Biotin-Hair: ತುಂಬಾ ಕೂದಲು ಉದುರುತ್ತಾ? ಹಾಗಿದ್ರೆ ಬಯೋಟಿನ್ ಕೊರತೆ ಬಗ್ಗೆ ಎಚ್ಚರ ಇರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಯೋಟಿನ್ ಕೆಲವು ಆಹಾರಗಳ ಮೂಲಕ ದೇಹ ಸೇರುತ್ತದೆ. ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ವಿಟಮಿನ್ ಇದಾಗಿದೆ. ಇದು ನೀರಿನಲ್ಲಿ ಕರಗುವ B ವಿಟಮಿನ್ ಆಗಿದೆ.

  • Share this:

    ತುಂಬಾ ಜನರು (People) ಕೂದಲು ಉದುರುವಿಕೆ (Hair Fall) ಸೇರಿದಂತೆ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆ (Problem) ಎದುರಿಸುತ್ತಾರೆ. ಕೂದಲು ಬೆಳೆಯಲು ಬಯೋಟಿನ್ (Biotin) ತುಂಬಾ ಮುಖ್ಯವಾಗಿ ಬೇಕು ಎಂಬುದು ತುಂಬಾ ಜನರಿಗೆ (People) ಗೊತ್ತಿಲ್ಲ. ಮಾರುಕಟ್ಟೆಯಲ್ಲಿ ಬಯೋಟಿನ್ ಅನೇಕ ಮಾತ್ರೆಗಳು ಸಿಗುತ್ತವೆ. ಅದು ನಿಮ್ಮ ದೇಹಕ್ಕೆ (Body) ಬಯೋಟಿನ್ ಮತ್ತು ಕೂದಲು ಮತ್ತು ಚರ್ಮವು ಚೆನ್ನಾಗಿ ಆಗಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಬಯೋಟಿನ್ ಎಂದರೇನು? ಮತ್ತು ಅದು ಹೇಗೆ ಸಿಗುತ್ತದೆ? ಇದು ನಿಜವಾಗಿಯೂ ಕೂದಲು ಬೆಳೆಯಲು ಸಹಾಯ ಮಾಡುತ್ತಾ? ಎಂಬ ಎಲ್ಲಾ ವಿಷಯವನ್ನು ಇಲ್ಲಿ ನೋಡೋಣ.


    ಬಯೋಟಿನ್ ಮತ್ತು ಕೂದಲ ಆರೋಗ್ಯ


    ವಿಟಮಿನ್ B7 ಅನ್ನು ಬಯೋಟಿನ್ ಎಂದು ಕರೆಯುತ್ತಾರೆ. ಇದು ಕೆಲವು ಆಹಾರಗಳ ಮೂಲಕ ದೇಹ ಸೇರುತ್ತದೆ. ಆಹಾರಗಳಲ್ಲಿ ನೈಸರ್ಗಿಕವಾಗಿ ಕಂಡು ಬರುವ ವಿಟಮಿನ್ ಇದಾಗಿದೆ. ಇದು ನೀರಿನಲ್ಲಿ ಕರಗುವ B ವಿಟಮಿನ್ ಆಗಿದೆ.


    ಆಹಾರದ ಕೊಬ್ಬು, ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ ಒಡೆಯಲು ಕಿಣ್ವಗಳಿಗೆ ಸಹಾಯ ಮಾಡುತ್ತದೆ. ಜೀವಕೋಶಗಳು ಮತ್ತು ವಂಶವಾಹಿಗಳ ಚಟುವಟಿಕೆಯ ಸಂಕೇತಗಳನ್ನು ನಿಯಂತ್ರಿಸಲು ಸಹಕಾರಿ.




    ಬಯೋಟಿನ್ ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಸೇರಿದಂತೆ ಹಲವು ಪದಾರ್ಥಗಳಲ್ಲಿ ಸಮೃದ್ಧವಾಗಿದೆ. ಬಯೋಟಿನ್ ಕೊರತೆಯು ಕೂದಲು ತೆಳುವಾಗುವಿಕೆ ಮತ್ತು ಮುಖದ ಮೇಲೆ ದದ್ದು ಉಂಟು ಮಾಡುತ್ತದೆ.


    ದೇಹದಲ್ಲಿ ಬಯೋಟಿನ್ ಕೊರತೆ ಕಂಡು ಹಿಡಿಯುವುದು ಹೇಗೆ?


    ದೇಹದಲ್ಲಿ ಬಯೋಟಿನ್ ಮಟ್ಟ ಕಡಿಮೆ ಆಗಿದೆ ಎಂದು ಪತ್ತೆ ಹಚ್ಚಲು ಯಾವುದೇ ಉತ್ತಮ ಪರೀಕ್ಷೆಯಿಲ್ಲ. ಹಾಗಾಗಿ ಇದನ್ನು ಕೆಲವು ರೋಗ ಲಕ್ಷಣಗಳಿಂದ  ಗುರುತಿಸಲಾಗುತ್ತದೆ. ಇದರಲ್ಲಿ ಕೂದಲು ತೆಳುವಾಗುವುದು ಮತ್ತು ಕಣ್ಣು, ಮೂಗು ಮತ್ತು ಬಾಯಿ ಸುತ್ತ ಕೆಂಪು ಚಿಪ್ಪಿನಂತಹ ದದ್ದುಗಳಾಗುತ್ತವೆ.


    ಬಯೋಟಿನ್ ಕೂದಲಿಗೆ ಹೇಗೆ ಪ್ರಯೋಜನಕಾರಿ?


    ಕೂದಲು ಕೆರಾಟಿನ್ ಎಂಬ ಪ್ರೋಟೀನ್‌ ನಿಂದ ಮಾಡಲ್ಪಟ್ಟಿದೆ. ಇದು ಬಯೋಟಿನ್ ಕೆರಾಟಿನ್ ಕಾಪಾಡಿಕೊಳ್ಳಲು ಸಹಕಾರಿ. ಇದು ಕೂದಲು ಒಳಗಿನಿಂದ ಬಲವಾಗುವಂತೆ ಮಾಡುತ್ತದೆ.


    ಬಯೋಟಿನ್ ಕೊರತೆಯ ಲಕ್ಷಣಗಳು ಯಾವುವು?


    ಕೂದಲು ಉದುರುವಿಕೆ


    ಮುಖ್ಯವಾಗಿ ದೇಹದಲ್ಲಿ ಬಯೋಟಿನ್ ಕೊರತೆ ಆದರೆ ತ್ವರಿತವಾಗಿ ಕೂದಲು ಉದುರುವಿಕೆ ಶುರುವಾಗುತ್ತದೆ. ಕಣ್ಣು, ಮೂಗು, ಬಾಯಿಯ ಸುತ್ತಲೂ ಚಿಪ್ಪುಗಳು, ಕೆಂಪು ದದ್ದು, ಗುಲಾಬಿ ಕಣ್ಣು, ಚರ್ಮದ ಸೋಂಕು, ಸುಲಭವಾಗಿ ಉಗುರು ಮುರಿಯುವುದ ಆಗುತ್ತದೆ.


    ಸಾಂದರ್ಭಿಕ ಚಿತ್ರ


    ಯಾವ ಆಹಾರವು ಬಯೋಟಿನ್ ಕೊರತೆ ನಿವಾರಿಸುತ್ತದೆ?


    ಮೊಟ್ಟೆ


    ಪೌಷ್ಟಿಕತಜ್ಞೆ ಕರಿಷ್ಮಾ ಶಾ ಅವರು ಮೊಟ್ಟೆಗಳಲ್ಲಿ ಬಿ ಜೀವಸತ್ವ, ಪ್ರೋಟೀನ್, ಕಬ್ಬಿಣ ಮತ್ತು ರಂಜಕ ಇದೆ. ಇದು ಮೊಟ್ಟೆಯ ಹಳದಿ ಲೋಳೆಯು ಬಯೋಟಿನ್‌ನ ಅತ್ಯುತ್ತಮ ಮೂಲ. ಸಾಲ್ಮೊನೆಲ್ಲಾ ವಿಷ ಕಡಿಮೆ ಮಾಡಲು ಮತ್ತು


    ಬಯೋಟಿನ್ ಹೀರಿಕೊಳ್ಳುವಿಕೆ ಸುಧಾರಿಸಲು ಮೊಟ್ಟೆ ಬೇಯಿಸಬೇಕು. ಮೊಟ್ಟೆಯ ಬಿಳಿಭಾಗವು ಅವಿಡಿನ್ ಎಂಬ ಪ್ರೋಟೀನ್ ಹೊಂದಿದೆ. ಇದು ಮೊಟ್ಟೆಗಳನ್ನು ಕಚ್ಚಾ ತಿನ್ನುವಾಗ ಬಯೋಟಿನ್ ಹೀರಿಕೊಳ್ಳುವಿಕೆ ತಡೆಯುತ್ತದೆ.


    ದ್ವಿದಳ ಧಾನ್ಯಗಳು


    ಅವರೆಕಾಳು, ಬೀನ್ಸ್ ಮತ್ತು ಬೇಳೆ ಕಾಳು ದ್ವಿದಳ ಧಾನ್ಯಗಳು ಪ್ರೋಟೀನ್, ಫೈಬರ್ ಮತ್ತು ಅನೇಕ ಸೂಕ್ಷ್ಮ ಪೋಷಕಾಂಶ ಹೊಂದಿವೆ. ಕಡಲೆಕಾಯಿ ಮತ್ತು ಸೋಯಾಬೀನ್‌ ನಲ್ಲಿ ಬಯೋಟಿನ್ ಇದೆ.


    ಅಣಬೆ


    ಅಣಬೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಬಯೋಟಿನ್ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ. ಅಣಬೆ ಬಯೋಟಿನ್ ಅಂಶವು ಪರಾವಲಂಬಿಗಳು ಮತ್ತು ಪರಭಕ್ಷಕಗಳಿಂದ ರಕ್ಷಿಸುತ್ತದೆ.


    ಬಾಳೆಹಣ್ಣು


    ಬಾಳೆಹಣ್ಣು ದೇಹಕ್ಕೆ ಬಹಳ ಮುಖ್ಯವಾದ ಹಲವು ಪೋಷಕಾಂಶ ಒದಗಿಸುತ್ತದೆ. ಫೈಬರ್, ಕಾರ್ಬೋಹೈಡ್ರೇಟ್‌, ಬಿ ಜೀವಸತ್ವ, ತಾಮ್ರ ಮತ್ತು ಪೊಟ್ಯಾಸಿಯಂ ಕೂದಲು ಮತ್ತು ಸ್ನಾಯುಗಳಿಗೆ ಒಳ್ಳೆಯದು.


    ಸಿಹಿ ಆಲೂಗಡ್ಡೆ


    ಸಿಹಿ ಗೆಣಸು ವಿಟಮಿನ್‌, ಖನಿಜ, ಫೈಬರ್ ಮತ್ತು ಕ್ಯಾರೊಟಿನಾಯ್ಡ್ ಆಂಟಿಆಕ್ಸಿಡೆಂಟ್‌ ಹೊಂದಿದೆ. ಬಯೋಟಿನ್‌ನ ಅತ್ಯುತ್ತಮ ಮೂಲಗಳಲ್ಲಿ ಸಿಹಿ ಆಲೂಗಡ್ಡೆ ಒಂದು.


    ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?


    ಆವಕಾಡೊ


    ಆವಕಾಡೊಗಳು ಬಯೋಟಿನ್ ನಲ್ಲಿ ಸಮೃದ್ಧವಾಗಿವೆ. ಫೋಲೇಟ್ ಮತ್ತು ಅಪರ್ಯಾಪ್ತ ಕೊಬ್ಬಿನ ಉತ್ತಮ ಮೂಲ.

    Published by:renukadariyannavar
    First published: