• Home
  • »
  • News
  • »
  • lifestyle
  • »
  • Relationship: ನಿಮ್ಮದು ಒನ್‌ ಸೈಡೆಡ್‌ ರಿಲೇಶನ್‌ಶಿಪ್‌ ಎಂದು ತಿಳಿಯುವುದು ಹೇಗೆ? ಸಂಬಂಧದಲ್ಲಿ ಸಮಸ್ಯೆಗಳಿದ್ದರೆ ಹೀಗೆ ಪರಿಹರಿಸಿಕೊಳ್ಳಿ 

Relationship: ನಿಮ್ಮದು ಒನ್‌ ಸೈಡೆಡ್‌ ರಿಲೇಶನ್‌ಶಿಪ್‌ ಎಂದು ತಿಳಿಯುವುದು ಹೇಗೆ? ಸಂಬಂಧದಲ್ಲಿ ಸಮಸ್ಯೆಗಳಿದ್ದರೆ ಹೀಗೆ ಪರಿಹರಿಸಿಕೊಳ್ಳಿ 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ನಿಮ್ಮ ಪಾರ್ಟ್‌ನರ್‌ ಆದವರು ಹೊಸದಾಗಿ ಬ್ಯುಸಿನೆಸ್​ ಆಭಿಸಿರಬಹುದು ಅಥವಾ ಅವರ ಪ್ರೀತಿಪಾತ್ರರನ್ಯಾರೋ ಕಳೆದುಕೊಂಡಿರಬಹುದು.

  • Trending Desk
  • 2-MIN READ
  • Last Updated :
  • Share this:

ಸಂಬಂಧಗಳು (Relationship) ಯಾವಾಗಲೂ ಒಂದೇ ತೆರನಾಗಿರುವುದಿಲ್ಲ. ಅದರಲ್ಲಿನ ಭಾವನೆಗಳ ತೀವ್ರತೆ ಹೆಚ್ಚು ಕಡಿಮೆಯಾಗುತ್ತಿರುತ್ತವೆ. ಕೆಲವೊಮ್ಮೆ ಸಂಬಂಧಗಳಲ್ಲಿ ಒಬ್ಬರ ಪರಿಶ್ರಮ ಹೆಚ್ಚಾಗಿದ್ದರೆ ಮತ್ತೊಬ್ಬರದ್ದು ಕಡಿಮೆಯಾಗಬಹುದು. ಸಂಬಂಧ ಚೆನ್ನಾಗಿರಲು ಸಮಯ ನೀಡುವುದು, ಒಬ್ಬರಿಗೊಬ್ಬರು ಬೆಂಬಲ ನೀಡುವುದು, ಪ್ರೀತಿ ತೋರುವುದು ತುಂಬಾ ಮುಖ್ಯ. ಅದಕ್ಕಾಗಿ ಕೆಲವೊಮ್ಮೆ ಇಬ್ಬರ ಬದಲಿಗೆ ಕೇವಲ ಒಬ್ಬರೇ ಶ್ರಮ ಹಾಕುವ ಪರಿಸ್ಥಿತಿ ಬರಬಹುದು. ಕೆಲವೊಮ್ಮೆ ಸಂದರ್ಭಗಳೂ ಭಿನ್ನವಾಗಿರುತ್ತವೆ. ಉದಾಹರಣೆಗೆ ನಿಮ್ಮ ಪಾರ್ಟ್‌ನರ್‌ ಆದವರು ಹೊಸದಾಗಿ ಬ್ಯುಸಿನೆಸ್ (Business)‌ ಆರಂಭಿಸಿರಬಹುದು ಅಥವಾ ಅವರ ಪ್ರೀತಿಪಾತ್ರರನ್ಯಾರೋ ಕಳೆದುಕೊಂಡಿರಬಹುದು. ಹೀಗಾದಾಗ ಅವರು ನಿಮಗೆ ಹೆಚ್ಚು ಸಮಯ ಕೊಡಲು ಆಗದಿರಬಹುದು. ಪ್ರೀತಿ ತೋರಲು ಸಾಧ್ಯವಾಗದಿರಬಹುದು. ಆದರೆ ಇದು ತಾತ್ಕಾಲಿಕವಾಗಿರುತ್ತದೆ.


ಆದರೆ ಇದು ಹೆಚ್ಚು ಕಾಲ ಮುಂದುವರಿದರೆ ಅಥವಾ ನೀವು ಸಂಬಂಧದಲ್ಲಿ ಅತೃಪ್ತರಾಗಿದ್ದರೆ, ಮೊದಲು ಅದರ ಬಗ್ಗೆ ಮಾತನಾಡುವುದು ಉತ್ತಮ ಆಯ್ಕೆಯಾಗಿದೆ. ನಂತರವೂ ಏನೂ ಬದಲಾಗದಿದ್ದರೆ, ನೀವು ಸಂಬಂಧವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸಬಹುದು.


ಒನ್‌ಸೈಡೆಡ್‌ ರಿಲೇಶನ್‌ಶಿಪ್‌ ಎಂದರೇನು ?


ಏಕಪಕ್ಷೀಯ ಸಂಬಂಧ ಅಥವಾ ಒನ್‌ಸೈಡೆಡ್‌ ರಿಲೇಶನ್‌ಶಿಪ್‌ ಎಂದರೆ ಸಂಬಂಧ ಉಳಿಯಲು ಒಬ್ಬರೇ ಶ್ರಮಿಸುವುದಾಗಿದೆ. "ಸಂಬಂಧಗಳು ಪರಸ್ಪರ ಲಾಭದಾಯಕವಾಗಿರಬೇಕು. ಅಲ್ಲಿ ಪಾರ್ಟ್‌ನರ್‌ಗಳು ಇದೇ ರೀತಿಯ ಪ್ರಯತ್ನವನ್ನು ಹೂಡಿಕೆ ಮಾಡುತ್ತಾರೆ” ಎಂಬುದಾಗಿ ಮನಶ್ಶಾಸ್ತ್ರಜ್ಞ ಮತ್ತು ಸಂಬಂಧ ತಜ್ಞ ಕೆಲಿಫರ್ನ್ ಪೊಮೆರಾನ್ಜ್ ಹೇಳುತ್ತಾರೆ.


ಏಕಪಕ್ಷೀಯ ಸಂಬಂಧದಲ್ಲಿ ನೀವೊಬ್ಬರೇ ಯೋಜನೆ ರೂಪಿಸುವುದು, ಭಾವನಾತ್ಮಕ ಬೆಂಬಲವನ್ನು ನೀಡುವುದು, ಪ್ರಮುಖ ವಿಚಾರಗಳ ಬಗ್ಗೆ ಮಾತನಾಡುವುದು, ದೈಹಿಕ ಪ್ರೀತಿಯನ್ನು ನೀಡುವುದು, ಪ್ರೀತಿಯನ್ನು ವ್ಯಕ್ತಪಡಿಸುವುದು ಮುಂತಾದ ವಿಷಯಗಳಲ್ಲಿ ಹೆಚ್ಚಿನ ಪ್ರಯತ್ನ ಮಾಡುತ್ತಿರುತ್ತೀರಿ.


ಅಂದಹಾಗೆ ನಿಮ್ಮ ಬಾಂಧವ್ಯದ ಶೈಲಿಯು ನಿಮ್ಮ ಜೀವನದಲ್ಲಿ ಜನರೊಂದಿಗೆ ನೀವು ಹೇಗೆ ಸಂಬಂಧ ಹೊಂದಿದ್ದೀರಿ ಎಂಬುದನ್ನು ನಿರ್ದೇಶಿಸುತ್ತದೆ. ಇದು ನಿಮ್ಮ ಸಂಬಂಧಗಳ ಸಮತೋಲನದ ಮೇಲೆ ಸಹ ಪರಿಣಾಮ ಬೀರಬಹುದು.


ಒನ್‌ ಸೈಡೆಡ್‌ ರಿಲೇಶನ್‌ಶಿಪ್‌ ಹೇಗೆ ಗುರುತಿಸುವುದು ?


1. ನೀವೇ ಯಾವಾಗಲೂ ರಾಜಿಯಾವುದು ಅಥವಾ ತ್ಯಾಗ ಮಾಡುವುದು: ಎಲ್ಲಾ ಸಂಬಂಧಗಳಿಗೆ ರಾಜಿ ಅಗತ್ಯವಿರುತ್ತದೆ. ನೀವು ಮತ್ತು ನಿಮ್ಮ ಜೊತೆಗಾರರು ಎಲ್ಲಿ ಹೊರಗೆ ಹೋಗಬೇಕು, ಏನು ತಿನ್ನಬೇಕು ಅಥವಾ ಹಣವನ್ನು ಖರ್ಚು ಮಾಡಲು ಬಯಸುವಂತಹ ಆಯ್ಕೆಗಳ ಬಗ್ಗೆ ಸಾಮಾನ್ಯವಾಗಿ ಭಿನ್ನಾಭಿಪ್ರಾಯ ಹೊಂದಿರಬಹುದು.


ಆದರೆ ನೀವೇ ಯಾವಾಗಲೂ ರಾಜಿ ಮಾಡಿಕೊಳ್ಳಬೇಕಾಗಿ ಬಂದರೆ ಅದು ನಿಮ್ಮ ಸಂಬಂಧವು ಏಕಪಕ್ಷೀಯವಾಗಿದೆ ಎಂಬುದರ ಸಂಕೇತವಾಗಿರಬಹುದು.


2. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ನೀವೇ ಯಾವಾಗಲೂ ಪ್ರಯತ್ನ ಪಡುವುದು: ಸಂಬಂಧವನ್ನು ಆರೋಗ್ಯಕರವಾಗಿಡಲು ಪ್ರಯತ್ನ ಪಡಬೇಕಾಗುತ್ತದೆ.


ಅದರಲ್ಲೂ ಮುಖ್ಯವಾಗಿ ಒಟ್ಟಿಗೆ ಸಮಯ ಕಳೆಯಲು ಮಾರ್ಗಗಳನ್ನು ಸೂಚಿಸುವುದು, ಮತ್ತೊಬ್ಬರ ವೇಳಾಪಟ್ಟಿಗೆ ಹೊಂದಿಕೊಳ್ಳುವುದು, ಭಾವನೆಗಳ ಬಗ್ಗೆ ಮಾತನಾಡುವುದು ಮುಂತಾದವು. ಈ ಪ್ರಯತ್ನಗಳೆಲ್ಲವನ್ನೂ ನೀವೊಬ್ಬರೇ ಮಾಡುತ್ತಿದ್ದರೆ ಇದು ಏಕಪಕ್ಷೀಯತೆಯ ಸಂಕೇತವಾಗಿದೆ ಎನ್ನಬಹುದು.


3. ನೀವು ಇತರ ವ್ಯಕ್ತಿಯೊಂದಿಗೆ ಸಮಯ ಕಳೆಯುವಾಗ ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಇಲ್ಲದಿರುವುದು: ಏಕಪಕ್ಷೀಯ ಸಂಬಂಧಗಳಲ್ಲಿ, ನಿಮ್ಮ ಪಾಲುದಾರರು ನಿಮ್ಮ ಬಗ್ಗೆ ಅಥವಾ ಒಟ್ಟಾರೆಯಾಗಿ ಸಂಬಂಧದ ಬಗ್ಗೆ ಹೇಗೆ ಭಾವಿಸುತ್ತಾರೆ ಎಂದು ನಿಮಗೆ ಖಚಿತವಾಗಿರುವುದಿಲ್ಲ ಎಂದು ಪೊಮೆರಾನ್ಜ್ ಹೇಳುತ್ತಾರೆ.


"ನೀವು ಎಲ್ಲರೂ ಇಷ್ಟಪಡುವಂಥವರಾ? ಯೋಗ್ಯರಾಗಿದ್ದೀರಾ? ಅಥವಾ ಸಾಕಷ್ಟು ಆಕರ್ಷಕವಾಗಿದ್ದೀರಾ ಎಂಬ ಬಗ್ಗೆ ನೀವು ಅನುಮಾನಿಸಬಹುದು. ಆರೋಗ್ಯಕರ ಸಂಬಂಧದಲ್ಲಿ, ನೀವು ಎಲ್ಲಿ ನಿಲ್ಲುತ್ತೀರಿ ಎಂದು ನಿಮಗೆ ಯಾವಾಗಲೂ ತಿಳಿದಿರುತ್ತದೆ" ಎಂದು ಪೊಮೆರಾನ್ಜ್ ಹೇಳುತ್ತಾರೆ.


4. ವಿಷಯಗಳು ತಪ್ಪಾದಾಗ ನೀವೇ ಯಾವಾಗಲೂ ಕ್ಷಮೆಯಾಚಿಸುತ್ತೀರಿ: ಕೆಲವೊಂದು ಸಂದರ್ಭಗಳಲ್ಲಿ ನೀವಿಬ್ಬರೂ ತಪ್ಪು ಮಾಡಿರಬಹುದು ಎಂಬುದನ್ನು ನಿಮ್ಮ ಸಂಗಾತಿ ಯಾವಾಗಲೂ ಒಪ್ಪಿಕೊಳ್ಳದಿದ್ದರೆ ಇದು ಎಚ್ಚರಿಕೆಯ ಸಂಕೇತವಾಗಿದೆ.


ಸಾಮಾನ್ಯವಾಗಿ ವಾದಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳುತ್ತಿರುತ್ತೀರಿ ಎಂದಾದರೆ ಅದು ಒನ್‌ ಸೈಡೆಡ್‌ ರಿಲೇಶನ್‌ಶಿಪ್‌ ಆಗಿದೆ ಎಂದರ್ಥ.


5. ನಿಮಗೆ ಅಗತ್ಯವಿರುವಾಗ ಅವರು ನಿಮ್ಮ ಬಳಿ ಇರುವುದಿಲ್ಲ: ಬೆಂಬಲಕ್ಕಾಗಿ ನಿಮ್ಮ ಸಂಗಾತಿಯನ್ನು ನಂಬುವುದು ಮುಖ್ಯ. ನಿಮ್ಮ ಸಂಗಾತಿಯನ್ನು ನಿಮಗೆ ತೀರಾ ಅಗತ್ಯವಿದ್ದಾಗ ಈ ಕೆಳಗಿಕ ಕೆಲಸಗಳನ್ನು ಮಾಡದೇ ಹೋದರೆ ನೀವು ಎಚ್ಚೆತ್ತುಕೊಳ್ಳಬೇಕು.


*ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸಿದಾಗ ನಿಮಗೆ ಸಾಂತ್ವನ ನೀಡುವುದು.


* ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಬಳಿ ಇರುವುದು


*ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ನಿಮ್ಮನ್ನು ನೋಡಿಕೊಳ್ಳುವುದು.


* ನಿಮಗೆ ಅಗತ್ಯವಿರುವಾಗ ಸಲಹೆ ನೀಡುವುದು.


ಇಂಥ ಪ್ರಮುಖ ಬೆಂಬಲಗಳನ್ನು ಅವರು ನೀಡದೇ ಹೋದಲ್ಲಿ ಅದು ಖಂಡಿತಾ ಎಚ್ಚರಿಕೆಯ ಚಿಹ್ನೆಯಾಗಿದೆ.


6. ಸಂಬಂಧವನ್ನು ಇತರರಿಂದ ಮರೆಮಾಚುವುದು: "ಸಂಬಂಧವು ಎಷ್ಟು ಆರೋಗ್ಯಕರವಾಗಿದೆ ಎಂಬುದಕ್ಕೆ ಸ್ನೇಹಿತರು ಮತ್ತು ಕುಟುಂಬವು ಸಾಮಾನ್ಯವಾಗಿ ಉತ್ತಮ ಮಾಪಕಗಳು" ಎಂದು ಪೊಮೆರಾನ್ಜ್ ಹೇಳುತ್ತಾರೆ.


ನಿಮ್ಮ ಸಂಬಂಧವನ್ನು ನೀವು ಮರೆಮಾಡಿದರೆ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಸಂಗಾತಿಯ ನಡವಳಿಕೆಯ ಬಗ್ಗೆ ಸುಳ್ಳು ಹೇಳುವುದನ್ನು ನೀವು ಕಂಡುಕೊಂಡರೆ, ಇದು ಏಕಪಕ್ಷೀಯವಾಗಿದೆ ಎಂಬುದರ ಸಂಕೇತವಾಗಿರಬಹುದು.


ನೀವು ಏಕಪಕ್ಷೀಯ ಸಂಬಂಧದಲ್ಲಿದ್ದರೆ ಏನು ಮಾಡಬೇಕು?


ಏಕಪಕ್ಷೀಯ ಸಂಬಂಧವನ್ನು ಉಳಿಸಿಕೊಳ್ಳಬೇಕೆ ಅಥವಾ ಕೊನೆಗೊಳಿಸಬೇಕೆ ಎಂದು ನಿರ್ಧರಿಸಲು ನೀವು ಹೆಣಗಾಡುತ್ತಿದ್ದರೆ ಈ ಕೆಳಗಿನ ಪ್ರಮುಖ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.


ಇದನ್ನೂ ಓದಿ: ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೆನೆಸಿದ ಕಾಳು-ಬೀಜಗಳು


ನಿಮ್ಮ ಸಂಗಾತಿಯು ಕೆಲವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದರೆ ಅಂದರೆ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬದ ಸದಸ್ಯರನ್ನು ನೋಡಿಕೊಳ್ಳುವುದು, ಹೊಸ ವ್ಯವಹಾರವನ್ನು ಪ್ರಾರಂಭಿಸುವಂತಹ ಪ್ರಮುಖ ಮುಂಬರುವ ಗುರಿಗಾಗಿ ತಯಾರಿ ನಡೆಸುತ್ತಿರುವಾಗ ಅಂತಹ ಸಂದರ್ಭಗಳಲ್ಲಿ ಸಂಬಂಧದಿಂದ ತಾತ್ಕಾಲಿಕವಾಗಿ ಹೊರಗುಳಿಯಬಹುದು.


ಇದು ಏಕಪಕ್ಷೀಯ ತ್ಯಾಗವಾಗಿದ್ದು ಇದರಲ್ಲಿ ನಿಮ್ಮ ಸಂಗಾತಿಗೆ ಹೆಚ್ಚಿನ ಸ್ಪೇಸ್ ನೀಡಿದಂತಾಗುತ್ತದೆ. ಒಂದೊಮ್ಮೆ ಅವರು ತಮ್ಮ ಕೆಲಸದಲ್ಲಿ ನೆಲೆನಿಂತನಂತರ ಅಥವಾ ಅವರು ತಮ್ಮ ಜವಾಬ್ದಾರಿಯಿಂದ ಹೊರಬಂದನಂತರ ಮತ್ತೆ ನಿಮ್ಮ ಜೊತೆ ಸಂಬಂಧದಲ್ಲಿ ಮರಳಬಹುದಾಗಿದೆ.


ಆದರೆ ರಾಜಿ ಮಾಡಿಕೊಳ್ಳುವುದು ಯಾವಾಗಲೂ ಸುಲಭವಲ್ಲ. ಆದ್ದರಿಂದ ನೀವು ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಬಹುದು.


ನೀವು ಯಾವಾಗ ಬ್ರೇಕಪ್‌ ಎಂದು ಪರಿಗಣಿಸಬಹುದು?


ನೀವು ಪಡೆಯುವುದಕ್ಕಿಂತ ಹೆಚ್ಚಿನದನ್ನು ನೀವು ನೀಡುತ್ತಿರುವಿರಿ ಎಂದು ನೀವು ಹೇಳಲು ಪ್ರಯತ್ನಿಸಿದರೆ ನಿಮ್ಮ ಪಾರ್ಟ್‌ನರ್‌ ಅತಿಯಾಗಿ ರಕ್ಷಣಾತ್ಮಕವಾಗುತ್ತಾರೆ.


ಈ ಸಂದರ್ಭದಲ್ಲಿ ಅವರು ನಿಮ್ಮನ್ನು ದೂಷಿಸಲು ಪ್ರಾರಂಭಿಸುತ್ತಾರೆ ಎಂದಾದಲ್ಲಿ ಅವರು ಬದಲಾಗುವ ಸಾಧ್ಯತೆಯಿಲ್ಲ ಎಂದರ್ಥ. ಇದು ಜೀವನ ಅಸಮತೋಲನದಲ್ಲೇ ಸಾಗುವ ಸ್ಪಷ್ಟ ಚಿಹ್ನೆಗಳು ಎಂಬುದಾಗಿ ಪೊಮೆರಾನ್ಜ್ ಹೇಳುತ್ತಾರೆ.


ಇಂಥ ಸಂದರ್ಭಗಳು ನೀವು ಮತ್ತು ನಿಮ್ಮ ಸಂಗಾತಿ ಮಧ್ಯೆ ಉತ್ತಮ ಹೊಂದಾಣಿಕೆಯಿಲ್ಲ ಹಾಗೂ ಬೇರೆ ಬೇರೆಯಾಗಿರುವುದರ ಸಂಕೇತವಾಗಿರಬಹುದು.


ನಿಮ್ಮ ಸಂಗಾತಿಯು ನಿಮಗಿಂತ ತಾನೇ ಹೆಚ್ಚು ಪ್ರೀತಿಸುತ್ತಿದ್ದೇನೆಂದು ವಾದ ಮಾಡಿದರೆ, ಹೆಚ್ಚು ಚರ್ಚೆ ಮಾಡಲು ಅಥವಾ ಮಾತನಾಡಲು ನಿರಾಕರಿಸಿದರೆ ಹಾಗೂ ನಿಮಗೆ ಅವಮಾನ ಮಾಡಿದರೆ, ನಿಂದಿಸಿದರೆ ಅದು ಎಚ್ಚರಿಕೆಯ ಸಂಕೇತ ಎಂಬುದನು ನೀವು ಮನಗಾಣಬೇಕು.


ಏಕಪಕ್ಷೀಯ ಸಂಬಂಧವನ್ನು ಹೇಗೆ ಸರಿಪಡಿಸುವುದು?


ನೀವು ಏಕಪಕ್ಷೀಯ ಸಂಬಂಧವನ್ನು ಸರಿಪಡಿಸಲು ಬಯಸಿದರೆ, ನಿಮ್ಮ ಪಾಲುದಾರರೊಂದಿಗೆ ಮುಕ್ತ, ಪ್ರಾಮಾಣಿಕ ಸಂಭಾಷಣೆಯನ್ನು ನಡೆಸುವುದು ಮುಖ್ಯವಾಗಿದೆ.


ಪ್ರಸ್ತುತ ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಭಿನ್ನಾಭಿಪ್ರಾಯಗಳೇನು? ಸಂಬಂಧವು ಹೇಗಿರಬೇಕೆಂದು ನೀವು ಬಯಸುತ್ತೀರಾ? ಇಬ್ಬರೂ ಹೆಗೆ ಬದಲಾಗಬೇಕೆಂದು ಬಯಸುತ್ತೀರಾ? ಹೇಗೆ ಹೊಂದಾಣಿಕೆಯಿದ್ದರೆ ಒಳ್ಳೆಯದು ಎಂಬುದನ್ನು ಮನಬಿಚ್ಚಿ ಮಾತನಾಡಿದರೆ ಇದು ಸಂಬಂಧ ಸರಿಹೋಗಲು ಸಹಾಯ ಮಾಡಬಹುದು.


ಕೆಲವು ಸಂದರ್ಭಗಳಲ್ಲಿ, ನಿಮ್ಮ ಸಂಗಾತಿಗೆ ಸಂಬಂಧವು ಹೇಗೆ ಏಕಪಕ್ಷೀಯವಾಗಿದೆ ಎಂದು ತಿಳಿದಿರುವುದಿಲ್ಲ. "ಪಾಲುದಾರರು ತಮ್ಮ ಸಂಬಂಧವನ್ನು ಬೆಂಬಲಿಸಲು ಪರಸ್ಪರ ಏನು ಮಾಡುತ್ತಿದ್ದಾರೆಂದು ತಿಳಿದಿರುವುದಿಲ್ಲ. ಈ ಬಗ್ಗೆ ಮಾತನಾಡಿದರೆ ಅದು ಪರಿಸ್ಪರರಿಗೆ ತಿಳಿಯುತ್ತದೆ ಎಂದು ಡಿಡೊನಾಟೊ ಹೇಳುತ್ತಾರೆ.


"ನಿಮ್ಮ ನಿರೀಕ್ಷೆಗಳು ಮತ್ತು ಅವಲೋಕನಗಳ ಬಗ್ಗೆ ನಿಮ್ಮ ಸಂಗಾತಿ ಜೊತೆಗೆ ಸಂವಹನ ಮಾಡುವುದು ಏಕಪಕ್ಷೀಯತೆಯನ್ನು ಪರಿಹರಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿರಬಹುದು" ಎಂದು ಡಿಡೊನಾಟೊ ಹೇಳುತ್ತಾರೆ.
ಈ ಸಮಸ್ಯೆಗಳ ಬಗ್ಗೆ ನಿಮ್ಮ ಸಂಗಾತಿ ಜೊತೆ ಮಾತನಾಡಲು ನಿಮಗೆ ಕಷ್ಟವಾಗಿದ್ದರೆ, ಈ ಪ್ರಮುಖ ಸಂಭಾಷಣೆಗಳನ್ನು ಸುಗಮಗೊಳಿಸಲು ಬೇರೊಬ್ಬರು ನಿಮಗೆ ಸಹಾಯ ಮಾಡಲು ಕಪಲ್ಸ್‌ ಥೆರಪಿಯನ್ನು ಸಹ ನೀವು ಪ್ರಯತ್ನಿಸಬಹುದು.


"ಎಲ್ಲಾ ಸಂಬಂಧಗಳು ಕೆಲವೊಮ್ಮೆ ಕಷ್ಟಕರವಾಗಿದ್ದರೂ, ಒಟ್ಟಾರೆ ಸಮತೋಲನ ಮತ್ತು ಪರಸ್ಪರ ಗೌರವವನ್ನು ಅನುಭವಿಸುವುದು ಮುಖ್ಯವಾಗಿದೆ. ಸಂವಹನ ಅಥವಾ ಚಿಕಿತ್ಸೆಯ ಮೂಲಕ ನೀವು ಏಕಪಕ್ಷೀಯ ಸಂಬಂಧವನ್ನು ಸರಿಪಡಿಸಲು ಸಾಧ್ಯವಾಗಬಹುದು" ಎಂದು ಪೊಮೆರಾನ್ಜ್ ಹೇಳುತ್ತಾರೆ.


ಒಟ್ಟಾರೆ, ಯಾವುದೇ ಸಂಬಂಧದಲ್ಲಾದರೂ ಪರಸ್ಪರ ಹೊಂದಾಣಿಕೆ ಬಹಳ ಮುಖ್ಯ. ಆದರೆ ಅದೇ ಪರಸ್ಪರ ಪ್ರೀತಿ, ಹೊಂದಾಣಿಕೆ ಇಬ್ಬರಲ್ಲಿಯೂ ಇರಬೇಕು. ಅಂದಾಗ ಮಾತ್ರ ಸಂಬಂಧ ಸಾಮರಸ್ಯದಿಂದ ಕೂಡಿರಲು ಸಾಧ್ಯವಾಗುತ್ತದೆ.

First published: