• Home
  • »
  • News
  • »
  • lifestyle
  • »
  • Fatty Liver: ಕೊಬ್ಬಿನ ಯಕೃತ್ತು ಸಮಸ್ಯೆಗಳು ನಿಮಗಿದ್ಯಾ? ಇದರ ರೋಗಲಕ್ಷಣಗಳು ಹೀಗಿವೆ

Fatty Liver: ಕೊಬ್ಬಿನ ಯಕೃತ್ತು ಸಮಸ್ಯೆಗಳು ನಿಮಗಿದ್ಯಾ? ಇದರ ರೋಗಲಕ್ಷಣಗಳು ಹೀಗಿವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಟ್ಟ ಆಹಾರ ಪದ್ಧತಿ ಮೊದಲಿಗೆ ಪರಿಣಾಮ ಬೀರುವುದೇ ನಮ್ಮ ಯಕೃತ್ತಿನ ಮೇಲೆ. ಲಿವರ್ ಸಮಸ್ಯೆ ಜನರಲ್ಲಿ ಹೆಚ್ಚುತ್ತಿದೆ.

  • Trending Desk
  • 2-MIN READ
  • Last Updated :
  • Share this:

ಒತ್ತಡದ ಬದುಕಲ್ಲಿ ನಮ್ಮ ಜೀವನಶೈಲಿಯೇ (Lifestyle) ಬದಲಾಗಿ ಹೋಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಒಳ್ಳೆಯದ್ದೋ, ಕೆಟ್ಟದ್ದೋ ಅಂತಾನೂ ನೋಡದೇ ಏನಾದರೂ ಒಂದು ತಿಂದ್ರಾಯ್ತು ಎಂಬ ಸ್ಥಿತಿಗೂ ಬಂದು ಬಿಟ್ಟಿದ್ದೇವೆ. ಹೀಗೆ ನಮ್ಮ ಈ ನಿರ್ಲಕ್ಷ್ಯದ (Careless) ಆಹಾರ ಪದ್ಧತಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಕೆಟ್ಟ ಆಹಾರ ಪದ್ಧತಿ ಮೊದಲಿಗೆ ಪರಿಣಾಮ ಬೀರುವುದೇ ನಮ್ಮ ಯಕೃತ್ತಿನ ಮೇಲೆ. ಲಿವರ್ (Liver)‌ ಸಮಸ್ಯೆ ಜನರಲ್ಲಿ ಹೆಚ್ಚುತ್ತಿದೆ. ಕೆಲವು ಕೆಟ್ಟ ಮಾರಣಾಂತಿಕ ಕಾಯಿಲೆಗಳಂತೆ ಕೊಬ್ಬಿನ ಲಿವರ್‌ ರೋಗ ಕೂಡ ಹೆಚ್ಚು ಅಪಾಯಕಾರಿಯಾಗಿದೆ. ಜೀವನಶೈಲಿ ಮತ್ತು ಆಹಾರದ ಬದಲಾವಣೆಗಳಿಂದ ಕೊಬ್ಬಿನ ಯಕೃತ್ತು ಸಮಸ್ಯೆ ಹೆಚ್ಚುತ್ತಿದೆ.


ಜಡ ಜೀವನಶೈಲಿ ಮತ್ತು ಸಂಸ್ಕರಿಸಿದ ಮತ್ತು ಹೆಚ್ಚಿನ ಕ್ಯಾಲೊರಿಯುಕ್ತ ಆಹಾರದ ಹೆಚ್ಚಿನ ಸೇವನೆಯು ಈ ಸ್ಥಿತಿಗೆ ಕೆಲವು ಪ್ರಮುಖ ಕಾರಣಗಳಾಗಿವೆ ಎನ್ನುತ್ತಾರೆ ವೈದ್ಯರು. ಕಳಪೆ ಆಹಾರ, ಬೊಜ್ಜು, ಕೊಲೆಸ್ಟ್ರಾಲ್‌ಗೆ ಕಾರಣವಾಗುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಕೊಬ್ಬಿನ ಪಿತ್ತಜನಕಾಂಗದ ಅಥವಾ ಯಕೃತ್ತಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಈ ಕಾಯಿಲೆ ಹೆಚ್ಚಾದಲ್ಲಿ ಇದು ಗಂಭೀರ ಕೂಡ ಹೌದು. ಈ ಕಾಯಿಲೆ ಲಕ್ಷಣರಹಿತವಾಗಿರುವುದರಿಂದ ಹಲವರಿಗೆ ಈ ಯಕೃತ್ತು ಸಮಸ್ಯೆಗಳು ಆರಂಭದಲ್ಲಿಯೇ ಗೊತ್ತೇ ಆಗುವುದಿಲ್ಲ. ಆದರೆ ಈ ಸಮಸ್ಯೆ ಇದ್ದವರಿಗೆ ರೋಗ ಉಲ್ಬಣವಾದಾಗ ಹಲವು ಲಕ್ಷಣಗಳು ಕಾಣಿಸಲು ಆರಂಭವಾಗುತ್ತವೆ. ಹಾಗಾದರೆ, ಕೊಬ್ಬಿನ ಯಕೃತ್ತು ಸಮಸ್ಯೆ ತೀವ್ರವಾದಾಗ ಕಂಡುಬರುವ ಲಕ್ಷಣಗಳ ಬಗ್ಗೆ ಇಲ್ಲಿದೆ ನೋಡಿ ವಿವರ.


ಮೊದಲ ಹಂತ - ಸ್ಟೀಟೋಸಿಸ್
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗಳಲ್ಲಿ ಎರಡು ವಿಧಗಳಿವೆ. ಆಲ್ಕೋಹಾಲಿಕ್ ಮತ್ತು ನಾನ್ ಆಲ್ಕೋಹಾಲಿಕ್ ಕಾಯಿಲೆ. ಆಲ್ಕೋಹಾಲಿಕ್ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಾಮಾನ್ಯವಾಗಿ ಯಕೃತ್ತಿನ ಸಮಸ್ಯೆಯಾಗಿದೆ.


ಇದು ಮಿತಿಮೀರಿದ ಆಲ್ಕೋಹಾಲ್ ಸೇವಿಸುವ ಜನರಲ್ಲಿ ಸಂಭವಿಸುತ್ತದೆ. ಇನ್ನೂ ನಾನ್ ಆಲ್ಕೋಹಾಲಿಕ್ ಕಾಯಿಲೆ ಬೊಜ್ಜು, ಕೊಬ್ಬಿನಿಂದಾಗಿ ಉಂಟಾಗುತ್ತದೆ.


ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ನಲ್ಲಿ ನಾಲ್ಕು ಹಂತಗಳಿವೆ, ಇದು ರೋಗದ ಪ್ರಗತಿಯನ್ನು ನಿರ್ಧರಿಸುತ್ತದೆ. ಮೊದಲ ಹಂತವೆಂದರೆ ಸರಳ ಕೊಬ್ಬಿನ ಯಕೃತ್ತು ಅಥವಾ ಸ್ಟೀಟೋಸಿಸ್.


ಇದನ್ನೂ ಓದಿ: ತ್ವಚೆಯ ಪ್ರಕಾರ ಕಂಡು ಹಿಡಿಯುವುದು ಹೇಗೆ? ಈ ಟೆಸ್ಟ್ ಮಾಡಿ ನೋಡಿ!


ಯಕೃತ್ತಿನ ಜೀವಕೋಶಗಳು ಕೊಬ್ಬನ್ನು ನಿರ್ಮಿಸಲು ಪ್ರಾರಂಭಿಸಿದಾಗ ಇದು ಸಂಭವಿಸುತ್ತದೆ, ಆದರೆ ಈ ಹಂತದಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ.


ಎರಡನೇ ಹಂತ: ಉರಿಯೂತ


ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್‌ನ­ ಎರಡನೇ ಹಂತವೆಂದರೆ ಆಲ್ಕೊಹಾಲ್ಯುಕ್ತವಲ್ಲದ ಸ್ಟೀಟೋಹೆಪಟೈಟಿಸ್ (NASH). ಇಲ್ಲಿ, ಯಕೃತ್ತು ಹಾನಿಗೊಳಗಾದ ಅಂಗಾಂಶವನ್ನು ಸರಿಪಡಿಸುವುದರಿಂದ ಉರಿಯೂತದ ಜೊತೆಗೆ ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹಾನಿಗೊಳಗಾದ ಅಂಗಾಂಶವು ಹೆಚ್ಚು ಇದ್ದರೆ, ಯಕೃತ್ತಿನ ಗುರುತುಗಳು ಫೈಬ್ರೋಸಿಸ್ಗೆ ಕಾರಣವಾಗುತ್ತವೆ.


ಮೂರನೇ ಹಂತ: ಫೈಬ್ರೋಸಿಸ್
ಮೂರನೇ ಹಂತವು ಫೈಬ್ರೋಸಿಸ್ ಆಗಿದ್ದು, ಗಾಯದ ಅಂಗಾಂಶವು ಯಕೃತ್ತಿನಲ್ಲಿ ಮತ್ತು ಯಕೃತ್ತಿನ ಸುತ್ತ ರಕ್ತನಾಳಗಳಲ್ಲಿ ಇದ್ದಾಗ ಇದು ಕಂಡುಬರುತ್ತದೆ. ಆದಾಗ್ಯೂ, ಸರಿಯಾದ ಸಮಯದಲ್ಲಿ ಇದಕ್ಕೆ ಚಿಕಿತ್ಸೆ ಪಡೆಯದಿದ್ದರೆ ಇದು ಸಿರೋಸಿಸ್‌ಗೆ ಕಾರಣವಾಗಬಹುದು.


ನಾಲ್ಕನೇ ಹಂತ: ಸಿರೋಸಿಸ್
ಈ ಕಾಯಿಲೆಯಲ್ಲಿ ನಾಲ್ಕನೇ ಹಂತವು ಸಿರೋಸಿಸ್ ಆಗಿದೆ. ಈ ಹಂತವು ಬಹಳ ಅಪಾಯಕಾರಿಯಾಗಿದ್ದು, ಯಕೃತ್ತು ಈ ಹಂತದಲ್ಲಿ ತನ್ನ ಕೆಲಸವನ್ನೇ ನಿಲ್ಲಿಸುತ್ತದೆ ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದರ ಜೊತೆ ಪಕ್ಕೆಲುಬುಗಳ ಕೆಳಗೆ ವಿಪರೀತ ನೋವು ಕಂಡುಬರುತ್ತದೆ. ಸಮಸ್ಯೆ ಉಲ್ಬಣವಾದಲ್ಲಿ ಕಾಲಿನ ಊತ, ರಕ್ತ ವಾಂತಿ ಲಕ್ಷಣಗಳು ಕಂಡುಬರುತ್ತವೆ.




ಫ್ಯಾಟಿ ಲಿವರ್ ಅಪಾಯದ ಚಿಹ್ನೆಗಳು
- ಹಸಿವಾಗದೇ ಇರುವುದು
- ಕಣ್ಣುಗಳು ಮತ್ತು ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು
- ರಕ್ತ ವಾಂತಿ
- ಕಪ್ಪು ಬಣ್ಣದ ಮಲ
- ಕಾಲಿನ ಊತ
- ತೂಕ ಇಳಿಕೆ
- ನಿದ್ರೆಯ ನಡುವೆ ಎಚ್ಚರವಾಗುವುದು


ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ ಎನ್ನೋ ಮಾತಿನಂತೆ ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯು ಈ ಕಾಯಿಲೆಯಿಂದ ತಪ್ಪಿಸಿಕೊಳ್ಳಬಹುದಾದ ಮಾರ್ಗಗಳಾಗಿವೆ. ನಿಯಮಿತ ಔಷಧಿ, ಆಹಾರ, ಜೀವನಶೈಲಿಯ ಉತ್ತಮ ಬದಲಾವಣೆಗಳು ಕೊಬ್ಬಿನ ಯಕೃತ್ತು ಸಮಸ್ಯೆ ನಿವಾರಣೆಗೆ ಸಹಕಾರಿ ಎನ್ನುತ್ತಾರೆ ವೈದ್ಯರು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು