Spirituality: ಮಾನಸಿಕ ಆರೋಗ್ಯ ಸುಧಾರಿಸಲು ಆಧ್ಯಾತ್ಮಿಕತೆಯು ಹೇಗೆ ಸಹಾಯಕಾರಿ? ಇಲ್ಲಿದೆ ಸರಳ ಮಾರ್ಗಗಳು

ಆಧ್ಯಾತ್ಮಿಕತೆಯು ಖಿನ್ನತೆ ಮತ್ತು ಆತಂಕವನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ? ಎಂಬುದಕ್ಕೆ ಏರ್‌ ಇನ್‌ಸ್ಟಿಟ್ಯೂಟ್ ಆಫ್ ರಿಯಲೈಸೇಶನ್ ಮತ್ತು ಏರ್‌ ಸೆಂಟರ್ ಆಫ್ ಎನ್‌ಲೈಟೆನ್‌ಮೆಂಟ್‌ನ ಸಂಸ್ಥಾಪಕರಾದ ಏರ್‌ ಆತ್ಮನ್ ರವಿ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುವಲ್ಲಿ ಆಧ್ಯಾತ್ಮಿಕತೆಯು ಹೇಗೆ ಸಹಾಯಕಾರಿ ಎಂಬುದಕ್ಕೆ ಪ್ರಮುಖವಾಗಿ 4 ಮಾರ್ಗಗಳನ್ನು ಇಲ್ಲಿ ಪಟ್ಟಿಮಾಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜೀವನ (life) ಎಂದರೇನು? ಪ್ರತಿಯೊಬ್ಬರ ಜೀವನದಲ್ಲಿ ಆತ್ಮ ವಹಿಸುವ ಪ್ರಮುಖ ಕಾರ್ಯವೇನು? ಇಡೀ ಪ್ರಪಂಚದ ಬಗ್ಗೆ ಸತ್ಯವನ್ನು ಅರಿತುಕೊಳ್ಳಲು ಯಾವ ಅಧ್ಯಯನ ನಮಗೆ ಸಹಾಯ ಮಾಡುತ್ತದೆ? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ. ಅದೇ ಆಧ್ಯಾತ್ಮಿಕತೆ (Spirituality). ಈ ಆಧ್ಯಾತ್ಮಿಕತೆಯು ಮನಸ್ಸಿನ ಚೇತನ, ಆತ್ಮ ಅಥವಾ ಆತ್ಮದ ವಿಜ್ಞಾನವಾಗಿದ್ದು ಅದು ನಮ್ಮ ಅಜ್ಞಾನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ನಮ್ಮನ್ನು ಪುರಾಣಗಳು, ಮೂಢನಂಬಿಕೆಗಳು (superstition) ಮತ್ತು ಸುಳ್ಳಿನ ಸಂಕೋಲೆಗಳಿಂದ ಮುಕ್ತಗೊಳಿಸುತ್ತದೆ. ಇದರ ಜೊತೆಗೆ ನಾವು ಆಧ್ಯಾತ್ಮಿಕತೆಯ ದಾರಿಯಲ್ಲಿ ನಡೆಯಲು ಆರಂಭಿಸಿದಾಗ ಮನಸ್ಸಿನ ಅಜ್ಞಾನ ದೂರವಾಗಿ ಜ್ಞಾನೋದಯವನ್ನು (Enlightenment) ಪಡೆಯುತ್ತೇವೆ ಮತ್ತು ಎಲ್ಲಾ ದುಃಖಗಳಿಂದ ಮುಕ್ತರಾಗುತ್ತೇವೆ ಎಂದು ಆಧ್ಯಾತ್ಮಿಕ ಪರಿಣಿತರು ಹೇಳುತ್ತಾರೆ.

ಹಾಗಿದ್ರೆ ಈ ಆಧ್ಯಾತ್ಮಕತೆಯಿಂದ ನಮ್ಮ ಕೆಲಸದಿಂದ ದಣಿದ ಮನಸ್ಸಿನ ಒತ್ತಡ ಮತ್ತು ಕೋಪವನ್ನು ನಿವಾರಿಸಬಹುದೇ? ಎಂಬ ಪ್ರಶ್ನೆಗೆ ಈ ಲೇಖನದಲ್ಲಿಂದು ಉತ್ತರ ಪಡೆಯೋಣ.

ನಮ್ಮ ಗುರಿಯನ್ನು ಅರಿತುಕೊಳ್ಳಲು ಆಧ್ಯಾತ್ಮಿಕತೆ ಹೇಗೆ ಸಹಾಯ ಮಾಡುತ್ತದೆ?
ಆಧ್ಯಾತ್ಮಿಕತೆಯು ನಮ್ಮ ಗುರಿಯನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ನಮ್ಮನ್ನು ನಾವು ದೈವಿಕ ಆತ್ಮ ಎಂದು ಅರಿತುಕೊಳ್ಳಲು ಸೂಕ್ತ ವೇದಿಕೆಯಾಗಿದೆ. ನಾವು ಸತ್ಯದ ಪ್ರಜ್ಞೆಯೊಂದಿಗೆ ವಾಸಿಸುವ ಮತ್ತು ದೈವಿಕ ಆನಂದವನ್ನು ಅನುಭವಿಸುವ ಸಚ್ಚಿತಾನಂದ ಸ್ಥಿತಿಗೆ ತಲುಪುವ ಆಧ್ಯಾತ್ಮಿಕತೆಯು ಶಾಶ್ವತವಾದ ಆನಂದ.

ಆಧ್ಯಾತ್ಮಕತೆ ಶಾಂತಿ ಮತ್ತು ಸಂತೋಷದ ಮಾರ್ಗವನ್ನು ನಮಗೆ ನೀಡುತ್ತದೆ ಎಂದು ಆಧ್ಯಾತ್ಮಿಕತೆಯ ಗುರುಗಳು ಹೇಳುತ್ತಾರೆ. ಆಧ್ಯಾತ್ಮಿಕತೆಯು ಖಿನ್ನತೆ ಮತ್ತು ಆತಂಕವನ್ನು ನಿವಾರಿಸಲು ಹೇಗೆ ಸಹಾಯ ಮಾಡುತ್ತದೆ? ಎಂಬುದಕ್ಕೆ ಏರ್‌ ಇನ್‌ಸ್ಟಿಟ್ಯೂಟ್ ಆಫ್ ರಿಯಲೈಸೇಶನ್ ಮತ್ತು ಏರ್‌ ಸೆಂಟರ್ ಆಫ್ ಎನ್‌ಲೈಟೆನ್‌ಮೆಂಟ್‌ನ ಸಂಸ್ಥಾಪಕರಾದ ಏರ್‌ ಆತ್ಮನ್ ರವಿ ಉತ್ತರಿಸಿದ್ದಾರೆ.

ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುವಲ್ಲಿ ಆಧ್ಯಾತ್ಮಿಕತೆಯು ಹೇಗೆ ಸಹಾಯಕಾರಿ ಎಂಬುದಕ್ಕೆ ಪ್ರಮುಖವಾಗಿ 4 ಮಾರ್ಗಗಳನ್ನು ಇಲ್ಲಿ ಪಟ್ಟಿಮಾಡಿದ್ದಾರೆ.

ಇದನ್ನೂ ಓದಿ:  Working Women: ಒತ್ತಡವಿಲ್ಲದೆ ಮಹಿಳೆಯರು ಕೆಲಸ ಮಾಡುವುದು ಹೇಗೆ? ಈ ಕೆಲವು ಟಿಪ್ಸ್ ಮರೆಯಬೇಡಿ

ಆಧ್ಯಾತ್ಮಿಕತೆಯಿಂದ ಆತಂಕ ಮತ್ತು ಖಿನ್ನತೆಯನ್ನು ದೂರ ಮಾಡುವ 4 ಪ್ರಮುಖ ಮಾರ್ಗಗಳು:

1. ಆಧ್ಯಾತ್ಮಿಕತೆಯು ನಮ್ಮ ನಿಜವಾದ ಆತ್ಮದ ಬಗ್ಗೆ ಸತ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ನಾವು ಯಾರೆಂದು ಅರಿತುಕೊಳ್ಳಲು ಆಧ್ಯಾತ್ಮಿಕತೆಯು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. ಈ ಆಧ್ಯಾತ್ಮಿಕತೆಯಿಂದ ನಾವು ಏಕತೆ, ಸಾರ್ವತ್ರಿಕ ಪ್ರೀತಿ ಮತ್ತು ಸಹೋದರತ್ವದ ಭಾವನೆಯನ್ನು ಅನುಭವಿಸುತ್ತೇವೆ. ಈ ಅರಿವು ಶಾಂತಿ ಮತ್ತು ಆನಂದಕ್ಕೆ ದಾರಿ ಮಾಡಿಕೊಡುತ್ತದೆ. ನಾವು ಭಗವಂತನ ಭಾಗವಾಗಿದ್ದೇವೆ ಎಂದು ಅರಿತುಕೊಂಡರೆ ನಾವು ಹೇಗೆ ಚಿಂತಿಸಲು ಸಾಧ್ಯ? ಚಿಂತೆ ಮಾಡಿದರೆ ತಾನೇ ಆತಂಕ ಮತ್ತು ಖಿನ್ನತೆ ನಮ್ಮನ್ನು ಆವರಿಸುವುದು. ಈ ಆಧ್ಯಾತ್ಮಿಕತೆಯು ನಮ್ಮ ಮನಸ್ಸನ್ನು ಚಿಂತೆಯಿಂದ ದೂರ ಮಾಡಿ, ಆನಂದದಿಂದ ಜೀವನ ಸಾಗಿಸಲು ಅನುವು ಮಾಡಿಕೊಡುತ್ತದೆ

2. ಆಧ್ಯಾತ್ಮಿಕತೆಯಿಂದ ನಮಗೆ ಜಗತ್ತು ಒಂದು ನಾಟಕರಂಗ ಎಂದು ಅರಿತುಕೊಳ್ಳಲು ಅವಕಾಶ ದೊರೆಯುತ್ತದೆ. ನಮ್ಮ ಜೀವನದಲ್ಲಿ ನಾವು ಅಳುತ್ತೇವೆ, ಆತಂಕಕ್ಕೊಳಗಾಗುತ್ತೇವೆ, ಒತ್ತಡಕ್ಕೊಳಗಾಗುತ್ತೇವೆ, ಅಸಮಾಧಾನಗೊಳ್ಳುತ್ತೇವೆ, ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪಗೊಳ್ಳುತ್ತೇವೆ. ನಾವು ದೇಹದ ನೋವು, ಮನಸ್ಸಿನ ದುಃಖ ಮತ್ತು ಸಂಕಟವನ್ನು ಅನುಭವಿಸುತ್ತೇವೆ. ಆದರೆ ಯಾವಾಗ ನಾವು ಈ ಜಗತ್ತು ಕೇವಲ ಒಂದು ನಾಟಕ ಎಂದು ಅರ್ಥಮಾಡಿಕೊಳ್ಳುತ್ತೆವೊ, ಆಗ ನಮ್ಮಲ್ಲಿನ ಚಿಂತೆ, ಆತಂಕ ಎಲ್ಲವೂ ದೂರವಾಗುತ್ತದೆ. ಎಲ್ಲವೂ ಭಗವಂತನ ಲೀಲೆ, ನಾವು ಇಲ್ಲಿ ಕೇವಲ ಪಾತ್ರಧಾರಿಗಳು ಎಂಬ ಸ್ಪಷ್ಟ ಅರಿವು ಈ ಆಧ್ಯಾತ್ಮಿಕತೆಯಿಂದ ನಮಗೆ ಸಿಗುತ್ತದೆ.

3. ಇದು ನಮ್ಮ ಬುದ್ದಿಯನ್ನು ಶಿಸ್ತಿನಿಂದ ಇರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಮನಸ್ಸೆ ನಮಗೆ ದೊಡ್ಡ ಶತ್ರು. ಇದು ನಮಗೆ ಒತ್ತಡ ಮತ್ತು ಆತಂಕವನ್ನು ತರುವ ದೊಡ್ಡ ವೈರಿ ಎಂದೇ ಹೇಳಬಹುದು. ಧ್ಯಾನವು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಇದು ನಮ್ಮ ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮನಸ್ಸು ಒಂದು ನಿಮಿಷಕ್ಕೆ 50 ಆಲೋಚನೆಗಳನ್ನು ಮಾಡುತ್ತದೆ. ಅದು ದಿನಕ್ಕೆ ಸುಮಾರು 50,000 ಆಲೋಚನೆಗಳನ್ನು ಮಾಡುವ ಶಕ್ತಿಯನ್ನು ಹೊಂದಿದೆ. ಮನಸ್ಸು ನಮ್ಮನ್ನು ಭೂತಕಾಲದ ಪಶ್ಚಾತ್ತಾಪ ಮತ್ತು ಭವಿಷ್ಯದ ಚಿಂತೆಗಳಿಗೆ ಕರೆದೊಯ್ಯುತ್ತದೆ. ನಮಗೆ ಈ ಸಹಸ್ರ ಆಲೋಚನೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಧ್ಯಾನವು ಸಹಾಯ ಮಾಡುತ್ತದೆ. ಧ್ಯಾನವು ಆಲೋಚನೆಯಿಲ್ಲದ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ ನಾವು ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತೇವೆ.

4. ನಮ್ಮ ಸುತ್ತ ಮುತ್ತಲೂ ಯಾವುದೇ ಘಟನೆಗಳು ನಡೆದರೂ ಅದು ಕೇವಲ ಅವರವರ ಕರ್ಮದಿಂದ ನಡೆಯುತ್ತವೆ ಎಂಬುದು ಆಧ್ಯಾತ್ಮಿಕತೆಯ ರೂಪರೇಷೆ ಎಂದು ಅರಿತುಕೊಳ್ಳಲು ಇದು ಸಹಾಯಕವಾಗಿದೆ. ಈ ಆಧ್ಯಾತ್ಮಿಕತೆಯಿಂದ ಮನಸ್ಸಿನ ಅಜ್ಞಾನವನ್ನು ದೂರ ಮಾಡಿ ,ಜ್ಞಾನೋದಯವನ್ನು ಪಡೆಯಬಹುದು. ಆಗ ನಮಗೆ ಯಾವುದೇ ಚಿಂತೆ ಆಗಲಿ, ಖಿನ್ನತೆ ಆಗಲಿ ಕಾಡುವುದಿಲ್ಲ.

ಇದನ್ನೂ ಓದಿ:  Healthy Relationship: ಆರೋಗ್ಯಕರ ಸಂಬಂಧದಲ್ಲಿ ಎಂದಿಗೂ ಈ ವಿಷಯಗಳಲ್ಲಿ ಮಾತ್ರ ರಾಜಿ ಮಾಡ್ಕೋಬೇಡಿ

ಆಧ್ಯಾತ್ಮಿಕತೆಯು ಈ ವಿಧಾನಗಳಿಗಿಂತ ಹೆಚ್ಚಿನ ರೀತಿಯಲ್ಲಿ ನಮ್ಮ ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.
Published by:Ashwini Prabhu
First published: