Mustard Pillow: ನವಜಾತ ಶಿಶುವಿನ ರಕ್ಷಣೆಗೆ ಮನೆಯಲ್ಲಿ ಸಿದ್ದವಿರಲಿ ಸಾಸಿವೆ ದಿಂಬು

new born babies :ತಾಯಿ ಗರ್ಭದಲ್ಲಿ 9 ತಿಂಗಳುಗಳ ಕಾಲ ಇದ್ದು ಬಂದ ಪುಟ್ಟ ಮಗು ಹೊಸ ಜಗತ್ತಿಗೆ ಕಾಲಿಟ್ಟ ಬಳಿಕ ಅದರ ಲಾಲನೆ-ಪಾಲನೆ ಆರೋಗ್ಯರಕ್ಷಣೆ ತಂದೆ-ತಾಯಿಯರ ಜವಾಬ್ದಾರಿ.ಅದ್ರಲ್ಲೂ ಆರಂಭದ ಆರು ತಿಂಗಳುಗಳ ಕಾಲ ಮಕ್ಕಳನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುತ್ತದೆ.

ನವಜಾತ ಶಿಶು

ನವಜಾತ ಶಿಶು

  • Share this:
    ನವಜಾತ ಶಿಶುಗಳ (New Born baby )ಆರೈಕೆ ಸುಲಭದ ಕೆಲಸವಲ್ಲ. ಸಾಕಷ್ಟು ಶಿಶುಗಳು ಆಗಾಗ್ಗೆ ಅಜೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.ನವ ಜಾತ ಶಿಶುಗಳ ಪಾಲನೆ ತುಂಬಾ ಸೂಕ್ಷ್ಮವಾದದ್ದು. ನವಜಾತ ಶಿಶುವಿನ ಚರ್ಮವು ಸೂಕ್ಷ್ಮವಾಗಿರುತ್ತದೆ ಜೊತೆಗೆ  ಮಗುವಿನ  ರೋಗ ನಿರೋಧಕ ಶಕ್ತಿಯೂ ಕೂಡ ಕಡಿಮೆ ಇರುತ್ತದೆ. ಸಾಮಾನ್ಯವಾಗಿ  ನವಜಾತ  ಶಿಶುಗಳಿಗೆ ಅಲರ್ಜಿ(allergic), ಕಿರಿಕಿರಿ, ದದ್ದುಗಳು ಹೀಗೆ ಚರ್ಮದ(Skin) ತೊಂದರೆಗಳು ಉಂಟಾಗುತ್ತದೆ. ಇದೆಲ್ಲಾ ಸಮಸ್ಯೆಗಳ ಬಗ್ಗೆ ಎಷ್ಟು ಜಾಗೃತಿ ವಹಿಸಿದರು ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಬಗ್ಗೆ ತಾಯಿ(Mother) ಸಾಕಷ್ಟು ಚಿಂತನೆ ಮಾಡಬೇಕಾಗುತ್ತದೆ. ಹೀಗೆ ಮಕ್ಕಳನ್ನು ಆರೋಗ್ಯದಿಂದ ನೋಡಿಕೊಳ್ಳಲು ನವಜಾತ ಶಿಶುಗಳ ತಾಯಂದಿರು ಸಾಸಿವೆ ದಿಂಬು (Mustard pillow) ಬಳಸುವ ಮೂಲಕ ಹತ್ತು ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆ..

    ನವಜಾತ ಶಿಶುಗಳ ಆರೈಕೆಗೆ ಸಾಸಿವೆ ದಿಂಬು

    ತಾಯಿ ಗರ್ಭದಲ್ಲಿ 9 ತಿಂಗಳುಗಳ ಕಾಲ ಇದ್ದು ಬಂದ ಪುಟ್ಟ ಮಗು ಹೊಸ ಜಗತ್ತಿಗೆ ಕಾಲಿಟ್ಟ ಬಳಿಕ ಅದರ ಲಾಲನೆ-ಪಾಲನೆ ಆರೋಗ್ಯರಕ್ಷಣೆ ತಂದೆ-ತಾಯಿಯರ ಜವಾಬ್ದಾರಿ.ಅದ್ರಲ್ಲೂ ಆರಂಭದ ಆರು ತಿಂಗಳುಗಳ ಕಾಲ ಮಕ್ಕಳನ್ನು ಅತ್ಯಂತ ಸೂಕ್ಷ್ಮವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿ ಇರುತ್ತದೆ. ಈ ಮಕ್ಕಳಿಗೆ ಏನಾದರೂ ಸಮಸ್ಯೆಗಳು ಗಾಯಗಳು ಆದರೆ ಇವುಗಳು ಒಂದೇ ಗಂಭೀರ ಸಮಸ್ಯೆಗಳಾಗಿ ರೂಪುಗೊಳ್ಳುತ್ತವೆ.. ಹೀಗಾಗಿ ಮಗು ಹುಟ್ಟಿದ ದಿನದಿಂದ 6 ತಿಂಗಳು ತುಂಬುವವರೆಗೂ ಮಗುವಿನ ದೇಹದ ಕೆಳಗೆ ಸಾಸಿವೆ ಬೀಜದ ದಿಂಬನ್ನು ಇರುವುದರಿಂದ ಪ್ರಯೋಜನಗಳಿವೆ..

    ಇದನ್ನೂ ಓದಿ : ನವಜಾತ ಶಿಶುಗಳಿಗೆ ಮುತ್ತಿಡುವ ಮುನ್ನ ಎಚ್ಚರ...! ನಿಮ್ಮ ಪ್ರೀತಿಯ ಚುಂಬನ ಮಗುವಿಗೆ ಮಾರಕವಾಗಬಹುದು

    ಸಾಸಿವೆ ದಿಂಬನ್ನು ಏಕೆ ಬಳಸಬೇಕು..?

    ಹತ್ತಿ ಹಾಗೂ ಬಟ್ಟೆಯ ದಿಂಬುಗಳಿಗೆ ಹೋಲಿಕೆ ಮಾಡಿದರೆ ಸಾಸಿವೆ ದಿಂಬು ಅತ್ಯಂತ ಮೃದುವಾಗಿರುತ್ತದೆ. ಇದನ್ನ ಮಗುವಿನ ತಲೆಕೆಳಗೆ ಇರುವುದರಿಂದ ಮಗುವಿನ ತಲೆಯ ಗಾತ್ರ ಕ್ಷೀಣಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಮಗುವಿನ ತಲೆಗೆ ಬಲ ಸಿಗುತ್ತದೆ.

    ಸಾಸಿವೆ ದಿಂಬನ್ನು ಮನೆಯಲ್ಲಿ ಮಾಡುವುದು ಹೇಗೆ..?

    ಮನೆಯಲ್ಲಿ ಸಾಸಿವೆ ದಿಂಬು ಮಾಡಲು ಮೊದಲು ಸಾಧ್ಯವೇ ಕಾಳುಗಳನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿಸಿ ಅದರಲ್ಲಿರುವ ತೇವಾಂಶವನ್ನು ತೆಗೆದುಹಾಕಬೇಕು.. ಬಳಿಕ ಒಂದು ಮೀಟರ್ ಹತ್ತಿಬಟ್ಟೆ ಹಾಗೂ ಮೃದುವಾದ ಬಟ್ಟೆಯಿಂದ ಸೇರಿಸಿ ದಿಂಬಿನ ಕವರ್ ಮಾಡಿಕೊಂಡು, ಅದರೊಳಗೆ ನೀರಿನ ತೇವಾಂಶ ತೆಗೆದಿಟ್ಟ ಸಾಸುವೆ ಕಾಳುಗಳನ್ನು ತುಂಬಿಸಬೇಕು..ಈ ರೀತಿ ಮಾಡಿದರೆ ಸಾಸಿವೆ ದಿಂಬು ರೆಡಿಯಾಗಲಿದೆ.

    ಸಾಸಿವೆ ದಿಂಬು ತಯಾರಿಸುವಾಗ ಈ ಮುನ್ನೆಚ್ಚರಿಕೆಗಳನ್ನು ಇರಿಸಿ

    ಸಾಸಿವೆ ದಿಂಬು ತಯಾರಿಸುವಾಗಲೆಲ್ಲ, ಬಳಸಿದ ಸಾಸಿವೆಯಲ್ಲಿ ತೇವಾಂಶವೇ ಇಲ್ಲ ಎಂಬುದನ್ನು ನೆನಪಿಡಿ. ಅಲ್ಲದೆ ಸರಿಯಾದ ಪ್ರಮಾಣದ ಸಾಸಿವೆಯನ್ನು ತುಂಬಿಸಿ. ಇದರಿಂದ ಅದು ಪಕ್ಕಕ್ಕೆ ಉರುಳದೆ ಒಂದೇ ಜಾಗದಲ್ಲಿ ಇರುತ್ತದೆ. ಅದೇ ಸಮಯದಲ್ಲಿ, ಮಗುವಿನ ಕುತ್ತಿಗೆಯಲ್ಲಿ ನೋವು ಉಂಟುಮಾಡಬಹುದು.

    ಇದನ್ನೂ ಓದಿ :ನಾಯಿಗಳಿಗೆ ಆಹಾರವಾದ ನವಜಾತ ಶಿಶು ಮೃತದೇಹ: ಯಾಕಿಷ್ಟು ಬೇಜವಾಬ್ದಾರಿ?

    ಸಾಸಿವೆ ದಿಂಬನ್ನು ಯಾವ ವಯಸ್ಸಿನಲ್ಲಿ ಉಪಯೋಗಿಸ ಬೇಕು

    ದಿಂಬನ್ನು ಹುಟ್ಟಿನಿಂದ 8 ರಿಂದ 9 ತಿಂಗಳ ವಯಸ್ಸಿನವರೆಗೆ ಬಳಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮಗು ಮಂಡಿಯ ಮೇಲೆ ನಡೆಯಲು ಪ್ರಾರಂಭಿಸಿದಾಗ ಸಾಸಿವೆ ದಿಂಬನ್ನು ತೆಗೆಯಬೇಕು. ಇದರಿಂದ ಮಗುವಿನ ತಲೆಗೆ ಬಲ ಸಿಗುತ್ತದೆ.

    ಸಾಸಿವೆ ದಿಂಬಿನ ಪ್ರಯೋಜನಗಳು

    ಸಾಸಿವೆಯನ್ನು ಉಪಯೋಗಿಸುವುದರಿಂದ ಮಗುವಿನ ಆರೋಗ್ಯವು ವೇಗವಾಗಿ ಹೆಚ್ಚುತ್ತದೆ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.ಸಾಸಿವೆ ಬಿಸಿಯಾದ ಗುಣವನ್ನು ಹೊಂದಿದೆ, ಆದ್ದರಿಂದ ಮಗುವಿಗೆ ಶೀತ ಪರಿಸ್ಥಿತಿಯಲ್ಲಿ ಶೀತ ಹಿಡಿಯುವ ಸಾಧ್ಯತೆ ಕಡಿಮೆಯಾಗುತ್ತಿದೆ.ಮಗುವಿನ ತಲೆಯ ಗಾತ್ರ ಸಾಸಿವೆಯಿಂದ ಬೆಳೆಯುವುದಿಲ್ಲ ಮತ್ತು ಕುತ್ತಿಗೆಯ ಮೇಲೆ ಯಾವುದೇ ಒತ್ತಡವಿರುವುದಿಲ್ಲ.

    ಸಾಸಿವೆಯು ಪರಿಪೂರ್ಣ ತೂಕದಿಂದ ಮಾಡಲ್ಪಟ್ಟಿದೆ, ಇದು ಮಗುವಿನ ದೇಹದ ಹಿಂದೆ ಒತ್ತಡ ಹಾಕುತ್ತದೆ. ಇದರಿಂದ ಮಗು ಆರಾಮದಾಯಕವಾಗಿ ಮಲಗುತ್ತದೆ. ಸಾಸಿವೆ ದಿಂಬಿನ ಮೇಲೆ ಮಲಗುವುದರಿಂದ ಮಗುವಿಗೆ ಮಲಗಲು ಸಹ ಕಷ್ಟವಾಗುವುದಿಲ್ಲ
    Published by:ranjumbkgowda1 ranjumbkgowda1
    First published: