ಕ್ರಿಸ್ಮಸ್ ಹಬ್ಬಕ್ಕೆ (Christmas Festival) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಅದಾಗ್ಯೂ ಕ್ರಿಸ್ಮಸ್ ವಿಶ್ವದೆಲ್ಲಡೆ ಡಿಸೆಂಬರ್ ತಿಂಗಳಿನಲ್ಲಿಯೇ ಆರಂಭವಾಗಿದೆ ಎಂಬುದಂತೂ ನಿಜ. ಕ್ರಿಸ್ಮಸ್ನಲ್ಲಿ ಕ್ರಿಸ್ಮಸ್ ಟ್ರೀಗೆ ವಿಶೇಷವಾದ ಸ್ಥಾನಮಾನವಿದೆ. ಹಾಗೆಯೇ ಟ್ರೀಗೆ ಮಾಡುವ ಅಲಂಕಾರ ತಿಂಗಳ ಹಿಂದೆಯೇ ಆರಂಭವಾಗುತ್ತದೆ. ಹೆಚ್ಚಿನ ಮನೆಗಳಲ್ಲಿ, ಸಂಸ್ಥೆಗಳಲ್ಲಿ ಈಗಾಗಲೇ ಅಂದವಾಗಿ ಸಿಂಗಾರಗೊಂಡ ಕ್ರಿಸ್ಮಸ್ ಟ್ರೀ ಕಣ್ಮನ ಸೆಳೆಯುವಂತಿರುತ್ತದೆ. ಬಜೆಟ್ನಲ್ಲಿಯೇ ಕ್ರಿಸ್ಮಸ್ ಟ್ರೀ ಹಾಗೂ ಮನೆಯ ಅಲಂಕಾರವನ್ನು (Decoration) ಹೇಗೆ ಮಾಡಬಹುದು ಎಂಬುದಕ್ಕೆ ಪರಿಣಿತರ ಸಲಹೆಗಳನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಈ ಸಲಹೆಗಳು ನಿಮಗೆ ಖಂಡಿತ ಪ್ರಯೋಜನಕಾರಿಯಾಗಲಿದೆ.
ಕಡಿಮೆ ವಸ್ತುಗಳನ್ನು ಬಳಸಿ ಟ್ರೀಯ ಅಲಂಕಾರ
ಕ್ರಿಸ್ಮಸ್ ಅಲಂಕಾರ ಹೇಗಿರಬೇಕು ಎಂಬುದಕ್ಕೆ ಕೆಲವೊಂದು ಸಲಹೆಗಳನ್ನು ಇಪ್ಸಾ ಗುಪ್ತಾ ನೀಡಿದ್ದಾರೆ. ಈವೆಂಟ್ ಪ್ಲಾನರ್ ಆಗಿರುವ ಇಪ್ಸಾ ROOMance With Ipsa ದ ಒಡತಿಯೂ ಹೌದು. ಕ್ರಿಸ್ಮಸ್ ಬಂದಿತೆಂದರೆ ಕ್ರಿಸ್ಮಸ್ ಟ್ರೀಯ ಅಲಂಕಾರ ಹೆಚ್ಚಿನವರು ಮಾಡುತ್ತಾರೆ ಆದರೆ ಅದಕ್ಕಾಗಿ ಹೆಚ್ಚಿನ ಖರ್ಚುಮಾಡಬೇಕಾಗಿಲ್ಲ ಎಂಬುದು ಇಪ್ಸಾ ಮಾತಾಗಿದೆ. ಪೇಪರ್, ಒರಿಗಮಿ, ಬಟ್ಟೆ, ಕೆಲವು ಆಭರಣಗಳೊಂದಿಗೆ ಟ್ರೀಯ ಅಲಂಕಾರ ಮಾಡಬಹುದು ಎಂಬುದು ಇಪ್ಸಾ ಮಾತಾಗಿದೆ.
ಅಲಂಕಾರಕ್ಕೆ ಟಿಪ್ಸ್
ನಿಮ್ಮ ಸುತ್ತಲೂ ಇರುವ ಸಾಮಾಗ್ರಿಗಳನ್ನೇ ಅಲಂಕಾರಿಕ ವಸ್ತುಗಳನ್ನಾಗಿ ಮಾರ್ಪಡಿಸಿಕೊಂಡು ಕ್ರಿಸ್ಮಸ್ಗೆ ಮನೆಯನ್ನು ಹಾಗೂ ಕ್ರಿಸ್ಮಸ್ ಟ್ರಿಯ ಅಲಂಕಾರವನ್ನು ಮಾಡಬಹುದು ಎಂಬುದು ಅವರ ಮಾತಾಗಿದೆ.
ಒಣಗಿದ ಕಿತ್ತಳೆ ಹೋಳು ಹಾಗೂ ದಾಲ್ಚಿನ್ನಿ ತುಂಡುಗಳನ್ನು ಬಳಸಿ ಇತ್ತೀಚೆಗೆ ತಾನೇ ಬೇಕರಿಯನ್ನು ವಿನ್ಯಾಸಗೊಳಿಸಿರುವುದಾಗಿ ಹೇಳಿರುವ ಇಪ್ಸಾ ನಾವು ಮಾಡುವ ಕೆಲಸದಲ್ಲಿ ನಿಷ್ಟೆ ಹಾಗೂ ಪ್ರೀತಿ ಇದ್ದರೆ ಆ ಕೆಲಸ ಸುಂದರವಾಗಿಯೇ ಕಾಣುತ್ತದೆ ಎಂದು ತಿಳಿಸಿದ್ದಾರೆ. ವಸ್ತುಗಳನ್ನು ಎದ್ದುಗಾಣುವಂತೆ ಇರಿಸುವುದು, ಲೇಯರ್ಗಳಲ್ಲಿ ಜೋಡಿಸುವುದು, ಬೇರೆ ಬೇರೆ ಎತ್ತರಗಳಲ್ಲಿ ವಸ್ತುಗಳನ್ನು ಹೊಂದಿಸುವುದರಿಂದ ನೋಡುಗರ ಕಣ್ಣು ಅತ್ತಿತ್ತ ಚಲಿಸುತ್ತದೆ ಇದರಿಂದ ಆ ವಿನ್ಯಾಸ ಸುಂದರವಾಗಿ ಕಾಣುತ್ತದೆ ಎಂದು ತಿಳಿಸಿದ್ದಾರೆ.
ವಿಂಟೇಜ್ ಮಾದರಿಯ ಅಲಂಕಾರ
ವಿಂಟೇಜ್ ಅಥವಾ ಹಳೆಯ ಶಾಲಾ ಮಾದರಿಯ ಅಲಂಕಾರವನ್ನು ನೀವು ಬಯಸುವುದಾದರೆ ವಿಂಟೇಜ್-ಶೈಲಿಯ ಕ್ರಿಸ್ಮಸ್ ಆಭರಣಗಳ ಸಣ್ಣ ವ್ಯಾಪಾರವಾದ ದಿ ನೀಡಲ್ ಕ್ರಾಫ್ಟರ್ ಅನ್ನು ನಡೆಸುತ್ತಿರುವ ಮೈತ್ರಾಯೀ ರಾಯ್ ಶುಕ್ಲಾ ಮಾರ್ಗದರ್ಶನ ನೀಡಬಹುದು. ಹೆಚ್ಚಿನವರು ಕ್ರಿಸ್ಮಸ್ ಟ್ರೀಯನ್ನು ಇರಿಸದೆಯೇ ಕ್ರಿಸ್ಮಸ್ ಆಚರಿಸುತ್ತಾರೆ. ಬರಿಯ ಕ್ರಿಸ್ಮಸ್ ವೈಬ್ನೊಂದಿಗೆ ಕ್ರಿಸ್ಮಸ್ ಆಚರಿಸಬಹುದು ಎಂಬುದು ಮೈತ್ರಾಯೀ ಮಾತಾಗಿದೆ.
ಇನ್ಸ್ಟಾದಲ್ಲಿ ಖರೀದಿಸಬಹುದು
ಶುಕ್ಲಾ ಅವರು ಹೇಳುವಂತೆ ಅವರು ಮಾರುವ ಆಭರಣಗಳನ್ನು ಎಲ್ಲಿ ಬೇಕಾದರೂ ಅಲಂಕರಿಸಬಹುದು ಎಂದಾಗಿದೆ. ಕ್ರಿಸ್ಮಸ್ಗೆ ಮಾತ್ರವಲ್ಲದೆ ವರ್ಷದ ಯಾವ ತಿಂಗಳಿನಲ್ಲಿಯೂ ಈ ಆಭರಣಗಳನ್ನು ಬಳಸಿಕೊಂಡು ಮನೆಯ ಅಲಂಕಾರ ಮಾಡಬಹುದು ಎಂಬುದು ಶುಕ್ಲಾ ಸಲಹೆಯಾಗಿದೆ. ನೈಸರ್ಗಿಕ ಪೀಠೋಪಕರಣಗಳೊಂದಿಗೆ ಸರಿಹೊಂದುವ ಬಣ್ಣಗಳನ್ನು ಶುಕ್ಲಾ ಆರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ಶುಕ್ಲಾ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಹೂವುಗಳನ್ನು ಬಳಸಿ ಅಲಂಕಾರ
ತಾಜಾ ಹೂವುಗಳನ್ನು ಬಳಸಿ ಮನೆಯನ್ನು ಅಲಂಕರಿಸುವುದು ಯೋಜನೆಯಾಗಿದ್ದರೆ ಕೆಂಪು ಹಾಗೂ ಬಿಳಿ ಹೂವುಗಳನ್ನು ಆರಿಸಿ ಎಂಬುದು ಹೂವುಗಳನ್ನು ಮಾರಾಟ ಮಾಡುವ ಸಲೋನಿ ಶಾ ಸಲಹೆಯಾಗಿದೆ. ಗುಲಾಬಿ, ಲಿಲ್ಲಿ ಹಾಗೂ ತಾಜಾ ಹೂವುಗಳು ಮನೆಯ ಅಲಂಕಾರವನ್ನು ಇಮ್ಮಡಿಗೊಳಿಸುತ್ತವೆ ಎಂಬುದು ಅವರ ಮಾತಾಗಿದೆ. ಬಿಳಿ ಮತ್ತು ಕೆಂಪು ಕ್ರೈಸಾಂಥೆಮಮ್ಗಳು ಈ ಋತುವಿನ ಉತ್ತಮ ಆಯ್ಕೆ ಎಂದೆನಿಸಿದೆ. ಎಲೆಗಳಿಂದ ತಯಾರಿಸಿದ ಸಿದ್ಧ ಮಾಲೆಗಳು ಇವರ ಬಳಿ ಲಭ್ಯವಿದೆ. ದುಂಡಗಿನ ಕನ್ನಡಿ ಇದ್ದರೆ ಅದರ ಸಹಾಯದಿಂದ ಮಾಲೆಗಳನ್ನು ನೀವೇ ತಯಾರಿಸಬಹುದು ಎಂದು ಸಲೋನಿ ಸಲಹೆ ನೀಡುತ್ತಾರೆ. ಕ್ರಿಸ್ಮಸ್ನಲ್ಲಿ ಅಲಂಕಾರಕ್ಕಾಗಿ ಕಾರ್ನ್ ಕೋಬ್ಸ್ ಅಗತ್ಯ ಎಂದು ತಿಳಿಸುತ್ತಾರೆ.
ಮನೆಯಲ್ಲಿಯೇ ಕ್ರಿಸ್ಮಸ್ ಟ್ರೀಯ ಅಲಂಕಾರ ಮಾಡುವುದು ಹೇಗೆ
ಪ್ರವೇಶ್ ದ್ವಾರ ಅಥವಾ ಕಾಫಿ ಟೇಬಲ್ ಇಲ್ಲದಿದ್ದರೆ ಜನರು ಸಾಮಾನ್ಯವಾಗಿ ಸೇರುವ ಭಾಗದಲ್ಲಿ ಕ್ರಿಸ್ಮಸ್ ಟ್ರೀ ಇರಿಸಿ
ಕ್ರಿಸ್ಮಸ್ ಟ್ರೀಯ ಎತ್ತರಕ್ಕೆ ಅನುಗುಣವಾಗಿ ಅಲಂಕಾರಿಕ ವಸ್ತುಗಳನ್ನು ಆರಿಸಿ
ಹೊಳೆಯುವ ಬಾಲ್ಗಳು, ಕ್ಯಾಂಡಲ್ಗಳನ್ನು ಬಳಸಿಕೊಂಡು ಕ್ರಿಸ್ಮಸ್ ಟ್ರೀ ಅಲಂಕಾರ ಮಾಡಿ ಕ್ಯಾಂಡಲ್ಗಳನ್ನು ಟೇಬಲ್ ಮೇಲಿರಿಸಿ
ನಿಮ್ಮ ಮನೆಯ ಬಣ್ಣಕ್ಕೆ ಹೊಂದುವ ಕ್ರಿಸ್ಮಸ್ ಆಭರಣಗಳನ್ನು ಆರಿಸಿ
ಕ್ರಿಸ್ಮಸ್ ಥೀಮ್ ಬಣ್ಣಗಳಾದ ಬಿಳಿ, ಕೆಂಪು, ಹಸಿರು ಹೂವುಗಳನ್ನು ಅಲಂಕಾರಕ್ಕೆ ಬಳಸಿ
ಮನೆಯಲ್ಲಿಯೇ ಬೆಳೆದ ಹೂವುಗಳನ್ನು ಬಳಸಿ ಹಸಿರು ಮಾಲೆಯನ್ನು ತಯಾರಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ