ದಿನಕ್ಕೊಂದು ಆ್ಯಪಲ್ ಸೇವನೆ ವೈದ್ಯರನ್ನು ದೂರವಿರಿಸುತ್ತದೆ ಎಂಬ ಮಾತಿದೆ. ನಿತ್ಯವೂ ಆ್ಯಪಲ್ ಸೇವಿಸುವುದು ಅನಾರೋಗ್ಯವನ್ನು ದೇಹದ ಹತ್ತಿರಕ್ಕೂ ಸುಳಿಯಲು ಬಿಡುವುದಿಲ್ಲ ಎಂಬುದು ಈ ಮಾತಿನ ತಾತ್ಪರ್ಯವಾಗಿದೆ. ಆರೋಗ್ಯಕ್ಕೆ ಅತ್ಯುತ್ತಮ ಎಂದೆನಿಸಿರುವ ಸೇಬು ಹಣ್ಣು, ಅನೇಕ ಪೋಷಕಾಂಶಕ ಅಂಶಗಳನ್ನು ಒಳಗೊಂಡಿದೆ. ಹಾಗಾಗಿಯೇ ವೈದ್ಯರೂ ಕೂಡ ಸೇಬು ಹಣ್ಣನ್ನು ನಿತ್ಯವೂ ಸೇವಿಸಲು ಶಿಫಾರಸು ಮಾಡುತ್ತಾರೆ.
ಸೇಬನ್ನು ಕತ್ತರಿಸುವ ಸೂಕ್ತ ವಿಧಾನ: ಸೇಬು ಹಣ್ಣಿನ ಸೇವನೆ ಬಗ್ಗೆ ತಿಳಿದುಕೊಂಡೆವು ಹಣ್ಣಿನಿಂದ ದೊರೆಯುವ ಪ್ರಯೋಜನಕಾರಿ ಅಂಶಗಳ ಬಗ್ಗೆ ತಿಳಿದೆವು ಆದರೆ ಈ ಹಣ್ಣನ್ನು ಕತ್ತರಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಲಿದ್ದೇವೆ.
ಕೈಯಲ್ಲೇ ಬಳಸಬಹುದಾದ ಸೇಬು ಕತ್ತರಿಸುವ ಪರಿಕರ: ಸೇಬು ಕತ್ತರಿಸುವ ಉಪಕರಣವನ್ನು ಕೈಗಳ ಸಹಾಯದಿಂದ ಬಳಸಬಹುದಾಗಿದ್ದು ಸೇಬನ್ನು ಸರಿಯಾಗಿ ಕತ್ತರಿಸಲು ಇದು ಸಹಕಾರಿಯಾಗಿದೆ. ಈ ಉಪಕರಣವನ್ನು ಬಳಸಿಕೊಂಡು ಸೇಬನ್ನು ನಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬಹುದಾಗಿದೆ.
ಚಾಕು ಹಾಗೂ ಚಾಪಿಂಗ್ ಬೋರ್ಡ್: ಕಾಂಡ ಭಾಗ ಮೇಲ್ಮುಖವಾಗಿರುವಂತೆ ಸೇಬನ್ನು ಚಾಪಿಂಗ್ ಬೋರ್ಡ್ ಮೇಲಿರಿಸಿ. ಮಧ್ಯದಲ್ಲಿ ಸೇಬನ್ನು ಎರಡು ತುಂಡುಗಳನ್ನಾಗಿ ಕತ್ತರಿಸಿ. ಕತ್ತರಿಸಲು ಹರಿತವಾದ ಚಾಕು ಬಳಸಿ.
ಹೀಗೆ ಸೇಬನ್ನು ನಾಲ್ಕು ಭಾಗಗಳನ್ನಾಗಿ ತುಂಡರಿಸಬಹುದು. ಸೇಬಿನೊಳಗಿನ ಬೀಜ ಹಾಗೂ ಇನ್ನಿತರ ಸೇವಿಸಲು ಸಾಧ್ಯವಾಗದೇ ಇರುವ ಅಂಶಗಳನ್ನು ಚಾಕುವಿನ ಸಹಾಯದಿಂದ ಹೊರಹಾಕಬಹುದು.
ಮೆಲನ್ ಬಾಲರ್ ಬಳಸಿಕೊಂಡು ಸೇಬು ಕತ್ತರಿಸುವುದು: ಮೆಲನ್ ಬಾಲರ್‌ನಲ್ಲಿರುವ ಸ್ಕೂಪ್ ಆಕಾರವನ್ನು ಸೇಬಿನ ಕಾಂಡದ ಭಾಗದ ಹತ್ತಿರಕ್ಕೆ ತನ್ನಿ. ಸೇಬಿನ ಮಧ್ಯಭಾಗವನ್ನು ತಲುಪುವವರೆಗೆ ಪರಿಕರವನ್ನು ಸೇಬಿನ ಒಳತೂರಿಸಿ. ನಿಮಗೆಷ್ಟು ಬೇಕು ಅಷ್ಟು ಸೇಬಿನ ಭಾಗವನ್ನು ಈ ಪರಿಕರದ ಮೂಲಕ ಕತ್ತರಿಸಿಕೊಳ್ಳಬಹುದಾಗಿದೆ.
ಆ್ಯಪಲ್ ಕತ್ತರಿಸುವ ವಿಧಗಳು: ಆ್ಯಪಲ್ ಅನ್ನು ತುಂಡುಗಳನ್ನಾಗಿ ಕತ್ತರಿಸುವುದು. ಆ್ಯಪಲ್ ಅನ್ನು ಉದ್ದನೆಯ ತುಂಡುಗಳನ್ನಾಗಿ ಕತ್ತರಿಸುವುದು ಕೂಡ ಒಂದು ಕಲೆಯಾಗಿದೆ. ಇದಕ್ಕಾಗಿ ಮೊದಲಿಗೆ ಸೇಬಿನ ಮಧ್ಯಭಾಗವನ್ನು ತುಂಡರಿಸಿಕೊಳ್ಳಬೇಕು. ನಂತರ ಸೇಬಿನ ಹೊರಭಾಗವನ್ನು ಚಾಪಿಂಗ್ ಬೋರ್ಡ್‌ನ ಮೇಲಿರಿಸಿ ಎಷ್ಟು ಉದ್ದ ಹಾಗೂ ದಪ್ಪಬೇಕೋ ಅದರಂತೆಯೇ ಕತ್ತರಿಸಿಕೊಂಡರಾಯಿತು. ನಂತರ ಈ ತುಂಡುಗಳನ್ನು ಫ್ರಿಡ್ಜ್‌ನಲ್ಲಿ ಮೂರರಿಂದ ಐದು ದಿನಗಳವರೆಗೆ ಇರಿಸಿಕೊಳ್ಳಬಹುದು. ಅದಕ್ಕೂ ಮುನ್ನ ಅವು ಕಂದುಬಣ್ಣಕ್ಕೆ ತಿರುಗುವುದನ್ನು ತಪ್ಪಿಸಲು ಲಿಂಬೆರಸದ ಲೇಪನ ಮಾಡಬೇಕು.
ಜೂಲಿಯನ್ ಆ್ಯಪಲ್ಸ್: ಯಾವುದೇ ಹಣ್ಣು ಹಾಗೂ ತರಕಾರಿಗಳನ್ನು ಎಂಟನೇ ಒಂದು ಭಾಗ ಅಥವಾ ಆರನೇ ಒಂದು ಭಾಗದ ದಪ್ಪನೆಯ ಆಕಾರದಲ್ಲಿ ಕತ್ತರಿಸುವುದು ಸೂಕ್ತವಾದ ವಿಧಾನವಾಗಿದೆ. ತೆಳುವಾದ ಸೇಬು ಚೂರುಗಳನ್ನು ಕಿರಿದಾದ ಪಟ್ಟಿಗಳಾಗಿಯೂ ಕತ್ತರಿಸಬಹುದಾಗಿದೆ. ಕತ್ತರಿಸಿದ ಸೇಬುಗಳನ್ನು ಅಲಂಕಾರಿಕ ವಸ್ತುವನ್ನಾಗಿ ಕೂಡ ಬಳಸಬಹುದಾಗಿದೆ ಇಲ್ಲವೇ ಸಲಾಡ್‌ಗಳಲ್ಲಿ ಡ್ರೆಸ್ಸಿಂಗ್‌ನಂತೆಯೂ ಬಳಸಬಹುದು.
ಸುರುಳಿಯಾಕಾರದ ಸೇಬುಗಳು: ಸ್ಪೈರಲೈಸರ್ ಉಪಕರಣವು ಸೇಬುಗಳನ್ನು ತೆಳುವಾದ ಸುರುಳಿಯಾಕಾರದ ರೀತಿಯಲ್ಲಿ ಕತ್ತರಿಸುತ್ತದೆ. ಸುರುಳಿಯಾಕಾರದ ಸೇಬುಗಳನ್ನು ಹಣ್ಣಿನ ಸಲಾಡ್‌ಗಳಲ್ಲಿ ಅಥವಾ ಬೇಯಿಸಿದ ಸಿಹಿತಿಂಡಿಗಳ ಮೇಲೆ ಅಲಂಕಾರಿಕವಾಗಿ ಬಳಸಬಹುದಾಗಿದೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ