Weight Loss Story: ಬರೋಬ್ಬರಿ 158 ಕೆಜಿ ತೂಕ ಹೊಂದಿದ್ದ ಮಹಿಳೆ 70 ಕೆಜಿ ತೂಕ ಇಳಿಸಿಕೊಂಡಿದ್ದು ಹೇಗೆ?

ಲಾಕ್‌ಡೌನ್‌ನಲ್ಲಿ 70 ಕೆಜಿ ತೂಕ ಇಳಿಸಿದ ಮಹಿಳೆಯ ಹೆಸರು ಮೆಲಿಸ್ಸಾ ವಿಲಿಯಮ್ಸ್. ಅವರು ಆಸ್ಟ್ರೇಲಿಯಾದ ಸೌತ್ ವೇಲ್ಸ್‌ನ ಬ್ರಿಡ್ಜೆಂಡ್‌ನಿಂದ ಬಂದವರು. ವಾಸ್ತವವಾಗಿ ಮೆಲಿಸ್ಸಾ ತನ್ನ ನಿಶ್ಚಿತ ವರ ಕ್ರಿಸ್‌ನನ್ನು 2020 ರ ಬೇಸಿಗೆಯಲ್ಲಿ ಮದುವೆಯಾಗಬೇಕಿತ್ತು.

70 ಕೆಜಿ ತೂಕ ಇಳಿಸಿದ ಮಹಿಳೆ ಮೆಲಿಸ್ಸಾ ವಿಲಿಯಮ್ಸ್

70 ಕೆಜಿ ತೂಕ ಇಳಿಸಿದ ಮಹಿಳೆ ಮೆಲಿಸ್ಸಾ ವಿಲಿಯಮ್ಸ್

  • Share this:
    ಕೊರೋನಾ (Corona) ಸಾಂಕ್ರಾಮಿಕ ಉಂಟಾದಾಗ ಯಾರೂ ಮನೆಯಿಂದ (Home) ಹೊರಗೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಆಗ ಬಹುತೇಕ ಜನರು (People) ಮನೆಯಲ್ಲೇ ಉಳಿಯುವಂತಾಗಿತ್ತು. ಹಾಗಾಗಿ ಮನೆಯಲ್ಲಿರುತ್ತಿದ್ದ ಜನರ ಜೀವನಶೈಲಿ (Lifestyle), ಆಹಾರ ಕ್ರಮ (Food) ಎಲ್ಲವೂ ಸಾಕಷ್ಟು ಜಡ ಹಾಗೂ ಕಳಪೆಯಾಗಿತ್ತು. ಕೆಟ್ಟ ಜೀವನಶೈಲಿ, ಒತ್ತಡ, ಆಹಾರ ಪದ್ಧತಿಯಿಂದಾಗಿ ಅನೇಕ ಜನರ ತೂಕ ಹೆಚ್ಚಾಯಿತು. ತೂಕ ಹೆಚ್ಚಾದ ಕಾರಣ ಎಲ್ಲರೂ ಸಾಮಾನ್ಯವಾಗಿ ತೂಕ ಇಳಿಕೆ ಮಾಡುವ ಬಗ್ಗೆ ಪ್ರಯತ್ನ ನಡೆಸತೊಡಗಿದರು. ಹೀಗೆ ಲಾಕ್‌ಡೌನ್‌ನಲ್ಲಿ ತೂಕ ಹೆಚ್ಚಾಗಲು ಬಿಡದೇ ಕಟ್ಟು ನಿಟ್ಟಿನ ಕ್ರಮದೊಂದಿಗೆ ತಮ್ಮ ಭಾರವಾದ ದೇಹವನ್ನು ಸ್ಲಿಮ್ ಆಗಿಸಿಕೊಂಡಿರುವ ಮಹಿಳೆಯೊಬ್ಬರು ಇದ್ದಾರೆ.

    ಲಾಕ್‌ಡೌನ್‌ನಲ್ಲಿ ಅವರು ತಮ್ಮ ತೂಕವನ್ನು ಸುಮಾರು 70 ಕೆಜಿ ಕಡಿಮೆ ಮಾಡಿದ ಮಹಿಳೆ ಯಾರು ಮತ್ತು ಅವಳು ತೂಕವನ್ನು ಹೇಗೆ ಕಡಿಮೆ ಮಾಡಿದಳು ಎಂಬುದನ್ನು ತಿಳಿಯೋಣ.

    70 ಕೆಜಿ ತೂಕ ಕಳೆದುಕೊಂಡ ಮಹಿಳೆ ಯಾರು?

    ಲಾಕ್‌ಡೌನ್‌ನಲ್ಲಿ 70 ಕೆಜಿ ತೂಕ ಇಳಿಸಿದ ಮಹಿಳೆಯ ಹೆಸರು ಮೆಲಿಸ್ಸಾ ವಿಲಿಯಮ್ಸ್. ಅವರು ಆಸ್ಟ್ರೇಲಿಯಾದ ಸೌತ್ ವೇಲ್ಸ್‌ನ ಬ್ರಿಡ್ಜೆಂಡ್‌ನಿಂದ ಬಂದವರು. ವಾಸ್ತವವಾಗಿ ಮೆಲಿಸ್ಸಾ ತನ್ನ ನಿಶ್ಚಿತ ವರ ಕ್ರಿಸ್‌ನನ್ನು 2020 ರ ಬೇಸಿಗೆಯಲ್ಲಿ ಮದುವೆಯಾಗಬೇಕಿತ್ತು. ಆದರೆ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಮದುವೆಯನ್ನು ಮುಂದೂಡಲಾಯಿತು. ಜೊತೆಗೆ ಹೆಚ್ಚಿದ ತೂಕದಿಂದಾಗಿ ಮೆಲಿಸ್ಸಾ ತುಂಬಾ ಒತ್ತಡದಲ್ಲಿದ್ದಳು.

    ಇದನ್ನೂ ಓದಿ: ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ವಾಲ್ ನಟ್ ಸಿಪ್ಪೆಯಿಂದ ಹೀಗೆ ಮಾಡಿ, ಪ್ರಯೋಜನ ಪಡೆಯಿರಿ

    ಹಾಗಾಗಿ ಮೆಲಿಸ್ಸಾ ಲಾಕ್ ಡೌನ್ ಸಮಯವನ್ನು ಫಿಟ್ ಆಗಲು ಬಳಕೆ ಮಾಡಿದಳು. ಜೊತೆಗೆ ಸುಮಾರು 70 ಕೆಜಿ ತೂಕ ಕಡಿಮೆ ಮಾಡಿದಳು. 27 ವರ್ಷದ ಮೆಲಿಸ್ಸಾ 2020 ರಲ್ಲಿ ಮದುವೆಯಾಗಲು ಹೊರಟಾಗ ಆಕೆಯ ತೂಕ 158 ಕೆಜಿ ಇತ್ತು. ಈಗ ಮೇ 2022 ರಲ್ಲಿ ಅವರ ತೂಕ 88 ಕೆ.ಜಿ ಇದೆ. ಆಕೆಯ ದೇಹದಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಮೆಲಿಸ್ಸಾ ಈಗ ಹೊಸ ಮದುವೆ ಡ್ರೆಸ್ ಕೂಡ ಖರೀದಿ ಮಾಡಿದ್ದಾಳೆ.

    ಮೆಲಿಸ್ಸಾ ತೂಕ ಕಳೆದುಕೊಂಡಿದ್ದು ಹೇಗೆ?

    ಸಂದರ್ಶನವೊಂದರಲ್ಲಿ ಮೆಲಿಸ್ಸಾ ಹೇಳಿರುವ ಪ್ರಕಾರ, ಆಹಾರವನ್ನು ತುಂಬಾ ಇಷ್ಟ ಪಡುತ್ತೇನೆ. ವಾರದಲ್ಲಿ ಕನಿಷ್ಠ 4 ಬಾರಿಯಾದರೂ ಹೊರಗಿನಿಂದ ಆಹಾರ ಸೇವಿಸುತ್ತಿದ್ದೆ. ಆಹಾರದಲ್ಲಿ ಹೆಚ್ಚು ಸಕ್ಕರೆ ಪದಾರ್ಥಗಳು ಮತ್ತು ಜಂಕ್ ಫುಡ್ ಇರುತ್ತಿತ್ತು.

    ಹೀಗಾಗಿ ನಾನು ಚಿಂತಿತಳಾಗಿದ್ದೆ. ಆದರೆ ಲಾಕ್‌ಡೌನ್ ನನ್ನನ್ನು ತೂಕ ಇಳಿಸಿಕೊಳ್ಳಲು ಪ್ರೇರೇಪಿಸಿತು. ತೂಕ ಇಳಿಸಿದ ನಂತರ ದೇಹದಿಂದ ಹೆಚ್ಚುವರಿ ಚರ್ಮ ತೆಗೆದು ಹಾಕಲು ನಾನು ಆಗಸ್ಟ್ 2021 ರಲ್ಲಿ ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ.

    ಮೆಲಿಸ್ಸಾ Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ . ಆಹಾರ ಮತ್ತು ಜೀವನಕ್ರಮದ ಫೋಟೋ ಶೇರ್ ಮಾಡುತ್ತಾರೆ. ಆಹಾರದ ಮೇಲೆ ಮೆಲಿಸ್ಸಾ ನಿಯಂತ್ರಣ ಹೊಂದಿದ್ದರು. ಮನೆಯಲ್ಲಿ ದೈಹಿಕ ಚಟುವಟಿಕೆ ಪ್ರಾರಂಭಿಸಿದರು. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಿತು.

    ನನ್ನನ್ನು ನಾನು ಉತ್ತಮಗೊಳಿಸಲು ಬಯಸುತ್ತೇನೆ

    ನಾನು ಒಮ್ಮೆ ನನ್ನ ಮಕ್ಕಳೊಂದಿಗೆ ಡ್ರೇಟನ್ ಮ್ಯಾನರ್‌ನಲ್ಲಿರುವ ಥಾಮಸ್ ಲ್ಯಾಂಡ್‌ಗೆ ಹೋಗಿದ್ದೆ. ಅಲ್ಲಿ ನಾನು ಮಗನೊಂದಿಗೆ ಸವಾರಿ ಮಾಡಬೇಕೆಂದು ಬಯಸಿದ್ದೆ. ಆದರೆ ನನ್ನ ತೂಕದಿಂದಾಗಿ ಸವಾರನು ನನ್ನನ್ನು ಕರೆದುಕೊಂಡು ಹೋಗಲಿಲ್ಲ. ಅದು ನನಗೆ ಸಾಕಷ್ಟು ಅವಮಾನ ಎದುರಿಸುವಂತೆ ಮಾಡಿತ್ತು.

    ಇದನ್ನೂ ಓದಿ: ಮಹಿಳೆಯರ ಮುಖದ ಮೇಲಿನ ಅನಗತ್ಯ ಕೂದಲು ತೆಗೆದು ಹಾಕುವುದು ಹೇಗೆ?

    ನನ್ನ ರಕ್ತದೊತ್ತಡ ತುಂಬಾ ಹೆಚ್ಚಿತ್ತು ಮತ್ತು ನನಗೆ ನಡೆಯಲು ಸಾಧ್ಯವಾಗಲಿಲ್ಲ. ನನ್ನ ಬೆನ್ನಿನಲ್ಲಿ ಯಾವಾಗಲೂ ನೋವು ಇತ್ತು. ನನ್ನ ಆರೋಗ್ಯವು ನಿಧಾನವಾಗಿ ಕ್ಷೀಣಿಸುತ್ತಿತ್ತು. ಹಾಗಾಗಿ ಬದಲಾದೆ.
    Published by:renukadariyannavar
    First published: