• Home
  • »
  • News
  • »
  • lifestyle
  • »
  • Yeast Infection: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?

Yeast Infection: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೀಸ್ಟ್ ಸೋಂಕು ಸಮಸ್ಯೆ ಕೆಲವು ಮಹಿಳೆಯರಿಗೆ ಪದೇ ಪದೇ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಯೀಸ್ಟ್ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಗಳಿಂದ ಯೀಸ್ಟ್ ಸೋಂಕು ಉಂಟಾಗುತ್ತದೆ. ಹಾಗೆಯೇ ದೀರ್ಘಕಾಲದ ಯೀಸ್ಟ್ ಸೋಂಕು, ದೇಹದಲ್ಲಿ ಹಲವು ಸಮಸ್ಯೆ ಉಂಟು ಮಾಡುತ್ತದೆ.

  • Share this:

    ಮಹಿಳೆಯರಲ್ಲಿ (Women’s) ಕಾಣಿಸಿಕೊಳ್ಳುವ ಯೀಸ್ಟ್ ಸೋಂಕು (Yeast Infection), ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಯಾವಾಗ ಬೇಕಾದ್ರೂ ಉಂಟಾಗಬಹುದು. ಸೋಂಕಿನ ಅಪಾಯ (Dangerous) ಹೆಚ್ಚಿಸುವ ಕೆಲವು ಅಂಶಗಳು ಇವೆ. ಯೀಸ್ಟ್ ಸೋಂಕನ್ನು ಯೋನಿ ಕ್ಯಾಂಡಿಡಿಯಾಸಿಸ್ ಎಂದು ಕರೆಯುತ್ತಾರೆ. ದೇಹದಲ್ಲಿ (Body) ಕ್ಯಾಂಡಿಡಾ ಯೀಸ್ಟ್‌ ನೈಸರ್ಗಿಕವಾಗಿ ಕಂಡು ಬರುತ್ತದೆ. ಇದು ಯಾವಾಗ ಅತಿಯಾಗಿ ಬೆಳವಣಿಗೆಯಾಗುತ್ತದೆಯೋ ಆಗ ಯೀಸ್ಟ್ ಸೋಂಕು ಸಂಭವಿಸುತ್ತದೆ. ಯೀಸ್ಟ್ ಸೋಂಕು ಸಮಸ್ಯೆ ಕೆಲವು ಮಹಿಳೆಯರಿಗೆ ಪದೇ ಪದೇ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಯೀಸ್ಟ್ ಬೆಳವಣಿಗೆಗೆ ಅನುಕೂಲಕರವಾದ ಪರಿಸ್ಥಿತಿಗಳಿಂದ ಯೀಸ್ಟ್ ಸೋಂಕು ಉಂಟಾಗುತ್ತದೆ. ಹಾಗೆಯೇ ದೀರ್ಘಕಾಲದ ಯೀಸ್ಟ್ ಸೋಂಕು, ದೇಹದಲ್ಲಿ ಹಲವು ಸಮಸ್ಯೆ ಉಂಟು ಮಾಡುತ್ತದೆ.


    ಯೀಸ್ಟ್ ಸೋಂಕು ತಡೆಯುವುದು ಹೇಗೆ?


    ಇತ್ತೀಚೆಗೆ ಹೋಮಿಯೋಪತಿ ವೈದ್ಯೆ ಸ್ಮಿತಾ ಭೋರ್ ಪಾಟೀಲ್ ಅವರು ಯೀಸ್ಟ್ ಸೋಂಕು ಅಂದ್ರೆ ಯೋನಿ ಸೋಂಕನ್ನು ತಡೆಗಟ್ಟಲು ಕೆಲವು ಸಲಹೆ ನೀಡಿದ್ದಾರೆ. ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಉಂಟಾಗುವ ಯೀಸ್ಟ್ ಸೋಂಕು ಗಂಭೀರ ಸಮಸ್ಯೆ ಆಗಿದೆ.


    ಸಕಾಲಕ್ಕೆ ಯೋನಿ ಸೋಂಕಿನ ಸಮಸ್ಯೆ ಗುರುತಿಸಿ, ಲಕ್ಷಣಗಳು ಮತ್ತು ಕಾರಣಗಳನ್ನು ಕಂಡು ಹಿಡಿದು, ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಯೀಸ್ಟ್ ಸೋಂಕು ಗಂಭೀರವಾಗುತ್ತದೆ.




    ಯೀಸ್ಟ್ ಸೋಂಕು ಅಂದ್ರೆ ಯೋನಿ ಸೋಂಕಿನ ಲಕ್ಷಣಗಳು


    ಖಾಸಗಿ ಭಾಗದಲ್ಲಿ ತುರಿಕೆ ಮತ್ತು ಸುಡುವಿಕೆ, ಮೂತ್ರ ವಿಸರ್ಜನೆ ಅಥವಾ ಸಂಭೋಗದ ವೇಳೆ ಉರಿ ಅಥವಾ ನೋವು ಉಂಟಾಗುತ್ತದೆ. ಖಾಸಗಿ ಭಾಗದಲ್ಲಿ ಊತ, ದದ್ದು, ದಪ್ಪ, ಬಿಳಿ, ವಾಸನೆಯಿಲ್ಲದ ವಿಸರ್ಜನೆ, ಯೋನಿ ಡಿಸ್ಚಾರ್ಜ್ ಸಮಸ್ಯೆ ಯೋನಿ ಸೋಂಕಿನ ಲಕ್ಷಣಗಳಾಗಿವೆ.


    ಹಾರ್ಮೋನು ಅಸಮತೋಲನ


    ಯೋನಿ ಸೋಂಕು ಇದ್ದಾಗ ದೇಹದಲ್ಲಿ ಅಸಮತೋಲಿತ ಹಾರ್ಮೋನ್ ಮಟ್ಟ ಇದಕ್ಕೆ ಕಾರಣವಾಗಿರುತ್ತದೆ. ಹಾರ್ಮೋನು ಅಸಮತೋಲನ ಸಮಸ್ಯೆ ಹೆಚ್ಚಾಗಿ ಗರ್ಭಧಾರಣೆ, ಜನನ ನಿಯಂತ್ರಣ ಔಷಧ, ಅವಧಿ, ಋತುಬಂಧ ಸಮಸ್ಯೆಯಿಂದ ಉಂಟಾಗುತ್ತದೆ.


    ಇದು ದೇಹದಲ್ಲಿನ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಸಮತೋಲನಕ್ಕೆ ಧಕ್ಕೆ ಉಂಟು ಮಾಡುತ್ತದೆ. ಹೆಚ್ಚಿನ ಮಟ್ಟದ ಈಸ್ಟ್ರೊಜೆನ್ ಕ್ಯಾಂಡಿಡಾ ಶಿಲೀಂಧ್ರಗಳ ತ್ವರಿತ ಬೆಳವಣಿಗೆಗೆ ಕಾರಣವಾಗಿದೆ. ಇದು ಯೀಸ್ಟ್ ಸೋಂಕನ್ನು ಉಂಟು ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಮಧುಮೇಹ


    ಮಧುಮೇಹ ಆರೋಗ್ಯ ಸಮಸ್ಯೆ ಸರಿಯಾಗಿ ನಿಯಂತ್ರಿಸದೇ ಹೋದ್ರೆ, ಅದು ರಕ್ತದ ಸಕ್ಕರೆ ಮಟ್ಟ ಹೆಚ್ಚಿಸುತ್ತದೆ. ಸಕ್ಕರೆಯ ಈ ಹೆಚ್ಚಳವು ಯೀಸ್ಟ್ನ ಅತಿಯಾದ ಬೆಳವಣಿಗೆಗೆ ಕಾರಣವಾಗುತ್ತೆ. ಖಾಸಗಿ ಭಾಗಗಳಲ್ಲಿ ಯೋನಿ ಸೋಂಕು ಉಂಟಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಿ.


    ವಿ-ವಾಶ್‌ ಪುನರ್ ಬಳಕೆ


    ಇಂಟಿಮೇಟ್ ವಾಶ್‌ಗಳು ಮತ್ತು ಇತರೆ ಯೋನಿ ಕ್ಲೆನ್ಸರ್‌ಗಳು ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚಿಸುತ್ತವೆ. ಯುಟಿಐ ಅಪಾಯ ಹೆಚ್ಚಿಸುತ್ತವೆ. ದೇಹದ ಅನೇಕ ಭಾಗಗಳಂತೆ ಖಾಸಗಿ ಭಾಗವನ್ನೂ ಶುಚಿಗೊಳಿಸಿ.


    ಎಸ್ ಟಿ ಐ  ಸಮಸ್ಯೆ ಸಹ ಕಾಡುತ್ತದೆ.


    ಮಹಿಳೆಯರಲ್ಲಿ ಸಾಮಾನ್ಯ ಹರಡುವ ಲೈಂಗಿಕ ಸೋಂಕು ಎಸ್ ಟಿಐ ಆಗಿದೆ. ಗೊನೊರಿಯಾ ಲೈಂಗಿಕ ಸಂಭೋಗದ ಮೂಲಕ ಹರಡುವ ಮತ್ತೊಂದು ಸಾಮಾನ್ಯ ಸೋಂಕು. ಆಗಿದೆ.


    ಇದನ್ನೂ ಓದಿ: ಪಪ್ಪಾಯಿ ಹಣ್ಣು ಮಾತ್ರ ಅಲ್ಲ, ಬೀಜ ತಿಂದ್ರೆ ಸಹ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ


    ಯೀಸ್ಟ್ ಸೋಂಕಿನನಿಂದ ಹೀಗೆ ಸುರಕ್ಷಿತವಾಗಿರಿ


    ಆಹಾರದಲ್ಲಿ ಪ್ರೋಬಯಾಟಿಕ್‌ಗಳಾದ ಮೊಸರು, ಸೌರ್‌ಕ್ರಾಟ್, ಕಿಮ್ಚಿ ಮುಂತಾದ  ಸೇವಿಸಿ. ಆಗಾಗ್ಗೆ ಯೋನಿ ತೊಳೆಯಬೇಡಿ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಿ.  ಆರೋಗ್ಯಕರ ಆಹಾರ ಪದಾರ್ಥ ಸೇವಿಸಿ. ಪ್ರತಿಜೀವಕ ಸೇವನೆ ಕಡಿಮೆ ಮಾಡಿ.

    Published by:renukadariyannavar
    First published: