ಮಧುಮೇಹ (Diabetes) ಒಮ್ಮೆ ವ್ಯಕ್ತಿಯ (Person) ಜೀವನದಲ್ಲಿ (Life) ಎಂಟ್ರಿ ಕೊಟ್ಟರೆ ಸಾಯುವವರೆಗೆ (Death) ಹೋಗುವುದಿಲ್ಲ. ಒಮ್ಮೆ ವ್ಯಕ್ತಿಯ ಜೀವನದಲ್ಲಿ ಮಧುಮೇಹ ಕಾಲಿಟ್ಟ ನಂತರ ಅದನ್ನು ಸಂಪೂರ್ಣವಾಗಿ ಗುಣಪಡಿಸಲು (Heal) ಸಾಧ್ಯವೇ ಇಲ್ಲ. ಈ ಕಾಯಿಲೆಯಲ್ಲಿ ಇನ್ಸುಲಿನ್ ದೇಹದಲ್ಲಿ ಸಂಪೂರ್ಣವಾಗಿ ಉತ್ಪತ್ತಿ ಆಗುವುದಿಲ್ಲ. ಅಥವಾ ಕಡಿಮೆ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪತ್ತಿ ಆಗುತ್ತದೆ. ಮಧುಮೇಹದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ಸರಿಯಾಗಿ ನಿರ್ವಹಿಸುವುದು ತುಂಬಾ ಮುಖ್ಯ. ಮಧುಮೇಹ ದೇಹದಲ್ಲಿ ಉಂಟಾಗಲು ಹಲವು ಕಾರಣಗಳು ಅದರಲ್ಲಿ ಮುಖ್ಯ ಮೂರು ಕಾರಣಗಳೆಂದರೆ ತಪ್ಪಾದ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿ, ಚಟುವಟಿಕೆ ರಹಿತ ಜೀವನ ಈ ಮೂರು ವಿಷಯಗಳು ಮನುಷ್ಯನ ಆರೋಗ್ಯಕ್ಕೆ ಕಂಟಕ ತಂದೊಡ್ಡುತ್ತವೆ.
ಮಧುಮೇಹ ಬಂದವರು ಸಂಪೂರ್ಣವಾಗಿ ತಮ್ಮ ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಲು ಹಲವು ಕಾರಣಗಳು ಇವೆ. ಆದರೆ ಈ ಸಮಸ್ಯೆ ಹೆಚ್ಚುತ್ತ ಹೋಗಲು ಕೆಲವು ವಿಶೇಷ ವಿಷಯಗಳು ಹೆಚ್ಚು ಕೆಲಸ ಮಾಡುವ ಮೂಲಕ ಕಾರಣವಾಗಿವೆ. ಮಧುಮೇಹದಲ್ಲಿ ಮೂರು ವಿಧಗಳಿವೆ - ಟೈಪ್ 1, ಟೈಪ್ 2 ಮತ್ತು ಗರ್ಭಾವಸ್ಥೆಯ ಮಧುಮೇಹ.
ಟೈಪ್ 1 ಮಧುಮೇಹಕ್ಕೆ ಮುಖ್ಯ ಕಾರಣ
ಟೈಪ್ 1 ಮಧುಮೇಹದಲ್ಲಿ, ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆ ಆಗುವುದೇ ಇಲ್ಲ. ಇನ್ಸುಲಿನ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಕೆಲಸ ಮಾಡುತ್ತದೆ. ಇದು ಇಲ್ಲದೆ ಹೋದರೆ ದೇಹದಲ್ಲಿ ಗ್ಲೂಕೋಸ್ ಮಟ್ಟ ತುಂಬಾ ಹೆಚ್ಚಾಗುತ್ತದೆ. ಇದು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಮತ್ತು ಇದರಿಂದ ಇಡೀ ದೇಹಕ್ಕೆ ಹಾನಿ ಉಂಟಾಗುತ್ತದೆ.
ಇದನ್ನೂ ಓದಿ: ಚರ್ಮದ ಟ್ಯಾಗ್ ಮತ್ತು ನರಹುಲಿ ಸಮಸ್ಯೆ ನಿವಾರಣೆಗೆ ನೈಸರ್ಗಿಕ ಮನೆಮದ್ದು ಟ್ರೈ ಮಾಡಿ
ಟೈಪ್ 1 ಮಧುಮೇಹವು ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ. ಈ ಪ್ರತಿಕ್ರಿಯೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯ ಜೀವಕೋಶಗಳನ್ನು ನಾಶಪಡಿಸುತ್ತದೆ. ಇವುಗಳನ್ನು ಬೀಟಾ ಕೋಶಗಳು ಎಂದು ಕರೆಯುತ್ತಾರೆ. ನಮ್ಮ ಸುತ್ತಲಿನ ವೈರಸ್ಗಳು ಟೈಪ್ 1 ಮಧುಮೇಹಕ್ಕೆ ಕಾರಣ ಆಗುತ್ತವೆ.
ಯಾವ ಕಾರಣದಿಂದ ಟೈಪ್ -2 ಮಧುಮೇಹ ಹೆಚ್ಚಾಗುತ್ತದೆ
ಟೈಪ್ 2 ಮಧುಮೇಹ ಉಂಟಾಗಲು ಮುಖ್ಯ ಕಾರಣ ಬೊಜ್ಜು. ಹೆಚ್ಚಿನ ಜನರು ತಮ್ಮ ಯೌವನದಲ್ಲಿ ಈ ಸಮಸ್ಯೆ ಎದುರಿಸುತ್ತಾರೆ. ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿ , ಜಂಕ್ ಫುಡ್ ತಿನ್ನುವುದು, ವ್ಯಾಯಾಮದ ಕೊರತೆ, ಅನುವಂಶೀಯತೆಯಿಂದಾಗಿ ಬೊಜ್ಜು ಶೀಘ್ರವಾಗಿ ಹೆಚ್ಚಾಗುತ್ತದೆ. ಮತ್ತು ಈ ಕಾರಣದಿಂದಾಗಿ ಯುವಕರು ಟೈಪ್ 2 ಮಧುಮೇಹಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ.
ಇದರ ಜೊತೆಗೆ ಕೃತಕ ಸಿಹಿಕಾರಕಗಳ ಸೇವನೆ ಟೈಪ್ 2 ಮಧುಮೇಹ ಹೆಚ್ಚಾಗಲು ಕೆಲಸ ಮಾಡುತ್ತದೆ. ಇದರಿಂದ ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಲ್ಲಿ ಆಕ್ಸಿಡೇಟಿವ್ ಒತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣ ಇನ್ಸುಲಿನ್ ಸ್ರವಿಸುವಿಕೆ ಗಮನಾರ್ಹವಾಗಿ ಹೆಚ್ಚುತ್ತದೆ.
ಗರ್ಭಾವಸ್ಥೆಯ ಮಧುಮೇಹ ಏಕೆ ಸಂಭವಿಸುತ್ತದೆ
ಗರ್ಭಾವಸ್ಥೆಯಲ್ಲಿ ಮಹಿಳೆಯರಲ್ಲಿ ಗರ್ಭಾವಸ್ಥೆಯ ಮಧುಮೇಹ ಉಂಟಾಗುತ್ತದೆ. ಕೆಲವೊಮ್ಮೆ ಈಗಾಗಲೇ ಮಧುಮೇಹ ಇಲ್ಲದಿರುವ ಮಹಿಳೆಯರು ಗರ್ಭಾವಸ್ಥೆಯ ಮಧುಮೇಹ ಎದುರಿಸಬೇಕಾಗುತ್ತದೆ.
ಗರ್ಭಾವಸ್ಥೆಯಲ್ಲಿ ರಕ್ತದ ಗ್ಲೂಕೋಸ್ ಪ್ರಮಾಣ ಗಮನಾರ್ಹವಾಗಿ ಹೆಚ್ಚಾದಾಗ ಇದು ಸಂಭವಿಸುತ್ತದೆ. ತಾಯಿಯ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾದರೆ, ಅದು ಹೊಕ್ಕುಳ ಬಳ್ಳಿಯ ಮೂಲಕ ಮಗುವಿನ ರಕ್ತ ಸಹ ತಲುಪುತ್ತದೆ.
ಇದನ್ನೂ ಓದಿ: ಈ ಕೆಲವು ಸಸ್ಯಗಳಲ್ಲಿವೆ ಸೂಪರ್ ಪವರ್! ತೂಕ ಇಳಿಸಿ ಆರೋಗ್ಯ ರಕ್ಷಿಸುತ್ತೆ
ಹೀಗಾಗಿ ಮಗುವಿನ ರಕ್ತದ ಸಕ್ಕರೆ ಮಟ್ಟ ಹೆಚ್ಚುತ್ತದೆ. ಗರ್ಭಾವಸ್ಥೆಯ ಮಧುಮೇ ಮಗುವಿನಲ್ಲಿ ಅನೇಕ ಜನ್ಮ ದೋಷಕ್ಕೆ ಕಾರಣ ಆಗುತ್ತದೆ. ಹಾಗಾಗಿ ಗರ್ಭಿಣಿಯರು ರಕ್ತದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ