Heart Disease: ಹೃದಯದ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೃದಯಾಘಾತದ ಭಯದಿಂದ ಹೊರ ಬನ್ನಿ

ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯಾಘಾತವನ್ನು ತಡೆಗಟ್ಟಲು ಸರಿಯಾದ ಆಹಾರ ಮತ್ತು ವ್ಯಾಯಾಮಗಳನ್ನು ಮಾಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜನಪ್ರಿಯ ಗಾಯಕ ಕೆಕೆ (KK) ಇತ್ತೀಚೆಗೆ ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಹೃದಯಾಘಾತದಿಂದ (Heart Attack) ನಿಧನರಾದರು. ಇದು ಜನರಲ್ಲಿ ಸಾಮಾನ್ಯವಾಗಿ ಹೃದಯದ ಆರೋಗ್ಯದ ಬಗ್ಗೆ ಕಳವಳ ಮೂಡಿಸಿದೆ. ಜೀವನಶೈಲಿಯ (Life Style) ಅಂಶಗಳನ್ನು ಪರಿಗಣಿಸಿ ಹೃದಯ (Heart) ಕಾಯಿಲೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯಾಘಾತವನ್ನು ತಡೆಗಟ್ಟಲು ಸರಿಯಾದ ಆಹಾರ ಮತ್ತು ವ್ಯಾಯಾಮಗಳನ್ನು ಮಾಡುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಅದೇ ರೀತಿ ಯಾವುದೇ ಹೃದಯ ತೊಂದರೆಯ ಸಾಧ್ಯತೆಗಳನ್ನು ಕಡಿಮೆ ಮಾಡಲು ಧೂಮಪಾನ (Smoking) ಮತ್ತು ಒತ್ತಡದಂತಹ ಅಪಾಯಕಾರಿ ಅಂಶಗಳನ್ನು ನಿರ್ವಹಿಸುವುದು ಸಹ ಮುಖ್ಯವಾಗಿದೆ.

  ಸ್ಯಾಚುರೇಟೆಡ್ ಆಹಾರಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು

  ಹೃದಯ ಸ್ನಾಯುಗಳಿಗೆ ಆಮ್ಲಜನಕವನ್ನು ತರುವ ರಕ್ತದ ಹರಿವು ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ಸ್ಥಗಿತಗೊಂಡಾಗ ಹೃದಯಾಘಾತ ಸಂಭವಿಸುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು, ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುವ ಆಹಾರಗಳು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು ಮತ್ತು ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಇತರ ವಸ್ತುಗಳ ಪ್ಲೇಕ್ ಅನ್ನು ನಿರ್ಮಿಸಲು ಕಾರಣವಾಗಬಹುದು, ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ.

  ನೀವು ತಿನ್ನುವ ಆಹಾರದಲ್ಲಿ 5-6% ಸ್ಯಾಚುರೇಟಡ್ ಕೊಬ್ಬಿನಂಶವಿದ್ದರೆ ತೊಂದರೆಯಿಲ್ಲ, ಆದರೆ 11 ರಿಂದ 13 ಗ್ರಾಂನಷ್ಟು ಸ್ಯಾಚುರೇಟಡ್ ಕೊಬ್ಬಿನಂಶವಿರುವ ಆಹಾರ ಬಳಕೆ ಕಡಿಮೆ ಮಾಡಿ. ನೀವು ದಿನದಲ್ಲಿ 2000ಕ್ಕಿಂತ ಅಧಿಕ ಕ್ಯಾಲೋರಿ ಇರುವ ಆಹಾರ ಸೇವಿಸಲು ಹೋಗಬೇಡಿ. ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾದ್ಯತೆ ಇದೆ.

  ಇದನ್ನೂ ಓದಿ: Stress Relief Teas: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

  ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಮಿತಿಗೊಳಿಸಿ

  ಆಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು ಮಿತಿಗೊಳಿಸಿ. ಹೆಚ್ಚು ಆಲ್ಕೋಹಾಲ್ ರಕ್ತದೊತ್ತಡ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸುತ್ತದೆ. ಟ್ರೈಗ್ಲಿಸರೈಡ್‌ಗಳು ರಕ್ತದಲ್ಲಿ ಕಂಡುಬರುವ ಒಂದು ರೀತಿಯ ಕೊಬ್ಬು. ಆಲ್ಕೋಹಾಲ್ ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುತ್ತದೆ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅತಿಯಾದ ಆಲ್ಕೋಹಾಲ್ ನಿಮ್ಮ ರಕ್ತದೊತ್ತಡವನ್ನು ಸಹ ಹೆಚ್ಚಿಸುತ್ತದೆ.

  ರಕ್ತದೊತ್ತಡವನ್ನು ತಡೆಯುವ ಆಹಾರ ವಿಧಾನಗಳನ್ನು ಅನುಸರಿಸಿ

  ರಕ್ತದೊತ್ತಡವನ್ನು ತಡೆಯುವ ಆಹಾರ ವಿಧಾನಗಳನ್ನು ಅನುಸರಿಸಿ ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ವೈದ್ಯರ ಪ್ರಕಾರ ಹಣ್ಣುಗಳು ತರಕಾರಿಗಳು ಧಾನ್ಯಗಳು ಮತ್ತು ಹೃದಯದ ಆರೋಗ್ಯಕರ ಹೃದಯದ ಕೊಬ್ಬು ಕಡಿಮೆ ಮಾಡುವ ಆಹಾರವನ್ನು ಸೇವಿಸಿರಿ. ಕೆಂಪು ಮಾಂಸ, ಸಕ್ಕರೆ ಯುಕ್ತ ಆಹಾರಗಳು ಮತ್ತು ಪಾನೀಯಗಳನ್ನು ಕಡಿಮೆ ಮಾಡುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

  ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದು, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸುವುದು ಉತ್ತಮ ಮತ್ತು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ , ನಿಮ್ಮ ಭಾವನೆಗಳನ್ನು ಅಥವಾ ಕಾಳಜಿಗಳನ್ನು ಹಂಚಿಕೊಳ್ಳಲು ನಿಮ್ಮ ಜೀವನದಲ್ಲಿ ಬೆಂಬಲ ನೀಡುವ ಜನರನ್ನು ಹೊಂದಿರುವುದು ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

  ಇದನ್ನೂ ಓದಿ: Cashew Nut Benefits: ಹೃದಯಯ ಕ್ಷಮತೆ ಹೆಚ್ಚಳ, ರಕ್ತದೊತ್ತಡ, ಮಧುಮೇಹ ನಿಯಂತ್ರಣ; ಗೋಡಂಬಿ ಸೇವನೆಯ ಲಾಭಗಳು ಹೀಗಿವೆ

  ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

  ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ನಿಮ್ಮ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.  ನೀವು ದಿನದಲ್ಲಿ ಯಾವ ಆಹಾರ ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು, ಯಾವ ಆಹಾರ ಸೇವಿಸಬಾರದು ಅಥವಾ ಸೇವಿಸುವುದನ್ನು ಕಡಿಮೆ ಮಾಡಬೇಕೆಂಬ ಡಯಟ್‌ ಚಾರ್ಟ್ ಮಾಡಿ. ನಂತರ ತಪ್ಪದೆ ಪಾಲಿಸಿ.

  ಕೆಲವೊಂದು ದಿನ ನಿಮಗೆ ಇಷ್ಟದ ಆಹಾರ ಸೇವಿಸಿದರೆ ತೊಂದರೆಯಿಲ್ಲ, ಆದರೆ ಹೆಚ್ಚಿನ ದಿನಗಳಲ್ಲಿ ನಿಮ್ಮ ಡಯಟ್ ಚಾರ್ಟ್ ಫಾಲೋ ,ಆಡಿ. ಹೀಗೆ ಮಾಡಿದ್ದೇ ಆದರೆ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ, ಮೈ ತೂಕ ಹೆಚ್ಚಾಗುತ್ತದೆ ಎಂಬ ಚಿಂತೆ ಇರುವುದಿಲ್ಲ, ಹೃದಯದ ಬಡಿತ ಕೂಡ ಆರೋಗ್ಯಕರವಾಗಿರುತ್ತದೆ.
  Published by:Swathi Nayak
  First published: