Menopause: ಋತುಚಕ್ರ ನಿಲ್ಲುವ ಸಮಯದಲ್ಲಿ ನಿಮ್ಮ ಚರ್ಮದ ಆರೈಕೆ ಹೀಗಿದ್ದರೆ ಚೆಂದ

ಈ ಅವಧಿಯಲ್ಲಿ ಋತುಚಕ್ರ ಅವಧಿ ನಿಲ್ಲುವ ಸಮಯ ಆಗಿದೆ. ಮತ್ತು ಋತುಚಕ್ರ ನಿಲ್ಲುವ ಅವಧಿಯಲ್ಲಿ ಋತುಚಕ್ರ ಅನಿಯಮಿತವಾಗಲು ಪ್ರಾರಂಭ ಆಗುತ್ತದೆ. ಇದು ಮನಸ್ಥಿತಿ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಅದೇ ವೇಳೆ ಚರ್ಮವು ಅಷ್ಟು ಚೆನ್ನಾಗಿ ಉಳಿಯಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚರ್ಮದ ವಯಸ್ಸಾಗುವಿಕೆ (Skin Aging) ತಡೆಯಲು ಮುಖಕ್ಕೆ (Face) ಹಲವು ರೀತಿಯ ವಿಶೇಷ ಕಾಳಜಿ (Special Care) ವಹಿಸುವುದನ್ನು ಕಾಣಬಹುದು. ವಯಸ್ಸು ಮೂವತ್ತು ದಾಟುತ್ತಿದ್ದಂತೆಯೇ ವಯಸ್ಸಾಗುವಿಕೆ ಚಿಹ್ನೆಗಳು ಮುಖದಲ್ಲಿ ಕಾಣಿಸುತ್ತವೆ. ಈ ವಯಸ್ಸಾಗುವಿಕೆ ಚಿಹ್ನೆಗಳು ಅಂದವನ್ನ (Beauty) ಮಂದಗೊಳಿಸುತ್ತವೆ. ಜೊತೆಗೆ ಮಹಿಳೆಯರು ತಾವು ಋತುಬಂಧಕ್ಕೆ ಒಳಗಾಗುವ ಸಮಯದಲ್ಲಿ ನಿಮ್ಮ ಮುಖದ ಮೇಲೆ ಮೊಡವೆ, ತುರಿಕೆ, ಕೆರೆತ ಹಾಗೂ ಕಲೆಗಳು ಉಂಟಾಗುವ ಸಾಧ್ಯತೆ ಹೆಚ್ಚು. ಇದು ಕೆಲವೊಮ್ಮೆ ಮುಖದ ಹೊಳಪನ್ನು ಹಾಳು ಮಾಡುತ್ತದೆ. ಕೆಲವೊಮ್ಮೆ ಮುಖದಲ್ಲಿ ಬಿಗಿತ ಕಡಿಮೆಯಾಗುತ್ತಿದೆ ಎಂದು ಅನ್ನಿಸುತ್ತದೆ. ಋತುಬಂಧವು ಕನಿಷ್ಠ ನಲವತ್ತು ವರ್ಷಗಳ ನಂತರ ಮಹಿಳೆಯ ದೇಹವು ಪ್ರಮುಖ ಬದಲಾವಣೆಗೆ ಒಳಗಾಗುವ ಸಮಯ ಆಗಿದೆ.

    ಋತುಚಕ್ರ ಅವಧಿ ನಿಲ್ಲುವ ಸಮಯ

    ಈ ಅವಧಿಯಲ್ಲಿ ಋತುಚಕ್ರ ಅವಧಿ ನಿಲ್ಲುವ ಸಮಯ ಆಗಿದೆ. ಮತ್ತು ಋತುಚಕ್ರ ನಿಲ್ಲುವ ಅವಧಿಯಲ್ಲಿ ಋತುಚಕ್ರ ಅನಿಯಮಿತವಾಗಲು ಪ್ರಾರಂಭ ಆಗುತ್ತದೆ. ಇದು ಮನಸ್ಥಿತಿ ಮತ್ತು ದೇಹದ ಮೇಲೆ ಪರಿಣಾಮ ಬೀರುತ್ತದೆ. ಅದೇ ವೇಳೆ ಚರ್ಮವು ಅಷ್ಟು ಚೆನ್ನಾಗಿ ಉಳಿಯಲ್ಲ.

    ಹಾಗಾಗಿ ಚರ್ಮದ ಮೇಲೆ ಅದರ ದೊಡ್ಡ ಬದಲಾವಣೆಗಳು ಕಾಣಿಸಲು ಶುರು ಆಗುತ್ತವೆ. ಅಂತಹ ವೇಳೆ ಮುಖದ ಅಕಾಲಿಕ ವಯಸ್ಸಾಗುವಿಕೆ ತಪ್ಪಿಸಲು ಕೆಲವು ವಿಷಯಗಳಿಂದ ದೂರವಿರುವುದು ಅಗತ್ಯ ಆಗಿದೆ.

    ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

    ಚರ್ಮದ ಶುಷ್ಕತೆ ತಪ್ಪಿಸುವುದು

    ಋತುಬಂಧದ ಸಮಯದಲ್ಲಿ ಕಾಲಜನ್ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಚರ್ಮದ ಶುಷ್ಕತೆ ಹೆಚ್ಚಾಗುವಂತೆ ಮಾಡುತ್ತದೆ. ಕಡಿಮೆ ನೈಸರ್ಗಿಕ ಎಣ್ಣೆಯಿಂದಾಗಿ ಚರ್ಮವು ತನ್ನ ಹೊಳಪು ಕಳೆದುಕೊಳ್ಳಲು ಶುರು ಆಗುತ್ತದೆ. ಅಂತಹ ವೇಳೆ ಕೆಲವು ವಸ್ತುಗಳನ್ನು ಚರ್ಮದ ಮೇಲೆ ಹೆಚ್ಚು ಅನ್ವಯಿಸಿದರೆ, ಚರ್ಮವು ಶುಷ್ಕವಾಗಿ ಸಾಕಷ್ಟು ಬಳಲುತ್ತದೆ.

    ಚರ್ಮವು ಸಾಮಾನ್ಯವಾಗಿದ್ದರೆ ಒಣಗಲು ಬಿಡಬೇಡಿ

    ನೀವು ಎಣ್ಣೆಯುಕ್ತ ಚರ್ಮ ಹೊಂದಿದ್ದರೆ ಅದರ ಎಣ್ಣೆ ಕಡಿಮೆ ಆಗದಂತೆ ನೋಡಿಕೊಳ್ಳಿ. ಏಕೆಂದರೆ ಈಗ ಅದು ಮೊದಲಿಗಿಂತ ಕಡಿಮೆ ಎಣ್ಣೆಯುಕ್ತವಾಗಿರುತ್ತದೆ. ಈ ಹಂತದಲ್ಲಿ ನೀವು ಚರ್ಮವನ್ನು ತುಂಬಾ ಒಣಗಿಸುವ ಉತ್ಪನ್ನಗಳನ್ನು ಬಳಸಿದರೆ, ಚರ್ಮವು ತುಂಬಾ ಒಣಗುತ್ತದೆ. ಇದು ಸೂಕ್ಷ್ಮ ರೇಖೆಗಳು ರೂಪುಗೊಳ್ಳಲು ಕಾರಣ ಆಗುತ್ತದೆ.

    ಹೆಚ್ಚು ಎಕ್ಸ್‌ಫೋಲಿಯೇಶನ್ ಮಾಡಬೇಡಿ

    43 ರಿಂದ 45 ರ ವಯಸ್ಸು ದಾಟುವ ಮೂಲಕ ಚರ್ಮವನ್ನು ಎಕ್ಸ್‌ಫೋಲಿಯೇಶನ್ ಮಾಡುವ ಇಂತಹ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ. ಇಂತಹ ಸಮಯದಲ್ಲಿ ಚರ್ಮವು ಹೆಚ್ಚು ಶುಷ್ಕ ಆಗಿರುತ್ತದೆ ಎಂದು ನೀವು ಈಗಾಗಲೇ ಅರ್ಥ ಮಾಡಿಕೊಳ್ಳಬೇಕು.

    ಎಕ್ಸ್‌ಫೋಲಿಯೇಟಿಂಗ್ ಸತ್ತ ಚರ್ಮ ತೆಗೆದು ಹಾಕುತ್ತದೆ. ಆದರೆ ಹೊಸ ಚರ್ಮದ ಕೋಶಗಳನ್ನು ತಯಾರಿಸುವ ಪ್ರಕ್ರಿಯೆ ವಯಸ್ಸಾದಂತೆ ನಿಧಾನವಾದಾಗ ಅತಿಯಾದ ಎಕ್ಸ್‌ಫೋಲಿಯೇಶನ್ ಕ್ರಿಯೆಯು ಹಾನಿ ಉಂಟು ಮಾಡುತ್ತದೆ.

    ಚರ್ಮಕ್ಕೆ ಅಗ್ಗದ ಚಿಕಿತ್ಸೆ ಪಡೆಯಬೇಡಿ

    ತುಂಬಾ ಅಗ್ಗವಾದ ಚಿಕಿತ್ಸೆ ಮಾಡಿಸಬೇಡಿ. ಕಡಿಮೆ ಹಣದಲ್ಲಿ ತ್ವಚೆ ಹತ್ತು ವರ್ಷ ಕಿರಿಯವಾಗಿ ಕಾಣುವಂತೆ ಮಾಡುವ ಮತ್ತು ಕಡಿಮೆ ಸಿಟ್ಟಿಂಗ್‌ ಕೆಲಸ ಪೂರ್ಣಗೊಳಿಸುವ ಭರವಸೆ ನೀಡುವ ಚಿಕಿತ್ಸೆಗಳು ನಿಮ್ಮ ಚರ್ಮ ಗಂಭೀರವಾಗಿ ಹಾನಿ ಆಗುತ್ತದೆ. ನೀವು ಯಾವುದೇ ಚಿಕಿತ್ಸೆ ಪಡೆಯಲು ಬಯಸಿದರೆ ನಂತರ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಿ.

    ಇದನ್ನೂ ಓದಿ: ಮೂವತ್ತರ ನಂತರವೂ ಫಿಟ್ ಆಗಿರಲು ನಿಮ್ಮ ಆಹಾರದಲ್ಲಿ ಈ ಪೋಷಕಾಂಶ ಸೇರಿಸಿ

    ಚರ್ಮದ ತೇವಾಂಶವನ್ನು ಕಡಿಮೆ ಮಾಡುವ ವಸ್ತುಗಳ ಬಳಕೆ ತಪ್ಪಿಸಿ

    ಈ ವೇಳೆ ಚರ್ಮದ ತೇವಾಂಶವು ಕಡಿಮೆ ಆಗುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡಲು ನೀವು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು. ಜೊತೆಗೆ ಕಾಫಿ ಮತ್ತು ಚಹಾ ಸೇರಿದಂತೆ ದೇಹ ನಿರ್ಜಲೀಕರಣಗೊಳಿಸುವ ವಸ್ತುಗಳ ಸೇವನೆ ಮಾಡುವುದನ್ನು ತಪ್ಪಿಸಿ. ಅಲ್ಲದೆ ನೀವು ಹೆಚ್ಚು ತ್ವರಿತ ಆಹಾರ ಸೇವಿಸಿದರೆ, ಅದರ ಅಭ್ಯಾಸ ಕಡಿಮೆ ಮಾಡಿ.
    Published by:renukadariyannavar
    First published: