Blood Pressure: ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆಯಂತೆ ಈ ಉಸಿರಾಟದ ತರಬೇತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Blood Pressure: ಬಿಜಿ ಜೀವನದಲ್ಲಿ ಇಂದು ಜನರು ಅವರವರ ಆರೋಗ್ಯದ ಕಡೆ ಗಮನ ಹರಿಸದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲಿ ರಕ್ತದೊತ್ತಡ ಕೂಡ ಒಂದು. ಹಾಗಾಗಿ ಈ ಸಮಸ್ಯೆಯಿಂದ ಮುಕ್ತರಾಗಲು ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಯೋಣ.

  • Trending Desk
  • 2-MIN READ
  • Last Updated :
  • Share this:
  • published by :

ಈಗಂತೂ ಪ್ರತಿ ಮನೆಯಲ್ಲಿ ಒಬ್ಬ ಸದಸ್ಯರಾದರೂ ಈ ಸಕ್ಕರೆ ಕಾಯಿಲೆ (Diabetes) ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆದಿಂದ ಬಳಲುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಈ ಎರಡು ಕಾಯಿಲೆಗಳು ಪ್ರಪಂಚದಾದ್ಯಂತ ವ್ಯಾಪಿಸಿವೆ ಎಂದು ಹೇಳಬಹುದು. ಮೊದಲೆಲ್ಲಾ ಈ ಎರಡು ಕಾಯಿಲೆಗಳು ಸಾಮಾನ್ಯವಾಗಿ ವಯಸ್ಸಾದವರನ್ನು ಕಾಡುತ್ತಿದ್ದವು. ಆದರೆ ಈಗಂತೂ ಚಿಕ್ಕ ವಯಸ್ಸಿನ ಯುವಕರಲ್ಲೂ ಸಹ ಈ ಬಿಪಿ (Blood Pressure) ಮತ್ತು ಮಧುಮೇಹ  ಕಾಯಿಲೆ ಕಾಣಿಸಿಕೊಳ್ಳುತ್ತಿರುವುದನ್ನು ನಾವು ತುಂಬಾನೇ ನೋಡುತ್ತಿದ್ದೇವೆ. ಈ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ (Blood Pressure) ಬಳಲುತ್ತಿರುವಂತಹ ಜನರು ಇವೆರಡು ಕಾಯಿಲೆಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಪ್ರತಿದಿನ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ.


ಕೆಲವೊಬ್ಬರು ತಾವು ಸೇವಿಸುವ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಂಡರೆ, ಇನ್ನೂ ಕೆಲವರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುತ್ತಾ ಇರುತ್ತಾರೆ. ಹೀಗೆ ಅನೇಕ ರೀತಿಯ ಪ್ರಯತ್ನಗಳನ್ನು ಇವರು ಮಾಡುತ್ತಲೇ ಇರುತ್ತಾರೆ ಎಂದು ಹೇಳಬಹುದು.


ಇನ್ನೂ ಕೆಲವರು ಇದ್ಯಾವುದು ಬೇಡ ಅಂತ ಸುಮ್ಮನೆ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಚೆನ್ನಾಗಿ ವಾಕ್ ಮತ್ತು ವ್ಯಾಯಾಮ ಮಾಡಿ ಇವೆರಡು ರೋಗಗಳನ್ನು ಆದಷ್ಟು ದೂರವಿಡಲು ನೋಡುತ್ತಾರೆ.


ನೀವು ಅನೇಕ ರೀತಿಯ ಪ್ರಯತ್ನಗಳನ್ನು ಮಾಡಿದ ನಂತರವೂ ನಿಮ್ಮ ಅಧಿಕ ರಕ್ತದೊತ್ತಡವು ನಿಯಂತ್ರಣಕ್ಕೆ ಬಂದಿಲ್ಲ ಅಂತಾದರೆ, ಇಲ್ಲಿ ಇನ್ನೊಂದು ಸಲಹೆ ಇದೆ ನೋಡಿ. ಅದನ್ನೊಮ್ಮೆ ಟ್ರೈ ಮಾಡಿ ನೋಡಿ.


ಏನಿದು ನೋಡಿ ‘ಬ್ರೀಥ್ ಟ್ರೈನಿಂಗ್’!


ಹೌದು.. ಇದು ಹೆಸರೇ ಹೇಳುವಂತೆ ದೈನಂದಿನ ಉಸಿರಾಟದ ವ್ಯಾಯಾಮ ಅಥವಾ ತರಬೇತಿ ಅಂತ ಹೇಳಬಹುದು. ಇದು ನಿಮ್ಮ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂತೆ.


ಹೀಗಂತ ನಾವು ನಿಮಗೆ ಹೇಳುತ್ತಿಲ್ಲ, ಇದು ಒಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ ನೋಡಿ. ನ್ಯಾಷನಲ್ ಪಬ್ಲಿಕ್ ರೇಡಿಯೋ (ಎನ್‌ಪಿಆರ್) ಪ್ರಕಟಿಸಿದ ಒಂದು ವರದಿಯು ವಪೆ ಮತ್ತು ಇತರ ಉಸಿರಾಟದ ಸ್ನಾಯುಗಳಿಗೆ ದೈನಂದಿನ ಸ್ನಾಯು ತರಬೇತಿಯು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸುತ್ತದೆ.


ಇದನ್ನೂ ಓದಿ: ಮಕ್ಕಳ ಜೀವನಶೈಲಿ ಈ ರೀತಿ ಬದಲಾದ್ರೆ ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ


ಕೊಲೊರಾಡೋ ಬೌಲ್ಡರ್ ವಿಶ್ವವಿದ್ಯಾಲಯದ ಸಮಗ್ರ ಶರೀರಶಾಸ್ತ್ರಜ್ಞ ಡೇನಿಯಲ್ ಕ್ರೇಗ್ಹೆಡ್ ಹೇಳುವಂತೆ "ನಮ್ಮ ಉಳಿದ ಸ್ನಾಯುಗಳು ಹೇಗೆ ನಮಗೆ ವಯಸ್ಸಾದಂತೆ ಅವುಗಳು ಸಹ ಬಲವನ್ನು ಕಳೆದುಕೊಳ್ಳುತ್ತವೆಯೋ, ಹಾಗೆಯೇ ನಾವು ಉಸಿರಾಡಲು ಬಳಸುವ ಸ್ನಾಯುಗಳು ಸಹ ಬಲಹೀನವಾಗುತ್ತವೆ" ಎಂದು ಹೇಳಿದ್ದಾರೆ.


ಅಧ್ಯಯನ ಹೇಗೆ ಶುರುವಾಯ್ತು?


ಪವರ್ ಬ್ರೀಥ್ ಎಂಬ ಪ್ರತಿರೋಧಕ-ಉಸಿರಾಟದ ತರಬೇತಿ ಸಾಧನವನ್ನು ಬಳಸಿಕೊಂಡು, ಕ್ರೇಗ್ಹೆಡ್ ಮತ್ತು ಅವರ ಸಹೋದ್ಯೋಗಿಗಳು 18 ರಿಂದ 82 ವರ್ಷ ವಯಸ್ಸಿನ ಆರೋಗ್ಯವಂತ ಜನರ ಉಸಿರಾಟದ ಸ್ನಾಯುಗಳಿಗೆ ತಾಲೀಮು ನೀಡಿದಾಗ ಏನಾಗುತ್ತದೆ ಎಂಬುದನ್ನು ಪರೀಕ್ಷಿಸಲು ನಿರ್ಧರಿಸಿದರು.


ಜನರು ಕೈಯಲ್ಲಿ ಈ ಸಾಧನವನ್ನು ಹಿಡಿದುಕೊಂಡು ಉಸಿರಾಡಿದಾಗ, ಅದು ಪ್ರತಿರೋಧವನ್ನು ಒದಗಿಸುತ್ತದೆ, ಇದು ಪ್ರಯೋಗಾರ್ಥಿಗೆ ಉಸಿರಾಡಲು ಕಷ್ಟಕರವಾಗಿಸಿತು.


"ಆರು ವಾರಗಳ ಕಾಲ ದಿನಕ್ಕೆ 30 ಬಾರಿ ಉಸಿರಾಡುವುದರಿಂದ ಸಿಸ್ಟೋಲಿಕ್ ರಕ್ತದೊತ್ತಡವು ಸುಮಾರು 9 ಮಿಲಿ ಮೀಟರ್ ಕಡಿಮೆಯಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಕ್ರೇಗ್ಹೆಡ್ ಹೇಳುತ್ತಾರೆ.


ಇದನ್ನೂ ಓದಿ: ಅನ್ನ ಸೀದು ಹೋಯ್ತೆಂದು ಎಸೆಯಬೇಡಿ, ಅದರಿಂದಲೂ ತಯಾರಿಸ್ಬಹುದು ಈ ಟೇಸ್ಟಿ ಫುಡ್​!


ಈ ಸಾಧನದಿಂದಾಗಿ ಉಂಟಾದ ಕಡಿತವನ್ನು ಓಟ ಅಥವಾ ಸೈಕ್ಲಿಂಗ್ ಅಥವಾ ನಡಿಗೆಯಂತಹ ನಿಯಮಿತ ವ್ಯಾಯಾಮಗಳನ್ನು ಮಾಡುವುದರಿಂದಲೂ ಸಹ ನಾವು ಇದನ್ನು ಪಡೆಯಬಹುದು ಅಂತ ಹೇಳಿದ್ದಾರೆ.


ಈ ಸಾಧನವು ವಿಶೇಷವಾಗಿ ಅಂತಹ ವ್ಯಾಯಾಮಗಳನ್ನು ಮಾಡಲು ಸಾಧ್ಯವಾಗದ ಜನರಿಗೆ ಉಪಯುಕ್ತವಾಗಿದೆ. ಸಾಧನದ ಸರಳತೆಯು ಸಹ ಒಂದು ಪ್ಲಸ್ ಪಾಯಿಂಟ್ ಆಗಿದೆ, ಜನರು ಇದನ್ನು ಮನೆಯಲ್ಲಿ ಸುಲಭವಾಗಿ ಬಳಸಬಹುದು.


ಇದರ ಸಂಪೂರ್ಣವಾದ ಪ್ರಯೋಜನವನ್ನು ಪಡೆಯಲು ಈ ಸಾಧನಕ್ಕೆ ಕಡಿಮೆ ಸಮಯ ಬೇಕಾಗುತ್ತದೆ ಮತ್ತು ಸ್ನಾಯುಗಳಿಗೆ ಉತ್ತಮ ತಾಲೀಮು ನೀಡುವ ಪ್ರತಿರೋಧವನ್ನು ಇದು ಒದಗಿಸುತ್ತದೆ ಎಂದು ಕ್ರೇಗ್ಹೆಡ್ ವಿವರಿಸುತ್ತಾರೆ. ಅವರ ಸಂಶೋಧನೆಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಅವರು ಧನಸಹಾಯ ನೀಡಿದ್ದಾರೆ.


ಐ.ಎಂ.ಎಸ್.ಟಿ (ಪ್ರಚೋದಕ ಸ್ನಾಯು ಬಲ ತರಬೇತಿ) ತರಬೇತಿಯು ಹೆಚ್ಚಿನ ಬಿಪಿಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ ಎಂದು ಸಂಶೋಧನೆ ತೋರಿಸುತ್ತದೆ. "ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಐಎಂಎಸ್‌ಟಿ ಎಷ್ಟು ಸರ್ವವ್ಯಾಪಿಯಾಗಿ ಪರಿಣಾಮಕಾರಿಯಾಗಿದೆ ಎಂದು ನೋಡಿ ನಾವು ಆಶ್ಚರ್ಯಚಕಿತರಾಗಿದ್ದೇವೆ" ಎಂದು ಕ್ರೇಗ್ಹೆಡ್ ಹೇಳುತ್ತಾರೆ.

top videos
    First published: