Health Tips : ಆಯಸ್ಸು ಹೆಚ್ಚಾಗಬೇಕಾ? ಹಾಗಾದ್ರೆ ಸ್ನೇಹಿತರ ಜೊತೆ ಒಳ್ಳೆ ಬಾಂಧವ್ಯ ಬೆಳೆಸಿಕೊಳ್ಳಿ

Longevity : ಸಾಮಾಜಿಕ ಬಾಂಧವ್ಯ ಮತ್ತು ದೀರ್ಘಾಯುಷ್ಯದ ನಡುವಿನ ಸಂಬಂಧ ಏನು? ಹೆಚ್ಚು ಗಟ್ಟಿಯಾದ ಸಂಬಂಧಗಳು ದೀರ್ಘಾಯುಷ್ಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದು ಪ್ರಮುಖ ಚರ್ಚೆಯ ವಿಷಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಆರೋಗ್ಯ ಮತ್ತು ದೀರ್ಘಾಯುಷ್ಯದ ವಿಚಾರವನ್ನು ಮಾತನಾಡುವಾಗಲೆಲ್ಲಾ, ಕೆಲವು ರೀತಿಯ ಆಹಾರ ಅಥವಾ ಜೀವನಕ್ರಮದ ಮೇಲೆ ಗಮನ ಕೇಂದ್ರೀಕರಿಸಿ ಅವುಗಳ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇವೆ. ಧೂಮಪಾನ, ಮದ್ಯ ಸೇವನೆ, ಹೆಚ್ಚಿನ ಒತ್ತಡ, ಜಡ ಜೀವನಶೈಲಿ ಮುಂತಾದ ದುಶ್ಚಟಗಳು ನಮ್ಮ ಆರೋಗ್ಯವನ್ನು ಮತ್ತು ಆಯಸ್ಸನ್ನು ಹಾಳು ಮಾಡುವುದು ಖಚಿತ. ಹಾಗೆಯೇ ಈ ಕೆಟ್ಟ ಅಭ್ಯಾಸಗಳಿಲ್ಲದ ಜೀವನಶೈಲಿ ಹೆಚ್ಚು ಆರೋಗ್ಯಯುತವಾಗಿರುತ್ತದೆ ಮತ್ತು ಆಯಸ್ಸು ಹೆಚ್ಚಾಗುವಲ್ಲಿ ಕೂಡ ಸಹಕಾರಿ.

ನಿಯಮಿತವಾದ ವ್ಯಾಯಾಮ ಮತ್ತು ಚೆನ್ನಾಗಿ ತಿನ್ನುವುದು ನಿಮ್ಮ ದೀರ್ಘಕಾಲದ ಕಾಯಿಲೆಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಎಂಬುದನ್ನ ತಜ್ಞರು ಸಹ ಒಪ್ಪಿಕೊಳ್ಳುತ್ತಾರೆ. ಆದರೆ  ಬಹಳ ಮುಖ್ಯವಾದ ಮತ್ತೊಂದು ಅಂಶವಿದೆ. ಅದು ನಮ್ಮ ಸಾಮಾಜಿಕ ಸಂಬಂಧ. ಅಂದರೆ ನಮ್ಮ ಸ್ನೇಹಿತರು. PLOS ಮೆಡಿಸಿನ್ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ನಮ್ಮ ಸಾಮಾಜಿಕ ಬಾಂಧವ್ಯ ಮತ್ತು ಸಾಮಾಜಿಕ ಸಂಬಂಧಗಳು ಸಹ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
PLOS ವರದಿಯಲ್ಲಿ ವ್ಯಕ್ತಿಯ ಸಾಮಾಜಿಕ ಸಂಬಂಧಗಳ ಗುಣಮಟ್ಟ ಮತ್ತು ಪ್ರಮಾಣವು ಮಾನಸಿಕ ಆರೋಗ್ಯದ ಜೊತೆಗೆ ದೀರ್ಘಕಾಲದ ಕಾಯಿಲೆ ಮತ್ತು ಆಯಸ್ಸು ಈ ಎರಡಕ್ಕೂ ಸಂಬಂಧಿಸಿದೆ ಎಂದು ಹೇಳಲಾಗಿದೆ.

148 ಅಧ್ಯಯನಗಳಲ್ಲಿ 308 849 ವ್ಯಕ್ತಿಗಳ ವಿಶ್ಲೇಷಣೆಯಿಂದ ಮಾಹಿತಿ ಸಂಗ್ರಹಿಸಿದ ನಂತರ, ಉತ್ತಮವಾದ ಸಾಮಾಜಿಕ ಸಂಬಂಧಗಳನ್ನು ಹೊಂದಿರುವವರ ಹೆಚ್ಚು ದಿನ ಬದುಕುಳಿಯುವ ಸಾಧ್ಯತೆ ಶೇಕಡಾ 50 ರಷ್ಟು ಹೆಚ್ಚಿಸಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಅಧ್ಯಯನದ ಮತ್ತೊಂದು ಸಂಶೋಧನೆ ಪ್ರಕಾರ ಏಕಾಂಗಿಯಾಗಿ ವಾಸಿಸುವವರಿಗೆ ಆಯಸ್ಸು ಮತ್ತು ಆರೋಗ್ಯ ಎರಡು ಕಡಿಮೆ ಎಂದು ಹೇಳಲಾಗಿದೆ.

ಸಾಮಾಜಿಕ ಬಾಂಧವ್ಯ ಮತ್ತು ದೀರ್ಘಾಯುಷ್ಯದ ನಡುವಿನ ಸಂಬಂಧ ಏನು?
ರಾಯಲ್ ಸೊಸೈಟಿ ಪಬ್ಲಿಷಿಂಗ್‌ನ ವರದಿಯು, ಹೆಚ್ಚು ಗಟ್ಟಿಯಾದ ಸಂಬಂಧಗಳು ದೀರ್ಘಾಯುಷ್ಯವನ್ನು ಹೇಗೆ ಹೆಚ್ಚಿಸುತ್ತದೆ ಎಂಬುದನ್ನು ವಿವರಿಸುವ ಎರಡು ಮುಖ್ಯ ಅಂಶಗಳಲ್ಲಿ ವಿವರಿಸಿದೆ.

ಇದನ್ನೂ ಓದಿ:  ತೂಕ ಇಳಿಸಲು ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಸಕ್ರಿಯ ಸಾಮಾಜಿಕ ಬೆಂಬಲ ವ್ಯವಸ್ಥೆ ಅಥವಾ ಸ್ನೇಹ ಒಬ್ಬ ವ್ಯಕ್ತಿಗೆ ಭಾವನಾತ್ಮಕವಾಗಿ, ದೈಹಿಕವಾಗಿ ಅಥವಾ ಸ್ಪಷ್ಟವಾದ ಒಂದು ನೆರವು ನೀಡುತ್ತದೆ, ಅನಾರೋಗ್ಯ ಮತ್ತು ಒತ್ತಡದ ಜೀವನ, ನೋವು ಅಥವಾ ತೀವ್ರವಾದ ಅಥವಾ ದೀರ್ಘಕಾಲದ ಒತ್ತಡಗಳ ವಿರುದ್ಧ ರಕ್ಷಿಸುತ್ತದೆ. ಸಾಮಾಜಿಕ ಸಂಬಂಧಗಳು  ಭಾವನಾತ್ಮಕ ಮತ್ತು ನಡವಳಿಕೆಯ ನೆರವನ್ನು ಒದಗಿಸುತ್ತದೆ,. ಅದು ಕೇವಲ ಬೆಂಬಲ ಮಾತ್ರವಲ್ಲ ಹೆಚ್ಚು ಆರೋಗ್ಯಕರ ನಡವಳಿಕೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಲು ಪ್ರೋತ್ಸಾಹಿಸುತ್ತದೆ. ಹೆಚ್ಚು ಸ್ನೆಹಿತರ ಜೊತೆ ಸಂತೋಷದಿಂದ ಇದ್ದಷ್ಟು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುವುದಿಲ್ಲ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ವರದಿಯ ಪ್ರಕಾರ, ಹಲವಾರು ಅಧ್ಯಯನಗಳು ಸಾಮಾಜಿಕ ಆರೋಗ್ಯ ಮತ್ತು ಸಂಬಂಧ ಮನುಷ್ಯನ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಕೊಂಡಿವೆ. ಒಂದು ಅಧ್ಯಯನದಲ್ಲಿ, ಸಾಮಾಜಿಕವಾಗಿ ಒಬ್ಬಂಟಿಯಾಗಿರುವುದು ವ್ಯಕ್ತಿಯ ಅಕಾಲಿಕ ಮರಣದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಒಂಟಿಯಾಗಿರುವುದು ಮನುಷ್ಯನ ಧೂಮಪಾನ ಸೇರಿದಂತೆ ಹಲವು ಕೆಟ್ಟ ಅಭ್ಯಾಸಗಳನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.

ಸಾಮಾಜಿಕ ಸಂಪರ್ಕಗಳ ಪ್ರಯೋಜನಗಳು ಒಂದೆರೆಡಲ್ಲಉತ್ತಮ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಸಂಬಂಧಗಳು ಒಬ್ಬ ವ್ಯಕ್ತಿಗೆ ಆತಂಕ ಮತ್ತು ಖಿನ್ನತೆಯ ವಿರುದ್ಧ ಹೋರಾಡಲು ಅಥವಾ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಸ್ವಾಭಿಮಾನ, ಹೆಚ್ಚಿನ ಸಹಾನುಭೂತಿ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಬಂಧಗಳಿಗೆ ಕಾರಣವಾಗುತ್ತದೆ.

ನಮಗೆ ಸ್ನೇಹಿತರು ಮುಖ್ಯ ಎಂಬುದಕ್ಕೆ ಇವೆಲ್ಲ ಉದಾಹರಣೆಯಷ್ಟೇ. ಅವರೊಂದಿಗೆ ಸಮಯ ಕಳೆಯುವುದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಎಂಬುದು ಮುಖ್ಯ.
Published by:Sandhya M
First published: