Cholesterol Problem: ಅಧಿಕ ಕೊಲೆಸ್ಟ್ರಾಲ್ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಂತೆ

ಎಚ್‌ಡಿಎಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮ ದೇಹಕ್ಕೆ ಬಹಳಷ್ಟು ಅಗತ್ಯವಿರುತ್ತದೆ. ಎಲ್ಡಿಎಲ್ ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಸಾಮಾನ್ಯವಾಗಿ ನಮ್ಮ ರಕ್ತದಲ್ಲಿ ಹರಿಯುತ್ತದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ವ್ಯಕ್ತಿಯಲ್ಲಿ (Person) ಹೆಚ್ಚುವ ತೂಕವು (Weight) ಸಾಕಷ್ಟು ಆರೋಗ್ಯ ಸಮಸ್ಯೆ (Health Problem) ತಂದೊಡ್ಡುತ್ತದೆ. ಅದಾಗ್ಯೂ ಕೊಲೆಸ್ಟ್ರಾಲ್ (Cholesterol) ನಮ್ಮ ರಕ್ತದಲ್ಲಿರುವ (Blood) ಮೇಣದ ವಸ್ತು ಆಗಿದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ ಅವುಗಳಲ್ಲಿ ಒಂದು ಕೊಲೆಸ್ಟ್ರಾಲ್ ಅನ್ನು ನಮ್ಮ ದೇಹಕ್ಕೆ ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ. ಆದರೆ ಇನ್ನೊಂದು ಕೊಲೆಸ್ಟ್ರಾಲ್ ಕೆಟ್ಟ ಕೊಲೆಸ್ಟ್ರಾಲ್ ಎಂದು ಹೇಳಲಾಗಿದೆ. ಇದು ಹೃದ್ರೋಗ ಮತ್ತು ಅನೇಕ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಇದನ್ನು ಹೈ ಡೆನ್ಸಿಟಿ ಲಿಪೊಪ್ರೋಟೀನ್ (ಎಚ್‌ಡಿಎಲ್) ಮತ್ತು ಇನ್ನೊಂದನ್ನು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್‌ಡಿಎಲ್) ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಎಚ್‌ಡಿಎಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗುತ್ತದೆ.

    ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ

    ಇದು ನಮ್ಮ ದೇಹಕ್ಕೆ ಬಹಳಷ್ಟು ಅಗತ್ಯವಿರುತ್ತದೆ. ಎಲ್ಡಿಎಲ್ ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಮುಂತಾದ ಸಮಸ್ಯೆಗಳ ಅಪಾಯ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಸಾಮಾನ್ಯವಾಗಿ ನಮ್ಮ ರಕ್ತದಲ್ಲಿ ಹರಿಯುತ್ತದೆ. ಕೊಲೆಸ್ಟ್ರಾಲ್ ಮಟ್ಟದ ಹೆಚ್ಚಳ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹ ಹೆಚ್ಚಿಸಲು ಪ್ರಾರಂಭಿಸುತ್ತದೆ.

    ಇದು ಹೃದಯಕ್ಕೆ ರಕ್ತದ ಹರಿವನ್ನು ಬಹಳ ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೆಲವೊಮ್ಮೆ ಅದರ ಚಿಹ್ನೆಗಳನ್ನು ಕಾಣಬಹುದು. ಅಧ್ಯಯನದ ಪ್ರಕಾರ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ಅದರ ಲಕ್ಷಣಗಳು ಪಾದಗಳಲ್ಲಿ ಕಾಣಿಸಲು ಪ್ರಾರಂಭಿಸುತ್ತವೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಪೆರಿಫೆರಲ್ ಆರ್ಟರಿ ಡಿಸೀಸ್

    ದೇಹದಲ್ಲಿ ಕೊಲೆಸ್ಟರಾಲ್ ಮಟ್ಟದಲ್ಲಿನ ಹೆಚ್ಚಳವು ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಎಂಬ ಸಮಸ್ಯೆಗೆ ಕಾರಣ ಆಗುತ್ತದೆ. ಈ ಸಮಸ್ಯೆ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹ ಆಗುತ್ತದೆ. ಇದು ಅಪಧಮನಿಗಳು ಕಿರಿದಾಗಿಸುತ್ತದೆ.

    ಇದು ಕಾಲು ಮತ್ತು ಕೈಗಳಲ್ಲಿ ರಕ್ತದ ಹರಿವನ್ನು ಬಹಳ ಕಡಿಮೆ ಮಾಡುತ್ತದೆ. ಪಾದಗಳಿಗೆ ಸರಿಯಾದ ಪ್ರಮಾಣದ ರಕ್ತ ತಲುಪದ ಕಾರಣ, ಒಬ್ಬ ವ್ಯಕ್ತಿಯು ನಡೆಯುವಾಗ ಬಹಳಷ್ಟು ನೋವು ಅನುಭವಿಸುತ್ತಾನೆ. ಇದು ಹೃದಯಾಘಾತ ಅಪಾಯ ಹೆಚ್ಚು ಮಾಡುತ್ತದೆ.

    ಪೆರಿಫೆರಲ್ ಆರ್ಟರಿ ಡಿಸೀಸ್ ಪ್ರಮುಖ ಲಕ್ಷಣಗಳು

    ಪೆರಿಫೆರಲ್ ಆರ್ಟರಿ ಡಿಸೀಸ್ (PAD) ನ ಪ್ರಮುಖ ಲಕ್ಷಣವೆಂದರೆ ಪಾದಗಳ ಬಣ್ಣ ಬದಲಾವಣೆ. ನಿಮ್ಮ ಪಾದಗಳ ಬಣ್ಣವೂ ಕ್ರಮೇಣ ನೀಲಿ ಬಣ್ಣಕ್ಕೆ ತಿರುಗಿದ್ದರೆ, ನಿಮ್ಮ ಕಾಲಿನ ರಕ್ತದ ಹರಿವು ತುಂಬಾ ಕಡಿಮೆ ಮಾಡುತ್ತದೆ ಎಂಬುದರ ಸಂಕೇತ ಆಗಿದೆ. ಬಾಹ್ಯ ಅಪಧಮನಿ ಕಾಯಿಲೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಅದು ಅನೇಕ ಗಂಭೀರ ಸಮಸ್ಯೆಗೆ ಕಾರಣ ಆಗುತ್ತದೆ.

    ದೇಹದ ಭಾಗಗಳಲ್ಲಿ ನಿರಂತರ ನೋವು, ಕೈಕಾಲುಗಳಲ್ಲಿ ದೌರ್ಬಲ್ಯ, ಕೈ ಮತ್ತು ಕಾಲುಗಳ ಮರಗಟ್ಟುವಿಕೆ, ದೇಹದ ಭಾಗಗಳ ಬಣ್ಣ ಬದಲಾವಣೆ, ಈ ಎಲ್ಲಾ ಸಮಸ್ಯೆ ತೊಡೆದು ಹಾಕಲು ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಎಷ್ಟಿದೆ ಎಂಬುದರ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ.

    ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಪರಿಹಾರ

    ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ತುಂಬಾ ಸಾಮಾನ್ಯ ಸಂಗತಿ. ಮತ್ತು ಇದನ್ನು ಹಲವು ವಿಧಗಳಲ್ಲಿ ಗುಣಪಡಿಸಬಹುದು. ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಗುಣಪಡಿಸಲು ಉತ್ತಮ ಮಾರ್ಗ ನಿಮ್ಮ ಆಹಾರ, ಜೀವನಶೈಲಿಯ ಬಗ್ಗೆ ಗಮನ ಹರಿಸಿ. ಹೆಚ್ಚು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಕೊಲೆಸ್ಟ್ರಾಲ್ ಮಟ್ಟ ಕಾಪಾಡಲು ಸಂಸ್ಕರಿಸಿದ ಮತ್ತು ಕೊಬ್ಬಿನ ಪ್ರಮಾಣ ತುಂಬಾ ಹೆಚ್ಚಿರುವ ಪದಾರ್ಥ ಹೆಚ್ಚು ಸೇವನೆ ಮಾಡದಿರುವುದು ಮುಖ್ಯ. ಇದು ನಿಮ್ಮ ಆಹಾರದಲ್ಲಿ ಬೀಜಗಳು, ಹಣ್ಣುಗಳು ಮತ್ತು ತರಕಾರಿ ಸೇರಿಸಿ. ಜೊತೆಗೆ ಕೆಂಪು ಮಾಂಸದ ಬದಲಿಗೆ ಚಿಕನ್ ಸೇವಿಸಿ.
    Published by:renukadariyannavar
    First published: