ಕಂಡು ಕೇಳರಿಯದ ಸಾಂಕ್ರಾಮಿಕ ರೋಗಗಳು, (Pandemic) ಸಾವು ನೋವುಗಳು ಹೀಗೆ ಕಳೆದ ಎರಡು ವರ್ಷಗಳ ಜೀವನ ಯಾತನಾಮಯವಾಗಿದ್ದವು. ನಿಸರ್ಗ (Nature) ನೀಡಿದ ಹೊಡೆತದಿಂದ ಮಾನವ ಸಾಕಷ್ಟು ಪಾಠಗಳನ್ನು ಕಲಿತಿದ್ದಾನೆ ಅಂತೆಯೇ ಆರೋಗ್ಯವಾಗಿರಲು (Healthy) ಸಾಕಷ್ಟು ಕಸರತ್ತುಗಳನ್ನು ನಡೆಸುತ್ತಿದ್ದಾನೆ. ಎಷ್ಟೇ ಸಂಪತ್ತಿದ್ದರೂ ಆರೋಗ್ಯವೆಂಬ ಅತ್ಯುತ್ತಮ ಸಂಪತ್ತು ನಷ್ಟವಾದರೆ ಉಳಿದುದೆಲ್ಲವೂ ವ್ಯರ್ಥ ಎಂಬ ಅರ್ಥವನ್ನು ಮನಗಂಡಿದ್ದಾನೆ. ಇದೀಗ ಹೊಸ ಅಧ್ಯಯನದ ಪ್ರಕಾರ ಆರೋಗ್ಯವನ್ನು ಇನ್ನಷ್ಟು ಸುಸ್ಥಿಯಲ್ಲಿರಿಸಲು ಸಹಕಾರಿಯಾಗಿರುವ ದೀರ್ಘ ಉಸಿರಾಟ (Breathing) ಪ್ರತಿಕ್ರಿಯೆ ಹೆಚ್ಚು ಖ್ಯಾತಿಗೊಂಡಿದೆ.
ಹೌದು ದೀರ್ಘ ಉಸಿರಾಟವು ಒತ್ತಡ, ಖಿನ್ನತೆ, ಬೇಸರವನ್ನು ನಿವಾರಿಸಲು ಸಹಾಯ ಮಾಡುತ್ತದೆ ಹಾಗೂ ಹೃದಯದ ಬಡಿತವನ್ನು ಶಾಂತಗೊಳಿಸುತ್ತದೆ ಎಂಬುದು ತಿಳಿದುಬಂದಿದೆ.
ಉಸಿರಾಟ ಪ್ರಕ್ರಿಯೆಯ ಒಂದು ವಿಧ
ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾನಿಲಯದ ಇಂಟಿಗ್ರೇಟಿವ್ ಫಿಸಿಯಾಲಜಿಯ ಸಹಾಯಕ ಸಂಶೋಧನಾ ಪ್ರಾಧ್ಯಾಪಕರಾದ ಡೇನಿಯಲ್ ಹ್ಯಾರಿಸನ್ ಕ್ರೇಗ್ಹೆಡ್ ಹೇಳುವಂತೆ ದೀರ್ಘ ಉಸಿರಾಟವು ರಕ್ತದೊತ್ತಡವನ್ನು ಸ್ಥಿಮಿತಕ್ಕೆ ತರುತ್ತದೆ ಎಂದಾಗಿದೆ.
ಅದರಲ್ಲೂ ಅವರು ಅನುಸರಿಸಿರುವ ಒಂದು ವಿಧವಾದ ಉಸಿರಾಟ ಪ್ರಕ್ರಿಯೆಯು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಸ್ವಯಂ ಪರಿಶೀಲಿಸಿ ತಿಳಿಸಿದ್ದಾರೆ. ಉಸಿರಾಟ ಪ್ರಕ್ರಿಯೆಯು ಬಿಪಿಯನ್ನು ನಿಯಂತ್ರಿಸಲು ಹೇಗೆ ಸಹಕಾರಿಯಾಗಿದೆ ಎಂಬುದನ್ನು ಅರಿತುಕೊಳ್ಳೋಣ.
ಉಸಿರಾಟ ಕ್ರಿಯೆ ಎಂದರೇನು?
ಉಸಿರಾಟವನ್ನು ನಿಯಂತ್ರಿಸುವ ಈ ವಿಧಾನದಲ್ಲಿ ರಕ್ತದೊತ್ತಡ, ಹೃದಯ ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಉಚ್ವಾಸ ಸ್ನಾಯು ಶಕ್ತಿ ತರಬೇತಿ (IMST) ಯನ್ನೊಳಗೊಂಡ ಪ್ರಕ್ರಿಯೆಯನ್ನು ಈ ಉಸಿರಾಟ ಒಳಗೊಂಡಿದೆ.
ಈ ಪ್ರಕ್ರಿಯೆ, ಕೈಯಲ್ಲಿ ಮೌತ್ ಪೀಸ್ ಡಿವೈಸ್ ಬಳಸಿಕೊಂಡು 30 ಉಸಿರುಗಳನ್ನು ಒಳಕ್ಕೆ ತೆಗೆದುಕೊಳ್ಳುವ ಐದರಿಂದ ಹತ್ತು ನಿಮಿಷಗಳ ಉಸಿರಾಟ ಕ್ರಿಯೆಯನ್ನು ಒಳಗೊಂಡಿರುತ್ತದೆ.
ರಕ್ತದೊತ್ತಡ ನಿಯಂತ್ರಿಸುವಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?
ಹೃದಯ ಬಡಿತ, ರಕ್ತದೊತ್ತಡ, ಉಸಿರಾಟದ ದರ ಗಾತ್ರವನ್ನು ಹೆಚ್ಚಿಸುವ ನರಮಂಡಲದ ಭಾಗವನ್ನು ಶಾಂತಗೊಳಿಸುವ ಮೂಲಕ IMST ಸಹಕಾರಿಯಾಗಿದೆ.
ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಸವಿಯಿರಿ ಕಡಲೆಕಾಯಿ ಹಲ್ವಾ: ಇಲ್ಲಿದೆ ರೆಸಿಪಿ
ಹೆಚ್ಚಿನ ಬಿಪಿ ಸಮಸ್ಯೆ ಇರುವವರಲ್ಲಿ ಈ ವ್ಯವಸ್ಥೆ ಹೆಚ್ಚು ಸಕ್ರಿಯವಾಗಿರುತ್ತದೆ ಹಾಗೂ ದೀರ್ಘ ಉಸಿರಾಟ ಪ್ರಕ್ರಿಯೆ ಇದರ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.
ಮೌತ್ ಪೀಸ್ ಬಳಸಿ ಉಸಿರಿನ ಕ್ರಿಯೆ ಹೇಗೆ ಮಾಡಬೇಕು
ಒಬ್ಬರು ಮೌತ್ಪೀಸ್ ಬಳಸಿಕೊಂಡು ಸಾಧ್ಯವಾದಷ್ಟು ಉಸಿರನ್ನು ಒಳಕ್ಕೆ ಹಾಗೂ ಹೊರಕ್ಕೆ ಹಾಕುತ್ತಾರೆ. ಈ ಸಾಧನದ ಪ್ರತಿರೋಧನದಿಂದಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ, ಆದರೆ ಅದೇ ಉಸಿರನ್ನು ಹೊರಕ್ಕೆ ಹಾಕುವುದು ಸುಲಭವಾಗಿರುತ್ತದೆ.
ಆರು ಬಾರಿ ಸವಾಲಿನಿಂದ ಕೂಡಿರುವಂತಹ ಉಸಿರು ತೆಗೆದುಕೊಳ್ಳುವಿಕೆ ಕ್ರಿಯೆಯ ಐದು ಸೆಟ್ ಗಳನ್ನು ನಿರ್ವಹಿಸಬೇಕು. ಆದರೆ ಇಲ್ಲಿ ಪ್ರತಿ ಸೆಟ್ ಗಳ ಮಧ್ಯ ಒಂದು ನಿಮಿಷದ ಮುಕ್ತ ಉಸಿರಾಟದ ವಿಶ್ರಾಂತಿ ನೀಡಲಾಗುತ್ತಿರುತ್ತದೆ. ಕೊನೆಯಲ್ಲಿ ಮಾಡುವ ಆರು ಸೆಟ್ಗಳ ಉಸಿರಾಟವು ಕಷ್ಟದಾಯಕವಾಗಿರುತ್ತದೆ.
ಸಂಶೋಧನೆ ಏನು ಹೇಳುತ್ತದೆ?
IMST ಯು ಸಿಸ್ಟೊಲಿಕ್ ಬಿಪಿ (ಬಿಪಿ ರೀಡಿಂಗ್ನಲ್ಲಿ ಉನ್ನತ ಸಂಖ್ಯೆ) ಯನ್ನು ಕಡಿಮೆ ಮಾಡುತ್ತದೆ ಹಾಗೂ ಇದರಿಂದ DBP (ಬಿಪಿ ರೀಡಿಂಗ್ನಲ್ಲಿ ಕೆಳಗಿನ ಸಂಖ್ಯೆ) ಯನ್ನು ಐದು ಮರ್ಕ್ಯುರಿ ಮಿಲಿಮೀಟರ್ಗೆ ಕಡಿಮೆಯಾಗುತ್ತದೆ ಎಂಬುದು ಸಂಶೋಧನೆಯು ತಿಳಿಸಿದೆ.
ಏರೋಬಿಕ್ ವ್ಯಾಯಾಮ ಅಥವಾ ತೂಕ ನಷ್ಟದ ವ್ಯಾಯಾಮಗಳಿಗಿಂತ ಈ ಸುಧಾರಣೆಯು ಹೆಚ್ಚು ಉತ್ತಮವಾಗಿದ್ದು ದಿನಕ್ಕೆ ಕನಿಷ್ಠ 10 ನಿಮಿಷಗಳಿಗಿಂತ ಕಡಿಮೆ ಸಮಯ ಬೇಕು ಎಂಬುದು ತಿಳಿದುಬಂದಿದೆ.
ಪರಿಣಾಮ ಬೀರಲು ಎಷ್ಟು ಸಮಯ ಬೇಕು?
ಬಿಪಿಯಲ್ಲಿನ ಸುಧಾರಣೆಯು ಎರಡು ವಾರಗಳಲ್ಲಿ ಗಮನಕ್ಕೆ ಬರುತ್ತದೆ. ನಿಯಮಿತ ವ್ಯಾಯಾಮಕ್ಕಿಂತಲೂ ಉಸಿರಾಟ ಕ್ರಿಯೆಯ ಫಲಿತಾಂಶ ವೇಗವಾಗಿ ಲಭಿಸುತ್ತದೆ.
ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ಸ್ಟ್ರಾಂಗ್ & ಉದ್ದ ಕೂದಲು ನಿಮ್ಮದಾಗುತ್ತೆ!
ಪ್ರತಿಯೊಬ್ಬರೂ IMST (ಉಚ್ವಾಸ ಸ್ನಾಯು ಶಕ್ತಿ ತರಬೇತಿ) ಅನುಸರಿಸಬಹುದೇ?
ಈ ಉಸಿರಾಟ ಕ್ರಿಯೆಯನ್ನು ಅನುಸರಿಸುವ ಮುನ್ನ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಮುಖ್ಯ. ಹೆಚ್ಚಿನ ಜನರಿಗೆ IMST ಸುರಕ್ಷಿತವಾಗಿದೆ. ಏಕೆಂದರೆ, ಆರೋಗ್ಯವಂತರು ಹಾಗೂ ಅಧಿಕ ಬಿಪಿ ಇರುವವರ ಮೇಲೆ ಪ್ರಯೋಗವನ್ನು ಕೈಗೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ