• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Menstrual Awareness: ಮುಟ್ಟು ಹಾಗೂ ಲೈಂಗಿಕ ಕ್ರಿಯೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಿ, ತಪ್ಪು ದಾರಿ ಹಿಡಿಯುವುದರಿಂದ ತಡೆಯಿರಿ

Menstrual Awareness: ಮುಟ್ಟು ಹಾಗೂ ಲೈಂಗಿಕ ಕ್ರಿಯೆಯ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಿ, ತಪ್ಪು ದಾರಿ ಹಿಡಿಯುವುದರಿಂದ ತಡೆಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳು ವಯಸ್ಸಿಗೆ ಬಂದ ಬಳಿಕ ಪೋಷಕರಾದವರು ನೀಡಲೇಬೇಕಾದ ಅರಿವಿನ ಬಗ್ಗೆ ಫೋರ್ಟಿಸ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಮನೀಶಾ ಸಿಂಗ್‌ ವಿವರಿಸಿದ್ದಾರೆ.

  • Share this:

ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಪೋಷಕರಾದವರ (Parents) ಮೇಲೆ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವ ಜವಬ್ದಾರಿಯ ಜೊತೆಗೆ, ಅವರ ದೈಹಿಕ ಬೆಳವಣಿಗೆಯಲ್ಲಾಗುವ ಬದಲಾವಣೆಗಳು (Physical Development) ಹಾಗೂ ಅದರ ನಿರ್ವಹಣೆಯ ಬಗ್ಗೆಯೂ ಮಕ್ಕಳಲ್ಲಿ ಅರಿವು ಮೂಡಿಸುವುದು ಅವರ ಕರ್ತವ್ಯ. ಮಕ್ಕಳು ವಯಸ್ಸಿಗೆ ಬಂದ ಬಳಿಕ ಪೋಷಕರಾದವರು ನೀಡಲೇ ಬೇಕಾದ ಅರಿವಿನ ಬಗ್ಗೆ ಫೋರ್ಟಿಸ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಮನೀಶಾ ಸಿಂಗ್‌ ವಿವರಿಸಿದ್ದಾರೆ. ಇದರ ಬಗ್ಗೆ ಆದಷ್ಟು ಜಾಗೃತಿಯನ್ನು ಮೂಡಿಸಲೇಬೇಕು. 


ದೈಹಿಕ ಬೆಳವಣಿಗೆಯ ಬಗ್ಗೆ ಅರಿವು ನೀಡಿ: ಬಾಲಕನಾಗಲಿ ಅಥವಾ ಬಾಲಕಿಯಾಗಲಿ ವಯಸ್ಸು 10ನೇ ವಯಸ್ಸಿನಿಂದಲೇ ದೇಹದ ಹಾರ್ಮೋನ್ಸ್‌ಗಳಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದ ಮಕ್ಕಳು ವಿಚಲಿತರಾಗುವ ಸಾಧ್ಯತೆ ಇರಲಿದೆ. ಹೆಣ್ಣು ಮಕ್ಕಳು, ಋತುಮತಿಯಾಗುವುದು, ಗಂಡು ಮಕ್ಕಳಲ್ಲಿ ವೀರ್ಯಗಳ ಬೆಳವಣಿಗೆ, ಗಡ್ಡ, ಮೀಸೆ ಬೆಳವಣಿಗೆಯಿಂದ ಮಕ್ಕಳು ಮಾನಸಿಕವಾಗಿ ಕುಗ್ಗಬಹುದು.


ಹೀಗಾಗಿ ಪೋಷಕರಾದವರು 8ನೇ ವಯಸ್ಸಿನಿಂದಲೇ ಈ ಬಗ್ಗೆ ಮಕ್ಕಳಲ್ಲಿ ಜ್ಞಾನವನ್ನು ನೀಡುವುದು ಅತೀ ಅವಶ್ಯಕ. ಇನ್ನು ಕೆಲವು ಮಕ್ಕಳಲ್ಲಿ ಲೈಂಗಿಕಕ್ರಿಯೆ ಬಗ್ಗೆಯೂ ಆಸಕ್ತಿ ಮೂಡವ ಸಾಧ್ಯತೆ ಇರಲಿದೆ. ಹೀಗಾಗಿ ಲೈಂಗಿಕ ಆರೋಗ್ಯದ ಕುರಿತು, ದೇಹದ ಅಂಗಾಗಳು ಹೇಗೆ ಕೆಲಸ ನಿಭಾಯಿಸಲಿದೆ ಎಂಬುದನ್ನು ಅತ್ಯಂತ ಸರಳ ಹಾಗೂ ಮುಜುಗರ ಉಂಟು ಮಾಡದ ರೀತಿಯಲ್ಲಿ ಮಕ್ಕಳಿಗೆ ತಿಳಿ ಹೇಳಿ. ಇದರಿಂದ ಅವರಿಗೂ ಇಂತಹ ಸಂದರ್ಭದಲ್ಲಿ ಧೈರ್ಯಗುಂದುವುದಿಲ್ಲ. ಮಕ್ಕಳಲ್ಲಿ ದೈಹಿಕ ಬೆಳವಣಿ ಅಥವಾ ಲೈಂಗಿಕತೆಯ ಕುರಿತ ಪ್ರಶ್ನೆಗಳಿಗೆ ಮುಜುಗರ ಉಂಟಾಗದ ರೀತಿಯಲ್ಲಿ ಉತ್ತರಿಸಿ.


ಇದನ್ನೂ ಓದಿ: ವಯಸ್ಸು 40 ಆಗ್ತಿದ್ದಂತೆ ಆರೋಗ್ಯದ ಈ ಅಂಶಗಳ ಬಗ್ಗೆ ನಿರ್ಲಕ್ಷ್ಯ ಮಾಡ್ಬೇಡಿ ಪ್ಲೀಸ್‌!


*ಮುಟ್ಟಿನ ಬಗ್ಗೆ ಇರಲಿ ಜಾಗೃತಿ: ಹೆಣ್ಣುಮಕ್ಕಳು 8 ರಿಂದ 13 ವರ್ಷದೊಳಗೆ ಋತುಮತಿಗಳಾಗಲು ಪ್ರಾರಂಭಿಸುತ್ತಾರೆ. ಈ ಬಗ್ಗೆ ಅವರಿಗೆ ಮೊದಲೇ ಅರಿವು ಮೂಡಿಸಿ. ಹೆಣ್ಣುಮಕ್ಕಳು ಹೆಚ್ಚು ಸೂಕ್ಷ್ಮಸ್ವಭಾವದವರಾದ್ದರಿಂದ ಈ ಬಗ್ಗೆ ಅವರಲ್ಲಿಯೂ ಭಯ ಇರಲಿದೆ. ಹೀಗಾಗಿ ಮುಟ್ಟಾಗುವುದು ಸಹಜ, ಅದರ ನಿರ್ವಹಣೆ, ಸ್ಯಾನಿಟರಿ ಪ್ಯಾಡ್‌ ಬಳಕೆ ಹಾಗೂ ವಿಲೇವಾರಿ ಮಾಡುವುದು, ಮುಟ್ಟಿನ ನೈಲರ್ಮಲ್ಯ ಕಾಪಾಡುವುದು ಇತ್ಯಾದಿ ವಿಚಾರಗಳ ಬಗ್ಗೆ ತಿಳಿ ಹೇಳಿ, ಜೊತೆಗೆ ತಾಯಾದವಳು ಅದಕ್ಕೆ ಸಹಕರಿಸಿ.


ಹುಡುಗರಲ್ಲೂ ಮುಟ್ಟಿನ ಬಗ್ಗೆ ಜಾಗೃತಿ ಮೂಡಿಸಿ: ಮುಟ್ಟಿನ ಬಗ್ಗೆ ಕೇವಲ ಹೆಣ್ಣು ಮಕ್ಕಳಿಗಷ್ಟೇ ಜಾಗೃತಿ ಮೂಡಿಸುವುದು ಸರಿಯಲ್ಲ. ಹೆಣ್ಣಿನ ದೇಹದಲ್ಲಾಗುವ ಬದಲಾವಣೆಯ ಬಗ್ಗೆ ಗಂಡುಮಕ್ಕಳಲ್ಲಿಯೂ ತಿಳುವಳಿಕೆ ಮೂಡಿಸಬೇಕು. ಮುಟ್ಟಿನ ಸಂದರ್ಭದಲ್ಲಾಗುವ ನೋವು, ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿ. ಇದು ಗಂಡುಮಕ್ಕಳು ಹೆಣ್ಣನ್ನು ಗೌರವಿಸುವ ಹಾಗೂ ಅವರನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಹಕರಿಸುತ್ತದೆ.


ಇದನ್ನೂ ಓದಿ: ಮಹಿಳೆಯರನ್ನು ಕಾಡುವ ನಾಲ್ಕು ಪ್ರಮುಖ ಸಮಸ್ಯೆಗಳಿವು? ಅವುಗಳನ್ನು ಪರಿಹರಿಸುವುದು ಹೇಗೆ?


*ಸುರಕ್ಷಿತ ಲೈಂಗಿಕತೆ ಬಗ್ಗೆ ಚರ್ಚಿಸಿ: ಇಂದಿನ ಮಕ್ಕಳು ಹೆಚ್ಚು ಮುಂದುವರೆದಿರುತ್ತಾರೆ. ಸಾಮಾಜಿಕ ಜಾಲತಾಣದಿಂದ ಲೈಂಗಿಕತೆಯ ಬಗ್ಗೆ ಆಸಕ್ತಿಯನ್ನೂ ಬೆಳೆಸಿಕೊಳ್ಳುತ್ತಾರೆ. ಆದರೆ, ಈ ಕ್ರಿಯೆಯನ್ನು ತಪ್ಪು ದಾರಿಯಲ್ಲಿ ತೆಗೆದುಕೊಂಡು ಹೋಗುವ ಮೊದಲೇ ಪೋಷಕರು ಈ ಬಗ್ಗೆ ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕು. ಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಸ್ನೇಹಿತರಂತೆ ಮಾತನಾಡಿ. ಲೈಂಗಿಕವಾಗಿ ಹರಡುವ ಸೋಂಕಿನ ಬಗ್ಗೆ ತಿಳಿಸಿ, ಅನಗತ್ಯ ಗರ್ಭಧಾರಣೆಯಿಂದ ಆಗುವ ಸಮಸ್ಯೆ, ಹೆಣ್ಣನ್ನು ಗೌರವಿಸುವ ರೀತಿ, ಲೈಂಗಿಕ ಕ್ರಿಯೆಗೆ ಪರಸ್ಪರ ಒಪ್ಪಿಗೆ ಇತ್ಯಾದಿ ವಿಷಯಗಳು ಮಕ್ಕಳಿಗೆ ತಿಳಿದಿರಲಿ. ಇಲ್ಲವಾದರೆ, ಮಕ್ಕಳ ಕುತೂಹಲ ಬೇರೆ ದಾರಿಗೆ ಕೊಂಡೊಯ್ಯಬಹುದು.


top videos



    *ಮುಕ್ತವಾಗಿ ಚರ್ಚಿಸಿ: ಮಕ್ಕಳು ವಯಸ್ಸಿಗೆ ಬರುತ್ತಿದ್ದಂತೆ ಅವರೋಂದಿಗೆ ಪೋಷಕರು ಸ್ನೇಹಿತರಾಗಬೇಕು. ಇಲ್ಲವಾದರೆ, ಮಕ್ಕಳು ಹೊಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗುವುದಿಲ್ಲ. ಇದರಿಂದ ಅವರು ಅಡ್ಡದಾರಿ ಹಿಡಿಯಬಹುದು, ನಿಮ್ಮೊಂದಿಗೆ ಗುಟ್ಟು ಇಡಬಹುದು. ಹೀಗಾಗಿ, ನೀವೇ ಅವರಿಗೆ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸುವ ಮುಕ್ತ ಅವಕಾಶ ನೀಡಿದರೆ ಅವರ ಅನುಮಾನ ಬಗೆಹರಿಯುವ ಜೊತೆಗೆ, ಆ ವಿಚಾರಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದುತ್ತಾರೆ. ಇಂದಿನ ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ತಿಳಿಯಲು ಸಾಕಷ್ಟು ದಾರಿ ಇದೆ. ಆದರೆ, ಪೋಷಕರಾದವರಷ್ಟೇ ಉತ್ತಮ ದಾರಿ ತೋರಿಸಲು ಸಾಧ್ಯ. ಹೀಗಾಗಿ ನಿಮ್ಮ ಮಕ್ಕಳೊಂದಿಗೆ, ಉತ್ತಮ ಭಾಷೆಯ ಹಿಡಿತದಲ್ಲಿ ಲೈಂಗಿಕತೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ನೀಡಿ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು