Cycling : ವೇಗವಾಗಿ ತೂಕ ಇಳಿಸಲು ಸೈಕ್ಲಿಂಗ್ ಹೇಗೆ ಸಹಾಯ ಮಾಡುತ್ತೆ? ಹೀಗಿರಲಿ ನಿಮ್ಮ ಸೈಕ್ಲಿಂಗ್ ಅಭ್ಯಾಸ

ಸೈಕ್ಲಿಂಗ್ ಅನ್ನು ಇತರೆ ಬೇರೆ ವ್ಯಾಯಾಮದೊಂದಿಗೆ ಸಂಯೋಜಿಸುವ ಮೂಲಕ, ನೀವು ಅದರಿಂದ ತುಂಬಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸೈಕ್ಲಿಂಗ್ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಸೈಕ್ಲಿಂಗ್

ಸೈಕ್ಲಿಂಗ್

  • Share this:
ನಾವು ಚಿಕ್ಕವರಾಗಿದ್ದಾಗ ಬಹುತೇಕರು ಎಷ್ಟೇ ದೂರ ಹೋಗಬೇಕಿದ್ದರೂ ಸಹ ಸೈಕಲ್ (Cycle) ತುಳಿದುಕೊಂಡು ಹೋಗುತ್ತಿದ್ದರು. ಆನಂತರ ದ್ವಿಚಕ್ರ ವಾಹನಗಳು (Two Wheelers) ಬಂದು ಸೈಕಲ್ ಬಹುತೇಕರಿಗೆ ದೂರವಾದವು ಎಂದು ಹೇಳಬಹುದು. ಆದರೆ ವಿಚಿತ್ರ ಎಂದರೆ ಈಗ ಮತ್ತೆ ಜನರು ಬೆಳಗ್ಗೆ ಮತ್ತು ಸಂಜೆ ತಮ್ಮ ದೇಹದಲ್ಲಿರುವ ಅತಿಯಾದ ತೂಕವನ್ನು (Obesity) ಕಡಿಮೆ ಮಾಡಿಕೊಳ್ಳಲು ಸೈಕ್ಲಿಂಗ್ (Cycling) ಮಾಡುತ್ತಿದ್ದಾರೆ. ನೀವು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು (Weight Loss) ಯಾವಾಗಲೂ ಕಠಿಣವಾದ ತಾಲೀಮು ಮಾಡುವುದು ಅಗತ್ಯವಿಲ್ಲ. ಬದಲಾಗಿ, ನೀವು ಫಿಟ್ನೆಸ್ (fitness) ಅನ್ನು ಸುಲಭವಾಗಿ ಮತ್ತು ವಿನೋದಮಯ ರೀತಿಯಲ್ಲಿ ಪಡೆದುಕೊಳ್ಳಬಹುದು. ನಿಮ್ಮ ಫಿಟ್ನೆಸ್ ಪ್ರಯಾಣವನ್ನು ನೀವು ಸರಳ ಕಾರ್ಡಿಯೋದೊಂದಿಗೆ ಪ್ರಾರಂಭಿಸಬಹುದು, ಸೈಕ್ಲಿಂಗ್‌ಗಿಂತ ಉತ್ತಮವಾದದ್ದು ಯಾವುದು ಇದೆ ಹೇಳಿ..? ಸೈಕ್ಲಿಂಗ್ ಫಿಟ್ ಆಗಿರಲು ಒಂದು ಮಾರ್ಗ ಮಾತ್ರವಲ್ಲದೆ, ನಿಮ್ಮ ನೆರೆಹೊರೆಯನ್ನು ಒಂದು ಸುತ್ತು ನೋಡಿಕೊಂಡು ಅಥವಾ ಕೆಲಸಕ್ಕೆ ಪ್ರಯಾಣಿಸಲು ಮೋಜಿನ ಹೊರಾಂಗಣ ಚಟುವಟಿಕೆಯಾಗಿದೆ ಎಂದು ಹೇಳಬಹುದು. ಇದು ಕೇವಲ ಹಣವನ್ನು ಉಳಿಸುವುದಿಲ್ಲ, ನಿಮ್ಮ ಫಿಟ್ನೆಸ್ ಅನ್ನು ಸಹ ನಿಯಂತ್ರಣದಲ್ಲಿಡುತ್ತದೆ.

ತ್ವರಿತವಾಗಿ ದೇಹದಲ್ಲಿನ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸೈಕ್ಲಿಂಗ್ ನಿಮ್ಮ ಮೊದಲ ಆದ್ಯತೆಯ ಕಾರ್ಡಿಯೋ ವ್ಯಾಯಾಮವಾಗಬಹುದೇ ಎಂಬುದರ ಬಗ್ಗೆ ಫಿಟ್ನೆಸ್ ತಜ್ಞ ದಿನೇಶ್ ಗೊಡಾರಾ ಏನು ಹೇಳಿದ್ದಾರೆ ನೋಡಿ.

ಸೈಕ್ಲಿಂಗ್ ಹೇಗೆ ವಿಭಿನ್ನವಾಗಿದೆ..?

"ಸೈಕ್ಲಿಂಗ್ ವ್ಯಾಯಾಮದ ಅತ್ಯಂತ ಸುಲಭವಾದ ರೂಪವಾಗಿದ್ದು, ಇದನ್ನು ಅತ್ಯುತ್ತಮ ಹೊರಾಂಗಣ ಚಟುವಟಿಕೆ ಎಂದು ಹೇಳಬಹುದು. ಇದು ಫಿಟ್ನೆಸ್ ಅನ್ನು ಹೆಚ್ಚು ವಿನೋದಮಯವಾಗಿಸುತ್ತದೆ. ಕಾರ್ಡಿಯೋ ನಿಮಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ನಿಮ್ಮನ್ನು ಆರೋಗ್ಯಕರ ಮತ್ತು ಫಿಟ್ ಆಗಿ ಮಾಡುತ್ತದೆ. ಆದರೆ ಸೈಕ್ಲಿಂಗ್ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರ ಕ್ರಮವನ್ನು ಕಟ್ಟು ನಿಟ್ಟಾಗಿ ಅನುಸರಿಸುವುದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು. ಈ ಸಂಯೋಜನೆಯು ಕಾಲಾನಂತರದಲ್ಲಿ ನಿಮ್ಮ ಫಿಟ್ನೆಸ್ ಗುರಿಯನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ" ಎಂದು ಗೊಡಾರಾ ಹೇಳುತ್ತಾರೆ.

ಇದನ್ನೂ ಓದಿ:  Water Drinking Habit: ಈ ರೀತಿ ನೀರು ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತಾ? ಅಭ್ಯಾಸವನ್ನು ತಕ್ಷಣ ಬದಲಾಯಿಸಿ

ಆದರೆ, ಈ ಕಾರ್ಡಿಯೋ ಕಾಲಾನಂತರದಲ್ಲಿ ಏಕತಾನತೆಯನ್ನು ಪಡೆಯಬಹುದು ಮತ್ತು ಜನರು ಯಾವುದೇ ಫಲಿತಾಂಶಗಳನ್ನು ತ್ವರಿತವಾಗಿ ಪಡೆಯದ ಕಾರಣ ಮಧ್ಯದಲ್ಲಿಯೇ ಇದನ್ನು ಮಾಡುವುದನ್ನು ಬಿಡುತ್ತಾರೆ. ಆದ್ದರಿಂದ, ತೂಕ ಇಳಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಬಹುದು ಎಂಬ ಪ್ರಶ್ನೆಯನ್ನು ಇದು ಹುಟ್ಟು ಹಾಕುತ್ತದೆ.

ತೂಕ ಇಳಿಸಿಕೊಳ್ಳಲು ಹೇಗೆ ಸೈಕ್ಲಿಂಗ್ ಮಾಡಿದರೆ ಸೂಕ್ತ..?

ಸೈಕ್ಲಿಂಗ್ ಮಾಡುವುದಕ್ಕೆ ಒಂದೇ ಒಂದು ಸರಿಯಾದ ಮಾರ್ಗವಿಲ್ಲ. ಆದರೆ, ಸೈಕ್ಲಿಂಗ್ ಅನ್ನು ಆನಂದದಾಯಕ ಮತ್ತು ಉಪಯುಕ್ತವಾಗಿಸಲು ನೀವು ಅನೇಕ ಮಾರ್ಗಗಗಳನ್ನು ಅನುಸರಿಸಬಹುದು ಎಂದು ಒಂದು ಅಧ್ಯಯನವು ಸೂಚಿಸುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ ನೋಡಿ.

1.ಸಮತಟ್ಟಾದ ಮೇಲ್ಮೈಯಿಂದ ಸೈಕ್ಲಿಂಗ್ ಪ್ರಾರಂಭಿಸಿ

ನೀವು ಈಗ ತಾನೇ ಮೊದಲ ಬಾರಿಗೆ ಸೈಕ್ಲಿಂಗ್ ಮಾಡುತ್ತಿದ್ದರೆ, ಸಮತಟ್ಟಾದ ಮೇಲ್ಮೈಯಿಂದ ಸೈಕ್ಲಿಂಗ್ ಅನ್ನು ಪ್ರಾರಂಭಿಸಬಹುದು ಮತ್ತು ನಂತರ ಎತ್ತರ ಹಾಗೂ ಗುಡ್ಡಗಾಡು ಪ್ರದೇಶಕ್ಕೆ ಹೋಗಬಹುದು. ಈ ರೀತಿಯಾಗಿ ಮಾಡಿದರೆ, ನಿಮಗೆ ಹೆಚ್ಚು ದಣಿವಾಗುವುದಿಲ್ಲ ಮತ್ತು ಸೈಕ್ಲಿಂಗ್ ಅನ್ನು ನೀವು ಆರಾಮವಾಗಿ ಚಲಾಯಿಸಿಕೊಂಡು ಆನಂದವನ್ನು ಪಡೆಯುತ್ತಿರಿ.

2.ಸೈಕ್ಲಿಂಗ್ ಮಾಡುವ ಮೊದಲು ವಾರ್ಮ್ ಅಪ್ ಮಾಡಿ

ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, 15 ನಿಮಿಷಗಳ ವಾರ್ಮ್ ಅಪ್ ಮಾಡುವುದು ಒಳ್ಳೆಯದು. ಸೈಕ್ಲಿಂಗ್ ಸೆಷನ್ ವಿಷಯದಲ್ಲೂ ಇದು ಅನ್ವಯಿಸುತ್ತದೆ. ವಾರ್ಮ್ ಅಪ್ ಮತ್ತು ಸ್ಟ್ರೆಚಿಂಗ್ ಚಟುವಟಿಕೆಯಲ್ಲಿ ತೊಡಗುವುದರಿಂದ ಕೀಲು ಗಾಯಗಳು ಮತ್ತು ಸ್ನಾಯು ಒತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.

3.ನಿಧಾನವಾಗಿ ಪ್ರಾರಂಭಿಸಿ

ಒಂದು ನಿರ್ದಿಷ್ಟ ದೂರವನ್ನು ಇಂತಿಷ್ಟು ಸಮಯದಲ್ಲಿ ಕ್ರಮಿಸಬೇಕು ಎಂದು ನೀವು ಗುರಿಯನ್ನು ಹಾಕಿಕೊಂಡು ಅದನ್ನು ಪೂರ್ಣಗೊಳಿಸಲು ಒತ್ತಡ ಹಾಕಿಕೊಳ್ಳಬಹುದು. ಆದರೆ, ನಿಮ್ಮ ದೇಹದಲ್ಲಿನ ಶಕ್ತಿ ಮತ್ತು ನಿಮ್ಮ ಕಾಲುಗಳಲ್ಲಿನ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ಗುರಿಗಳನ್ನು ನಿಗದಿಪಡಿಸಿಕೊಳ್ಳಿರಿ.

4. ಮಧ್ಯಮ ತೀವ್ರತೆಯನ್ನು ಕಾಪಾಡಿಕೊಳ್ಳಿ

ಸೈಕ್ಲಿಂಗ್‌ಗೆ ನಿಯಮಿತ ವೇಗವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿರುತ್ತದೆ. ನೀವು ಮಧ್ಯಮ ತೀವ್ರತೆಯಿಂದ ಪ್ರಾರಂಭಿಸಬೇಕು ಮತ್ತು ನಂತರ ವೇಗವನ್ನು ಕ್ರಮೇಣವಾಗಿ ಹೆಚ್ಚಿಸಬೇಕು. ಇದು ಹೆಚ್ಚು ವಿಸ್ತೃತ ಅವಧಿಗಳವರೆಗೆ ಉಳಿಯಲು ಮತ್ತು ನಿಮ್ಮ ದಕ್ಷತೆಯನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ.

ದೇಹದ ತೂಕ ಕಡಿಮೆ ಮಾಡುವುದಲ್ಲದೆ, ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತೆ ಈ ಸೈಕ್ಲಿಂಗ್

ಸೈಕ್ಲಿಂಗ್ ನಿಮ್ಮ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನಿಮ್ಮ ದೇಹದ ಆರೋಗ್ಯವನ್ನು ಸಹ ಚೆನ್ನಾಗಿರಿಸುತ್ತದೆ. ಆದರೆ ದೇಹದ ತೂಕವನ್ನು ಇಳಿಸಿಕೊಳ್ಳಲು ನೀವು ಹೆಚ್ಚಿನದನ್ನು ಮಾಡಬೇಕಾಗಿದೆ. ಸೈಕ್ಲಿಂಗ್ ಅನ್ನು ಇತರೆ ಬೇರೆ ವ್ಯಾಯಾಮದೊಂದಿಗೆ ಸಂಯೋಜಿಸುವ ಮೂಲಕ, ನೀವು ಅದರಿಂದ ತುಂಬಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಸೈಕ್ಲಿಂಗ್ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ:  Health Tips: ಗಂಟಲು ನೋವನ್ನು ಕ್ಷಣ ಮಾತ್ರದಲ್ಲಿ ಓಡಿಸುತ್ತೆ ಈ ಮನೆಮದ್ದುಗಳು

ಸೆಷನ್‌ಗಳ ಸಮಯದಲ್ಲಿ ಬೇಸರ ಮತ್ತು ಮಂದತೆಯನ್ನು ನಿವಾರಿಸಲು ನಿಮ್ಮ ದಿನಚರಿಯನ್ನು ಬದಲಾಯಿಸುತ್ತಲೇ ಇರುವುದು ಮತ್ತು ಅದನ್ನು ಇತರ ತರಬೇತಿ ರೂಪಗಳೊಂದಿಗೆ ಬೆರೆಸುವುದು ಉತ್ತಮ. ಸೈಕ್ಲಿಂಗ್ ನಿಮ್ಮನ್ನು ದಿನವಿಡೀ ತುಂಬಾನೇ ಸಕ್ರಿಯವಾಗಿರುವಂತೆ ಮಾಡುತ್ತದೆ. ಆರಂಭಿಕರಾಗಿ, ನೀವು ಯಾವಾಗಲೂ 10 ನಿಮಿಷಗಳ ಸೈಕ್ಲಿಂಗ್‌ನೊಂದಿಗೆ ಪ್ರಾರಂಭಿಸಬಹುದು. ಅಲ್ಲದೆ ಮಧ್ಯೆ ಮಧ್ಯೆ ವಿಶ್ರಾಂತಿ ಮತ್ತು ಚೇತರಿಸಿಕೊಳ್ಳಲು ಮರೆಯಬೇಡಿ.
Published by:Mahmadrafik K
First published: