ದೇಹದಲ್ಲಿ ಕೊಲೆಸ್ಟ್ರಾಲ್ ಸಮಸ್ಯೆ (Body Cholesterol Problem) ಕೆಲವರನ್ನು ಅತಿಯಾಗಿ ಬಾಧಿಸುತ್ತದೆ. ಕೊಲೆಸ್ಟ್ರಾಲ್ ನಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಎರಡು ವಿಧಗಳಿವೆ. ಎಲ್ ಡಿಎಲ್ ಎಂಬುದು ಕೆಟ್ಟ ಕೊಲೆಸ್ಟ್ರಾಲ್ ಆಗಿದೆ. ಅಂದರೆ ಅದು ಒಂದು ದೇಹದಲ್ಲಿ ಕಾಣಿಸುವ ಕೊಳಕು ವಸ್ತು ಆಗಿದೆ. ಅದು ದೇಹದಲ್ಲಿ ಯಾವುದೇ ರೀತಿಯ ಕೆಲಸ ಮಾಡಲ್ಲ. ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೆ ಅದು ಕಾಯಿಲೆಗಳನ್ನು (Diseases) ಹೆಚ್ಚು ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಬೊಜ್ಜು (Fat) ಹೆಚ್ಚಳಕ್ಕೆ ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಂತೆ ದೇಹವು ಕಾಯಿಲೆಗಳ ಗೂಡಾಗುತ್ತದೆ. ಅಷ್ಟೇ ಅಲ್ಲದೇ ಹೃದಯ ಸಂಬಂಧಿ ಕಾಯಿಲೆ ಹಾಗೂ ಹೃದಯಾಘಾತಕ್ಕೆ ಕಾರಣ ಆಗುತ್ತದೆ.
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ಸಮಸ್ಯೆ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್, ಉತ್ತಮ ಕೊಲೆಸ್ಟ್ರಾಲ್ ಗಿಂತ ಸಾಕಷ್ಟು ಭಿನ್ನವಾಗಿದೆ ಎಂದು ತಜ್ಞರು ಹೇಳುತ್ತಾರೆ. ಯಕೃತ್ತು ಉತ್ತಮವಾಗಿರುವುದು ಮತ್ತು ಹೆಲ್ದೀ ಆಗಿರುವುದು ಮುಖ್ಯ. ಯಾಕಂದ್ರೆ ಯಕೃತ್ತು ಸಾಕಷ್ಟು ಉತ್ತಮ ಮತ್ತು ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ನ್ನು ಉತ್ಪತ್ತಿ ಮಾಡುತ್ತದೆ.
ಆದರೆ ಉತ್ತಮ ಆಹಾರ ಸೇವನೆಯು ಮುಖ್ಯ. ಯಾಕಂದ್ರೆ ನೀವು ಎಷ್ಟು ಜಂಕ್ ಫುಡ್ ಮತ್ತು ಕರಿದ ಹಾಗೂ ಬೇಕರಿಯ ತಿಂಡಿ, ಕೊಬ್ಬಿನ ಆಹಾರ ಸೇವನೆ ಮಾಡುತ್ತೀರೋ ಅಷ್ಟು ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗುತ್ತದೆ. ಮತ್ತು ರಕ್ತನಾಳಗಳಲ್ಲಿ ಅದು ಸಂಗ್ರಹ ಆಗುತ್ತದೆ.
ಯಾವೆಲ್ಲಾ ಪದಾರ್ಥಗಳ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ?
ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬು ಹೊಂದಿರುವ ಪದಾರ್ಥ ಮತ್ತು ಆಹಾರ ಸೇವನೆ ಮಾಡಿದರೆ ಅದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕರಿದ ಹಾಗೂ ಜಂಕ್ ಫುಡ್ ಆಹಾರ ಪದಾರ್ಥ ಸೇವನೆ, ಸಕ್ಕರೆ, ಮೈದಾ ಹಿಟ್ಟಿನ ಪದಾರ್ಥಗಳ ಅಧಿಕ ಸೇವನೆ ಅಪಾಯಕಾರಿ ಆಗಿದೆ.
ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಲು ಕೊಬ್ಬು ಸಹಿತ ಪದಾರ್ಥ, ಬೆಣ್ಣೆ, ತುಪ್ಪ, ಮಾಂಸ, ಚೀಸ್, ಡೈರಿ ಉತ್ಪನ್ನ, ಐಸ್ ಕ್ರೀಂ, ತೆಂಗಿನ ಎಣ್ಣೆ ಮುಂತಾದ ಆಹಾರ ಕೊಬ್ಬು ಹೆಚ್ಚಿದೆ. ಇದು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಅಂತಾರೆ ತಜ್ಞರು.
ಕೆಟ್ಟ ಕೊಲೆಸ್ಟ್ರಾಲ್ ಹೃದಯ ತಲುಪಿದರೆ ಅಪಾಯ
ಅಧಿಕ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಜಿಗುಟಾದ ಪದಾರ್ಥಗಳ ಶೇಖರಣೆ ಆಗಲು ಕಾರಣವಾಗುತ್ತದೆ. ರಕ್ತನಾಳದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವು ತುಂಬಾ ಹೆಚ್ಚಾದರೆ ಅದು ರಕ್ತನಾಳವನ್ನು ಬ್ಲಾಕ್ ಮಾಡುತ್ತದೆ. ಹಾಗೂ ರಕ್ತವು ಸಾಕಷ್ಟು ಪ್ರಮಾಣದಲ್ಲಿ ಹರಿಯುವುದಿಲ್ಲ.
ಅನೇಕ ಬಾರಿ ಈ ವಸ್ತುವು ಒಡೆಯುತ್ತದೆ. ಜೊತೆಗೆ ಹೃದಯದ ಬಳಿ ತಲುಪುತ್ತದೆ. ಹೀಗೆ ಕೆಟ್ಟ ಕೊಲೆಸ್ಟ್ರಾಲ್ ಹೃದಯ ರಕ್ತನಾಳಗಳನ್ನು ಬ್ಲಾಕ್ ಮಾಡಿದರೆ ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ.
ನಾರಿನಂಶವಿರುವ ಆಹಾರ ಸೇವನೆ ಮಾಡಿ
ನಾರಿನಂಶವಿರುವ ಆಹಾರ ಸೇವನೆ ಮಾಡಿದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದಿಲ್ಲ. ಕರಗುವ ಫೈಬರ್ ಕರುಳಿನಲ್ಲಿ ಕೊಲೆಸ್ಟ್ರಾಲ್ ಬಂಧಿಸುತ್ತದೆ. ಜೊತೆಗೆ ದೇಹದಿಂದ ಮಲ ರೂಪದಲ್ಲಿ ಹೊರಗೆ ಹೋಗುತ್ತದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮೊದಲು ಫೈಬರ್ ಭರಿತ ಪದಾರ್ಥ ಸೇವನೆ ಮಾಡಿ.
ಸೇಬು ಹಣ್ಣು ತಿನ್ನುವುದು ರೂಢಿಸಿಕೊಳ್ಳಿ
ಒಂದು ಮಧ್ಯಮ ಗಾತ್ರದ ಸೇಬು, ಒಂದು ಗ್ರಾಂ ಕರಗುವ ಫೈಬರ್ ಹೊಂದಿದೆ. ಹಾಗಾಗಿ ಆಹಾರದಲ್ಲಿ ಸೇಬು ತಿನ್ನುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಪ್ರತಿದಿನ ಎರಡು ಸೇಬು ತಿನ್ನಬಹುದು.
ಕ್ಯಾರೆಟ್ ಸೇವನೆ ಮಾಡಿ
ಕ್ಯಾರೆಟ್ನಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವಿದೆ. ಕ್ಯಾರೆಟ್ ಸೇವಿಸಿದರೆ ರಕ್ತನಾಳಗಳಲ್ಲಿ ಕೊಳೆ ಸಂಗ್ರಹ ಆಗಲ್ಲ. 128 ಗ್ರಾಂ ಕ್ಯಾರೆಟ್ ನಲ್ಲಿ ಸುಮಾರು 2.4 ಗ್ರಾಂ ಕರಗುವ ಫೈಬರ್ ಇದೆ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ಬಟಾಣಿ, ಓಟ್ಸ್ ಮತ್ತು ಇಸಾಬ್ಗೋಲ್ ಸೇವನೆ
ಕರಗುವ ನಾರು ಬಟಾಣಿ ಮತ್ತು ಓಟ್ಸ್ ಜೊತೆಗೆ ಇಸಾಬ್ಗೋಲ್ ಸಿಪ್ಪೆಯಲ್ಲಿದೆ. ಬಟಾಣಿ ಮತ್ತು ಓಟ್ಸ್ ಅನ್ನು ಆಹಾರವಾಗಿ ಬೇಯಿಸಿ ತಿನ್ನಬಹುದು. ದಿನಕ್ಕೆ ಎರಡು ಬಾರಿ ಇಸಾಬ್ಗೋಲ್ ಸಿಪ್ಪೆ ಸೇವನೆ ಪ್ರಯೋಜನಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ