Heart Attack: ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಹೃದಯಕ್ಕೆ ಅಪಾಯ ಗ್ಯಾರಂಟಿ

How Does Sleep Affect Your Heart: ಬಹುತೇಕರಲ್ಲಿ ನಿದ್ರಾಹೀನತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಪ್ರತಿನಿತ್ಯ ನಿರ್ದಿಷ್ಠ ಅವಧಿಯಲ್ಲಿ ನಿದ್ರೆ ಬಾರದೇ ಹೋದರೇ ವೈದ್ಯರನ್ನು ಸಂಪರ್ಕಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲವರು ಆರೋಗ್ಯಕರ ಜೀವನ ಶೈಲಿ (Healthy Lifestyle) ಎಂದರೆ ಕೇವಲ ಉತ್ತಮ ಆಹಾರ (Food) ಹಾಗೂ ವ್ಯಾಯಾಮ (Exercise) ಎಂದಷ್ಟೇ ತಿಳಿದಿರುತ್ತಾರೆ. ಆದರೆ, ಆರೋಗ್ಯಕರ ಜೀವನ ಶೈಲಿಯಲ್ಲಿ ನಿದ್ರೆಯೂ (Sleep) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೇ ಹೆಚ್ಚು ಹೃದಯಾಘಾತ (Heart Attack) ಕಂಡು ಬರುತ್ತಿರುವುದನ್ನು ಕಾಣಬಹುದು. ಕೆಲವರು ವ್ಯಾಯಾಮ ಹಾಗೂ ಸಮಯಕ್ಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸುತ್ತಿದ್ದರೂ ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆ ಕಂಡು ಬರುತ್ತಿದೆ. ಇದಕ್ಕೆ ಅಸಮರ್ಪಕ ನಿದ್ರೆಯೂ ಒಂದು ಕಾರಣ ಎನ್ನಲಾಗುತ್ತಿದೆ. ನಿದ್ರೆ ಹಾಗೂ ಹೃದಯಕ್ಕೆ ಇರುವ ಸಾಮ್ಯತೆ ಹಾಗೂ ಅವಶ್ಯಕತೆಯನ್ನು ಫೋರ್ಟಿಸ್‌ ಆಸ್ಪತ್ರೆ ಹೃದಯ ತಜ್ಞ ಡಾ. ಆರ್‌. ಕೇಶವ ತಿಳಿಸಿದ್ದಾರೆ.

ನಿದ್ರೆ ಹಾಗೂ ಆರೋಗ್ಯಕರ ಹೃದಯಕ್ಕೂ ಇರುವ ಸಾಮ್ಯತೆ ಏನು
ನಿದ್ರೆ ಎನ್ನುವುದು ಮನುಷ್ಯನ ಅವಶ್ಯಕತೆಗಳಲ್ಲಿ ಒಂದು. ಉಸಿರಾಟ, ನೀರು, ಆಹಾರ ಎಷ್ಟು ಮುಖ್ಯವೂ ಅಷ್ಟೇ ನಿದ್ರೆ ಸಹ ಮುಖ್ಯ. ಒಬ್ಬ ಮನುಷ್ಯ ಆರೋಗ್ಯವಾಗಿರಲು 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದು ಅತ್ಯವಶ್ಯಕ. ಒಂದು ವೇಳೆ ನೀವು ಇಷ್ಟು ಸಮಯ (ನಿರಂತರವಾಗಿ) ಮಲಗದೇ ಇದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಇದು ಹೃದಯಕ್ಕೆ ನೇರ ಸಮಸ್ಯೆ ಉಂಟು ಮಾಡುತ್ತದೆ. ಹೃದಯ ಸಮಸ್ಯೆ ಹಾಗೂ ಹೃದಯಾಘಾತಕ್ಕೂ ಕಾರಣವಾಗುತ್ತದೆ. ನಿದ್ರೆ ಮಾಡುವುದರಿಂದ ರಕ್ತದ ಹರಿವು ನಿರಂತವಾಗಿರುತ್ತದೆ. ಇದು ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಕರಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ಪ್ರತಿ ನಿತ್ಯ ನಿದ್ರೆ ಮಾಡುವುದನ್ನು ಉಸಿರಾಡುವಷ್ಟೇ ಮುಖ್ಯವೆಂದು ಭಾವಿಸುವುದು ಒಳ್ಳೆಯದು.

ನಿದ್ರಾಹೀನತೆ ಹೃದಯಾಘಾತಕ್ಕೆ ಕಾರಣವೇ?
ಯಾರೂ ಸೂಕ್ತವಾಗಿ ನಿದ್ರೆ ಮಾಡುವುದಿಲ್ಲವೋ ಅವರ ದೇಹದಲ್ಲಿ ಕ್ಯಾಟೆಕೊಲಮೈನ್‌ ಉತ್ಪತ್ತಿಯಾಗುತ್ತದೆ. ಇದು ರಕ್ತನಾಳ ಮತ್ತು ಲಿಪಿಡ್ ಪ್ರೊಫೈಲ್(Lipid Profile) ಅನ್ನು ಹಾನಿಗೊಳಿಸುತ್ತದೆ. ಇದರಿಂದ ಹೃದಯ ವೈಫಲ್ಯ ಅಥವಾ ಹೃದಯ ವೈಫಲ್ಯ ರೋಗಲಕ್ಷಣಗಳಿಂದ ಬಳಲುವ ಸಾಧ್ಯತೆ ಇದೆ. ಅತಿಯಾದ ಕ್ಯಾಟೆಕೊಲಮೈನ್‌ ಉತ್ಪತ್ತಿಯಾದ ವ್ಯಕ್ತಿಗೆ ಬೆಳಗಿನ ಜಾವ 4 ರಿಂದ 8 ಗಂಟೆ ಅವಧಿಯಲ್ಲಿ ಹೃದಯಾಘಾತ ಅಥವಾ ಪಾರ್ಶ್ವವಾಯು ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಯಾರು ಕಡಿಮೆ ನಿದ್ರೆ ಮಾಡುತ್ತಾರೋ ಅವರು ದೀರ್ಘ ಕಾಲದಲ ಹೃದಯದ ತೊಂದರೆಗೆ ಒಳಗಾಗಬಹುದು.

ಇದನ್ನೂ ಓದಿ: ಮಳೆಗಾಲದಲ್ಲಿ ಬಟ್ಟೆಗೆ ಬೂಸ್ಟ್​ ಹಿಡಿಬಾರ್ದು ಅಂದ್ರೆ ಇಷ್ಟು ಮಾಡಿದ್ರೆ ಸಾಕು

ಗೊರಕೆಯೂ ನಿಮ್ಮ ಹೃದಯಕ್ಕೆ ಹಾನಿ ಮಾಡಬಹುದು
ಕೆಲವರು ಅತಿಯಾದ ಗೊರಕೆ ಹೊಡೆಯುವುದನ್ನು ನೋಡಿರಬಹುದು. ಈ ರೀತಿ ಗೊರಕೆ ಹೊಡೆಯುವುದರಿಂದ ನಿಮ್ಮ ಉಸಿರು ಕಟ್ಟಿದಂತಾಗಿ ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೀಗೆ ರಕ್ತದೊತ್ತಡ ಹೆಚ್ಚಳವಾದರೆ ಹೃದಯದ ನಾಳಗಳಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಂಥ ಪ್ರಕರಣಗಳಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚು. ಕೆಲವರು ಗೊರಕೆ ಹೊಡೆಯುತ್ತಾ ಉಸಿರಾಟದ ತೊಂದರೆಗೆ ಸಿಲುಕಿದರೆ ಕೂಡಲೇ ಎಚ್ಚರಗೊಂಡು ಕಿಟಕಿ ಅಥವಾ ಬಾಗಿಲ ಬಳಿ ತಾಜಾಗಾಳಿಯನ್ನು ಸೇವಿಸಿ. ಹೀಗೆ ಮಾಡುವುದರಿಂದ ಉಸಿರಾಟದ ಏರಿಳಿತ ನಿಯಂತ್ರಣಕ್ಕೆ ಬರಲಿದೆ.

ಅಸಮರ್ಪಕ ನಿದ್ರೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆ ಆಗಲಿದೆ
ನಿದ್ರೆ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದು ಅತ್ಯಂತ ಅಪಾಯಕಾರಿ. ಬದಲಾದ ಜೀವನ ಶೈಲಿಯಿಂದ ಬಹುತೇಕರು ಅದರಲ್ಲೂ ಯುವಕರು ರಾತ್ರಿ ಸಮಯದಲ್ಲಿಯೇ ಹೆಚ್ಚಾಗಿ ಎಚ್ಚರವಿರುತ್ತಾರೆ, ಕೆಲಸ, ಟಿವಿ ಅಥವಾ ಸಿನಿಮಾ ನೋಡುವುದು, ನೈಟ್‌ ಔಟ್‌ ಇಂಥ ಅಭ್ಯಾಸಗಳಿಂದ ರಾತ್ರಿ ಮಲಗುವ ಅಭ್ಯಾಸವನ್ನೇ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ತಡರಾತ್ರಿ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಈ ಎಲ್ಲದರ ಕಾರಣದಿಂದಲೇ ಇತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಅದರಲ್ಲೂ ಯುವಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ನಿದ್ರಾಹೀನತೆಯಿಂದ ಕೇವಲ ಹೃದಯ ಸಂಬಂಧಿ ಕಾಯಿಲೆ ಅಷ್ಟೇ ಅಲ್ಲದೇ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡಕ್ಕೂ ಪ್ರಮುಖ ಕಾರಣವಾಗಲಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಆಸನಗಳನ್ನು ಮಾಡಿದ್ರೆ ಸೂಪರ್ ಆಗಿ ನಿದ್ರೆ ಬರುತ್ತೆ

ನಿದ್ರಾಹೀನತೆ ವೈದ್ಯರ ಸಲಹೆ ಪಡೆಯಿರಿ
ಬಹುತೇಕರಲ್ಲಿ ನಿದ್ರಾಹೀನತೆಯ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ. ಪ್ರತಿನಿತ್ಯ ನಿರ್ದಿಷ್ಠ ಅವಧಿಯಲ್ಲಿ ನಿದ್ರೆ ಬಾರದೇ ಹೋದರೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಪಡೆದು ಈ ಸಮಸ್ಯೆ ಪರಿಹರಿಸಿಕೊಳ್ಳಿ. ರಾತ್ರಿ ಸಮಯದಲ್ಲಿ ನಿಮ್ಮ ನಿದ್ರೆ ಹಾಳು ಮಾಡುವ ಮೊಬೈಲ್‌, ಸಿನಿಮಾ ಹಾಗೂ ಇತರೆ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಲ್ಲಿಸಿ. ಯೋಗ, ವ್ಯಾಯಮಾಗಳಿಂದಲೂ ದೇಹ ನಿದ್ರಿಸಲು ಸಹಕರಿಸುತ್ತದೆ.
Published by:Sandhya M
First published: