Diabetes: ಬಾಯಿಯ ತೊಂದರೆಗಳಿಗೆ ಕಾರಣವಾಗುತ್ತಾ ಡಯಾಬಿಟಿಸ್?

ರಕ್ತದಲ್ಲಿ ಸಕ್ಕರೆ ಮಟ್ಟ  ಹೆಚ್ಚಿರುವ ಜನರು ಹಲ್ಲು ಮತ್ತು ಒಸಡುಗಳ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿದೆ.  ಏಕೆಂದರೆ ಅವರಲ್ಲಿ ಸೋಂಕಿಗೆ ಪ್ರತಿರೋಧ ಮಾಡುವ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ, ಮಧುಮೇಹವು ಕಾಯಿಲೆಯನ್ನು  ಗುಣಪಡಿಸುವ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಧುಮೇಹ ಇರುವವರ ಪರಿಸ್ಥಿತಿ ಯಾರಿಗೂ ಬೇಡ. ಊಟದಲ್ಲಿ ಡಯೆಟ್ ಮತ್ತೆ ಯಾವುದೇ ಸ್ವೀಟ್ ತಿನ್ನುವ ಹಾಗೆ ಇಲ್ಲ. ಇನ್ನು ನಿಯಂತ್ರಣವಿಲ್ಲದ ರಕ್ತದಲ್ಲಿನ ಸಕ್ಕರೆ ಮಟ್ಟ ರೋಗಿಗಳ  ಕಣ್ಣು, ಮೂತ್ರಪಿಂಡ, ನರ ಸೇರಿದಂತೆ ಹೃದಯ, ಮೆದುಳು ಮತ್ತು ಇತರ ದೇಹದ ಅಂಗಗಳ  ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದು ತಿಳಿದಿರುವ ಸಂಗತಿ. ಆದರೆ  ಈ ಅನಿಯಂತ್ರಿತ ರಕ್ತದಲ್ಲಿನ ಸಕ್ಕರೆಯ ಮಟ್ಟ ಬಾಯಿಯ ಅಥವಾ ಹಲ್ಲಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎನ್ನುವ ವಿಚಾರ ನಿಮಗೆ ತಿಳಿದಿದೆಯೇ?

ರಕ್ತದಲ್ಲಿ ಸಕ್ಕರೆ ಮಟ್ಟ  ಹೆಚ್ಚಿರುವ ಜನರು ಹಲ್ಲು ಮತ್ತು ಒಸಡುಗಳ ಕಾಯಿಲೆಗೆ ತುತ್ತಾಗುವ ಅಪಾಯ ಹೆಚ್ಚಿದೆ.  ಏಕೆಂದರೆ ಅವರಲ್ಲಿ ಸೋಂಕಿಗೆ ಪ್ರತಿರೋಧ ಮಾಡುವ ಶಕ್ತಿ ಕಡಿಮೆ ಇರುತ್ತದೆ. ಅಲ್ಲದೆ, ಮಧುಮೇಹವು ಕಾಯಿಲೆಯನ್ನು  ಗುಣಪಡಿಸುವ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ  ಹಲ್ಲಿನ ರೋಗದ ಚಿಕಿತ್ಸೆಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಡಿಟಿಎಂ ಮತ್ತು ಎಚ್, ಎಂಎಸಿಪಿ, ಹಿರಿಯ ಸಲಹೆಗಾರ ವೈದ್ಯರಾದ (ಮೆಡಿಕಾ  ಕ್ಲಿನಿಕ್) ಡಾ ಅಭಿಜೀತ್ ಶರಣ್, ಡಿಎನ್ಬಿ (ಸಾಮಾನ್ಯ ಔಷಧ), ಹೇಳಿದ್ದಾರೆ.

ಅಂತಃಸ್ರಾವಕ(Endocrine Disorder) ರೋಗದಂತೆ, ಮಧುಮೇಹವು ದೇಹದ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ ಸಹ , ಮಧುಮೇಹ ಹೊಂದಿರುವ ಜನರು ಬಾಯಿಯ ಆರೋಗ್ಯದ ಮೇಲೆ ಮಧುಮೇಹ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನ ಅರ್ಥಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಡಾ ಶರಣ್ ಹೇಳಿದ್ದಾರೆ.

ಇದನ್ನೂ ಓದಿ::ಹೊಳೆಯುವ ಮುಖದ ಕಾಂತಿಗೆ ಸೋಪ್, ಫೇಸ್‌ವಾಶ್‌ ಬದಲು ನೈಸರ್ಗಿಕ ವಸ್ತುಗಳನ್ನು ಬಳಸಿ..!

ಮಧುಮೇಹ  ತೊಂದರೆ ಇರುವ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಬಾಯಿಯ ಆರೋಗ್ಯ ಸಮಸ್ಯೆಗಳು ಯಾವುವು?

ಒಸಡು ಬಾವು, ಪರಿದಂತದ ಕಾಯಿಲೆ, ಥ್ರಷ್, ಹಲ್ಲಿನ ಕೊಳೆತ, ಬಾಯಿಯ ಹುಣ್ಣು, ಬದಲಾದ ರುಚಿ ಮತ್ತು ಒಣ ಬಾಯಿ ಮುಂತಾದ ಶಿಲೀಂಧ್ರಗಳ ಸೋಂಕು  ಈ ಎಲ್ಲ ರೋಗಗಳು ಮಧುಮೇಹದ ತೊಂದರೆ ಇರುವ ರೋಗಿಗಳಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಪೆರಿಯೊಡಾಂಟಲ್ ಅಥವಾ ಗಮ್ ರೋಗ ಎಂದರೇನು, ಮತ್ತು ಇದು ಮಧುಮೇಹ ಇರುವವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಪೆರಿಯೊಡಾಂಟಲ್ ಅಥವಾ ಗಮ್ ರೋಗವು ಒಂದು ರೀತಿಯ ಸೋಂಕಾಗಿದ್ದು ಅದು  ಹಲ್ಲುಗಳಿಗೆ ಬೆಂಬಲವಾಗಿರುವ ದಂತದ ಸುತ್ತಲಿನ ಮೂಳೆಯನ್ನು ನಾಶ ಮಾಡುತ್ತದೆ . ಇದು ಆಹಾರ ಅಗೆಯುವಾಗ ತೊಂದರೆ ಮಾಡುತ್ತದೆ.

ಒಸಡು ಕಾಯಿಲೆಯ ಲಕ್ಷಣಗಳು

ರಕ್ತಸ್ರಾವ .

ಒಸಡುಗಳಲ್ಲಿ ಊತ.

ಒಸಡುಗಳಿಂದ ನಿರಂತರ ಕೀವು.

ಹಲ್ಲುಗಳು ಸಡಿಲಗೊಂಡು ಒಸಡುಗಳಿಂದ ದೂರ ಹೋಗುತ್ತವೆ.

ಕೆಟ್ಟ ರುಚಿ.

ದುರ್ವಾಸನೆ.

ಪ್ಲೇಕ್ ಮತ್ತು ಟಾರ್ಟಾರ್.

ಇದನ್ನೂ ಓದಿ: ಯಾರನ್ನ ಕೇಳಿದ್ರೂ ಥೈರಾಯ್ಡ್ ಸಮಸ್ಯೆ ಅಂತಿದ್ದಾರಲ್ಲಾ, ಭಾರತದಲ್ಲಿ ಇದು ಹೆಚ್ಚಾಗೋಕೆ ಏನು ಕಾರಣ? ತಡೆಯೋದು ಹೇಗೆ?

ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಮಟ್ಟ ಹೊಂದಿರುವ ಜನರು ತಮ್ಮ ಒಣ ಬಾಯಿಯಿಂದ ಅಧಿಕ ಪ್ರಮಾಣದ ಸಕ್ಕರೆ ಮಟ್ಟವನ್ನು ಹೊಂದಿರುತ್ತಾರೆ ಎನ್ನಲಾಗಿದೆ.

ಬಾಯಿಯಲ್ಲಿರುವ ಬ್ಯಾಕ್ಟೀರಿಯಾದೊಂದಿಗೆ ಸಂವಹನ ನಡೆಸುವಾಗ, ಲಾಲಾರಸದ ಅಧಿಕ ಸಕ್ಕರೆಯ ಅಂಶವು ಆಮ್ಲದ ರಚನೆಗೆ ಕಾರಣವಾಗಬಹುದು, ಇದು ನಿಧಾನವಾಗಿ ಹಲ್ಲಿನ ದಂತಕವಚವನ್ನು ಕರಗಿಸಿ ಕ್ಯಾವಿಟಿಗೆ ಕಾರಣವಾಗುತ್ತದೆ ಎಂದು ಡಾ ಶರಣ್ ಹೇಳಿದರು.

ಮಧುಮೇಹ ಇರುವವರು ತಮ್ಮ ಹಲ್ಲುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ನಿಯಮಿತವಾಗಿ ವೈದ್ಯರನ್ನು ಭೇಟಿ ಮಾಡಬೇಕು. ಅಲ್ಲದೆ,  ಕ್ಯಾವಿಟಿ ಮತ್ತು ಒಸಡು ರೋಗವನ್ನು ತಡೆಗಟ್ಟಲು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು.

ಓರಲ್ ಥ್ರಷ್ ಅಥವಾ ಕ್ಯಾಂಡಿಡಿಯಾಸಿಸ್ ಎನ್ನುವುದು ಬಾಯಿಯಲ್ಲಿ ನೈಸರ್ಗಿಕವಾಗಿ ಕಂಡುಬರುವ ಯೀಸ್ಟ್‌ನ ಬೆಳವಣಿಗೆಯಿಂದ ಉಂಟಾಗುವ ಸಾಮಾನ್ಯ  ಫಂಗಸ್ ಸೋಂಕು.

ನೀವು ಮಧುಮೇಹ ಹೊಂದಿದ್ದರೆ ಮತ್ತು ಹಲ್ಲು ಮತ್ತು ಒಸಡು ಸಮಸ್ಯೆಯನ್ನು ತಡೆಗಟ್ಟಲು  ನಿರ್ಧರಿಸಿದ್ದರೇ  ಇಲ್ಲಿದೆ ಸಲಹೆ.

  • ನಿಮ್ಮ ಆಹಾರದಲ್ಲಿ ಸಾಕಷ್ಟು ತರಕಾರಿಗಳನ್ನು  ಸೇವಿಸಿ.

  • ವೈದ್ಯರು ಸೂಚಿಸಿದಂತೆ ನಿಮ್ಮ ಔಷಧಿಯನ್ನು ತೆಗೆದುಕೊಳ್ಳಿ.

  • ದಿನಕ್ಕೆ ಎರಡು ಬಾರಿ ಫ್ಲೋರೈಡ್ ಯುಕ್ತ ಟೂತ್ ಪೇಸ್ಟ್ ನಿಂದ ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸಿ.

  • ಎರಡು ಹಲ್ಲುಗಳ ನಡುವೆ ಆಹಾರದ ಅವಶೇಷಗಳು ಸಂಗ್ರಹವಾಗುವುದನ್ನು ತಪ್ಪಿಸಲು ನಿಮ್ಮ ಹಲ್ಲುಗಳನ್ನು ಹಲ್ಲಿನ ಫ್ಲೋಸ್ನಿಂದ ಸ್ವಚ್ಛಗೊಳಿಸಿ.

  • ಬಾಯಿ ಒಣಗುವುದನ್ನು ತಪ್ಪಿಸಿ ಸಾಕಷ್ಟು ನೀರು ಕುಡಿಯಿರಿ.

  • ಸಿಗರೇಟ್ ಸೇದುವುದನ್ನು ನಿಲ್ಲಿಸಿ.

Published by:Sandhya M
First published: