Androgen And Health: ಮಹಿಳೆಯರಲ್ಲಿ ಪುರುಷ ಹಾರ್ಮೋನ್ ಮಟ್ಟವು ಹೇಗೆ ಹೆಚ್ಚಾಗುತ್ತದೆ; ಅದರ ಲಕ್ಷಣಗಳೇನು?

ಪುರುಷರು ಹೆಚ್ಚು ಆಂಡ್ರೋಜೆನ್ಗಳ ಉತ್ಪತ್ತಿ ಹೊಂದುತ್ತಾರೆ. ಟೆಸ್ಟೋಸ್ಟೆರಾನ್ ಅತ್ಯಂತ ಸಾಮಾನ್ಯವಾದ ಆಂಡ್ರೊಜೆನ್ ಆಗಿದೆ. ಅಂತಹ ಸ್ಥಿತಿಯಲ್ಲಿ ಆಂಡ್ರೊಜೆನ್ ಮಟ್ಟವು ಮಹಿಳೆಯರಲ್ಲಿ ಹೆಚ್ಚಾದರೆ ನಂತರ ಅನೇಕ ಅನಗತ್ಯ ಬದಲಾವಣೆಗಳು ಉಂಟಾಗುವುದು ಕಂಡು ಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆಂಡ್ರೋಜೆನ್ಗಳು (Androgen) ಲೈಂಗಿಕ ಹಾರ್ಮೋನುಗಳ ಒಂದು ಗುಂಪು. ಈ ಹಾರ್ಮೋನ್ ಸಹಾಯದಿಂದ ಒಬ್ಬ ವ್ಯಕ್ತಿಯು (Person) ಪ್ರೌಢಾವಸ್ಥೆಯ (Puberty) ಹಂತ ತಲುಪುತ್ತಾನೆ. ಇದರ ಜೊತೆಗೆ ಈ ಹಾರ್ಮೋನುಗಳು ಸಂತಾನೋತ್ಪತ್ತಿ ಆರೋಗ್ಯ (Health) ಮತ್ತು ದೇಹದ (Body) ಬೆಳವಣಿಗೆಯಲ್ಲಿ ಸಾಕಷ್ಟು ಪ್ರಮುಖ ಪಾತ್ರ ವಹಿಸುತ್ತವೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ದೇಹದಲ್ಲಿ ಆಂಡ್ರೋಜೆನ್ಗಳ ಉತ್ಪತ್ತಿ ಆಗುತ್ತದೆ. ಆದರೆ ಪುರುಷರು ಹೆಚ್ಚು ಆಂಡ್ರೋಜೆನ್ಗಳ ಉತ್ಪತ್ತಿ ಹೊಂದುತ್ತಾರೆ. ಟೆಸ್ಟೋಸ್ಟೆರಾನ್ ಅತ್ಯಂತ ಸಾಮಾನ್ಯವಾದ ಆಂಡ್ರೊಜೆನ್ ಆಗಿದೆ. ಅಂತಹ ಸ್ಥಿತಿಯಲ್ಲಿ ಆಂಡ್ರೊಜೆನ್ ಮಟ್ಟವು ಮಹಿಳೆಯರಲ್ಲಿ ಹೆಚ್ಚಾದರೆ ನಂತರ ಅನೇಕ ಅನಗತ್ಯ ಬದಲಾವಣೆಗಳು ಉಂಟಾಗುವುದು ಕಂಡು ಬರುತ್ತದೆ.

    ಮಹಿಳೆಯರಲ್ಲಿ ಆಂಡ್ರೊಜೆನ್ ಮಟ್ಟವು ಹೇಗೆ ಹೆಚ್ಚಾಗುತ್ತದೆ?

    ಇದರಲ್ಲಿ ಮೊಡವೆ, ಮುಖದ ಕೂದಲು, ಅನಿಯಮಿತ ಅವಧಿ, ಬಂಜೆತನ, ಸ್ತನ ಗಾತ್ರ ಕಡಿಮೆಯಾಗುವುದು ಮತ್ತು ಇತರ ಸಮಸ್ಯೆಗಳು ಸೇರಿವೆ. ಮಹಿಳೆಯರಲ್ಲಿ ಆಂಡ್ರೊಜೆನ್ ಮಟ್ಟವು ಹೇಗೆ ಹೆಚ್ಚಾಗುತ್ತದೆ? ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು ಇನ್ಸುಲಿನ್ ಪ್ರತಿರೋಧವು ಹೇಗೆ ಕಾರಣವಾಗುತ್ತದೆ ಎಂದು ತಿಳಿಯೋಣ.

    ಹೋಮಿಯೋಪತಿ ವೈದ್ಯೆ ಸ್ಮಿತಾ ಭೋರ್ ಪಾಟೀಲ್, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಹಿಳೆಯರಲ್ಲಿ ಹೆಚ್ಚಿನ ಆಂಡ್ರೊಜೆನ್‌ನಿಂದ ಕಂಡು ಬರುವ ಸಂಕೇತಗಳನ್ನು ಕಡಿಮೆ ಮಾಡಲು ಪರಿಹಾರ ಹಂಚಿಕೊಂಡಿದ್ದಾರೆ. ಕೆಲವು ಆಹಾರಗಳು ರಕ್ತದಿಂದ ಹೆಚ್ಚುವರಿ ಆಂಡ್ರೋಜೆನ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಹೆಚ್ಚಿನ ಆಂಡ್ರೊಜೆನ್ ಸಮಸ್ಯೆಯಿಂದ ನೀವು ತೊಂದರೆ, ಸಮಸ್ಯೆಗೆ ತುತ್ತಾಗುತ್ತಿದ್ದರೆ ಈ ಆಹಾರವನ್ನು ನಿಯಮಿತವಾಗಿ ಸೇವಿಸುವುದು ನಿಮಗೆ ಪ್ರಯೋಜನ ನೀಡುತ್ತದೆ ಎಂದು ಸಾಬೀತುಪಡಿಸಬಹುದು.

    ಅಗಸೆ ಬೀಜಗಳು ಆಂಡ್ರೊಜೆನ್ ನ್ನು ನಿಯಂತ್ರಿಸುತ್ತವೆ

    ಆಂಡ್ರೊಜೆನ್ ಹೆಚ್ಚಾದಾಗ ಅದರ ರೋಗ ಲಕ್ಷಣಗಳನ್ನು ನಿಯಂತ್ರಿಸಲು ಅಗಸೆಬೀಜಗಳು ಕೆಲಸ ಮಾಡುತ್ತವೆ. ಏಕೆಂದರೆ ಅಗಸೆ ಬೀಜವು ಲಿಗ್ನಾನ್ಸ್ ಎಂಬ ಸಂಯುಕ್ತಗಳಲ್ಲಿ ಅಧಿಕವಾಗಿದೆ. ಇದು ಟೆಸ್ಟೋಸ್ಟೆರಾನ್ ಅನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ.

    ಬೀಜಗಳು ಹೆಚ್ಚಿನ ಆಂಡ್ರೊಜೆನ್ ಲಕ್ಷಣಗಳನ್ನು ನಿವಾರಿಸುತ್ತದೆ

    ಹಾರ್ಮೋನುಗಳು ಅಸಮತೋಲನಗೊಂಡಾಗ ಬೀಜಗಳು ವಿಶೇಷವಾಗಿ ಬಾದಾಮಿ ಮತ್ತು ವಾಲ್ನಟ್ಗಳನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ವಾಸ್ತವದಲ್ಲಿ ಇದು ಬಹು ಅಪರ್ಯಾಪ್ತ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಗ್ರೀನ್ ಟೀ ಆಂಡ್ರೊಜೆನ್ ಮಟ್ಟ ಕಡಿಮೆ ಮಾಡುತ್ತದೆ

    ಹಸಿರು ಚಹಾವು ಆಂಟಿಆಂಡ್ರೊಜೆನ್ ಪರಿಣಾಮ ಹೊಂದಿದೆ. ಆದ್ದರಿಂದ ಇದು ಮಹಿಳೆಯರಲ್ಲಿ ಹೆಚ್ಚಿದ ಟೆಸ್ಟೋಸ್ಟೆರಾನ್ ನ್ನು ಕಡಿಮೆ ಮಾಡುತ್ತದೆ. ವಾಸ್ತವದಲ್ಲಿ ಹಸಿರು ಚಹಾ ಎಲೆಗಳಲ್ಲಿ ಎಪಿಗಲ್ಲೊಕೇಟ್ಗಲೇಟ್ ಇರುತ್ತದೆ. ಇದು ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಮಾಡುತ್ತದೆ.

    ದಾಲ್ಚಿನ್ನಿ

    ದೇಹದ ಹೆಚ್ಚಿನ ಆಂಡ್ರೊಜೆನ್ ಮುಖ್ಯವಾಗಿ ಇನ್ಸುಲಿನ್ ಪ್ರತಿರೋಧಕ್ಕೆ ಸಂಬಂಧಿಸಿದೆ. ಅಂತಹ ಸ್ಥಿತಿಯಲ್ಲಿ, ದಾಲ್ಚಿನ್ನಿ ನೀರು ನಿಮಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ನೀರು ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿನ ಆಂಡ್ರೊಜೆನ್ ಮಟ್ಟ ಸ್ಥಿರ ಮಾಡುತ್ತದೆ.

    ಸ್ಪಿಯರ್ಮಿಂಟ್ ಚಹಾವು ಹೆಚ್ಚಿನ ಆಂಡ್ರೊಜೆನ್ನಲ್ಲಿ ಪ್ರಯೋಜನಕಾರಿ

    ನಿಮ್ಮ ದೇಹದಲ್ಲಿ ಟೆಸ್ಟೋಸ್ಟೆರಾನ್ ರೋಗ ಲಕ್ಷಣಗಳು ನೀವು ಅನುಭವಿಸುತ್ತಿದ್ದರೆ, ಅದನ್ನು ತೊಡೆದು ಹಾಕಲು ಅಥವಾ ಅದನ್ನು ಕಡಿಮೆ ಮಾಡಲು ನೀವು ಪ್ರತಿದಿನ ಪುದೀನಾ ಗಿಡಮೂಲಿಕೆ ಚಹಾ ಕುಡಿಯಬಹುದು.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಹೆಚ್ಚಿನ ಆಂಡ್ರೊಜೆನ್ ಹೊಂದಿರುವ ಕೊಬ್ಬಿನ ಮೀನು ಸೇವಿಸಿ

    ಒಮೆಗಾ 3 ಪೂರಕವು ಟೆಸ್ಟೋಸ್ಟೆರಾನ್ ಮಟ್ಟ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಕೊಬ್ಬಿನ ಮೀನುಗಳು ವಿಶೇಷವಾಗಿ ಸಾಲ್ಮನ್ ಮತ್ತು ಮ್ಯಾಕೆರೆಲ್ ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲಗಳಾಗಿವೆ.
    Published by:renukadariyannavar
    First published: