ಒಂದು ಮಾನಸಿಕ ಸ್ಥಿತಿಯಾಗಿದ್ದು ಅದರಲ್ಲಿ ಸಿಲುಕಿಕೊಂಡರೆ ಜೀವನವೇ (Life) ನಿರರ್ಥಕವಾದಂತೆ ಆಅಗುವುದರಲ್ಲಿ ಸಂಶಯವೇ ಇಲ್ಲ. ಇಂದು ಬಹು ಜನರಿಗೆ ಖಿನ್ನತೆಯ ಬಗ್ಗೆ ಅರಿವಿದ್ದು ಸಾಧ್ಯವಾದಷ್ಟು ಅವರು ಇದರಿಂದ ದೂರ ಉಳಿಯುವಂತೆ ಎಚ್ಚರವಹಿಸುತ್ತಾರೆ. ಹಲವಾರು ಪರಿಣಿತ ಸಲಹೆಗಳನ್ನು ಪಡೆಯುತ್ತಿರುತ್ತಾರೆ. ಆದಾಗ್ಯೂ ಖಿನ್ನತೆ ಎಂಬುದು ನಿಂತು ಹೋಗಿದೆ ಎನ್ನಲು ಸಾಧ್ಯವೇ ಇಲ್ಲ. ಇಂದಿಗೂ ನಾವು ಸಾಕಷ್ಟು ಜನರು ಜೀವನದ ಯಾವುದೋ ಒಂದು ಘಟ್ಟದಲ್ಲಿ ಇಂತಹ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇದ್ದೇ ಇರುತ್ತದೆ. ಅದರಲ್ಲೂ ಈ ದಿನಮಾನಗಳಲ್ಲಿ ಯುವಕರು, ವಯಸ್ಕರು ಹೆಚ್ಚು ಹೆಚ್ಚು ಖಿನ್ನತೆಗೆ ಒಳಪಡುತ್ತಿರುವುದನ್ನು ಕಾಣಬಹುದು.


ಸಂಶೋಧನೆಯಲ್ಲಿ ಹೊಸ ವಿಚಾರ ಬಹಿರಂಗ


ಸದ್ಯ, ಅಮೆರಿಕದಲ್ಲೊಂದು ಸಂಶೋಧನೆ ಮಾಡಲಾಗಿದ್ದು ಆ ಮೂಲಕ ಮಕ್ಕಳಿದ್ದಾಗಲೇ ತೋರುವ ಕೆಲವು ಲಕ್ಷಣಗಳು ಮುಂದೆ ಅವರು ವಯಸ್ಕರಾದ ಮೇಲೆ ಖಿನ್ನತೆಯನ್ನು ಅನುಭವಿಸುವ ಹೆಚ್ಚಿನ ಸಾಧ್ಯತೆಗಳನ್ನು ಸೂಚಿಸುತ್ತದೆ ಎಂದು ಕಂಡುಬಂದಿದೆ. ಅಮೆರಿಕದ ಡಲ್ಲಾಸ್ ನಲ್ಲಿರುವ ಯುನಿವರ್ಸಿಟಿ ಆಫ್ ಟೆಕ್ಸಾಸ್ ನ ವಿಜ್ಞಾನಿಗಳ ತಂಡವೊಂದು ಕೆಲವು ಇಮೇಜಿಂಗ್ ಅಧ್ಯಯನವನ್ನು ಮಾಡಿದ್ದು ಮಕ್ಕಳ ಸ್ವಭಾವ ಹಾಗೂ ಅವರ ನರಮಂಡಲದ ವ್ಯವಸ್ಥೆಗ ಸಂಬಂಧಿಸಿದಂತೆ ಕಂಡುಬರುವ ಕೆಲವು ಅಪಾಯದ ಅಂಶಗಳು ಮುಂದೆ ಅವರು ಖಿನ್ನತೆಗೊಳಪಡುವ ಸಾಧ್ಯತೆಯನ್ನು ಸೂಚಿಸುವ ಬಗ್ಗೆ ಕಂಡುಹಿಡಿದಿದ್ದಾರೆನ್ನಲಾಗಿದೆ.


ಪ್ರಸ್ತುತ ತಂಡವು ತಮ್ಮ ಸಂಶೋಧನಾ ವರದಿಯನ್ನು ಅಕ್ಟೋಬರ್ 26 ರಂದು ಜಾಮಾ ಸೈಕ್ಯಾಟ್ರಿಯಲ್ಲಿ ಪ್ರಕಟಿಸಿದ್ದು ಇದರಲ್ಲಿ ನಾಲ್ಕು ತಿಂಗಳಿನಿಂದ ಹಿಡಿದು 26ನೇ ವಯಸ್ಸಿನವರೆಗೆ ಒಟ್ಟು 165 ಜನರನ್ನು 1989 ರಿಂದ 1993ರ ವರೆಗೆ ಅಭ್ಯಸಿಸಲಾಗಿದೆ. ಸ್ಕೂಲ್ ಆಫ್ ಬಿಹೇವಿಯರಲ್ ಆಂಡ್ ಬ್ರೈನ್ ಸೈನ್ಸಸ್ ನ ಸಹಾಯಕ ಉಪನ್ಯಾಸಕ ಹಾಗೂ ಈ ಸಂಶೋಧನಾ ತಂಡದ ಭಾಗವಾಗಿರುವ ಡಾ. ಅಲ್ವಾ ತಾಂಗ್ ಅವರ ಪ್ರಕಾರ, ಬಾಲ್ಯಾವಸ್ಥೆಯಲ್ಲಿ ಸಾಕಷ್ಟು ಪ್ರತಿಬಂಧಕದಂತಹ ಅಂದರೆ ತಡೆದುಹಿಡಿದುಕೊಳ್ಳುವಂತಹ ಲಕ್ಷಣಗಳನ್ನು ಹೊಂದಿರುವ ಮಕ್ಕಳು ಮುಂದೆ ಯುವಾವಸ್ಥೆಯಲ್ಲಿ ಆತಂಕದಂತಹ ಸ್ಥಿತಿಗಿಂತಲೂ ಹೆಚ್ಚಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ.


ಅವರು ಹೇಳುವಂತೆ ತಂಡದ ಸಂಶೋಧನೆಯು, ನರವ್ಯವಸ್ಥೆಯ ವಿವಿಧ ಬಗೆಯ ಪ್ರಕಾರಗಳು ಮುಂದೆ ಅವರಲ್ಲಿ ಯಾರು ಎಷ್ಟರ ಮಟ್ಟದ ಮಾನಸಿಕ ಅಸ್ಥಿರತೆಯ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂಬುದನ್ನು ಹೈಲೈಟ್ ಮಾಡುತ್ತದೆ ಎಂದಿದ್ದಾರೆ. ಈ ಬಗೆಯ ತಿಳುವಳಿಕೆಯು ಮುಂದೆ ವ್ಯಕ್ತಿಗಳ ಮಾನಸಿಕ ಸ್ಥಿತಿಗಳಿಗೆ ತಕ್ಕಂತೆ ಅವರಿಗೆ ಯಾವ ಬಗೆಯ ಚಿಕಿತ್ಸೆ ಸೂಕ್ತವಾಗಿರುತ್ತದೆ ಎಂಬುದನ್ನು ಸೂಚಿಸುವುದಲ್ಲದೆ ಆ ಬಗೆಯ ಚಿಕಿತ್ಸೆಗಳ ಅಭಿವೃದ್ಧಿಗೂ ನೆರವಾಗಲಿದೆ ಎಂದು ತಾಂಗ್ ನುಡಿಯುತ್ತಾರೆ.


ಮಕ್ಕಳಲ್ಲಿ ಈ ಬದಲಾವಣೆ ಗಮನಿಸಿ


ಚಿಕ್ಕ ಮಕ್ಕಳು ಅಥವಾ ಶಿಶುಗಳನ್ನು ಗಮನಿಸಿದಾಗ ಕೆಲವು ಮಕ್ಕಳು ಹೊಸ ವಸ್ತುಗಳು, ಜನರು ಅಥವಾ ವಿಷಯಗಳಿಗೆ ಒಡ್ಡಿಕೊಂಡಾಗ ಧನಾತ್ಮಕ ಪ್ರತಿಕ್ರಿಯೆ ನೀಡುತ್ತವೆ ಹಾಗೂ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸ್ವೀಕರಿಸುತ್ತವೆ, ಇನ್ನೂ ಕೆಲ ಮಕ್ಕಳು ಆತಂಕ, ಭಯಪಡುವುದಲ್ಲದೆ ಹೊಸ ವಸ್ತುಗಳು, ಜನರೊಡನೆ ಬೆರೆಯಲು ಹಿಂಜರಿಕೆ ಹಾಕುತ್ತವೆ. ಇದೇ ಪ್ರಮುಖವಾಗಿ ಮಕ್ಕಳಲ್ಲಿ ತಡೆಹಿಡಿದುಕೊಳ್ಳುವಂತಹ ಹಾಗೂ ಮುಕ್ತವಾಗಿರುವಂತಹ ಮಾನಸಿಕತೆಯನ್ನು ವ್ಯಾಖ್ಯಾನಿಸುತ್ತದೆ.


ಇದನ್ನೂ ಓದಿ: ವೀಗನ್ ಡಯೆಟ್​ ಮಾಡೋದ್ರಿಂದ ತೂಕ ಇಳಿಕೆ ಮಾತ್ರ ಅಲ್ಲ ಈ ಆರೋಗ್ಯ ಪ್ರಯೋಜನಗಳು ಸಿಗುತ್ತೆ


ತಾಂಗ್ ಅವರು ಹೇಳುತ್ತಾರೆ, "ಈ ರೀತಿಯ ಮಕ್ಕಳಲ್ಲಿ ತಡೆಹಿಡಿದುಕೊಳ್ಳುವಂತಹ ಸ್ವಭಾವವೇ ಮುಂದೆ ಅವರು ಯುವಾವಸ್ಥೆಯಲ್ಲಿ ಬಂದಾಗ ಅವರ ಮೇಲೆ ಮಾನಸಿಕವಾಗಿ ಸಾಕಷ್ಟು ಪರಿಣಾಮ ಬೀರುತ್ತದೆ, ಅವರು ಸೋಶಿಯಲ್ ಆಂಕ್ಸೈಟಿ ಹೊಂದುವ ಹೆಚ್ಚು ಸಾಧ್ಯತೆ ಇರುತ್ತದೆ, ತದನಂತರ ಖಿನ್ನತೆ ಎಂಬುದು ಹೊರಹೊಮ್ಮಬಹುದು. ಏಕೆಂದರೆ ಆಂಕ್ಸೈಟಿ ಅನುಭವಿಸುವ ಜನರು ಮುಂದೆ ಜೀವನದಲ್ಲಿ ಖಿನ್ನತೆಗೊಳಗಾಗುವ ಸಾಧ್ಯತೆ 50-60 ಪ್ರತಿಶತದಷ್ಟಿರುತ್ತದೆ ಎಂಬುದು ನಮಗೆ ಗೊತ್ತಿರುವ ವಿಚಾರ".


ಈ ನಿಟ್ಟಿನಲ್ಲಿ ತಾಂಗ್ ಅವರ ಸಂಶೋಧನ್ಯೆ ಈ ರೀತಿಯ ಮುಂಚಿತವಾಗಿಯೇ ಕಂಡುಬರುವ ಸ್ವಭಾವ ಹಾಗೂ ಲಕ್ಷಣಗಳು ಮುಂದೆ ಅದು ಏನೆಲ್ಲ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ ಎಂಬುದರ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ ಎನ್ನಲಾಗಿದೆ. ಏಕೆಂದರೆ ಆಂಕ್ಸೈಟಿಯ ನಂತರ ಖಿನ್ನತೆ ಬರುವವರೆಗೆ ವ್ಯಕ್ತಿಗಳನ್ನು ಬಹುಕಾಲದವರೆಗೆ ಗಮನಿಸಬೇಕಾಗುತ್ತದೆ ಮತ್ತು ತಾಂಗ್ ಅವರ ಸಂಶೋಧನೆಯು ಈ ರೀತಿಯ ಬಹುಕಾಲದವರೆಗಿನ ಗಮನಿಸುವಿಕೆಯ ಅಂಶವನ್ನೂ ಸಹ ಹೊಂದಿದೆ.


ಮುಂದಿನ ದಿನಗಳಲ್ಲಿ ಸಮಸ್ಯೆ ಖಂಡಿತ


ತಾಂಗ್ ಅವರ ಸಂಶೋಧನೆಯಲ್ಲಿ ಮುಖ್ಯವಾಗಿ ಕಂಡುಬಂದಿರುವ ವಿಚಾರ ಎಂದರೆ, ತಡೆಹಿಡಿದುಕೊಳ್ಳುವಂತಹ ವರ್ತನೆಯ ಸ್ವಭಾವವು ಹದಿಹರೆಯದ ವಯಸ್ಸಿನವರೆಗೆ ಅವರಲ್ಲಿ ಹೆಚ್ಚಿನ ಆಂಕ್ಸೈಟಿ ಅಂತಹ ಸ್ಥಿತಿಯನ್ನು ತಂದರೆ ಪ್ರೌಢಾವಸ್ಥೆಯಲ್ಲಿ ಅದು ಹೆಚ್ಚಾಗಿ ಖಿನ್ನತೆಯಾಗಿ ಪರಿವರ್ತನೆಯಾಗುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಹೀಗೆ ಪ್ರತಿಬಂಧಿಸಲ್ಪಟ್ಟ ವರ್ತನೆಯುಳ್ಳ ಎಲ್ಲರೂ ಮುಂದೆ ಆತಂಕ ಹಾಗೂ ಖಿನ್ನತೆಗಳಿಗೆ ಒಳಗಾಗೇ ಆಗುತ್ತಾರೆ ಎನ್ನಲಾಗದು ಎಂದೂ ಸಹ ತಾಂಗ್ ಹೇಳುತ್ತಾರೆ.


ಇದನ್ನೂ ಓದಿ: ಮನೆಯಲ್ಲಿ ಈ ವಸ್ತುಗಳಿದ್ದರೆ ಪಾಸಿಟಿವ್ ಎನರ್ಜಿ ಎಂಟ್ರಿಯಾಗುತ್ತೆ


ಓಟ್ಟಿನಲ್ಲಿ ಈಗ ನಡೆದಿರುವ ಅಧ್ಯಯನವು ಒಂದು ಹೊಸ ಬಗೆಯದ್ದಾಗಿದ್ದು ವಿವಿಧ ಸಂದರ್ಭಗಳಿಗೆ ತಕ್ಕಂತೆ ಪ್ರತಿಕ್ರಯಿಸುವ ವಿವಿಧ ಬಗೆಯ ಮೆದುಳುಗಳ ಬಗ್ಗೆ ಮಾಹಿತಿಯನ್ನು ಇದು ಹೊಂದಿದೆ. ತಾಂಗ್ ಹೇಳುವಂತೆ ಈಗಾಗಲೇ ಸಮಾಜದಲ್ಲಿ ಹೀಗೆ ಆತಂಕ ಹಾಗೂ ಖಿನ್ನತೆಯಿಂದ ಬಳಲುವ ಜನರು ಹೆಚ್ಚಿನ ಸುಧಾರಣೆ ಕಾಣುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳು ಅವರಿಗಾಗಿ ಲಭ್ಯವಿದೆ. ಈಗ ಸಿಕ್ಕಿರುವ ನಿರ್ದಿಷ್ಟ ಮಾಹಿತಿಗಳನ್ನನುಸರಿಸಿ ಇನ್ನಷ್ಟು ಸೂಕ್ತ ಹಾಗೂ ಹೆಚ್ಚುವರಿ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅವರಲ್ಲಿ ಇನ್ನಷ್ಟು ಪರಿಣಾಮಕಾರಿಯಾದ ಸುಧಾರಣೆಯನ್ನು ತರಬಹುದು ಎಂಬುದು ತಾಂಗ್ ಅವರ ಅಭಿಪ್ರಾಯವಾಗಿದೆ.

Published by:Sandhya M
First published: