Child Care: ಮಕ್ಕಳು ಪೋಷಕರ ಮೇಲೆ ಡಿಪೆಂಡ್​ ಆಗಿದ್ದಾರಾ? ನಿಭಾಯಿಸಲು ಇಲ್ಲಿದೆ ಸಲಹೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಠಮಾರಿತನ, ಮುಂಗೋಪ, ಅಶಿಸ್ತು, ಅತಿಯಾಗಿ ಅಂಟಿಕೊಳ್ಳುವುದು ಹೀಗೆ ಇದೆಲ್ಲಾ ಅಂಶಗಳು ಅವರು ಬೆಳೆದು ದೊಡ್ಡವರಾದಂತೆ ಇನ್ನಷ್ಟು ಪ್ರಬಲವಾಗಿ ಅವರಲ್ಲಿ ರೂಪುಗೊಳ್ಳುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ.

  • Trending Desk
  • 5-MIN READ
  • Last Updated :
  • Share this:

 ಮಕ್ಕಳು  (Childrens)ಬೆಳವಣಿಗೆಯ ಒಂದೊಂದು ಹಂತಗಳನ್ನು ದಾಟಿದಂತೆ ಅವರ ಸ್ವಭಾವಗಳಲ್ಲಿ ಭಿನ್ನತೆಯನ್ನು ಕಾಣಬಹುದು. ಆದರೆ ಕೆಲವೊಂದು ಸ್ವಭಾವಗಳನ್ನು ಎಳೆಯಾಗಿರುವಾಗಲೇ ಚಿವುಟಿ ಹಾಕಬೇಕು ಎಂಬುದು ಮಕ್ಕಳ ತಜ್ಞರ (Experts) ಸಲಹೆಯಾಗಿದೆ. ಹಠಮಾರಿತನ, ಮುಂಗೋಪ, ಅಶಿಸ್ತು, ಅತಿಯಾಗಿ ಅಂಟಿಕೊಳ್ಳುವುದು ಹೀಗೆ ಇದೆಲ್ಲಾ ಅಂಶಗಳು ಅವರು ಬೆಳೆದು ದೊಡ್ಡವರಾದಂತೆ ಇನ್ನಷ್ಟು ಪ್ರಬಲವಾಗಿ ಅವರಲ್ಲಿ ರೂಪುಗೊಳ್ಳುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ. ಮೇಲೆ ತಿಳಿಸಿದಂತೆ ಮಕ್ಕಳಲ್ಲಿ ಹೆಚ್ಚಾಗಿ ಅಂಟಿಕೊಳ್ಳುವ ಸ್ವಭಾವ ಎಂದರೆ ಪುಕ್ಕಲುತನ. ಇದು ಇದ್ದಲ್ಲಿ ಅದನ್ನು ಕೂಡಲೇ ನಿಲ್ಲಿಸಬೇಕು ಎಂದು ತಜ್ಞರು ತಿಳಿಸುತ್ತಾರೆ. ಅವರಲ್ಲಿ ಒಂದು ರೀತಿಯ ಕೀಳರಿಮೆಗೆ ಈ ಸ್ವಭಾವ ಕಾರಣವಾಗುತ್ತದೆ ಎಂಬುದು ತಜ್ಞರ ನಂಬಿಕೆಯಾಗಿದೆ.


ಅಭದ್ರತೆ ಮಕ್ಕಳನ್ನು ಕಾಡುತ್ತದೆ


ಮಕ್ಕಳು ಅತಿಯಾಗಿ ಪೋಷಕರನ್ನು ಅವಲಂಬಿಸುವುದು ಕೆಲವೊಮ್ಮೆ ಅಭದ್ರತೆಯ ಸಂಕೇತವಾಗಿರುತ್ತದೆ. ಪೋಷಕರು ತಮ್ಮನ್ನು ಬಿಟ್ಟು ಹೋಗುತ್ತಾರೆ ಎಂಬ ಭಯ, ಕೀಳರಿಮೆ, ಧೈರ್ಯದ ಕೊರತೆಯಿಂದ ಅವಲಂಬನೆ ಹೆಚ್ಚಾಗಿರುತ್ತದೆ.


ಅವಲಂಬನೆಯಿಂದ ಮಕ್ಕಳಲ್ಲಿ ಕಂಡುಬರುವ ನ್ಯೂನತೆಗಳೇನು?


ಈ ಅವಲಂಬನೆ ಅತಿಯಾದಷ್ಟು ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಹಾಗೂ ಜೀವನ ಮೌಲ್ಯಗಳು ನಷ್ಟವಾಗುತ್ತವೆ. ಹಾಗಿದ್ದರೆ ಇಂತಹ ಮಕ್ಕಳಲ್ಲಿ ಸ್ಥೈರ್ಯವನ್ನು ಹೆಚ್ಚಿಸುವುದು ಹೇಗೆ ಮತ್ತು ಅಂತಹ ಸ್ವಭಾವದಿಂದ ಹೊರತರುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ


ಮಕ್ಕಳು ಏಕೆ ಪೋಷಕರನ್ನೇ ಅತಿಯಾಗಿ ಅವಲಂಬಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ


ಮಕ್ಕಳು ಅತಿಯಾದ ಒತ್ತಡಕ್ಕೆ ಒಳಗಾದಾಗ ಪೋಷಕರ ಸುರಕ್ಷತೆ, ಪ್ರೀತಿ ಹಾಗೂ ಸಂಪರ್ಕವನ್ನು ಬಯಸುತ್ತಾರೆ


ಅವರ ಸುತ್ತಲಿನ ವಾತಾವರಣ ಹಾಗೂ ಆಟಪಾಠಗಳ ವೇಳೆ ಅಸಮರ್ಪಕವಾದಲ್ಲಿ


ಅವರಿಗೆ ಬೇಸರವಾದಾಗ ಮತ್ತು ಪೋಷಕರಿಂದ ಹೆಚ್ಚಿನ ಸಹಾಯ ಬಯಸಿದಾಗ


ಪೋಷಕರ ಹೆಚ್ಚಿನ ಕಾಳಜಿಯನ್ನು ಪಡೆದುಕೊಳ್ಳಬಹುದು ಎಂಬ ತಂತ್ರ


ಮಕ್ಕಳಲ್ಲಿ ಈ ರೀತಿಯ ವರ್ತನೆಯನ್ನು ನಿಯಂತ್ರಿಸುವುದು ಹೇಗೆ


ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಿ ಅವರಿಗೆ ಧೈರ್ಯ ನೀಡಿ


ಪೋಷಕರ ಮೇಲೆ ಅತಿಯಾಗಿ ಅವಲಂಬಿತರಾದಲ್ಲಿ ಮಾತ್ರವೇ ಅವರ ಗಮನ ನಮ್ಮ ಮೇಲಿರುತ್ತದೆ ಎಂಬ ಭಾವನೆ ಮಕ್ಕಳಲ್ಲಿ ಬಾರದಂತೆ ನೋಡಿಕೊಳ್ಳಿ.


ಇದನ್ನೂ ಓದಿ: ಅಧಿಕ ಕೊಲೆಸ್ಟ್ರಾಲ್ ನಿಯಂತ್ರಿಸಬೇಕಾ? ಹಾಗಾದ್ರೆ ಈ 5 ಆಹಾರಗಳನ್ನು ತಿನ್ನಿ


ನಿಮ್ಮ ಗಮನ ಮಕ್ಕಳಿಗೆ ಹೊಸ ಉಲ್ಲಾಸ ಉತ್ಸಾಹವನ್ನು ನೀಡುತ್ತದೆ. ನಿಮಗೆ ಹೆಚ್ಚು ಅಂಟಿಕೊಳ್ಳುತ್ತಾರೆ ಎಂದರೆ ನಿಮ್ಮ ಗಮನವನ್ನು ತಮ್ಮತ್ತ ಹೆಚ್ಚು ಪಡೆದುಕೊಳ್ಳಲು ಬಯಸುತ್ತಾರೆ ಎಂದರ್ಥವಾಗಿದೆ.


ಅವರು ಶಾಂತರಾಗಿದ್ದಾಗ ಹಾಗೂ ಆಟದಲ್ಲಿ ಮಗ್ನರಾಗಿದ್ದಾಗ ಅವರನ್ನು ಗಮನಿಸಿ


ಮಗು ತಮ್ಮಷ್ಟಕ್ಕೆ ಆಟವಾಡುತ್ತಿದ್ದಾಗ ಅವರೊಂದಿಗೆ ನೀವು ಆಟವಾಡಿ. ಮಗುವಿಗೆ ನೀವು ಗಮನ ಹರಿಸುತ್ತಿದ್ದೀರಿ ಎಂಬ ಭಾವನೆ ಉಂಟಾಗಲಿ. ಮಗುವಿನೊಂದಿಗೆ ಬಾಲ ಭಾಷೆಯಲ್ಲಿ ಸಂವಹನ ನಡೆಸಿ. ಅವರಲ್ಲಿರುವ ಹೆದರಿಕೆಯನ್ನು ದೂರಗೊಳಿಸಿ.


ಮಕ್ಕಳ ದಿನಚರಿಯನ್ನು ವ್ಯವಸ್ಥಿತಗೊಳಿಸಿ


ಮಕ್ಕಳು ಆಹಾರ ಸೇವಿಸುವ ಮಲಗುವ ಹಾಗೂ ಆಟವಾಡುವ ದಿನಚರಿಯನ್ನು ವ್ಯವಸ್ಥಿತಗೊಳಿಸಿ. ಮಕ್ಕಳ ದಿನಚರಿಯನ್ನು ವ್ಯವಸ್ಥಿತವಾಗಿರಿಸಿ.


ಅಂತರಗಳನ್ನು ಕಾಯ್ದಿರಿಸಿಕೊಳ್ಳಿ


ಮಕ್ಕಳಿಗೆ ಪ್ರೀತಿಯಿಂದ ತಿಳಿಹೇಳುವ ಮೂಲಕ ನಿಮ್ಮಿಂದ ಅಂತರವನ್ನು ಕಾಯ್ದಿರಿಸಿಕೊಳ್ಳಿ. ನಿಮ್ಮನ್ನು ಹೆಚ್ಚಾಗಿ ಅವಲಂಬಿಸಿದ್ದರೆ ಅವರಿಗೆ ಪ್ರೀತಿಯಿಂದ ತಿಳಿಹೇಳುವ ಮೂಲಕ ಒಬ್ಬರಾಗಿ ಕೆಲಸಗಳನ್ನು ನಿಭಾಯಿಸಲು ತಿಳಿಸಿಕೊಡಿ.


ಮಕ್ಕಳಿಗೆ ನಿಯಮಗಳನ್ನ ತಿಳಿಸಿಕೊಡುವಲ್ಲಿ ಕೊಂಚ ಬಿಗುವಾಗಿ. ಹೆಚ್ಚಿನ ವಾತ್ಸಲ್ಯ ತೋರದಿರಿ, ಇದರಿಂದ ಅವರಲ್ಲಿ ಒಂದು ರೀತಿಯ ಕೀಳರಿಮೆ ತಲೆದೋರಬಹುದು. ಮಕ್ಕಳಲ್ಲಿ ಭಯ, ಆತ್ಮವಿಶ್ವಾಸದ ಕೊರತೆ ಕಂಡುಬಂದಲ್ಲಿ ಅವರಿಗೆ ಪ್ರೋತ್ಸಾಹ ನೀಡಿ. ನಿನಗೆ ಸಾಧ್ಯ ನಿನಗೆ ಮಾಡಬಹುದು ಎಂಬ ಆತ್ಮವಿಶ್ವಾಸದ ಮಾತುಗಳನ್ನು ಅವರಿಗೆ ಹೇಳಿ.




ಸ್ವಭಾವ ಎಂಬುದು ಒಂದು ಬಗೆಯ ಸಂವಹನ ಎಂಬುದನ್ನು ಮರೆಯಬೇಡಿ. ಅವರ ನಡವಳಿಕೆ ನಿಮಗೆ ಅಸಮರ್ಪಕ ಎಂದು ಕಂಡುಬಂದರೆ ಅದನ್ನು ಪ್ರೀತಿಯಿಂದ ತಿಳಿಹೇಳುವ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

First published: