ಪ್ರಪಂಚದಾದ್ಯಂತದ ಜನರ (People) ಆಹಾರದ (Food) ಅವಿಭಾಜ್ಯ ಅಂಗವಾಗಿ ಹಾಲು (Milk) ಸೇವನೆ ಮಾಡಲಾಗುತ್ತದೆ. ಮಕ್ಕಳಿಂದ (Children’s) ಹಿಡಿದು ವೃದ್ಧರವರೆಗೆ ಹಾಲು ಸೇವನೆ (Drink) ಮಾಡುತ್ತಾರೆ. ಹಾಲಿನಲ್ಲಿರುವ ಅಗತ್ಯ ಪೋಷಕಾಂಶಗಳು ದೇಹದ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ವ್ಯವಸ್ಥೆಯ ದೈನಂದಿನ ಕ್ಯಾಲ್ಸಿಯಂ ಮತ್ತು ಕೊಬ್ಬಿನ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಹಾಲು ಬೇಕೇ ಬೇಕು. ಜೊತೆಗೆ ಒಂದು ಲೋಟ ಹಾಲು ಚಯಾಪಚಯ ಪ್ರಕ್ರಿಯೆ ಹೆಚ್ಚಿಸಲು ಮತ್ತು ರೋಗ ನಿರೋಧಕ ಶಕ್ತಿ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ. ಹಸುವಿನ ಹಾಲನ್ನು ಸಾಮಾನ್ಯವಾಗಿ ಔಷಧೀಯ ಪ್ರಯೋಜನಗಳಿಗಾಗಿ ಬಳಸುವುದನ್ನು ನಾವೆಲ್ಲಾ ನೋಡಿದ್ದೇವೆ.
ಅನೇಕ ತಜ್ಞರು ಹೇಳುವ ಪ್ರಕಾರ, ಹಸುವಿನ ಹಾಲು ರಕ್ತದಲ್ಲಿನ ಕಬ್ಬಿಣ ಮತ್ತು ತಾಮ್ರದಂತಹ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದಲ್ಲದೆ ಹಸುವಿನ ಹಾಲು ಲ್ಯಾಕ್ಟೋಸ್-ಅಲರ್ಜಿ ಮತ್ತು ಗ್ಯಾಸ್ಟ್ರಿಕ್ ರೋಗಿಗಳಿಗೆ ಹಾನಿಕಾರಕವಾಗಿದೆ ಎಂದು ತಜ್ಞರು ಹೇಳುತ್ತಾರೆ.
ಮೇಕೆ ಹಾಲು ಸೇವನೆ ಲ್ಯಾಕ್ಟೋಸ್ ಅಲರ್ಜಿ ಮತ್ತು ಗ್ಯಾಸ್ಟ್ರಿಕ್ ರೋಗಿಗಳಿಗೂ ಬೆಸ್ಟ್
ಹಾಗಾಗಿ ಮೇಕೆ ಹಾಲು ಶ್ರೇಷ್ಠ ಎಂದು ಹೇಳುತ್ತಾರೆ. ಇತರೆ ಆಹಾರಗಳಿಂದ ಪ್ರಮುಖ ಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಮೇಕೆ ಹಾಲು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಹೆಚ್ಚುತ್ತಿದೆ ಫಿಟ್ ನೆಸ್ ಟ್ರೆಂಡ್, ಯಾವ ವ್ಯಾಯಾಮವನ್ನು ಎಷ್ಟು ಹೊತ್ತು ಮಾಡಬೇಕು?
ಜೀರ್ಣಕ್ರಿಯೆ ಸಂಬಂಧಿ ಕಾರಣಗಳಿಂದ ಕೆಲವರು ಹಸುವಿನ ಹಾಲಿನ ಬದಲಿಗೆ ಮೇಕೆ ಹಾಲು ಸೇವನೆ ಮಾಡಲು ಆಯ್ಕೆ ಮಾಡುತ್ತಾರೆ. ಮೇಕೆ ಹಾಲು ಹಸುವಿನ ಹಾಲಿಗಿಂತ ಪ್ರತಿ ಕಪ್‌ಗೆ ಸುಮಾರು 12 ಪ್ರತಿಶತ ಕಡಿಮೆ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಹಾಗಾಗಿ ಮೇಕೆ ಹಾಲನ್ನು ಲ್ಯಾಕ್ಟೋಸ್ ಅಲರ್ಜಿ ಮತ್ತು ಗ್ಯಾಸ್ಟ್ರಿಕ್ ರೋಗಿಗಳೂ ಸೇವಿಸಬಹುದು.
ಆಯುರ್ವೇದದಲ್ಲಿ ಮೇಕೆ ಹಾಲಿನ ಅನೇಕ ಪ್ರಯೋಜನಗಳು
ಆಯುರ್ವೇದದಲ್ಲಿ ಮೇಕೆ ಹಾಲಿನ ಕುರಿತು ಹಲವು ಪ್ರಯೋಜನಗಳಿವೆ. ಇದು ನವಜಾತ ಶಿಶುವಿಗೆ ಸಾಕಷ್ಟು ಸುರಕ್ಷಿತವಾಗಿದೆ. ಆಯುರ್ವೇದ ತಜ್ಞೆ ಡಾ.ರೇಖಾ ರಾಧಾಮಣಿ ಅವರ ಪ್ರಕಾರ, ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿ ಅನೇಕ ಜನರು ಮಗು ಜನಿಸಿದಾಗ ಮೊದಲು ಮೇಕೆ ಹಾಲು ಕುಡಿಸಲು ವ್ಯವಸ್ಥೆ ಮಾಡುತ್ತಾರೆ.
ಮೇಕೆ ಹಾಲು ಮಕ್ಕಳಿಗೆ ಪ್ರಯೋಜನಕಾರಿ
ಡಾ ರೇಖಾ ರಾಧಾಮಣಿ ಅವರು ಇತ್ತೀಚೆಗೆ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಮೇಕೆ ಹಾಲು ನವಜಾತ ಶಿಶುವಿಗೆ ಪ್ರಯೋಜನಕಾರಿ ಎಂದು ತಿಳಿಸಿದ್ದಾರೆ. 'ನೀವು ನನ್ನ ಅಜ್ಜಿಯನ್ನು ಕೇಳಿದರೆ, ಅವರು ಯಾವಾಗಲೂ ಮೇಕೆ ಹಾಲು ಮಕ್ಕಳಿಗೆ ಪ್ರಯೋಜನಕಾರಿ ಎಂದು ಹೇಳುತ್ತಾರೆ.
ಅವರಿಗೆ ಕಾರಣ ತಿಳಿದಿಲ್ಲ. ಆದರೂ ಸಹ ಮೇಕೆ ಹಾಲು ತುಂಬಾ ಒಳ್ಳೆಯದು ಎನ್ನುತ್ತಾರೆ. ಆಯುರ್ವೇದವು ನಮ್ಮ ಸಂಸ್ಕೃತಿಯಲ್ಲಿ ಹೀಗೆಯೇ ಸೇರಿಕೊಂಡಿದೆ” ಎಂದು ಬರೆದುಕೊಂಡಿದ್ದಾರೆ.
ಎದೆ ಹಾಲಿನಂತೆ ಮೇಕೆ ಹಾಲು ಆರೋಗ್ಯಕರ
ನವಜಾತ ಶಿಶುವಿಗೆ ಮೇಕೆ ಹಾಲು ಎದೆ ಹಾಲಿನಷ್ಟೇ ಆರೋಗ್ಯಕರ ಎಂದು ಡಾ ರೇಖಾ ರಾಧಾಮಣಿ ಅಭಿಪ್ರಾಯವಾಗಿದೆ. ಮೇಕೆ ಹಾಲು ತಾಯಿಯ ಹಾಲಿಗೆ ಉತ್ತಮ ಪರ್ಯಾಯ ಹಾಲು ಆಗಿದೆ ಎಂಬುದು ಅವರ ಮಾತು. ಇದು ಶಿಶುಗಳು ಮತ್ತು ಮಕ್ಕಳಲ್ಲಿ ಅತಿಸಾರ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೇಕೆ ಹಾಲಿನ ಗುಣಲಕ್ಷಣಗಳು
ಮೇಕೆ ಹಾಲಿನ ಗುಣಗಳನ್ನು ಅರಿಯಬೇಕಾದರೆ ಮೇಕೆಯ ಬಗ್ಗೆ ತಿಳಿಯಬೇಕು. ಮೇಕೆ ಯಾವಾಗಲೂ ಸಕ್ರಿಯ, ಸ್ಲಿಮ್ ಮತ್ತು ತೆಳ್ಳಗಿರುತ್ತದೆ. ಸಾಕಷ್ಟು ನೀರು ಕುಡಿಯುವುದು, ಹುಲ್ಲು ತಿನ್ನುತ್ತದೆ. ಹಾಗಾಗಿ ಮೇಕೆ ಹಾಲು ತಂಪು ಮತ್ತು ಪೋಷಕಾಂಶಗಳಿಂದ ಕೂಡಿದೆ.
ಇದನ್ನೂ ಓದಿ: ಮಲಗಿದಾಗ ಅತಿಯಾಗಿ ಗೊರಕೆ ಹೊಡೆಯುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ!
ಮೇಕೆ ಹಾಲಿನ ಪ್ರಯೋಜನಗಳು
ದೇಹವನ್ನು ತೆಳ್ಳಗೆ ಮಾಡಲು ಸಹಕಾರಿ.
ದೇಹದ ಕ್ರಿಯಾಶೀಲತೆಗೆ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ.
ದೌರ್ಬಲ್ಯ ತೊಡೆದು ಹಾಕಲು ಇದು ಪರಿಣಾಮಕಾರಿ.
ಕಫ ಕಡಿಮೆ ಮಾಡಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ