• Home
  • »
  • News
  • »
  • lifestyle
  • »
  • Healthy Kids: ನಿಮ್ಮ ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವ್ರಾ? ಅವ್ರನ್ನ ಹೀಗೆ ಹ್ಯಾಂಡಲ್ ಮಾಡಿ

Healthy Kids: ನಿಮ್ಮ ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವ್ರಾ? ಅವ್ರನ್ನ ಹೀಗೆ ಹ್ಯಾಂಡಲ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವೊಮ್ಮೆ ನರಮಂಡಲದ ಸಮಸ್ಯೆ ಆಟಿಸಂ ಅಥವಾ ಸ್ವಲೀನತೆ ಕೂಡ ಆಗಿರುತ್ತದೆ. ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಹಾಗೂ ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗಿದೆ.

  • Share this:

 ಮಕ್ಕಳು ಅಂದ್ರೆ ತುಂಬಾ ಸೂಕ್ಷ್ಮ(Delicate). ಅದರಲ್ಲೂ  ಕೆಲವು ಮಕ್ಕಳು  ತುಂಬಾನೇ ಸೂಕ್ಷ್ಮವಾಗಿರುತ್ತಾರೆ. ಅವರ ಜೀವನ ಶೈಲಿಯು ಸಾಮಾನ್ಯವಾಗಿರುವುದಿಲ್ಲ. ಕೆಲವೊಮ್ಮೆ ನರಮಂಡಲದ ಸಮಸ್ಯೆ ಆಟಿಸಂ ಅಥವಾ ಸ್ವಲೀನತೆ ಕೂಡ ಆಗಿರುತ್ತದೆ. ಮಕ್ಕಳ ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ (Flaw), ಸಾಮಾಜಿಕ ನಡವಳಿಕೆ ಹಾಗೂ ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುತಿಸಲಾಗಿದೆ. ತುಂಬಾ ಅಪರೂಪದ ಪ್ರಕರಣವಾದ ಇದರಲ್ಲಿ ಅಲ್ಲೋ, ಇಲ್ಲೋ ಈ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ಕಾಣಬಹುದಾಗಿದೆ. ಆಟಿಸಂನಲ್ಲಿ ಹೈಪೋಸೆನ್ಸಿಟಿವಿಟಿ ಅಥವಾ ಅತೀ ಸೂಕ್ಷ್ಮತೆ ಕೂಡ ಒಂದಾಗಿದೆ. ಹೀಗಾಗಿ ಅವರ ಆರೋಗ್ಯದ ಮೇಲೆ ಹೆಚ್ಚು ಗಮನವನ್ನು ಕೊಡಲೇಬೇಕು. ಅತಿಯಾದ ಸೂಕ್ಷ್ಮ ಸ್ವಭಾವವನ್ನು ನೀಡಬೇಕು. 


ಮಕ್ಕಳಲ್ಲಿ ಅತಿಯಾದ ಸೂಕ್ಷ್ಮ ಸ್ವಭಾವ


ಮಕ್ಕಳು ಅರುಳು ಹುರಿದ ಹಾಗೇ ಮಾತನಾಡಬೇಕು, ಚೂಟಿಯಾಗಿರಬೇಕು ಎಂದು ಪ್ರತಿ ಪೋಷಕರು ಬಯಸುತ್ತಾರೆ. ಆದರೆ ಖಂಡಿತ ಇದು ಮಕ್ಕಳಿಂದ ಮಕ್ಕಳಿಗೆ ಭಿನ್ನವಾಗಿರುತ್ತದೆ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಮುಖ್ಯ.


ಕೆಲ ಮಕ್ಕಳು ನರಮಂಡಲದ ಸಮಸ್ಯೆಯಿಂದ ಸ್ವಲೀನತೆಯಿಂದ ಈ ರೀತಿಯ ಸ್ವಭಾವ ಹೊಂದಿದ್ದರೆ, ಇನ್ನು ಕೆಲವು ಮಕ್ಕಳದ್ದು ಸ್ವಭಾವಿಕವಾಗಿರುತ್ತದೆ. ಹಾಗಾದರೆ ಅತಿಯಾದ ಸೂಕ್ಷ್ಮತೆ ಹೊಂದಿರುವ ಮಕ್ಕಳ ಲಕ್ಷಣಗಳೇನು? ಪೋಷಕರಾದವರು ಅದರಿಂದ ಮಕ್ಕಳನ್ನು ಹೇಗೆ ಹೊರತರಬಹುದು ಎಂಬುದನ್ನು ನಾವಿಲ್ಲಿ ನೋಡೋಣ.


ಅತಿಯಾದ ಸೂಕ್ಷ್ಮತೆ ಅಥವಾ ಹೈಪೋಸೆನ್ಸಿಟಿವಿಟಿಯ ಚಿಹ್ನೆಗಳು ಮತ್ತು ಲಕ್ಷಣಗಳು
* ಸ್ವಲೀನತೆಯಿಂದ ಅತಿಯಾದ ಸೂಕ್ಷ್ಮತೆ ಹೊಂದಿರುವ ಮಕ್ಕಳು ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ
* ವಾಸನೆಗಳಂತಹ ಸಂವೇದನಾ ಪ್ರಚೋದನೆಗಳನ್ನು ಗ್ರಹಿಸುವುದಿಲ್ಲ.
* ದೃಶ್ಯಗಳು, ದೊಡ್ಡ ಶಬ್ದಗಳಿಗೆ ಹೆದರುವುದು
* ಕಣ್ಣಲ್ಲಿ ಕಣ್ಣಿಟ್ಟು ನೋಡಲು ಹಿಂಜರಿಯುವುದು
* ಹೆಚ್ಚು ನಾಚಿಕೆ ಪಡುವ ಸ್ವಭಾವ
* ಭಾವನೆಗಳನ್ನು ವ್ಯಕ್ತಪಡಿಸುವುದಿಲ್ಲ
* ಹಸಿವು, ಬಾಯಾರಿಕೆ ಅಥವಾ ನೋವನ್ನು ಗುರುತಿಸಲು ಸಾಧ್ಯವಾಗದಿರಬಹುದು.
* ಬಟ್ಟೆ ಹಾಕಲು ನಿರಾಕರಿಸುವುದು
* ದೊಡ್ಡ ಶಬ್ದ, ಬೆಳಕು ಸಂಭವಿಸಿದರೆ ಇತರರನ್ನು ತಬ್ಬಿಕೊಳ್ಳುವುದು ಅಥವಾ ಮೇಲೆ ಮತ್ತು ಕೆಳಗೆ ಓಡುವುದು.


ಇದನ್ನೂ ಓದಿ: ಮಕ್ಕಳಲ್ಲಿ ಕಂಡು ಬರುವ ಈ ಲಕ್ಷಣಗಳನ್ನು ನೆಗ್ಲೆಕ್ಟ್ ಮಾಡ್ಬೇಡಿ, ಭವಿಷ್ಯದ ಖಿನ್ನತೆಯ ಸೂಚನೆ ಇದು


ಪೋಷಕರು ಗುರುತಿಸಬಹುದಾದ ಲಕ್ಷಣಗಳು


ಮಿಕ್ಸರ್‌, ಕುಕ್ಕರ್‌ ದೈನಂದಿನ ಶಬ್ದಗಳನ್ನು ಸಹಿಸಿಕೊಳ್ಳಲು ಮಕ್ಕಳಿಗೆ ಕಷ್ಟವಾಗುವುದು, ಬಟ್ಟೆಯನ್ನು ಹಾಕಿಕೊಳ್ಳುವುದಕ್ಕೆ ಅತಿಯಾಗಿ ಹಠ ಮಾಡುವುದು, ದಿನವಿಡೀ ಸೋಮಾರಿಯಾಗಿ ಅಥವಾ ನಿದ್ರಿಸುತ್ತಿರುವಂತೆ ಆಲಸ್ಯದಿಂದಿರುವುದು, ಸೈಕ್ಲಿಂಗ್‌, ಚೆಂಡನ್ನು ಹಿಡಿಯಲು, ಆಟ ಆಡುವ ಚಟುವಟಿಕೆಗಳಿಗೆ ಹೆದುರುವುದು, ಓದುವಿಕೆ, ವಿಭಿನ್ನ ಅಥವಾ ಹೊಸ ಆಹಾರಗಳು ಅಥವಾ ವಿನ್ಯಾಸಗಳನ್ನು ಸ್ವೀಕರಿಸಲು ಕಷ್ಟವಾಗುವ ಲಕ್ಷಣಗಳ ಬಗ್ಗೆ ಪೋಷಕರು ಗಮನ ನೀಡಬೇಕು. ಇವುಗಳು ಪೋಷಕರು ಗಮನಿಸಬೇಕಾದ ಮತ್ತು ಗುರುತಿಸುವ ಚಿಹ್ನೆಯಾಗಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಕು.


ಚಿಕಿತ್ಸೆ ಏನು?


ಸಂವೇದನಾ ಸಮಸ್ಯೆ ಕುರಿತು ಪೋಷಕರು ಔದ್ಯೋಗಿಕ ಚಿಕಿತ್ಸಕರನ್ನು (ಆಕ್ಯುಪೇಷನಲ್ ಥೆರಪಿಸ್ಟ್) ಸಂಪರ್ಕಿಸುವುದು ಮೊದಲ ಹಂತವಾಗಿದೆ. ಔದ್ಯೋಗಿಕ ಚಿಕಿತ್ಸಕರು ಮಗುವಿಗೆ ಅಗತ್ಯವಿರುವ ಚಿಕಿತ್ಸೆಯ ಪ್ರಮಾಣವನ್ನು ಪೋಷಕರು ನಿರ್ಣಯಿಸಬಹುದು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.


ಔದ್ಯೋಗಿಕ ಚಿಕಿತ್ಸೆ ಮಗುವಿನ ಉತ್ತಮ ಚಲನಾ ಕೌಶಲ್ಯಗಳು, ಅರಿವಿನ ಸಾಮರ್ಥ್ಯಗಳು ಮತ್ತು ದೃಶ್ಯ ಸಂವೇದನಾ ಗ್ರಹಿಕೆಗೆ ಸಹಾಯ ಮಾಡುತ್ತದೆ. ಔದ್ಯೋಗಿಕ ಚಿಕಿತ್ಸಕರು ಅರಿವು, ಸಂವೇದನಾ ಏಕೀಕರಣ ಚಿಕಿತ್ಸೆ, ಸಂವೇದನಾ ಆಹಾರ ಇತ್ಯಾದಿಗಳನ್ನು ಬಲಪಡಿಸುವುದು ಸೇರಿದಂತೆ ಸಮಾಜಕ್ಕೆ ಹೊಂದಿಕೊಳ್ಳಲು ಸಹಾಯ ಮಾಡಲು ವಿವಿಧ ಚಟುವಟಿಕೆಗಳನ್ನು ಮತ್ತು ಚಿಕಿತ್ಸಾ ತಂತ್ರಗಳನ್ನು ಇಲ್ಲಿ ಬಳಸುತ್ತಾರೆ.


ಲೆಕ್ಸಿಕಾನ್ ರೇನ್‌ಬೋ ಥೆರಪಿ ಮತ್ತು ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್‌ನ ಸಹ ಸಂಸ್ಥಾಪಕಿ ಮತ್ತು ಮುಖ್ಯಸ್ಥರಾದ ಹಿರಿಯ ಆಕ್ಯುಪೇಷನಲ್ ಥೆರಪಿಸ್ಟ್ ಡಾ ಇಶಾ ಸೋನಿ ಹೇಳುತ್ತಾರೆ, "ಚಿಕಿತ್ಸೆಯು ಮಕ್ಕಳಲ್ಲಿ ಸಂವೇದನಾ ಪ್ರಚೋದನೆಗೆ ತಮ್ಮ ಪ್ರತಿಕ್ರಿಯೆಗಳನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ. ರಚನಾತ್ಮಕ ವಿತರಣೆಯು ಮಗುವಿಗೆ ಸಂವೇದನಾ ಮಾಹಿತಿಯನ್ನು ಸುಲಭವಾಗಿ ಪ್ರಕ್ರಿಯೆಗೊಳಿಸಲು ಮತ್ತು ಹೊಂದಿಕೊಳ್ಳಲು ಅನುಮತಿಸುತ್ತದೆ" ಎಂದಿದ್ದಾರೆ.


ಪೋಷಕರು ಏನು ಮಾಡಬಹುದು?


ಸಂವೇದನಾ ಪ್ರಕ್ರಿಯೆಯಲ್ಲಿನ ತೊಂದರೆಯ ಲಕ್ಷಣಗಳನ್ನು ಪೋಷಕರು ಗಮನಿಸಿದಾಗ, ಪೋಷಕರು ತಮ್ಮ ಮಗುವಿಗೆ ಸಹಾಯ ಮಾಡುವುದರ ಬಗ್ಗೆ ಮಾರ್ಗದರ್ಶನ ಮತ್ತು ಸಲಹೆಯೊಂದಿಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು.


ಈ ಸ್ಥಿತಿಯನ್ನು ಮಕ್ಕಳ ತಂದೆ, ತಾಯಿ ತುಂಬಾ ತಾಳ್ಮೆಯಿಂದ ನಿಭಾಯಿಸಬೇಕು. ಮನೆಯಲ್ಲಿ ಸಂವೇದನಾಶೀಲ ಚಟುವಟಿಕೆಗಳನ್ನು ನಡೆಸುವ ಮೂಲಕ ಪೋಷಕರು ತಮ್ಮ ಮಗುವಿಗೆ ಸಹಾಯ ಮಾಡಬಹುದು. ಇದು ಮಕ್ಕಳಲ್ಲಿ ಸುಧಾರಿತ ನಡವಳಿಕೆಯನ್ನು ಬಲಪಡಿಸುತ್ತದೆ. ವಾಸನೆಭರಿತ ಆಹಾರ, ಆಟಿಕೆಗಳು, ಹೊರಗಡೆ ಒಂದು ವಾಕ್‌, ವ್ಯಾಯಾಮ, ಸಂಗೀತ ಹೀಗೆ ಈ ಚಟುವಟಿಕೆಗಳು ಈ ರೀತಿಯ ಸಮಸ್ಯೆ ಹೊಂದಿರುವ ಮಕ್ಕಳಿಗೆ ಅದರಿಂದ ಹೊರಬರಲು ಸಹಕಾರಿಯಾಗುತ್ತದೆ.


ಇದನ್ನೂ ಓದಿ: ಮನೆಯಲ್ಲಿ ಈ ವಸ್ತುಗಳಿದ್ದರೆ ಪಾಸಿಟಿವ್ ಎನರ್ಜಿ ಎಂಟ್ರಿಯಾಗುತ್ತೆ


ಜೊತೆಗೆ ದೃಶ್ಯಗಳನ್ನು ತೋರಿಸಿ, ವೀಡಿಯೋಗಳನ್ನು ತೋರಿಸಿ ಅವರಿಗೆ ಕಲಿಸಲು ಪ್ರಯತ್ನಿಸಬೇಕು ಮತ್ತು ಅವರದ್ದೇ ವಯಸ್ಸಿನವರ ಜೊತೆ ಬೆರೆಯಲು ಕಲಿಸಿ, ದೃಷ್ಟಿ ಗೊಂದಲವನ್ನು ಕಡಿಮೆ ಮಾಡಲು ಪ್ರಯತ್ನಿಸಿ,


ಹೀಗೆಲ್ಲಾ ಮಾಡುವ ಮೂಲಕ ಅತಿಯಾದ ಸೂಕ್ಷ್ಮತೆ ಇರುವ ಮಕ್ಕಳನ್ನು ಅಒಂದು ಕಂಪರ್ಟ್‌ ಜೋನ್‌ನಿಂದ ಹೊರತರಬಹುದು ಮತ್ತು ಅವರಲ್ಲಿ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಬಹುದು.

First published: