Breastfeeding Awareness Week: ಮಗುವಿಗೆ ಎದೆಹಾಲು ಕುಡಿಸುವುದು ಹೇಗೆ? ತಜ್ಞರು ಸಲಹೆ ನೀಡಿದ್ದಾರೆ ಓದಿ

ಚೊಚ್ಚಲ ಹೆರಿಗೆ ನಂತರ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಂದಿರು ಮೊದಲಿಗೆ ಈ ಬಗ್ಗೆ ತಿಳಿದುಕೊಂಡಿರಬೇಕು. ಏಕೆಂದರೆ ಎದೆಹಾಲು ಕುಡಿಸುವ ಪ್ರಕ್ರಿಯೆ ನಿಮಗೆ ತಿಳಿದಿಲ್ಲವಾದರೆ ಮಕ್ಕಳು ಈ ಪೌಷ್ಠಿಕ ಆಹಾರದಿಂದ ವಂಚಿತರಾಗಬಹುದು. ಹೀಗಾಗಿ ನೀವು ತಜ್ಞರನ್ನು ಸಂಪರ್ಕಿಸಬಹುದು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಕ್ಕಳಿಗೆ ತಾಯಿಯ ಎದೆಹಾಲು (Breast Feeding) ಅಮೃತಕ್ಕಿಂತ ಹೆಚ್ಚು. ತಾಯಿಗೂ (Mother) ಅಷ್ಟೇ ಮಗುವಿಗೆ (Baby) ಹಾಲುಣಿಸುವ ಸಮಯ ಹೆಚ್ಚು ವಿಶೇಷವಾಗಿರುವಂತಹದ್ದು. ಶಿಶುಗಳಿಂದ ಹಿಡಿದು ಎರಡ್ಮೂರು ವರ್ಷದ ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸ್ತನ್ಯಪಾನಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತದೆ. ಎದೆ ಹಾಲು ಮಗುವಿಗೆ ಸಿಗುವ ಅತೀ ಶ್ರೇಷ್ಠ ನೈಸರ್ಗಿವಾದ ಪೌಷ್ಠಿಕ ಆಹಾರ (Nutritious food) ಎನ್ನುವ ಮಾತಲ್ಲಿ ಕಿಂಚಿತ್ತೂ ಸಂದೇಹವೇ ಇಲ್ಲ. ಎದೆಹಾಲುಣಿಸುವಿಕೆ ತಾಯಿ-ಮಗುವಿನ ನಡುವೆ ಬಂಧ ಗಟ್ಟಿಗೊಳ್ಳುವ ಮುಖ್ಯ ಕೊಂಡಿಯಾಗುವುದರ ಜೊತೆಗೆ ಮಗುವನ್ನು ದೈಹಿಕವಾಗಿ ಸದೃಢ ಮಾಡುತ್ತದೆ. ತಾಯಿ ಎದೆಹಾಲು ಮಕ್ಕಳಿಗೆ ಹಲವಾರು ರೀತಿಯ ಪೋಷಕಾಂಶ (Nutrient)  ನೀಡುತ್ತದೆ.

ಇಷ್ಟೆಲ್ಲಾ ಮಹತ್ವದ ಸ್ತನ್ಯಪಾನದ ಬಗ್ಗೆ ಜಾಗೃತಿ ಮೂಡಿಸಲು ಆಗಸ್ಟ್ ತಿಂಗಳ ಮೊದಲ ವಾರವನ್ನು ವಿಶ್ವ ಎದೆ ಹಾಲು ಕುಡಿಸುವ ವಾರವನ್ನಾಗಿ ಆಚರಿಸಲಾಗುತ್ತದೆ.

ಸ್ತನ್ಯಪಾನ ಜಾಗೃತಿ ವಾರವನ್ನೇಕೆ ಆಚರಿಸಲಾಗುತ್ತದೆ?
ಚೊಚ್ಚಲ ಹೆರಿಗೆ ನಂತರ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು ಮುಖ್ಯವಾಗಿರುವುದರಿಂದ ತಾಯಿಂಯದಿರು ಮೊದಲಿಗೆ ಈ ಬಗ್ಗೆ ತಿಳಿದುಕೊಂಡಿರಬೇಕು. ಏಕೆಂದರೆ ಎದೆಹಾಲು ಕುಡಿಸುವ ಪ್ರಕ್ರಿಯೆ ನಿಮಗೆ ತಿಳಿದಿಲ್ಲವಾದರೆ ಮಕ್ಕಳು ಈ ಪೌಷ್ಠಿಕ ಆಹಾರದಿಂದ ವಂಚಿತರಾಗಬಹುದು. ಹೀಗಾಗಿ ಈ ಬಗ್ಗೆ ನಿಮಗೆ ಹೆಚ್ಚಿನ ಅರಿವಿಲ್ಲದಿದ್ದರೆ ಖಂಡಿತ ನೀವು ಹಾಲುಣಿಸುವಿಕೆಯ ಬಗ್ಗೆ ಜ್ಞಾನ ಹೊಂದಿರುವ ತಜ್ಞರನ್ನು ಸಂಪರ್ಕಿಸಬಹುದು.

"ಹೆರಿಗೆಯ ನಂತರ ಮೊದಲ ಕೆಲವು ವಾರಗಳಲ್ಲಿ ಪರಿಣಿತರ ಸಾಮಾನ್ಯವಾಗಿ ಅಗತ್ಯವಿದೆ, ನಿಮ್ಮ ಮಗು ಇನ್ನೂ ನಿಮ್ಮ ಎದೆಯಿಂದ ಹೇಗೆ ಹಾಲು ಕುಡಿಯಬೇಕು ಎಂದು ತಿಳಿದಿಲ್ಲವಾದರೆ, ಆ ಸಂದರ್ಭದಲ್ಲಿ ಹಾಲುಣಿಸುವಿಕೆಯ ಬಗ್ಗೆ ಜ್ಞಾನ ಹೊಂದಿರುವ ತಜ್ಞರನ್ನು ಭೇಟಿ ಮಾಡಬಹುದು ಅಥವಾ ಸಮಾಲೋಚಿಸಬಹುದು, ”ಎನ್ನುತ್ತಾರೆ ಡಾ.ವರಿಜಾ ಪೈ ಹೇಳುತ್ತಾರೆ.

ಇದನ್ನೂ ಓದಿ: Puberty And Girls: ಹೆಣ್ಣು ಮಕ್ಕಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳ ಬಗ್ಗೆ ತಜ್ಞರು ಹೇಳೋದೇನು?

ವೈದ್ಯರ ಪ್ರಕಾರ, ಸ್ತನ್ಯಪಾನವು ವೈಯಕ್ತಿಕ ಆಯ್ಕೆಯಾಗಿದೆ. “ಆದರೆ, ಕನಿಷ್ಠ ಮೊದಲ 6 ತಿಂಗಳವರೆಗೆ ಸ್ತನ್ಯಪಾನ ಮಾಡಲು ಸಲಹೆ ನೀಡಲಾಗುತ್ತದೆ. ನೋವಿನ ಮೊಲೆತೊಟ್ಟುಗಳು ಅಥವಾ ಹಾಲು ಪೂರೈಕೆಯ ಕೊರತೆಯಂತಹ ಸವಾಲುಗಳ ಕಾರಣ ಕೆಲವು ತಾಯಂದಿರಿಗೆ ಹಾಲುಣಿಸುವುದನ್ನು ನಿಲ್ಲಿಸಲು ಸಲಹೆ ನೀಡಲಾಗುತ್ತದೆ. ಇದ್ಯಾವುದೂ ಸಮಸ್ಯೆ ಇಲ್ಲವೆಂದಾದಲ್ಲಿ ತಾಯಂದಿರು ಮಕ್ಕಳಿಗೆ ಪೂರ್ತಿ 2 ವರ್ಷದವರೆಗೆ ಹಾಲುಣಿಸಬಹುದು.

ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಜ್ಞರನ್ನು ಯಾವಾಗ ಸಂಪರ್ಕಿಸಬೇಕು?
ಸ್ತನ್ಯಪಾನವು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಕಷ್ಟಕರವಾಗಿರುತ್ತದೆ ಎಂದು ಡಾ. ಪೈ ಹೇಳುತ್ತಾರೆ. “ಈ ಕ್ಷೇತ್ರದ ತಜ್ಞರು ನಿಮಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದಲ್ಲದೆ, ಭಾವನಾತ್ಮಕ ಬೆಂಬಲ ಮತ್ತು ಪ್ರೋತ್ಸಾಹ ನೀಡುತ್ತಾರೆ.” ಎನ್ನುತ್ತಾರೆ ಡಾ. ಪೈ.

ಲ್ಯಾಕ್ಟೇಷನ್ ತಜ್ಞರು ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುತ್ತಾರೆ.

1) ಸ್ತನ್ಯಪಾನದ ಆರಂಭಿಕ ದಿನಗಳಲ್ಲಿ, ಊತ, ಬಿಗಿತ ಮತ್ತು ಸ್ತನಗಳ ಹೆಚ್ಚಿದ ಗಾತ್ರದೊಂದಿಗೆ ನೀವು ನೋವು ಅನುಭವಿಸಬಹುದು. ಇದು ಸಾಮಾನ್ಯವಾಗಿ ಹಾಲುಣಿಸುವ ಮೊದಲ 3-5 ದಿನಗಳಲ್ಲಿ ಸಂಭವಿಸುತ್ತದೆ. ಈ ಬಗ್ಗೆಯೂ ನಿಮಗೆ ಸಲಹೆ ನೀಡಲಾಗುತ್ತದೆ.

2) ನೀವು ನೋಯುತ್ತಿರುವ, ಬಿರುಕು ಅಥವಾ ನೋವಿನ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಆ ಬಗ್ಗೆಯೂ ನಿಮಗೆ ಏನು ಮಾಡಬಹುದೆಂಬ ಸಲಹೆ ನೀಡುತ್ತಾರೆ.

3) ಹಾಲು ಪೂರೈಕೆಯ ಬಗ್ಗೆ ನಿಮಗೆ ತಿಳಿಸುತ್ತಾರೆ.

ಇದನ್ನೂ ಓದಿ:  Children and Pets: ಮನೆಯಲ್ಲಿ ಮಗು ಜೊತೆ ಸಾಕು ಪ್ರಾಣಿಗಳೂ ಇವೆಯಾ? ಹಾಗಾದರೆ ಇರಲಿ ಎಚ್ಚರ!

4) ನಿಮ್ಮ ಮಗುವಿಗೆ ಯಾವ ಸ್ತನ್ಯಪಾನದ ಭಂಗಿಯು ಉತ್ತಮ ಎಂದು ತಿಳಿದಿಲ್ಲವಾದ್ದಲ್ಲಿ ಸರಿಯಾದ ಮಾರ್ಗದರ್ಶನ ನೀಡುತ್ತಾರೆ.

5) ಲಾಚಿಂಗ್, ಹೀರುವಿಕೆ ಅಥವಾ ನಾಲಿಗೆ ಟೈ ಸಮಸ್ಯೆಗಳ ಬಗ್ಗೆ ತಿಳಿಸುತ್ತಾರೆ.

6) ಹಾಲುಣಿಸಿದ ದಿನಗಳ ನಂತರವೂ ನಿಮ್ಮ ಮಗುವಿನ ತೂಕ ಹೆಚ್ಚಾಗುತ್ತಿಲ್ಲವೆಂದರೆ, ನಿಮ್ಮ ಮಗು ನಿಮ್ಮ ಎದೆ ಹಾಲನ್ನು ಕುಡಿಯಲು ನಿರಾಕರಿಸುತ್ತಿದ್ದರೆ ಆ ಬಗ್ಗೆ ಏನು ಮಾಡಬಹುದೆಂಬ ಸಲಹೆ ನೀಡುತ್ತಾರೆ.

ಈ ಎಲ್ಲಾ ಗೊಂದಲ, ಅರಿವಿನ ಕೊರತೆ ತಾಯಿಯಂದಿರಿಗಿದ್ದರೆ ತಜ್ಞರು ಇದನ್ನು ಪರಿಹರಿಸಲು ಸಲಹೆ ನೀಡುತ್ತಾರೆ. ಅಲ್ಲದೇ ಲ್ಯಾಕ್ಟೇಷನ್ ಸಲಹೆಗಾರರು ನಿಮ್ಮ ಆರೋಗ್ಯದ ಇತಿಹಾಸ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಇತರ ಮಾಹಿತಿಯನ್ನು ಪರಿಶೀಲಿಸುತ್ತಾರೆ.
Published by:Ashwini Prabhu
First published: