Buttermilk Benefits: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ

ಮಜ್ಜಿಗೆಯನ್ನು ಯಾವುದೋ ಒಂದು ರೀತಿಯಲ್ಲಿ ಆಹಾರದ ಭಾಗವಾಗಿ ಮಾಡಿಕೊಂಡರೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಮೊಸರಿನಿಂದ ತಯಾರಿಸಿದ ಈ ದ್ರವವನ್ನು ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮತ್ತು ಸುಂದರವಾಗಿಸಲು ಹಲವು ರೀತಿ ಬಳಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಜ್ಜಿಗೆಯ (Buttermilk) ಗುಣ ಹಾಗೂ ಪೋಷಕಾಂಶಗಳು (Nutrients) ಹೇರಳವಾಗಿವೆ. ಮಜ್ಜಿಗೆಯ ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಗಳಿದಷ್ಟೂ ಕಡಿಮೆ. ಇದನ್ನು ಸ್ವಂತವಾಗಿ ತಯಾರಿಸಿ ಕುಡಿಯಿರಿ. ಅಥವಾ ವಿವಿಧ ರೀತಿಯ ಭಕ್ಷ್ಯಗಳ ರುಚಿಯ ಜೊತೆ ಸೇವನೆ ಮಾಡಿ. ಮಜ್ಜಿಗೆಯನ್ನು ಯಾವುದೇ ರೂಪದಲ್ಲಿ ಬೇಕಾದ್ರೂ ಸೇವಿಸಬಹುದು. ಮಜ್ಜಿಗೆಯನ್ನು ಹಲವು ರೂಪಗಳಲ್ಲಿ ತಯಾರಿಸಲಾಗುತ್ತದೆ. ಮಜ್ಜಿಗೆ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನ ತಂದು ಕೊಡುತ್ತದೆ. ಮಜ್ಜಿಗೆ ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲ ಆಗಿದೆ. ಇದರಲ್ಲಿ ಹಲವು ವಿಧದ ವಿಟಮಿನ್ ಗಳು ಸಮೃದ್ಧ ಆಗಿವೆ. ಜೊತೆಗೆ ಇದು ಉತ್ತಮ ಬ್ಯಾಕ್ಟೀರಿಯಾದಿಂದ ಕೂಡಿದೆ. ಮಜ್ಜಿಗೆಯು ಪ್ರೋಟೀನ್, ಪೊಟ್ಯಾಸಿಯಮ್, ರಂಜಕ, ಲ್ಯಾಕ್ಟಿಕ್ ಆಮ್ಲ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ.

    ಮಜ್ಜಿಗೆಯನ್ನು ತ್ವಚೆ ಮತ್ತು ಕೂದಲ ಆರೋಗ್ಯಕ್ಕೆ ಬಳಸುವುದು

    ಮಜ್ಜಿಗೆಯನ್ನು ಯಾವುದೋ ಒಂದು ರೀತಿಯಲ್ಲಿ ಆಹಾರದ ಭಾಗವಾಗಿ ಮಾಡಿಕೊಂಡರೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಆದರೆ ಮೊಸರಿನಿಂದ ತಯಾರಿಸಿದ ಈ ದ್ರವವನ್ನು ನಿಮ್ಮ ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮತ್ತು ಸುಂದರವಾಗಿಸಲು ಹಲವು ರೀತಿ ಬಳಸಬಹುದು. ಮತ್ತು ಇದಕ್ಕಾಗಿ ನೀವು ಅದನ್ನು ಕುಡಿಯಲೇಬೇಕು ಎಂದೇನಿಲ್ಲ. ಅದನ್ನು ಮುಖ ಮತ್ತು ಕೂದಲಿಗೆ ಅನ್ವಯಿಸಬಹುದು.

    ಹೊಳೆಯುವ ಚರ್ಮಕ್ಕಾಗಿ

    ಮಜ್ಜಿಗೆ ಉತ್ತಮವಾದ ಮಾಯಿಶ್ಚರೈಸರ್ ಆಗಿದೆ. ಇದು ಮುಖದ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಅದರ ನೈಸರ್ಗಿಕ ಸಂಕೋಚಕ ಗುಣಲಕ್ಷಣಗಳ ಜೊತೆಗೆ ಆಮ್ಲೀಯ ಸಂಯೋಜನೆಯು ಅದನ್ನು ಪರಿಣಾಮಕಾರಿ ಟೋನರ್ ಮಾಡುತ್ತದೆ. ಕೆಲವೇ ದಿನಗಳಲ್ಲಿ ಹೊಳೆಯುವ ತ್ವಚೆಗಾಗಿ ನೀವು ಮನೆಯಲ್ಲಿ ಫೇಸ್ ಪ್ಯಾಕ್ ತಯಾರಿಸಿ.

    ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

    ಬೇಳೆ ಹಿಟ್ಟು ಮತ್ತು ಸೌತೆಕಾಯಿ ರಸ ಸೇರಿಸಿ ಮಜ್ಜಿಗೆ ಬೆರೆಸಿ ಪೇಸ್ಟ್ ತಯಾರಿಸುವ ವಿಧಾನ

    ಮಜ್ಜಿಗೆಗೆ ಒಂದು ಚಿಟಿಕೆ ಅರಿಶಿನ ಸೇರಿಸಿ. ಪೇಸ್ಟ್ ಅನ್ನು ಮುಖದ ಮೇಲೆ ಹದಿನೈದು ನಿಮಿಷ ಕಾಲ ಇರಿಸಿ. ನಂತರ ಮುಖ ತೊಳೆಯಿರಿ.

    ಮೊಡವೆ ಕಡಿಮೆ ಮಾಡುತ್ತದೆ

    ಮೊಡವೆ ಗುಣ ಪಡಿಸಲು ಮಜ್ಜಿಗೆ ಹೇಗೆ ಸಹಕಾರಿ? ಈ ಪ್ರಶ್ನೆಗೆ ನೀವು ಉತ್ತರ ಹುಡುಕುತ್ತಿದ್ದರೆ, ಅದರ ಉತ್ತರದ ರೂಪದಲ್ಲಿ ಮಜ್ಜಿಗೆ ನಿಮಗೆ ಸಹಾಯ ಮಾಡುತ್ತದೆ. ಮಜ್ಜಿಗೆಯು ಮೊಸರಿನಂತಹ ಪ್ರೋಬಯಾಟಿಕ್ ಗುಣಲಕ್ಷಣಗಳಿಂದ ಸಮೃದ್ಧ ಆಗಿದೆ. ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾದ ಬೆಳವಣಿಗೆ ಸೀಮಿತಗೊಳಿಸುವ ಜೊತೆಗೆ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸುತ್ತದೆ.

    ಮಜ್ಜಿಗೆಯನ್ನು ಮುಖಕ್ಕೆ ಹಚ್ಚಿದರೆ ಮುಚ್ಚಿದ ರಂಧ್ರಗಳು ತೆರೆದುಕೊಳ್ಳುತ್ತವೆ. ಚರ್ಮದ ಕೋಶಗಳ ಬೆಳವಣಿಗೆ ವೇಗ ಹೆಚ್ಚಾಗುತ್ತದೆ. ಮತ್ತು ಚರ್ಮವು ಮುಕ್ತವಾಗಿ ಉಸಿರಾಡುತ್ತದೆ. ಇದು ಮೊಡವೆ ಕಡಿಮೆ ಮಾಡುತ್ತದೆ.

    ವಯಸ್ಸಿನ ಗುರುತುಗಳನ್ನು ದೂರವಿರಿಸುವುದು

    ಈ ನೈಸರ್ಗಿಕ ಪಾನೀಯವು ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಇದು ಸ್ವತಂತ್ರ ರಾಡಿಕಲ್ಗಳ ಬೆಳವಣಿಗೆ ಕಡಿಮೆ ಮಾಡುತ್ತದೆ. ಇದರ ಆರ್ಧ್ರಕ ಗುಣಲಕ್ಷಣ ಮತ್ತು ಒಣ ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ.

    ಮತ್ತೊಂದೆಡೆ ಓಟ್ ಮೀಲ್ ಜೊತೆಗೆ ಮಜ್ಜಿಗೆ ಅನ್ವಯಿಸುವುದು ಚರ್ಮವನ್ನು ಬಿಗಿ ಆಗಿಸುತ್ತದೆ. ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ. ಇದು ಮುಖಕ್ಕೆ ತುಂಬಾ ಯೌವನದ ನೋಟ  ನೀಡುತ್ತದೆ.

    ಸನ್ ಟ್ಯಾನ್ ಕಡಿಮೆ ಮಾಡುತ್ತದೆ

    ಬಿಸಿಲಿನಲ್ಲಿ ಹೋದ ನಂತರ ಟ್ಯಾನಿಂಗ್ ಸಂಭವಿಸುತ್ತದೆ. ಅದನ್ನು ತೆಗೆದು ಹಾಕಲು ಮಜ್ಜಿಗೆ ಬೆಸ್ಟ್ ಉಪಾಯ. ಮಜ್ಜಿಗೆಯನ್ನು ಅಲೋವೆರಾ ಜೊತೆ ಬೆರೆಸಿ ಹಚ್ಚಿದರೆ ಚರ್ಮವನ್ನು ತಗ್ಗಿಸುತ್ತದೆ ಮತ್ತು ಆಳವಾಗಿ ಪೋಷಿಸುವಾಗ ಅದನ್ನು ಮೃದುವಾಗಿಸುತ್ತದೆ.

    ಮಜ್ಜಿಗೆಯ ಲ್ಯಾಕ್ಟಿಕ್ ಆಸಿಡ್ ಮತ್ತು ಆಲ್ಫಾ ಹೈಡ್ರಾಕ್ಸಿ ಆಸಿಡ್ ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವ ಮೂಲಕ ಚರ್ಮಕ್ಕೆ ಹೊಳಪು ನೀಡುತ್ತದೆ. ಇದು ಟ್ಯಾನಿಂಗ್ ಪರಿಣಾಮ ತೆಗೆದು ಹಾಕುತ್ತದೆ.

    ಕೂದಲು ಬೆಳವಣಿಗೆ ಹೆಚ್ಚಿಸುತ್ತದೆ

    ಕೂದಲಿನ ಬೆಳವಣಿಗೆ ಹೆಚ್ಚಿಸಲು, ಮಜ್ಜಿಗೆ, ಬೇಳೆ ಹಿಟ್ಟು ಮತ್ತು ಆಲಿವ್ ಎಣ್ಣೆ ಬೆರೆಸಿ ಹೇರ್ ಪ್ಯಾಕ್ ತಯಾರಿಸಿ. ಈ ಹೇರ್ ಪ್ಯಾಕ್ ನನ್ನು ನೆತ್ತಿಗೆ ಮಸಾಜ್ ಮಾಡಿ. ನಲವತ್ತು ನಿಮಿಷಗಳ ನಂತರ ಶಾಂಪೂ ಹಾಕಿ ತೊಳೆಯಿರಿ. ಇದು ಕೂದಲು ಹೊಸದಾಗಿ ಹುಟ್ಟಲು ಸಹಕಾರಿ. ತಲೆಹೊಟ್ಟು ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: ಕೊಬ್ಬಿನ ಪಿತ್ತಜನಕಾಂಗ ಕಾಯಿಲೆ ಹೋಗಲಾಡಿಸಲು ಈ ರೀತಿ ಮಾಡಿ, ಇಲ್ಲಿದೆ ಸುಲಭ ಉಪಾಯ

    ಪ್ರೋಟೀನ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿರುವ  ಮಾಸ್ಕ್ ಕೂದಲು ಮತ್ತು ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ. ಕೂದಲನ್ನು ಬಲಪಡಿಸುತ್ತದೆ. ಕೂದಲು ವೇಗವಾಗಿ ಬೆಳೆಯಲು ಸಹಕಾರಿ.
    Published by:renukadariyannavar
    First published: