Meditation And Health: ಧ್ಯಾನದಿಂದ ಸ್ತನ್ಯಪಾನ, ಮಗುವಿನ ಮೇಲೂ ಪರಿಣಾಮ

ತಾಯಿಯ ಹಾಲಿನ ಉತ್ಪಾದನೆ ಮತ್ತು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಗುವಿನ ಆರೋಗ್ಯ ಮುಖ್ಯವಾದಲ್ಲಿ ಅವರ ಆರೋಗ್ಯದ ಬಗ್ಗೆ ಜಾಗೃತವಾಗಿರುವುದು ಸಹ ಮುಖ್ಯ. ವೈದ್ಯರಿಂದ ಹಿಡಿದು ಆಹಾರ ತಜ್ಞರವರೆಗೆ ಹಾಲುಣಿಸುವ ಮಹಿಳೆಯರಿಗೆ ವಿವಿಧ ಪೌಷ್ಟಿಕಾಂಶ ಭರಿತ ಆಹಾರ ತಿನ್ನಲು ಸಲಹೆ ನೀಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತಾಯಿಯಾಗುವುದು (Mother) ಸುಲಭದ ಮಾತಲ್ಲ. ತಾಯಿಯಾಗುವುದು ದೊಡ್ಡ ಜವಾಬ್ದಾರಿ (Responsibility) ಆಗಿದೆ. ಯಾಕೆಂದ್ರೆ ತಾಯಿ ತನ್ನ ಮಗುವಿನ (Baby) ಜೊತೆಗೆ ಇಡೀ ಮನೆಯ (Home) ಜವಾಬ್ದಾರಿ ನಿಭಾಯಿಸಬೇಕು. ಹಾಗೂ ತಾಯಿ ಆಫೀಸ್ (Office) ಮತ್ತು ಮನೆ ಎಲ್ಲವನ್ನೂ ಸಮಾನವಾಗಿ ನಿಭಾಯಿಸಬೇಕಾಗುತ್ತದೆ. ಅದೇ ವೇಳೆ ಮತ್ತೊಂದು ದೊಡ್ಡ ಜವಾಬ್ದಾರಿ ಇದೆ. ಅದೇನೆಂದರೆ ಸ್ತನ್ಯಪಾನ. ಮಗುವಿನ ಬೆಳವಣಿಗೆಗೆ ಸ್ತನ್ಯಪಾನ ಮಾಡುವುದನ್ನು ಎಂದಿಗೂ ತಪ್ಪಿಸಬಾರದು. ಅದೇ ವೇಳೆ ನಿಮ್ಮ ಆರೋಗ್ಯಕರ ಹಾಲು ಉತ್ಪಾದನೆಯು ಸಂಪೂರ್ಣವಾಗಿ ತಾಯಿಯ ಆರೋಗ್ಯವನ್ನು ಅವಲಂಬಿಸಿರುತ್ತದೆ. ಆದರೆ ಅನೇಕ ಬಾರಿ ಮಹಿಳೆಯರು ಈ ಜವಾಬ್ದಾರಿಗಳ ನಡುವೆ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.

  ಮೊದಲ ಬಾರಿ ತಾಯಿಯಾದವರು ಧ್ಯಾನ ಮಾಡಬೇಕು

  ಈ ಒತ್ತಡ ತಪ್ಪಿಸಲು ನೀವು ಪ್ರತಿದಿನ ಧ್ಯಾನ ಮಾಡುವುದು ಅತೀ ಅವಶ್ಯಕ. ಹೊಸ ತಾಯಂದಿರಿಗೆ ಧ್ಯಾನ ಮಾಡುವುದು ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ. ನೀವು ಮಾನಸಿಕವಾಗಿ ಸಮತೋಲನ ಹೊಂದಿಲ್ಲದೇ ಹೋದರೆ ನಿಸ್ಸಂಶಯವಾಗಿ ನಿಮ್ಮ ದೈಹಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ.

  ಇದು ನಿಮ್ಮ ಹಾಲಿನ ಉತ್ಪಾದನೆ ಮತ್ತು ಹಾಲಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಮಗುವಿನ ಆರೋಗ್ಯ ಮುಖ್ಯವಾದಲ್ಲಿ ಅವರ ಆರೋಗ್ಯದ ಬಗ್ಗೆ ಜಾಗೃತವಾಗಿರುವುದು ಸಹ ಮುಖ್ಯ. ವೈದ್ಯರಿಂದ ಹಿಡಿದು ಆಹಾರ ತಜ್ಞರವರೆಗೆ, ಹಾಲುಣಿಸುವ ಮಹಿಳೆಯರಿಗೆ ವಿವಿಧ ಪೌಷ್ಟಿಕಾಂಶ-ಭರಿತ ಆಹಾರ ತಿನ್ನಲು ಸಲಹೆ ನೀಡುತ್ತಾರೆ.

  ಇದನ್ನೂ ಓದಿ: ನಿದ್ರೆಯ ಸಮಸ್ಯೆಗಳು ಯಾವುವು, ನಿದ್ರಾಹೀನತೆಗೆ ಕಾರಣವೇನು?

  ಮಾನಸಿಕ ಆರೋಗ್ಯದ ಸಮತೋಲನ ಕಾಪಾಡುವುದು

  ಇದು ಸಂಪೂರ್ಣವಾಗಿ ಅಗತ್ಯವಾಗಿದ್ದರೂ, ಅದೇ ಸಮಯದಲ್ಲಿ ನಿಮ್ಮ ಮಾನಸಿಕ ಆರೋಗ್ಯವು ಸಮತೋಲನ ಹೊಂದಿರದಿದ್ದರೆ ಈ ಎಲ್ಲಾ ವಿಷಯಗಳು ಕಾರ್ಯ ನಿರ್ವಹಿಸಲ್ಲ. ಈ ವೇಳೆ ಧ್ಯಾನದ ಅಭ್ಯಾಸವು ನಿಮಗೆ ಸಹಾಯ ಮಾಡುತ್ತದೆ. ಆರೋಗ್ಯಕರ ಆಹಾರ ಪದ್ಧತಿ ಹಾಗೂ ಕೆಲವು ಗಂಟೆಗಳ ಕಾಲ ಧ್ಯಾನ ಮಾಡಿ.

  ಇದು ನಿಮಗೆ ಒಳಗಿನಿಂದ ಶಾಂತವಾಗಿರಲು ಸಹಾಯ ಮಾಡುತ್ತದೆ. ಮತ್ತು ನಿಮ್ಮ ಹಾರ್ಮೋನುಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.

  ಸಮತೋಲನ ಹಾರ್ಮೋನು

  ಗರ್ಭಾವಸ್ಥೆಯ ನಂತರ ಮಹಿಳೆಯರ ಹಾರ್ಮೋನುಗಳು ಅನಿಯಂತ್ರಣ ಹೊಂದುತ್ತವೆ. ತಾಯಿಯಾದ ನಂತರ ಮಹಿಳೆಯರು ಹೊಸ ಭಾವನಾತ್ಮಕ ಅನುಭವ ಹೊಂದುತ್ತಾರೆ. ಆದರೆ ಧ್ಯಾನವು ಮಹಿಳೆಯರಿಗೆ ಶಾಂತತೆಯ ಭಾವನೆ ನೀಡುತ್ತದೆ. ಇದು ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಅನಿಯಂತ್ರಿತ ಹಾರ್ಮೋನುಗಳು ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತವೆ.

  ಭಾವನೆಗಳ ಸಮತೋಲನ

  ತಾಯ್ತನಕ್ಕೆ ಕಾಲಿಟ್ಟ ಕೂಡಲೇ ಜವಾಬ್ದಾರಿ ಹೆಚ್ಚಾಗುತ್ತದೆ. ನೀವು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಎದುರಿಸಬೇಕಾಗುತ್ತದೆ. ಮಹಿಳೆಯರು ಆಗಾಗ್ಗೆ ಖಿನ್ನತೆ, ಉದ್ವೇಗ ಮತ್ತು ಒತ್ತಡದಿಂದ ಆತಂಕಕ್ಕೆ ಬಲಿಯಾಗುತ್ತಾರೆ. ಈ ಎಲ್ಲಾ ಸಮಸ್ಯೆ ತಪ್ಪಿಸಲು ಸರಳವಾದ ಮಾರ್ಗವೆಂದರೆ ಧ್ಯಾನ. ಧ್ಯಾನವು ನಿಮ್ಮ ದೇಹದ ಕಾರ್ಯಗಳಿಗೆ ಸರಿಯಾದ ದಿಕ್ಕನ್ನು ನೀಡುತ್ತದೆ. ನಿಮ್ಮ ಮನಸ್ಸನ್ನು ಶಾಂತವಾಗಿಡುತ್ತದೆ.

  ಹಾಲಿನ ಉತ್ಪಾದನೆ ಹೆಚ್ಚಿಸಿ

  ಧ್ಯಾನವು ದೇಹದ ಕಾರ್ಯಗಳು ಶಾಂತವಾಗಿಡಲು ಸಹಕಾರಿ. ಇದರಿಂದಾಗಿ ಹಾಲು ಸರಿಯಾಗಿ ಪೂರೈಕೆಯಾಗುತ್ತದೆ. ನೀವು ಒತ್ತಡದಲ್ಲಿದ್ದರೆ ಅದು ನಿಮ್ಮ ಹಾಲಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಅಂತಹ ವೇಳೆ ಸ್ತನ್ಯಪಾನ ಸಮಯದಲ್ಲಿ ಧ್ಯಾನಕ್ಕೆ ಸಮಯ ತೆಗೆದುಕೊಳ್ಳುವುದು ಮುಖ್ಯ. ಇದು ನಿಮ್ಮ ಮತ್ತು ಮಗುವಿನ ಆರೋಗ್ಯಕ್ಕೆ ಪ್ರಯೋಜನಕಾರಿ.

  ವಿಶ್ರಾಂತಿ ಪಡೆಯಲು ಸಹಕಾರಿ

  ತಾಯಿಯಾದ ನಂತರ ಮಹಿಳೆಯರು ಒಂಟಿಯಾಗಿ ಸಮಯ ಕಳೆಯುವುದು ತುಂಬಾ ಕಷ್ಟ. ವಿಶೇಷವಾಗಿ ನೀವು ಚಿಕ್ಕ ಮಗುವಿನ ತಾಯಿಯಾಗಿದ್ದರೆ. ಇಡೀ ದಿನದ ಕಾರ್ಯನಿರತತೆಯಿಂದ ನೀವು ಮಾನಸಿಕವಾಗಿ ತೊಂದರೆಗೆ ಒಳಗಾಗುತ್ತೀರಿ. ಇದು ಹಾಲಿನ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ದಿನವಿಡೀ ಕನಿಷ್ಠ ಅರ್ಧ ಗಂಟೆಯಿಂದ 1 ಗಂಟೆಯವರೆಗೆ ನಿಮಗಾಗಿ ತೆಗೆದುಕೊಳ್ಳಲು ಪ್ರಯತ್ನಿಸಿ.

  ಇದನ್ನೂ ಓದಿ: ಸಿಟ್ರಿಕ್ ಆಮ್ಲವಿರುವ ನಿಂಬೆ ಹಣ್ಣು ಕೂದಲ ಆರೈಕೆಗೆ ಹೇಗೆ ಪ್ರಯೋಜನಕಾರಿ?

  ವಿಶ್ರಾಂತಿ ಸಂಗೀತ ಮತ್ತು ಸ್ತನ್ಯಪಾನ

  ಒಂದು ಅಧ್ಯಯನದ ಪ್ರಕಾರ, ಹಾಲುಣಿಸುವ ಮಹಿಳೆಯರಲ್ಲಿ ಶಾಂತವಾಗಿ ಮತ್ತು ಸಂತೋಷವಾಗಿರಲು ವಿಶ್ರಾಂತಿ ಸಂಗೀತ ಮತ್ತು ಧ್ಯಾನ ಸಹಕಾರಿ ಎಂದು ಹೇಳಿದೆ.
  Published by:renukadariyannavar
  First published: