Weight Loss Tips: ತೂಕ ಇಳಿಸಲು ಬಿಸಿ ನೀರು ಬೆಸ್ಟ್ ಅಂತೆ, ನೀವೂ ಟ್ರೈ ಮಾಡಿ

Weight Loss Tips: ಹೆಚ್ಚು ನೀರು ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಇಳಿಸಬಹುದು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಸಂಶೋಧನೆ ಹೇಳಿರುವಂತೆ ಬಿಸಿ ನೀರು ಸೇವನೆ ತೂಕ ಇಳಿಸುತ್ತದೆ ಎಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತೂಕವನ್ನು ಹೆಚ್ಚುವುದು (Weight Gain) ಇಂದಿನ ದಿನಗಳಲ್ಲಿ ಸಾಮಾನ್ಯ ದೈಹಿಕ ಸಮಸ್ಯೆಗಳಲ್ಲಿ (Physical Problem) ಒಂದಾಗಿದೆ. ಇದರ ಹಿಂದೆ ಮುಖ್ಯ ಕಾರಣ ಅಂದ್ರೆ ತಪ್ಪು ಜೀವನಶೈಲಿ (Bad Lifestyle) ಮತ್ತು ಅನಿಯಂತ್ರಿತ ಆಹಾರ ಪದ್ಧತಿ. ಅದೇ ವೇಳೆ ಈ ಸಮಸ್ಯೆಯಿಂದ ಬಳಲುತ್ತಿರುವ ಹೆಚ್ಚಿನ ಜನರು ತೂಕ ಇಳಿಸಲು ಔಷಧ ಮತ್ತು ಜಿಮ್‌ ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಈ ಮೂಲಕ ಈ ಸಮಸ್ಯೆಯನ್ನು ಮನೆಮದ್ದು ಬಳಸುವ ಮೂಲಕವೂ ಚಿಕಿತ್ಸೆ ಪಡೆಯಬಹುದು. ಇದರಲ್ಲಿ ತೂಕ ಇಳಿಸಲು ಬೆಚ್ಚಗಿನ ನೀರು ಸಹಾಯಕವಾಗಿದೆಯೇ? ಬಿಸಿ ನೀರು ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ.

    ಬಿಸಿ ನೀರು ಕುಡಿಯುವುದು ಹೇಗೆ ತೂಕ ಇಳಿಕೆಗೆ ಸಹಕಾರಿ?

    ಹೆಚ್ಚು ನೀರು ಕುಡಿಯುವುದರಿಂದ ತೂಕವನ್ನು ಸುಲಭವಾಗಿ ಇಳಿಸಬಹುದು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಎನ್‌ಸಿಬಿಐ - ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವ ಸಂಶೋಧನೆ ಹೇಳಿರುವಂತೆ ಬಿಸಿ ನೀರು ಸೇವನೆ ತೂಕ ಇಳಿಸುತ್ತದೆ ಎಂದಿದೆ.

    ಸಂಶೋಧನೆಯ ಪ್ರಕಾರ, ಬಿಸಿ ನೀರು ಕುಡಿಯುವುದು ಅದರ ಥರ್ಮೋಜೆನಿಕ್ ಪರಿಣಾಮದಿಂದಾಗಿ ಚಯಾಪಚಯ ದರ ಹೆಚ್ಚಿಸುತ್ತದೆ. ಇದು ಶಕ್ತಿಯನ್ನು ಬಳಸುತ್ತದೆ. ಬಿಸಿ ನೀರಿನ ಥರ್ಮೋಜೆನಿಕ್ ಪರಿಣಾಮದಿಂದ ತೂಕ ಕಡಿಮೆ ಮತ್ತು ನಿಯಂತ್ರಿಸಬಹುದು ಎಂದಿದೆ.

    ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಎಷ್ಟು ಕೆಜಿ ತೂಕ ಹೆಚ್ಚಾಗುವುದು ಆರೋಗ್ಯಕರ? ತಜ್ಞರು ಹೇಳೋದೇನು?

    ತೂಕ ನಷ್ಟಕ್ಕೆ ಬಿಸಿ ನೀರು ಸೇವನೆ ಹೇಗೆ ಕೆಲಸ ಮಾಡುತ್ತದೆ?

    ದೇಹದ ತೇವಾಂಶ ಕಾಪಾಡುತ್ತದೆ

    ನಿಮ್ಮನ್ನು ಹೈಡ್ರೀಕರಿಸುವುದು ಬಹಳ ಮುಖ್ಯ. ಮತ್ತು ಇದಕ್ಕಾಗಿ ಸಾಕಷ್ಟು ತಂಪಾದ ಅಥವಾ ಬಿಸಿ ನೀರನ್ನು ಕುಡಿಯುವುದು ಸಹ ಅಗತ್ಯ. ಪೋಷಕಾಂಶಗಳನ್ನು ಹೀರಿಕೊಳ್ಳುವಲ್ಲಿ ಮತ್ತು ದೇಹದ ಪ್ರತಿಯೊಂದು ಜೀವಕೋಶದಿಂದ ವಿಷ ತೆಗೆದು ಹಾಕುತ್ತದೆ ನೀರು.

    ದೇಹವು ಹೈಡ್ರೀಕರಿಸದಿದ್ದರೆ, ಮೂತ್ರಪಿಂಡ, ಹೃದಯ ಮತ್ತು ಹೊಟ್ಟೆಯ ಕಾಯಿಲೆಗಳು ಮತ್ತು ನಿರ್ಜಲೀಕರಣದ ಸಮಸ್ಯೆ ಉಂಟಾಗುತ್ತವೆ. ಹಾಗಾಗಿ  ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯುವುದು ಅವಶ್ಯಕ.

    ನೈಸರ್ಗಿಕ ಕ್ಲೆನ್ಸರ್‌ಗಳು ಮತ್ತು ಪ್ಯೂರಿಫೈಯರ್‌ಗಳು

    ಬಿಸಿ ನೀರನ್ನು ಹೊಟ್ಟೆಗೆ ನೈಸರ್ಗಿಕ ಕ್ಲೆನ್ಸರ್ ಮತ್ತು ಪ್ಯೂರಿಫೈಯರ್ ಎಂದು ಪರಿಗಣಿಸಲಾಗಿದೆ.  ಬಿಸಿ ನೀರು ಕುಡಿಯುವುದು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರು ಸೇವಿಸುವುದು ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರ ಹಾಕಿ ದೇಹವನ್ನು ನಿರ್ವಿಷಗೊಳಿಸುತ್ತದೆ.

    ಚಯಾಪಚಯ ದರ ಹೆಚ್ಚಿಸುತ್ತದೆ

    ಬೊಜ್ಜು ಮತ್ತು ಅನೇಕ ಕಾಯಿಲೆಗಳನ್ನು ಹೊಡೆದೋಡಿಸಲು ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಬೇಕು. NCBI ಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬಿಸಿನೀರನ್ನು ಸೇವಿಸುವುದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.

    ಬಿಸಿನೀರನ್ನು ಕುಡಿಯುವುದು ಥರ್ಮೋಜೆನೆಸಿಸ್ ಪರಿಣಾಮ ಉಂಟು ಮಾಡುತ್ತದೆ. ಇದು ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಶಕ್ತಿಯ ವೆಚ್ಚವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೊಜ್ಜು ಕಡಿಮೆಯಾಗುತ್ತದೆ ಎಂದಿದೆ.

    ಶೂನ್ಯ ಕ್ಯಾಲೋರಿ ನೀರು

    ತೂಕ ನಷ್ಟದಲ್ಲಿ ಮೊದಲು ಕ್ಯಾಲೋರಿ ಸೇವನೆ ಬಗ್ಗೆ ಗಮನ ಹರಿಸಬೇಕು. ಕ್ಯಾಲೊರಿಗಳ ಪ್ರಮಾಣವು ನೀರಿನಲ್ಲಿ ಕಂಡು ಬರಲ್ಲ. ಸಾಕಷ್ಟು ಪ್ರಮಾಣದ ನೀರಿನ ಸೇವನೆಯು ಕ್ಯಾಲೋರಿ ಸೇವನೆ ಕಡಿಮೆ ಮಾಡುವ ಮೂಲಕ ತೂಕ ನಿಯಂತ್ರಿಸುತ್ತದೆ.

    ಹಸಿವು ಕಡಿಮೆ ಮಾಡುತ್ತದೆ

    ಅನಗತ್ಯ ಆಹಾರ ಸೇವನೆಯು ತೂಕ ಹೆಚ್ಚಿಸುತ್ತದೆ. ಅದು ಬೊಜ್ಜುಗೆ ಕಾರಣವಾಗುತ್ತದೆ. ಹಾಗಾಗಿ ಕುಡಿಯುವ ನೀರಿನ ಮೂಲಕ ಈ ಸಮಸ್ಯೆ ನಿಯಂತ್ರಿಸಬಹುದು. ನೀರಿನ ಸೇವನೆಯು ಹಸಿವನ್ನು ನಿಗ್ರಹಿಸುತ್ತದೆ. ಮತ್ತು ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ.

    ಸ್ಥೂಲಕಾಯ ಕಡಿಮೆ ಮಾಡಲು ಬಿಸಿ ನೀರನ್ನು ಹೇಗೆ ಬಳಸುವುದು?

    ತೂಕ ಇಳಿಸಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದು ಪರಿಣಾಮಕಾರಿ ಆಗಿದೆ. ವ್ಯಾಯಾಮ ಅಥವಾ ಜಿಮ್ ಮಾಡುವ ಮೊದಲು ಒಂದರಿಂದ ಎರಡು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.

    ಇದನ್ನೂ ಓದಿ: ಕರುಳಿನ ಆರೋಗ್ಯಕ್ಕೆ ಬಾದಾಮಿಯನ್ನು ಹೀಗೆ ತಿಂದರೆ ಪ್ರಯೋಜನಕಾರಿ ಅನ್ನುತ್ತೆ ಆಯುರ್ವೇದ!

    ಜಿಮ್‌ ವೇಳೆ ಸ್ವಲ್ಪ ನೀರು ಕುಡಿಯಬಹುದು. ಊಟಕ್ಕೆ ಮುನ್ನ ಬಿಸಿ ನೀರು ಮೂರು ಹೊತ್ತು ಕುಡಿಯಿರಿ. ಇದರಿಂದ ಹಸಿವು ಕಡಿಮೆಯಾಗುತ್ತದೆ. ಊಟದ ನಂತರವೂ ಬಿಸಿ ನೀರನ್ನು ಕುಡಿಯಿರಿ. ರಾತ್ರಿ ಮಲಗುವ ಕೆಲವು ಗಂಟೆಗಳ ಮೊದಲು ಬಿಸಿ ನೀರು ಕುಡಿಯಿರಿ. ಹಸಿವಾದಾಗಲೆಲ್ಲಾ ಬಿಸಿ ನೀರನ್ನು ಕುಡಿಯಿರಿ.
    Published by:renukadariyannavar
    First published: