• Home
  • »
  • News
  • »
  • lifestyle
  • »
  • Back Pain: ಭುಜ ಮತ್ತು ಬೆನ್ನು ನೋವಿಗೆ ಕರಿಬೇವಿನ ಎಲೆಗಳು ಹೇಗೆ ಪರಿಹಾರ ನೀಡುತ್ತದೆ?

Back Pain: ಭುಜ ಮತ್ತು ಬೆನ್ನು ನೋವಿಗೆ ಕರಿಬೇವಿನ ಎಲೆಗಳು ಹೇಗೆ ಪರಿಹಾರ ನೀಡುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚಿನ ಜನರಿಗೆ ಕರಿಬೇವಿನ ಎಲೆಗಳ ರುಚಿಯ ಹೊರತಾಗಿ ಅದರ ಔಷಧೀಯ ಗುಣಗಳ ಬಗ್ಗೆ ತಿಳಿದಿಲ್ಲ. ಹಾಗಾಗಿ ಕರಿಬೇವಿನ ಎಲೆಗಳ ನಿಯಮಿತ ಸೇವನೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕರಿಬೇವಿನ ಎಲೆಗಳ ನಿಯಮಿತ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳು ಮತ್ತು ಆಯುರ್ವೇದದಲ್ಲಿ ಹೇಳಲಾಗಿದೆ.

ಮುಂದೆ ಓದಿ ...
  • Share this:

    ಕರಿಬೇವಿನ ಎಲೆಗಳನ್ನು (Curry Leaves) ನಾವು ಸಾಮಾನ್ಯವಾಗಿ ಅಡುಗೆಗೆ ಹೆಚ್ಚು ಬಳಸುತ್ತೇವೆ. ಜೊತೆಗೆ ಕರಿಬೇವು ಚರ್ಮ ಮತ್ತು ಕೂದಲ (Skin And Hair) ಆರೋಗ್ಯ (Health) ಕಾಪಾಡಲು ಸಹಕಾರಿ ಆಗಿದೆ. ಕರಿಬೇವನ್ನು ಸಾಂಬಾರು, ಪಲ್ಯ, ಪುಲಾವ್ ಸೇರಿದಂತೆ ಹಲವು ಭಕ್ಷ್ಯ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಕರಿಬೇವನ್ನು ಸಿಹಿ ಬೇವು ಎಂದು ಕರೆಯುತ್ತಾರೆ. ಕರಿಬೇವು ತನ್ನ ರುಚಿ ಮತ್ತು ಪರಿಮಳದ ಗುಣದಿಂದ ಹೆಚ್ಚು ಫೇಮಸ್ ಆಗಿದೆ. ಭಾರತೀಯ ಅಡುಗೆ ಮನೆಯಲ್ಲಿ ಕರಿಬೇವನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಆದರೆ ಹೆಚ್ಚಿನ ಜನರಿಗೆ ಕರಿಬೇವಿನ ಎಲೆಗಳ ರುಚಿಯ ಹೊರತಾಗಿ ಅದರ ಔಷಧೀಯ ಗುಣಗಳ ಬಗ್ಗೆ ತಿಳಿದಿಲ್ಲ.


    ಕರಿಬೇವಿನ ಎಲೆಗಳ ನಿಯಮಿತ ಸೇವನೆಯ ಪ್ರಯೋಜನಗಳು


    ಹಾಗಾಗಿ ಕರಿಬೇವಿನ ಎಲೆಗಳ ನಿಯಮಿತ ಸೇವನೆಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕರಿಬೇವಿನ ಎಲೆಗಳ ನಿಯಮಿತ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಅನೇಕ ಸಂಶೋಧನೆಗಳು ಮತ್ತು ಆಯುರ್ವೇದದಲ್ಲಿ ಹೇಳಲಾಗಿದೆ.


    ಕರಿಬೇವಿನ ಸೊಪ್ಪು ಕೂದಲಿಗೆ ಒಳ್ಳೆಯದು ಎಂಬುದು ಹಲವರಿಗೆ ಗೊತ್ತಿದೆ. ಕರಿಬೇವಿನ ಸೊಪ್ಪಿನಲ್ಲಿ ದೇಹಕ್ಕೆ ತುಂಬಾ ಪ್ರಯೋಜನಕಾರಿ ಹಲವು ಪೋಷಕಾಂಶಗಳು ಮತ್ತು ವಿಟಮಿನ್ ಗಳು ಇವೆ ಎನ್ನುತ್ತಾರೆ ಆಯುರ್ವೇದ ತಜ್ಞ ಡಾ. ಇಳಾ.


    ಇದನ್ನೂ ಓದಿ: ತ್ವಚೆಯ ಸಮಸ್ಯೆ ಇದ್ದಾಗ ಯಾವ ಪದಾರ್ಥಗಳ ಸೇವನೆ ತಪ್ಪಿಸಬೇಕು?


    ಕರಿಬೇವಿನ ಎಲೆಗಳಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳು ಯಾವವು?


    ವಿಶಿಷ್ಟ ವಾಸನೆ ಮತ್ತು ಕಟುವಾದ ರುಚಿಯನ್ನು ಹೊಂದಿರುವ ಕರಿಬೇವಿನ ಎಲೆಗಳು ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಬಿ 2, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮೃದ್ಧ ಮೂಲವಾಗಿದೆ ಎಂದು ತಜ್ಞರು ಹೇಳುತ್ತಾರೆ.


    ಜೊತೆಗೆ ಕರಿಬೇವಿನ ಎಲೆಗಳು ನೋವು ನಿವಾರಕವಾಗಿ ಪರಿಣಾಮಕಾರಿ ಕೆಲಸ ಮಾಡುತ್ತವೆ. ನೋವು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಉರಿಯೂತದ ಸಮಸ್ಯೆ ತಡೆಯಲು ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮ ಸಹ ಹೊಂದಿದೆ.


    ಭುಜ ಮತ್ತು ಬೆನ್ನು ನೋವಿಗೆ ಕರಿಬೇವಿನ ಎಲೆಗಳು ಹೇಗೆ ಪರಿಹಾರ ನೀಡುತ್ತದೆ?


    ಹೆಚ್ಚು ವಾಹನ ಚಾಲನೆ ಮಾಡುವವರು ಅಥವಾ ಡೆಸ್ಕ್ ಕೆಲಸ ಮಾಡುವವರು ಖಂಡಿತವಾಗಿ ಕರಿಬೇವಿನ ಎಲೆಗಳ ಸೇವನೆ ಮಾಡಬೇಕು. ಕರಿಬೇವಿನ ಎಲೆಗಳು ಆರೋಗ್ಯ ವರ್ಧಕವಾಗಿ ಕೆಲಸ ಮಾಡುತ್ತವೆ ಎಂದು ಹೇಳ್ತಾರೆ ಆಯುರ್ವೇದ ವೈದ್ಯರು.


    ವಾಸ್ತವದಲ್ಲಿ ವಾಹನ ಚಾಲನೆ ಮಾಡುವವರು ಅಥವಾ ಡೆಸ್ಕ್ ಕೆಲಸ ಮಾಡುವ ಜನರು ಭುಜ ಮತ್ತು ಬೆನ್ನು ನೋವಿಗೆ ಹೆಚ್ಚು ತುತ್ತಾಗುತ್ತಾರೆ. ಇದರ ಜೊತೆ ಕರಿಬೇವಿನ ಎಲೆಗಳ ಸೇವನೆ ಸರ್ವಿಕಲ್ ಸ್ಪಾಂಡಿಲೋಸಿಸ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ.


    ಉರಿಯೂತ ಮತ್ತು ಸೋಂಕಿನ ಸಮಸ್ಯೆ ಕಡಿಮೆ ಮಾಡುತ್ತದೆ ಕರಿಬೇವಿನ ಎಲೆಗಳು


    ಕರಿಬೇವಿನ ಎಲೆಗಳು ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ದೇಹದ ಉರಿಯೂತ ಕಡಿಮೆ ಮಾಡುವ ಜೊತೆಗೆ ದೇಹವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತವೆ.


    ಕರಿಬೇವಿನ ಸಾರವು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ


    ಕರಿಬೇವಿನ ಸಾರವು ವಿವಿಧ ಆರೋಗ್ಯ ವರ್ಧಕ ಗುಣಲಕ್ಷಣ ಹೊಂದಿದೆ. ಕರಿಬೇವಿನ ಸಾರವು ಮೆದುಳನ್ನು ರಕ್ಷಿಸುವ ಉತ್ಕರ್ಷಣ ನಿರೋಧಕಗಳನ್ನು ಗ್ಲುಟಾಥಿಯೋನ್ ಪೆರಾಕ್ಸಿಡೇಸ್, ಸೂಪರ್ಆಕ್ಸೈಡ್ ಡಿಸ್ಮುಟೇಸ್,


    ಇದನ್ನೂ ಓದಿ: ಮೂಳೆಗಳ ಕಾಯಿಲೆಗೆ ಕಾರಣವಾಗುವ ಲೂಬ್ರಿಕಂಟ್ ಎಂದರೇನು? ಇದನ್ನು ಪೂರೈಸುವ ಪದಾರ್ಥಗಳಿವು!


    ಮತ್ತು ಗ್ಲುಟಾಥಿಯೋನ್ ರಿಡಕ್ಟೇಸ್ ಹೊಂದಿದೆ ಎಂದು ತಜ್ಞರು ತಿಳಿಸುತ್ತಾರೆ. ಅವರು ನಮ್ಮ ಮೆದುಳನ್ನು ಆಕ್ಸಿಡೇಟಿವ್ ಹಾನಿ ಮತ್ತು ಆಲ್ಝೈಮರ್ನ್ ಕಾಯಿಲೆಯಂತಹ ನ್ಯೂರೋ ಡಿಜೆನೆರೆಟಿವ್ ಪರಿಸ್ಥಿತಿಗಳಿಂದ ರಕ್ಷಣೆ ಮತ್ತು ಸ್ಮರಣೆ ಸುಧಾರಿಸುತ್ತದೆ.

    Published by:renukadariyannavar
    First published: