Weight Loss: 6 ವಾರದಲ್ಲಿ 4 ಕೆಜಿ ತೂಕ ಇಳಿಸಿಕೊಂಡ ನಟಿ ಜೆನಿಲಿಯಾ, ಸೀಕ್ರೆಟ್​ ಏನು ಗೊತ್ತಾ?

ಇತ್ತೀಚೆಗಷ್ಟೇ ನಟಿ ಜೆನಿಲಿಯಾ ತಾವು ತೂಕ ಇಳಿಸಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗ ಪಡಿಸಿದ್ದಾರೆ. ವಿಸ್ಮಯ ಸಂಗತಿ ಅಂದ್ರೆ ಅವರು ಈ ಕೆಲಸವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಆರೋಗ್ಯಕರ ರೀತಿಯಲ್ಲಿ ಮಾಡಿದ್ದಾರೆ.

ನಟಿ ಜೆನಿಲಿಯಾ ದೇಶಮುಖ್

ನಟಿ ಜೆನಿಲಿಯಾ ದೇಶಮುಖ್

  • Share this:
    ಬಾಲಿವುಡ್ (Bollywood) ಸೇರಿದಂತೆ ಇತರೆ ಸಿನಿ ಇಂಡಸ್ಟ್ರಿಯಲ್ಲಿ (Cinema Industry) ತಮ್ಮ ಕ್ಯೂಟ್ ನೆಸ್ ಮತ್ತು ನಟನೆಯಿಂದ (Acting) ಜನರ ಮನ ಗೆದ್ದಿರುವ ನಟಿ ಜೆನಿಲಿಯಾ ದೇಶಮುಖ್ (Actress Genelia Deshmukh). ತಮ್ಮ ಸೌಂದರ್ಯ (Beauty) ಮತ್ತು ಸುಂದರ ನಟನೆಯಿಂದ ಜನರ ಮನದಲ್ಲಿ ಮನೆ ಮಾಡಿದ್ದಾರೆ ನಟಿ ಜೆನಿಲಿಯಾ ದೇಶಮುಖ್. ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಲ್ಲಿ ನಟಿ ಜೆನಿಲಿಯಾ ದೇಶಮುಖ್ ಕಾಣಿಸದೇ ಇರಬಹುದು. ಆದರೆ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಅವರನ್ನು ಫಾಲೋ ಮಾಡ್ತಾರೆ. ಜೆನಿಲಿಯಾ ಮಾತ್ರವಲ್ಲದೇ ಅವರ ಪತಿ ನಟ ರಿತೇಶ್ ದೇಶ್‌ಮುಖ್ ಕೂಡ ಅವರೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

    ನಟಿ ಜೆನಿಲಿಯಾ ದೇಶಮುಖ್

    ನಟಿ ಜೆನಿಲಿಯಾ ದೇಶಮುಖ್ ಅವರ ವೀಡಿಯೊಗಳು ಜನರನ್ನು ಸಾಕಷ್ಟು ಆಕರ್ಷಿಸುತ್ತವೆ. ತಮಾಷೆ ಮಾಡುವುದರ ಹೊರತಾಗಿ ಜೆನಿಲಿಯಾ ತನ್ನ ವೈಯಕ್ತಿಕ ಜೀವನ ಮತ್ತು ಜೀವನಶೈಲಿಗೆ ಸಂಬಂಧಿಸಿದ ಮಾಹಿತಿಯನ್ನು ತನ್ನ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ.

    ಇತ್ತೀಚೆಗಷ್ಟೇ ಜೆನಿಲಿಯಾ ತಾವು ತೂಕ ಇಳಿಸಿರುವ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗ ಪಡಿಸಿದ್ದಾರೆ. ವಿಸ್ಮಯಕಾರಿ ಸಂಗತಿ ಅಂದ್ರೆ ಅವರು ಈ ಕೆಲಸವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಆರೋಗ್ಯಕರ ರೀತಿಯಲ್ಲಿ ಮಾಡಿದ್ದಾರೆ. ಜೆನಿಲಿಯಾ ತೂಕ ಇಳಿಸುವ ಪ್ರಯಾಣವು ತೂಕ ನಷ್ಟದ ಯೋಜನೆಯಲ್ಲಿರುವವರಿಗೆ ಪಾಠ ಕಲಿಸುತ್ತದೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಕಠಿಣ ಪರಿಶ್ರಮ ಮತ್ತು ಆರೋಗ್ಯಕರ ಆಹಾರದ ಮೂಲಕ ತೂಕ ಕಳೆದುಕೊಳ್ಳಲು ಸಾಧ್ಯ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ನಟಿ ಜೆನಿಲಿಯಾ ತೂಕವನ್ನು ಹೇಗೆ ಇಳಿಸಿದ್ದಾರೆ ಮತ್ತು ಇದರಲ್ಲಿ ನಿಮಗೆ ಏನು ಸಹಾಯ ಆಗಲಿದೆ ಎಂಬುದನ್ನು ತಿಳಿಯಿರಿ.

    6 ವಾರಗಳಲ್ಲಿ 5 ಕೆಜಿ ತೂಕ ಇಳಿಕೆ

    ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಕ್ಲಿಪ್‌ನಲ್ಲಿ, ನಟಿ ಜೆನಿಲಿಯಾ ತನ್ನ 6 ವಾರಗಳ ತೂಕ ನಷ್ಟ ಪ್ರಯಾಣದ ಬಗ್ಗೆ ಹೇಳಿದ್ದಾರೆ. ಈ ವೇಳೆ ಅವರು 4 ಕೆಜಿ ತೂಕ ಇಳಿಸಿದ್ದಾಗಿ ತಿಳಿಸಿದ್ದಾರೆ. ನಟಿ ಜೆನಿಲಿಯಾ ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ, ಇದು 6 ವಾರಗಳು. 59.4 ಕೆಜಿಯಿಂದ 55.1 ಕೆಜಿ ತೂಕ ಇಳಿಸಿದ್ದೇನೆ. ಅದೊಂದು ಅದ್ಭುತ ಜರ್ನಿ ಆಗಿತ್ತು ಎಂದಿದ್ದಾರೆ.



    ಜೆನಿಲಿಯಾ ತೂಕ ಇಳಿಸಿದ್ದು ಹೇಗೆ?

    ಜೆನಿಲಿಯಾ ಆರು ವಾರಗಳಲ್ಲಿ ನಾಲ್ಕು ಕೆಜಿ ತೂಕ ಇಳಿಸಲು ಜಿಮ್‌ನಲ್ಲಿ ಶ್ರಮಿಸಿದ್ದಾರೆ ಎಂದು ಹೇಳಿದರು. ಅವರು ಪ್ರತಿದಿನ ತೂಕ ತರಬೇತಿ, ಕಾರ್ಡಿಯೋ ಮತ್ತು ರೋಪ್ ವ್ಯಾಯಾಮ  ಮಾಡುತ್ತಿದ್ದರು. ತೂಕ ಇಳಿಸಲು ಜೆನಿಲಿಯಾ ಸಾಕಷ್ಟು ಕಸರತ್ತು ಮಾಡಿದ್ದಾರೆ. ಜೊತೆಗೆ ಅವರು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ನಿಸ್ಸಂಶಯವಾಗಿ ಪ್ರಯಾಣವು ದೈಹಿಕವಾಗಿ ಅಥವಾ ಮಾನಸಿಕವಾಗಿ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿತ್ತು.

    ಆರಂಭದಲ್ಲಿ ಆರು ವಾರದಲ್ಲಿ ನಾಲ್ಕು ಕೆಜಿ ತೂಕ ಇಳಿಕೆ ಸುಲಭವಾಗಿರಲಿಲ್ಲ

    ಜೆನಿಲಿಯಾ ನನಗೆ ಸಾಕಷ್ಟು ಅನುಮಾನವಿತ್ತು. ಮತ್ತು ನಾನು ಬಹಳಷ್ಟು ಅಭದ್ರತೆಯೊಂದಿಗೆ ಆರು ವಾರಗಳಲ್ಲಿ ನಾಲ್ಕು ಕೆಜಿ ತೂಕ ಇಳಿಕೆ ಜರ್ನಿ ಆರಂಭಿಸಿದೆ. ಆದರೆ ಗುರಿ ತಲುಪುವ ಜೊತೆಗೆ ನಾನು ಹೆಚ್ಚು ಆತ್ಮವಿಶ್ವಾಸ ಮತ್ತು ಶಿಸ್ತು ಹೊಂದಿದ್ದೇನೆ ಎಂದಿದ್ದಾರೆ.

    59.4 ಕೆಜಿಯಿಂದ 55.1 ಕೆಜಿವರೆಗಿನ ಪ್ರಯಾಣ ಹೇಗಿತ್ತು?

    ನಟಿ ಜೆನಿಲಿಯಾ ತನ್ನ ತರಬೇತಿಯನ್ನು 59.4 ಕೆಜಿ ತೂಕ ಇಳಿಸಲು ಆರಂಭಿಸಿದರು. ಎರಡನೇ ವಾರದ ಹೊತ್ತಿಗೆ ಅವರ ತೂಕ 58.2 ಕೆ.ಜಿ. ಮೂರನೇ ವಾರದಲ್ಲಿ ಅವರ ತೂಕ 57.2 ಕೆಜಿ ಮತ್ತು ನಾಲ್ಕನೇ ವಾರದಲ್ಲಿ 56.1 ಕೆಜಿ ಇತ್ತು. ಐದನೇ ವಾರದಲ್ಲಿ, ಅವರು 55.7 ಕೆಜಿ ಮತ್ತು ಆರನೇ ವಾರದಲ್ಲಿ 55.1 ಕೆಜಿ ತೂಕ ಇಳಿಸಿದ್ದಾರೆ.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!   

    ಆರೋಗ್ಯಕರ ದೇಹಕ್ಕೆ ವ್ಯಾಯಾಮ ಬೇಕು

    ಫಿಟ್‌ನೆಸ್‌ನಲ್ಲಿ ತೂಕ ಮುಖ್ಯವಲ್ಲ. ಸ್ನಾಯುಗಳನ್ನು ಅಭಿವೃದ್ಧಿಪಡಿಸುತ್ತದೆ. ವಯಸ್ಸಾಗುವಿಕೆ ತಡೆಯುತ್ತದೆ. ದೇಹದ ನಮ್ಯತೆ ಹೆಚ್ಚಿಸುತ್ತದೆ ಎಂದಿದ್ದಾರೆ.
    Published by:renukadariyannavar
    First published: