• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Sexual wellness: 7 ವರ್ಷದ ಮಗ ಜಾಹೀರಾತಿನಲ್ಲಿ ಬರುವ ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಕೇಳಿದಾಗ ಹೇಗೆ ಉತ್ತರಿಸುವುದು?

Sexual wellness: 7 ವರ್ಷದ ಮಗ ಜಾಹೀರಾತಿನಲ್ಲಿ ಬರುವ ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಕೇಳಿದಾಗ ಹೇಗೆ ಉತ್ತರಿಸುವುದು?

ಸ್ಯಾನಿಟರಿ ನ್ಯಾಪ್ಕಿನ್

ಸ್ಯಾನಿಟರಿ ನ್ಯಾಪ್ಕಿನ್

ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿ ರಕ್ತವನ್ನು ಹೀರಿಕೊಳ್ಳುವ ಮತ್ತು ಆ ಭಾಗವನ್ನು ಸ್ವಚ್ಛವಾಗಿರಿಸುವ ಒಂದು ಮಾರ್ಗವೆಂದರೆ ಅದು ಸ್ಯಾನಿಟರಿ ನ್ಯಾಪ್ಕಿನ್​ ಎಂದು ನೀವು ವಿವರಿಸಬಹುದು. ನೀವು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್ ಮಾದರಿಯನ್ನು ಸಹ ತೋರಿಸಬಹುದು ಮತ್ತು ನೀರನ್ನು ಬಳಸುವ ಮೂಲಕ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರದರ್ಶಿಸಬಹುದು.

ಮುಂದೆ ಓದಿ ...
  • Share this:

ಪ್ರಶ್ನೆ; ನನ್ನ 7 ವರ್ಷದ ಮಗ ಜಾಹೀರಾತಿನಲ್ಲಿ ಬರುವ ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಕೇಳಿದ. ಏನು ಹೇಳಬೇಕೆಂದು ನನಗೆ ತೋಚಲಿಲ್ಲ. ಆಗ ನಾನು, ಹುಡುಗಿಯರು ಶೌಚಕ್ಕೆ ಹೋಗಬೇಕು ಎನಿಸಿದಾಗ ಮೂತ್ರ ವಿಸರ್ಜನೆ ಇನ್ನು ಹಿಡಿದಿಡಲು ಸಾಧ್ಯವಾಗದಿದ್ದಾಗ ಅವರು ಈ ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ ಎಂದು ಅವನಿಗೆ ಹೇಳಿದೆ. ಅಂದಿನಿಂದ ಅವನು ಸ್ಯಾನಿಟರಿ ನ್ಯಾಪ್ಕಿನ್​ಗಳನ್ನು ‘ಮಾಮಾ ಡಯಾಪರ್’ ಎಂದು ಕರೆಯಲು ಪ್ರಾರಂಭಿಸಿದ್ದಾನೆ. ಅವನಿಗೆ ನಾನು ತಪ್ಪು ಮಾಹಿತಿ ನೀಡಿದ್ದರ ಬಗ್ಗೆ ಪಶ್ಚಾತ್ತಾಪವಾಗುತ್ತಿದೆ?


ಉತ್ತರ; ನಿಮ್ಮ ಮಕ್ಕಳಿಗೆ ಪ್ರಾಮಾಣಿಕ ಮತ್ತು ನೇರವಾದ ಉತ್ತರಗಳನ್ನು ನೀಡುವುದು ಯಾವಾಗಲೂ ಉತ್ತಮ. ನಿಮ್ಮ ಅದೃಷ್ಟ, ನಿಮ್ಮ ತಪ್ಪನ್ನು ಸರಿಪಡಿಸಲು ತಡವಾಗಿಲ್ಲ!ನಿಮ್ಮ ಮಗನ ಬಳಿ ನೀವು ತಪ್ಪು ಎಂದು ಒಪ್ಪಿಕೊಂಡು ನಿಜಾಂಶ ತಿಳಿಸಿ. ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ ಮತ್ತೊಬ್ಬರು ಯಾವಾಗಲೂ ತಪ್ಪನ್ನು ಸರಿಪಡಿಸಬಹುದು. ಈ ಪಾಠವನ್ನು ನೀಡಲು ಇದು ನಿಜವಾಗಿಯೂ ಉತ್ತಮ ಅವಕಾಶ. ಈಗ ನಿಜವಾದ ಪ್ರಶ್ನೆಗೆ, ಚಿಕ್ಕ ಹುಡುಗನಿಗೆ ಮುಟ್ಟನ್ನು ನಾನು ಹೇಗೆ ವಿವರಿಸುತ್ತೇನೆ? ಪ್ರಾಮಾಣಿಕವಾಗಿ! 7 ವರ್ಷ ವಯಸ್ಸಿನ ಹೊತ್ತಿಗೆ, ನಿಮ್ಮ ಮಗುವಿಗೆ ಮುಟ್ಟಿನ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿದೆಯೇ. ಯೋನಿಯಂತಹ ಮೂಲ ಸಂತಾನೋತ್ಪತ್ತಿ ಅಂಗರಚನಾಶಾಸ್ತ್ರದ ಬಗ್ಗೆ ಆತ ಮೊದಲೇ ತಿಳಿದಿರುವುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ. ನೀವು ಏನು ಹೇಳಬಹುದು ಎಂಬುದು ಮಾಹಿತಿ ಇಲ್ಲಿದೆ.


ಹುಡುಗಿಯರು ವಯಸ್ಸಾದಾಗ, ಸುಮಾರು 12-13 ವರ್ಷ ವಯಸ್ಸಿನವರಾಗಿದ್ದಾಗ, ಅವರ ದೇಹ ಅನೇಕ ಬದಲಾವಣೆಗಳನ್ನು ಎದುರಿಸುತ್ತದೆ. ಅವರ ದೇಹದಲ್ಲಿನ ರಾಸಾಯನಿಕಗಳು (ಹಾರ್ಮೋನುಗಳು ಎಂದು ಕರೆಯಲ್ಪಡುತ್ತವೆ) ಕಾರಣದಿಂದ ಈ ಬದಲಾವಣೆಗಳು ಸಂಭವಿಸುತ್ತವೆ. ಇದು ಸಂಭವಿಸಿದಾಗ, ಮಹಿಳೆಯ ದೇಹವು ತಾಯ್ತನಕ್ಕೆ ತಯಾರಾಗಲು ಆರಂಭಿಸುತ್ತದೆ. ಅತಿಥಿಗಳು ಬರುವ ಮೊದಲು ಮನೆಯನ್ನು ಸ್ವಚ್ಛಗೊಳಿಸಿ ಸಿದ್ಧಪಡಿಸಿದಂತೆ.


ಇದನ್ನು ಓದಿ: Sexual wellness: ಚುಂಬಿಸಿದರೆ ಮಕ್ಕಳಾಗುತ್ತಾ ಎಂಬ ಮಗನ ಪ್ರಶ್ನೆಗೆ ಹೇಗೆ ಉತ್ತರಿಸುವುದು?


ಮುಟ್ಟಿನ ಮೂಲಭೂತ ಅಂಶಗಳು ಸ್ಪಷ್ಟವಾದ ನಂತರ, ಮಹಿಳೆಯರು ಈ ರಕ್ತವನ್ನು ಹೀರಿಕೊಳ್ಳುವ ಮತ್ತು ಆ ಭಾಗವನ್ನು ಸ್ವಚ್ಛವಾಗಿರಿಸುವ ಒಂದು ಮಾರ್ಗವೆಂದರೆ ಅದು ಸ್ಯಾನಿಟರಿ ನ್ಯಾಪ್ಕಿನ್​ ಎಂದು ನೀವು ವಿವರಿಸಬಹುದು. ನೀವು ಅವರಿಗೆ ಸ್ಯಾನಿಟರಿ ನ್ಯಾಪ್ಕಿನ್ ಮಾದರಿಯನ್ನು ಸಹ ತೋರಿಸಬಹುದು ಮತ್ತು ನೀರನ್ನು ಬಳಸುವ ಮೂಲಕ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರದರ್ಶಿಸಬಹುದು. ವಯಸ್ಸಾದಂತೆ ಮಗು ಮುಟ್ಟಿನ ಮತ್ತು ಮುಟ್ಟಿನ ಇತರೆ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು