• Home
  • »
  • News
  • »
  • lifestyle
  • »
  • Mites on Face: ನಮ್ಮ ಮುಖದ ಮೇಲೆ ಕಣ್ಣಿಗೆ ಕಾಣದ ಸಾವಿರಾರು ಹುಳಗಳು ವಾಸಿಸುತ್ತವೆ, ರಾತ್ರಿಹೊತ್ತಲ್ಲಿ ಮಾತ್ರ ಓಡಾಡ್ತವೆ!

Mites on Face: ನಮ್ಮ ಮುಖದ ಮೇಲೆ ಕಣ್ಣಿಗೆ ಕಾಣದ ಸಾವಿರಾರು ಹುಳಗಳು ವಾಸಿಸುತ್ತವೆ, ರಾತ್ರಿಹೊತ್ತಲ್ಲಿ ಮಾತ್ರ ಓಡಾಡ್ತವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಮ್ಮ ಮುಖದ ಮೇಲೆ ನಮಗೆ ಗೊತ್ತಿಲ್ಲದ ಹಾಗೆ ಅದು ರಾತ್ರಿಯಲ್ಲಿ (Night) ಸಣ್ಣ ಹುಳಗಳು ಓಡಾಡುತ್ತಿರುತ್ತವೆ ಎಂದು ಅವರಿವರು ಹೇಳಿರೋದನ್ನು ಅಥವಾ ಎಲ್ಲೋ ನಾವು-ನೀವೇಲ್ಲಾ ಓದಿರುತ್ತೇವೆ.

  • Trending Desk
  • 5-MIN READ
  • Last Updated :
  • Share this:

ಮುಖದ ಮೇಲಿನ ಕೂದಲಿನ ಕಿರು ಸಂಧಿಗಳಲ್ಲಿ ಸಣ್ಣ ಕಣ್ಣಿಗೆ ಕಾಣದ ಜೀವಿಗಳು ಇವೆ ಎಂಬುದರ ಬಗ್ಗೆ ಆಗಾಗ್ಗೆ ನಾವು ಕೇಳಿರುತ್ತೇವೆ. ನಮ್ಮ ಮುಖದ ಮೇಲೆ ನಮಗೆ ಗೊತ್ತಿಲ್ಲದ ಹಾಗೆ ಅದು ರಾತ್ರಿಯಲ್ಲಿ (Night) ಸಣ್ಣ ಹುಳಗಳು ಓಡಾಡುತ್ತಿರುತ್ತವೆ ಎಂದು ಅವರಿವರು ಹೇಳಿರೋದನ್ನು ಅಥವಾ ಎಲ್ಲೋ ನಾವು-ನೀವೇಲ್ಲಾ ಓದಿರುತ್ತೇವೆ. ಇದು ನಿಜನಾ ಅಂತಾ ನಿಮಗೆ ಅನಿಸಬಹುದು, ಖಂಡಿತ ಇದು ವಾಸ್ತವವಾಗಿ ನಿಜ ವಿಷಯ. ನಮ್ಮನಿಮ್ಮೆಲ್ಲರ ಮುಖದ ಮೇಲೆ ಬರಿಗಣ್ಣಿಗೆ ಕಾಣದ ಅದೆಷ್ಟೋ ಹುಳಗಳು ನಮ್ಮ ಜೊತೆಯೇ ವಾಸಿಸುತ್ತಿರುತ್ತವೆ. ಅದು ಕೂಡ ಇವು ರಾತ್ರಿ ಹೊತ್ತಲ್ಲಿ ಮಾತ್ರ ಓಡಾಡುತ್ತವೆಯಂತೆ. ಕೂದಲಿನ ಕಿರು ಸಂಧಿ ಮತ್ತು ಅನೇಕ ಸಸ್ತನಿಗಳ ತೈಲ (Mammalian Oil) ಕೋಶದಲ್ಲಿ ಡೆಮೊಡೆಕ್ಸ್ ಫೋಲಿಕ್ಯುಲೋರಮ್ (Demodex folliculorum) ಎನ್ನಲಾಗುವ ಹುಳಗಳು ಕಂಡುಬರುತ್ತವೆ.


ಈ ಹುಳಗಳು ನಮ್ಮ ದೇಹದ ಮೇಲೆ ಯಾವಾಗಲೂ ಅಸ್ತಿತ್ವದಲ್ಲಿರುತ್ತವೆ. ಸುಮಾರು 0.3-ಮಿಲಿಮೀಟರ್-ಉದ್ದದ ಜೀವಿಗಳು ಮತ್ತೊಂದು ಕೋಶಕವನ್ನು ಹುಡುಕಲು, ಪಾಲುದಾರ ಮತ್ತು ಸಂಗಾತಿಯನ್ನು ಭೇಟಿ ಮಾಡಲು ನಮ್ಮ ಚರ್ಮದ ಮೇಲೆ ರಂಧ್ರಗಳನ್ನು ಬಿಡುತ್ತವೆ ಎಂದು ಬಿಬಿಸಿ ವರದಿಗಳು ಹೇಳಿವೆ.


ಚರ್ಮದ ಕೋಶ ಮತ್ತು ಸೆಬಸೆಷಸ್ ತೈಲ ಸೇವಿಸುತ್ತವೆ ಈ ಹುಳಗಳು


ಈ ಸೂಕ್ಷ್ಮ ಜೀವಿಗಳು ತಮ್ಮ ಅಸ್ತಿತ್ವ ಮತ್ತು ಉಳಿವಿಗಾಗಿ ಮಾನವರ ಮೇಲೆ ಅವಲಂಬಿತವಾಗಿವೆ. ಈ ಹುಳಗಳು ಸುಮಾರು 90 % ಜನರಲ್ಲಿ ಮುಖದ ಮೇಲಿರುವ ಕೂದಲಿನ ಕಿರು ಸಂಧಿ (ಕಣ್ಣು ರೆಪ್ಪೆ ಮತ್ತು ಹುಬ್ಬು)ಗಳಲ್ಲಿ ವಾಸಿಸುತ್ತವೆ. ಡಿಮೊಡೆಕ್ಸ್ ಬ್ರೆವಿಸ್, ಮುಖದ ತೈಲ ಕೋಶದಲ್ಲಿ ಅಥವಾ ಇನ್ನಿತರ ಕಡೆ ಇರುತ್ತದೆ ಎನ್ನಲಾಗಿದೆ.


ಡಿಮೊಟೆಕ್ಸ್ ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಇದು ಬ್ಯಾಕ್ಟಿರಿಯಾಗಳನ್ನು ತಮ್ಮ ದೇಹದ ಮೇಲೆ ಹೊತ್ತಿರುತ್ತದೆ. ಇದನ್ನು ನೇರವಾಗಿ ಪತ್ತೆ ಮಾಡಲು ಅನೇಕ ವಿಧಾನಗಳನ್ನು ಬಳಕೆ ಮಾಡಲಾಗುತ್ತದೆ. ಈ ಹುಳುಗಳು ಚರ್ಮದ ಕೋಶ ಮತ್ತು ಸೆಬಸೆಷಸ್ ತೈಲಗಳನ್ನು ತಿಂದು ಬದುಕುತ್ತವೆ. ನಮ್ಮ ಮುಖದ ಮೇಲಿರುವ ಈ ಹುಳಗಳನ್ನು ಫೇಸ್‌ವಾಶ್‌ ಅಥವಾ ಸ್ಕ್ರಬ್ ಬಳಸಿ ತೆಗೆಯಲು ಸಾಧ್ಯವಿಲ್ಲ, ಕಾರಣ ಇಷ್ಟೇ ಅವು ಚರ್ಮದಲ್ಲಿ ತುಂಬಾ ಆಳವಾಗಿ ವಾಸಿಸುತ್ತವೆ.


ಅಳಿವಿನಂಚಿನಲ್ಲಿವೆ ಮುಖದ ಮೇಲೆ ವಾಸಿಸುವ ಜೀವಿಗಳು


ಈ ವರ್ಷದ ಆರಂಭದಲ್ಲಿ ಬ್ಯಾಂಗೋರ್ ವಿಶ್ವವಿದ್ಯಾನಿಲಯದ ಡಾ. ಹೆಂಕ್ ಬ್ರೈಗ್ ಮತ್ತು ಅವರ ಸಹೋದ್ಯೋಗಿಗಳು ಪ್ರಕಟಸಿದ ಅಧ್ಯಯನವೊಂದು ಈ ಹುಳಗಳು ಡಿಎನ್‌ಎ ಸಮಸ್ಯೆಯನ್ನು ಎದುರಿಸುತ್ತಿವೆ ಮತ್ತು ಅಳಿವಿನಂಚಿನಲ್ಲಿವೆ ಎಂದು ಹೇಳಿದೆ.


ತಂಡವು ವ್ಯಕ್ತಿಯ ಮೂಗು ಮತ್ತು ಹಣೆಯ ಬ್ಲ್ಯಾಕ್‌ಹೆಡ್ ರಿಮೂವರ್ ಅನ್ನು ಬಳಸಿಕೊಂಡು ಜೀನೋಮ್ ಅನ್ನು ಸಂಗ್ರಹಿಸಿದರು. ಪ್ರತಿ ಮಾದರಿಯು ಸುಮಾರು 40 ಡಿ ಫೋಲಿಕ್ಯುಲೋರಮ್ ಹುಳಗಳನ್ನು ಪತ್ತೆ ಮಾಡಿದೆ.


ಇದನ್ನೂ ಓದಿ: ಹೊಳೆಯುವ ಮುಖದ ಕಾಂತಿಗೆ ಸೋಪ್, ಫೇಸ್‌ವಾಶ್‌ ಬದಲು ನೈಸರ್ಗಿಕ ವಸ್ತುಗಳನ್ನು ಬಳಸಿ..!


ಈ ಸಣ್ಣ ಜೀವಿಗಳು ನೇರಳಾತೀತ ಬೆಳಕಿನಿಂದ ರಕ್ಷಿಸುವ ಜೀನ್ ಅನ್ನು ಕಳೆದುಕೊಂಡಿವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ ಮತ್ತು ಇದೇ ಕಾರಣಕ್ಕೆ ಈ ಹುಳಗಳು ರಾತ್ರಿಯಲ್ಲಿ ಮಾತ್ರ ಸಕ್ರಿಯವಾಗಿರುತ್ತವೆ ಎಂದು ಅಧ್ಯಯನ ಹೇಳಿದೆ.


"ರಾತ್ರಿಯಲ್ಲಿ, ನಾವು ಆಳವಾದ ನಿದ್ರೆಯಲ್ಲಿರುವಾಗ, ಹುಳಗಳು ಲೈಂಗಿಕತೆಯನ್ನು ಹೊಂದಲು ಮತ್ತು ಮಕ್ಕಳನ್ನು ಹೊಂದಲು ರಂಧ್ರಗಳಿಗೆ ಭೇಟಿ ನೀಡುತ್ತವೆ" ಎಂದು ಅಧ್ಯಯನದ ಸಹ-ಲೇಖಕರಾದ ರೀಡಿಂಗ್ ವಿಶ್ವವಿದ್ಯಾಲಯದ ಡಾ ಅಲೆಜಾಂಡ್ರಾ ಪೆರೊಟ್ಟಿ ಬಿಬಿಸಿಗೆ ತಿಳಿಸಿದ್ದಾರೆ.




ಅವುಗಳ ಆನುವಂಶಿಕ ರಚನೆಯು ಬದಲಾಗುತ್ತಿದ್ದಂತೆ, ಈ ಹುಳಗಳು ನಮ್ಮ ಮೇಲೆ ಹೆಚ್ಚು ಅವಲಂಬಿತವಾಗುತ್ತವೆ, ಇದು ಅಂತಿಮವಾಗಿ ಅವುಗಳ ಅಳಿವಿಗೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.

First published: