Clothes: ಸೋಪೂ ಇರಲಿಲ್ಲ, ಡಿಟರ್ಜೆಂಟೂ ಇರಲಿಲ್ಲ! ಮಹಾರಾಜರ ಕಾಲದಲ್ಲಿ ಬಟ್ಟೆ ಹೇಗೆ ವಾಶ್ ಮಾಡ್ತಾ ಇದ್ರು?

ಆಗಿನ ಕಾಲದಲ್ಲಿ ಸಾಬೂನು ಹಾಗೂ ಮಾರ್ಜಕ ಇರಲಿಲ್ಲ. ಆದರೂ ರಾಜ-ಮಹಾರಾಜರ ಕಾಲದಲ್ಲಿ ಅವರದ್ದು ಹಾಗೂ ಜನರ ಬಟ್ಟೆಗಳು ಸೋಂಕು ರಹಿತವಾಗಿ ಇರುತ್ತಿದ್ದವು. ಅದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬಟ್ಟೆಗಳು (Clothes) ಸ್ವಲ್ಪ ಕೊಳಕಾದ್ರು ಸಾಕು ಜನರು ಮಾರುಕಟ್ಟೆಯಲ್ಲಿ (Market) ಸಿಗುವ ತರಹೇವಾರಿ ಡಿಟರ್ಜೆಂಟ್ (Detargent) ಸೋಪ್ ಪೌಡರ್ ಗಳನ್ನು(Powder) ಬಳಸುತ್ತಾರೆ.. ಅದರಲ್ಲೂ ಕೆಲವರಂತೂ ತಮ್ಮ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಇಂಥದ್ದೇ ಸೋಪು ಬೇಕು.. ಇದೇ ರೀತಿಯ ಇದೇ ಕಂಪನಿಯ ಡಿಟರ್ಜಂಟ್ ಪೌಡರ್ ಬೇಕು ಎಂದು ಬಯಸಿ ಬಯಸಿ ಅಂಗಡಿಯಿಂದ(Shop) ತಂದು ತಮ್ಮ ಬಟ್ಟೆಗಳನ್ನು ಸ್ವಚ್ಛ ಮಾಡಲು ಬಳಸಿಕೊಳ್ಳುತ್ತಾರೆ.. ಅಲ್ಲದೆ ಪ್ರಸ್ತುತ ದಿನದಲ್ಲಿ ಹೆಚ್ಚಿನ ದೂಳು ಹಾಗೂ ಕೊಳೆ ಹೊರಗಡೆ ಓಡಾಡುವುದರಿಂದ ನಿಮ್ಮ ಬಟ್ಟೆಯ ಮೇಲೆ ಬಂದು ಕುಳಿತಿರುತ್ತದೆ.. ಹೀಗಾಗಿ ಇದನ್ನು ಕೇವಲ ನೀರಿನಿಂದ (Water)ಸ್ವಚ್ಛಗೊಳಿಸಲು ಸಾಧ್ಯವಿಲ್ಲ.. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಡಿಟರ್ಜೆಂಟ್ ಹಾಗೂ ಸೊಪ್ ಗಳಿಂದ ಬಟ್ಟೆಯನ್ನ ಸ್ವಚ್ಛಮಾಡಿ ಕೆಲಸವನ್ನ ಕಮ್ಮಿ ಮಾಡಿಕೊಳ್ಳುವ ಕೆಲಸವನ್ನು ಮಹಿಳೆಯರು(Women) ಮಾಡುತ್ತಾರೆ.

    ಆದ್ರೆ ಡಿಟರ್ಜಂಟ್ ಪೌಡರ್ ಗಳು ಎಲ್ಲಾ ಇತ್ತೀಚಿನ ಆವಿಷ್ಕಾರ.. ಇದೆಲ್ಲಾ ಆವಿಷ್ಕಾರ ಆಗುವುದಕ್ಕೆ ಮುಂಚೆ ಅಂದರೆ ರಾಜಮಹಾರಾಜರ ಕಾಲದಲ್ಲಿ ಬಟ್ಟೆಗಳನ್ನು ಯಾವ ರೀತಿ ಸ್ವಚ್ಛ ಮಾಡುತ್ತಿದ್ದರು ಎಂಬ ಪ್ರಶ್ನೆಗೆ ನಮ್ಮಲ್ಲಿ ಬಹುತೇಕರಿಗೆ ಉತ್ತರ ಗೊತ್ತಿರುವುದಿಲ್ಲ.. ಹಾಗಿದ್ರೆ ರಾಜಮಹಾರಾಜರ ಕಾಲದಲ್ಲಿ ಯಾವ ರೀತಿ ಬಟ್ಟೆಗಳನ್ನು ಸ್ವಚ್ಛ ಮಾಡುತ್ತಿದ್ದರು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ..

    ರಾಜಮಹಾರಾಜರ ಕಾಲದಲ್ಲಿ ಬಟ್ಟೆಗಳ ಸ್ವಚ್ಛತೆ ಹೇಗೆ..?

    ಪ್ರಸ್ತುತ ದಿನಗಳಲ್ಲಿ ಮನೆಯಲ್ಲಿ ಬಟ್ಟೆ ಒಗೆಯಲು ವಾಷಿಂಗ್ ಮಷೀನ್ ಗಳು ಬಂದಿವೆ.. ಕೆಲವೊಂದು ವಾಷಿಂಗ್ ಮೆಷಿನ್ ಗಳಿಗೆ ಇದೇ ರೀತಿಯ ಡಿಟರ್ಜಂಟ್ ಪೌಡರ್ ಬಳಕೆ ಮಾಡಿ ನಮ್ಮ ಬಟ್ಟೆ ಸ್ವಚ್ಛಗೊಳಿಸಬೇಕು ಎನ್ನುವ ನಂಬಿಕೆ ಹಲವರಲ್ಲಿ ಇದೆ.. ಮತ್ತು ಕೆಲವು ಸಂದರ್ಭದಲ್ಲಿ ನಾವು ಎಲ್ಲಿಯಾದರೂ ಹೋದಾಗ ನಮ್ಮ ಬಟ್ಟೆ ಒಗೆಯಲು ಸೋಪು ಮರೆತು ಬಂದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ.. ಅದರಲ್ಲೂ ಪ್ರವಾಸಕ್ಕೆ ಹೋದಂತಹ ಸಂದರ್ಭದಲ್ಲಿ ನೀರಿನಲ್ಲಿ ಮಾಡಿದಾಗ ಒದ್ದೆ ಬಟ್ಟೆಗಳನ್ನು ಹಾಗೆ ಇಟ್ಟುಕೊಳ್ಳುವ ಆಗುವ ಹಿಂಸೆ ಮತ್ತೊಂದಿಲ್ಲ..

    ಇದನ್ನೂ ಓದಿ: ಚರ್ಮ,ಕೂದಲಿನ ಸಮಸ್ಯೆಗೆ ಈ ಬಾಳೆಹಣ್ಣಿನ ಸಿಪ್ಪೆಯೇ ಮದ್ದು

    ಹೀಗಾಗಿಯೇ ಯಾವುದೇ ಸಂದರ್ಭದಲ್ಲಿ ಒದ್ದೆಯಾದ ಬಟ್ಟೆಗಳನ್ನು ಪಾಸ್ ಮಾಡಲು ಡಿಟರ್ಜೆಂಟ್ ಅವಶ್ಯಕ.. ಆದರೆ ಇದ್ಯಾವುದು ಇಲ್ಲದೇ ಇದ್ದ ಕಾಲದಲ್ಲಿ ರಾಜ-ಮಹಾರಾಜರು ಹೇಗೆ ತಮ್ಮ ಬಟ್ಟೆಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಿದ್ದರು.ಒಂದು ಹೊಳಪು ಕೊಡುವ ರೀತಿ ಬಟ್ಟೆಗಳನ್ನು ರಾಜಮಹಾರಾಜರ ಸೇವಕರು ಹೇಗೆ ಕಾಪಾಡುತ್ತಿದ್ದರು ಅನ್ನೋದು ಕುತೂಹಲ

    ಸೋಂಕು ರಹಿತವಾಗಿದ್ದ ರಾಜಮಹಾರಾಜರ ಬಟ್ಟೆಗಳು

    ಪುರಾಣಕಾಲದಲ್ಲಿ ಅಥವಾ ರಾಜಮಹಾರಾಜರ ಕಾಲದಲ್ಲಿ ಯಾವುದೇ ಸಾಬೂನು ಹಾಗು ಮಾರ್ಜಕಗಳ ಬಳಕೆ ಇರುತ್ತಿರಲಿಲ್ಲ.. ಹೀಗಾಗಿ ಅಂದಿನ ಜನರು ತಮ್ಮ ಬಟ್ಟೆಗಳನ್ನು ತೊಳೆಯಲು ಏನನ್ನು ಬಳಸುತ್ತಿದ್ದರು ಅನ್ನೋದು ಎಲ್ಲರಿಗೂ ಕುತೂಹಲ. ಅಂದಿನ ಕಾಲದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿ ಇದ್ದರೂ ಸಹ ಅಂದಿನ ಜನರು ಬಳಕೆ ಮಾಡುತ್ತಿದ್ದ ವಸ್ತುಗಳಿಂದ ಅವರ ಬಟ್ಟೆಗಳು ಸೋಂಕು ರಹಿತವಾಗಿ ಇರುತ್ತಿದ್ದವು.. ಇದಕ್ಕೆ ಕಾರಣ ಅಂದರೆ ಅವರು ಬಟ್ಟೆ ತೊಳೆಯಲು ಬಳಸುತ್ತಿದ್ದ ವಸ್ತುಗಳು.. ಅಂದ್ರೆ ಆಗಿನ ಕಾಲದಲ್ಲಿ ಸಾಬೂನು ಹಾಗೂ ಮಾರ್ಜಕ ಇಲ್ಲದೆಯೇ ಶುದ್ಧನೀರಿನಿಂದ ಹಣ್ಣುಗಳನ್ನು ಬಳಕೆಮಾಡಿ ಜನರು ಬಟ್ಟೆಗಳನ್ನು ತೊಳೆಯುತ್ತಿದ್ದರು.. ಹೀಗಾಗಿಯೇ ಅವರ ಬಟ್ಟೆಗಳು ಸೋಂಕು ರಹಿತವಾಗಿ ಇರುತ್ತಿದ್ದವು.

    ಯಾವ ಹಣ್ಣಿನಿಂದ ಬಟ್ಟೆ ತೊಳೆಯಲಾಗುತ್ತಿತ್ತು..?

    ಸಸ್ಯ ಮತ್ತು ಆಯುರ್ವೇದದಲ್ಲಿ ದೇಶ ಯಾವಾಗಲೂ ಸಮೃದ್ಧವಾಗಿದೆ. ತ್ರೇತಾಯುಗಕ್ಕಿಂತ ಹಳೆಯ ಕಾಲದಿಂದಲೂ ಅಂಟುವಾಳ ಗಿಡ ನಮ್ಮಲ್ಲಿದೆ. ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅಂಟುವಾಳವನ್ನು ಬಳಸಲಾಗುತ್ತಿತ್ತು. ಶ್ರೀರಾಮ ಮತ್ತು ಕೃಷ್ಣನ ಕಾಲದಲ್ಲಿ ದುಬಾರಿ ರೇಷ್ಮೆ ಬಟ್ಟೆಗಳನ್ನು ಈ ಅಂಟುವಾಳದಿಂದ ಸ್ವಚ್ಛಗೊಳಿಸಲಾಗುತ್ತಿತ್ತು.ಪ್ರಾಚೀನ ಭಾರತದ ಸೂಪರ್ ಸೋಪ್ ಎಂದು ಅಂಟವಾಳವನ್ನು ಕರೆಯಲಾಗುತ್ತಿತ್ತು. ಅದರ ಸಿಪ್ಪೆಗಳು ನೊರೆಯನ್ನು ಉತ್ಪತ್ತಿ ಮಾಡುತ್ತವೆ. ಅದನ್ನು ಬಟ್ಟೆ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಅಂಟುವಾಳು ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ.

    ಪ್ರಾಚೀನ ಭಾರತದಲ್ಲಿ, ರಾಣಿಯರು ತಮ್ಮ ದೊಡ್ಡ ಕೂದಲನ್ನು ಇದರಿಂದ ತೊಳೆಯುತ್ತಿದ್ದರು. ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಬಟ್ಟೆಗಳನ್ನು ಎರಡು ರೀತಿಯಲ್ಲಿ ಸ್ವಚ್ಛಗೊಳಿಸಲಾಗುತ್ತಿತ್ತು. ಸಾಮಾನ್ಯ ಜನರು ತಮ್ಮ ಬಟ್ಟೆಗಳನ್ನು ಬಿಸಿನೀರಿನಲ್ಲಿ ಹಾಕಿ ಕುದಿಸುತ್ತಿದ್ದರು. ನಂತರ ಅದನ್ನು ಹೊರಗೆ ತೆಗೆದ ನಂತರ ಸ್ವಲ್ಪ ಸಮಯ ತಣ್ಣಗಾದ ನಂತರ, ಕಲ್ಲುಗಳ ಮೇಲೆ ಹೊಡೆಯುತ್ತಿದ್ದರು. ಇದರಿಂದಾಗಿ ಬಟ್ಟೆಯಲ್ಲಿರುವ ಕೊಳಕು ಹೋಗುತ್ತಿತ್ತು. ದೊಡ್ಡ ಮಡಕೆಗಳು ಮತ್ತು ಕುಲುಮೆಗಳನ್ನು ಬಳಸಿ ಈ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿತ್ತು. ದೊಡ್ಡ ನಗರಗಳಲ್ಲಿನ ಧೋಬಿ ಘಾಟ್‌ಗಳಲ್ಲಿ ಇಂದಿಗೂ ಈ ಸಂಪ್ರದಾಯ ಮುಂದುವರಿದಿದೆ.

    ಇದನ್ನೂ ಓದಿ: ನಿಮ್ಮ ನಿಶ್ಚಿತಾರ್ಥ, ಮದುವೆ ಮುರಿದು ಬಿತ್ತೆಂದು ಯೋಚಿಸಿ ಕೊರಗಬೇಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

    ಬಟ್ಟೆಗಳನ್ನು ಸ್ವಚ್ಛಗೊಳಿಸಲು ಇನ್ನೊಂದು ಮಾರ್ಗವಿತ್ತು. ಗ್ರಾಮೀಣ ಪ್ರದೇಶಗಳಲ್ಲಿ, ಖಾಲಿ ಭೂಮಿಯಲ್ಲಿ, ನದಿ-ಕೊಳದ ದಡದಲ್ಲಿ ಅಥವಾ ಹೊಲಗಳಲ್ಲಿ ಬಿಳಿ ಬಣ್ಣದ ಪುಡಿ ಕಂಡುಬರುತ್ತದೆ. ಇದನ್ನು 'ರೆಹ್' ಎಂದು ಕರೆಯಲಾಗುತ್ತದೆ. ಇದು ದೇಶದ ನದಿಗಳು ಮತ್ತು ಕೊಳಗಳ ಭೂ ದಡದಲ್ಲಿ ಹೇರಳವಾಗಿ ಕಂಡುಬರುತ್ತದೆ. ಅದಕ್ಕೆ ಬೆಲೆಯೇ ಇರಲಿಲ್ಲ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಟ್ಟೆಗಳನ್ನು ನೆನೆಯಲು ಬಳಸಲಾಗುತ್ತಿತ್ತು. ನಂತರ ಬಟ್ಟೆಗಳನ್ನು ಮರಗಳ ಬೇರುಗಳಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಲಾಗುತ್ತಿತ್ತು
    Published by:ranjumbkgowda1 ranjumbkgowda1
    First published: