• Home
  • »
  • News
  • »
  • lifestyle
  • »
  • Dandruff Control: ತಲೆಹೊಟ್ಟಿಗೆ ಪರ್ಮನೆಂಟಾಗಿ ಹೇಳಿ ಟಾ ಟಾ! ಇವಿಷ್ಟು ಮಾಡಿ ಸಾಕು

Dandruff Control: ತಲೆಹೊಟ್ಟಿಗೆ ಪರ್ಮನೆಂಟಾಗಿ ಹೇಳಿ ಟಾ ಟಾ! ಇವಿಷ್ಟು ಮಾಡಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hair Care: ಈಗಿನ ಬಿಝಿ ಜಂಜಾಟದಲ್ಲಿ ಅವರವರ ಕೆಲಸಗಳನ್ನು ಮಾಡಿಕೊಂಡು ಹೋಗುವುದೇ ದೊಡ್ಡ ಕೆಲಸವಾಗಿರುತ್ತದೆ. ಹಾಗಾಗಿ ತಮ್ಮ ಆರೋಗ್ಯದ ಕಡೆ ಗಮನಹರಿಸುವುದೇ ಕಷ್ಟಕರವಾಗಿರುತ್ತದೆ. ಇದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಅದರಲ್ಲೂ ಕೂದಲು ಸಮಸ್ಯೆಯೇ ಹೇರಳ. ಕೂದಲು ಸಣ್ಣ ವಯಸ್ಸಿನಲ್ಲಿ ಬಿಳಿ ಆಗುವುದು, ಉದುರುವುದು, ಮತ್ತು ಇದರ ಜೊತೆಗೆ ನೀರಿನಲ್ಲಿ ವ್ಯತ್ಯಾಸವಾದರೆ ಹೊಟ್ಟು ಆಗುವುದು ಈ ರೀತಿಯ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗಳಿಗಾಗಿ ಪರಿಹಾರ ಇಲ್ಲಿದೆ ನೋಡಿ.

ಮುಂದೆ ಓದಿ ...
  • Share this:

ಬೆಳ್ಳುಳ್ಳಿಯನ್ನು ಜಜ್ಜಿ, ಚೆನ್ನಾಗಿ ಪೇಸ್ಟ್ ಮಾಡಿ ಅದನ್ನು ತಲೆಗೆ ಹಚ್ಚುವುದರಿಂದ ಹೊಟ್ಟು ಕಮ್ಮಿಯಾಗುತ್ತದೆ. ಸ್ವಲ್ಪ ವಾಸನೆಯಾದರೂ ಕೂದಲ ಸಧೃಢವಾಗಿ ಬೆಳೆಯುತ್ತದೆ.


ಮೊಟ್ಟೆಯ ಬಿಳಿಭಾಗವನ್ನು ನಿಂಬೆಯ ರಸದೊಂದಿಗೆ ಬೆರೆಸಿ ಅದನ್ನು ತಲೆಗೆ ಹಚ್ಚಿ ಕೆಲಕಾಲದ ನಂತರ ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಹೊಟ್ಟು ನಿವಾರಣೆ ಆಗುತ್ತದೆ.


ತೆಂಗಿನ ಎಣ್ಣೆಯನ್ನು ಹಚ್ಚುವುದು ಸೂಕ್ತ. ಆದರೆ, ಹಚ್ಚುವಾಗ ಉಗುರು ಬೆಚ್ಚಗೆ ಮಾಡಿ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು.


ಅರ್ಧ ಕಪ್ಪು ಮೊಸರಿನ ಜೊತೆಗೆ ನಿಂಬೆರಸವನ್ನು ಸೇರಿಸಿ ತಲೆಗೂದಲಿಗೆ ಹಚ್ಚುವುದರಿಂದ ಕೂದಲು ಉದರುವಿಕೆ ಮತ್ತು ಹೊಟ್ಟು ನಿವಾರಣೆ ಆಗುತ್ತದೆ.


ಒಗ್ಗರಣೆಗೆ ಬಳಸುವು ಬೇವಿನ ಸೊಪ್ಪನ್ನು ಚೆನ್ನಾಗಿ ಅರೆದು ಅದನ್ನು ನೆತ್ತಿಯ ಭಾಗಕ್ಕೆ ಹಚ್ಚುವುದರಿಂದ ಕೂದಲಲ್ಲಿ ಆಗುವ ಧನಾತ್ಮಕ ಬದಲಾವಣೆಗಳನ್ನು ನಾವು ಕಾಣಬಹುದು.


ಈರುಳ್ಳಿ ರಸವನ್ನು ಮಾತ್ರ ತೆಗೆದು ಅದನ್ನು ಕೂದಲಿಗೆ ಹಚ್ಚಿ. ಇದರಿಂದ ಹೇನು, ಹೊಟ್ಟು ಮತ್ತು ಉದುರುವುದು ಖಂಟಿತವಾಗಿಯೂ ಕಡಿಮೆಯಾಗುತ್ತದೆ.


ತುಳಸಿ ಸೊಪ್ಪನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣಮಾಡಿ ಹಚ್ಚುವುದರಿಂದ ಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.


ಆಯುರ್ವೇದಿಕ್ ಮೆಹೆಂದಿ ಅಥವಾ ಮನೆಯಲ್ಲಿ ಬೆಳೆದ ಮೆಹೆಂದಿಯ ಜೊತಗೆ ಸ್ವಲ್ಪ ನಿಂಬೆ ರಸ ಮತ್ತು ಮೊಸರನ್ನು ಸೇರಿಸಿ ತಲೆಗೆ ಹಚ್ಚಿ.


ಕಹಿಬೇವನ್ನು ಪೇಸ್ಟ್ ಮಾಡಿ ನಂತರ ತಲೆಗೆ ಹಚ್ಚುವುದರಿಂದ ಕೂದಲು ಬೇಗನೆ ಉದ್ದ ಬರುವುದರ ಜೊತೆಗೆ ಹೊಟ್ಟು ನಿವಾರಣೆ ಆಗುತ್ತದೆ

First published: