• Home
  • »
  • News
  • »
  • lifestyle
  • »
  • Tour: ಶ್ರೀಮಂತ ವ್ಯಕ್ತಿಗಳ ಪ್ರವಾಸ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

Tour: ಶ್ರೀಮಂತ ವ್ಯಕ್ತಿಗಳ ಪ್ರವಾಸ ಹೇಗಿರುತ್ತೆ ಗೊತ್ತಾ? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶ್ರೀಮಂತರು, ಗಣ್ಯ ವ್ಯಕ್ತಿಗಳೂ ಸಹ ಪ್ರವಾಸ ಮಾಡುವುದುಂಟು ಹಾಗೂ ಅವರು ಈ ರೀತಿಯ ವಿಚಾರಗಳನ್ನು ಹೇಗೆ ಪರಿಗಣಿಸುತ್ತಾರೆ ಎಂಬುದರ ಬಗ್ಗೆ ಒಮ್ಮೊಮ್ಮೆ ಸಾಮಾನ್ಯ ಜನರಲ್ಲಿ ಸಾಕಷ್ಟು ಕುತೂಹಲ ಕೆರಳಿಸುವುದು ಸಾಮಾನ್ಯ. ಆ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನೊಮ್ಮೆ ಓದಿ.

  • Share this:

ಸಾಮಾನ್ಯವಾಗಿ ಪ್ರವಾಸ ಎಂಬುದು ಪ್ರತಿಯೊಬ್ಬರೂ ಮಾಡಲು ಇಷ್ಟಪಡುವ ಚಟುವಟಿಕೆಯಾಗಿದೆ. ಮಧ್ಯಮ ವರ್ಗದ ಜನರು ತಮ್ಮ ಕುಟುಂಬದೊಡನೆಯೋ (Family) ಅಥವಾ ಸ್ನೇಹಿತರೊಡನೆಯೋ ಪ್ರವಾಸ (Tour) ಮಾಡಲು ಯೋಚಿಸಿದರೆ ಅದಕ್ಕಾಗಿ ಮುಂಚಿತವಾಗಿಯೇ ಸಾಕಷ್ಟು ಯೋಜನೆಗಳನ್ನು ಹಾಕಬೇಕಾಗುತ್ತದೆ. ಉದಾಹರಣೆಗೆ ಎಲ್ಲಿಗೆ ಹೋಗಬೇಕು, ಅಲ್ಲಿನ ಹೋಟೆಲ್ ಗಳ (Hotel) ಬಾಡಿಗೆ ಎಷ್ಟು, ಯಾವ ಕಡೆ ಊಟ (Lunch) ಚೆನ್ನಾಗಿ ಸಿಗಬಹುದು ಎಂಬೆಲ್ಲ ಸಂಗತಿಗಳನ್ನು ಸಾಕಷ್ಟು ಪರಿಗಣಿಸಬೇಕಾಗುತ್ತದೆ. ಆದರೆ, ಶ್ರೀಮಂತರು, ಗಣ್ಯ ವ್ಯಕ್ತಿಗಳೂ ಸಹ ಪ್ರವಾಸ ಮಾಡುವುದುಂಟು ಹಾಗೂ ಅವರು ಈ ರೀತಿಯ ವಿಚಾರಗಳನ್ನು ಹೇಗೆ ಪರಿಗಣಿಸುತ್ತಾರೆ ಎಂಬುದರ ಬಗ್ಗೆ ಒಮ್ಮೊಮ್ಮೆ ಸಾಮಾನ್ಯ ಜನರಲ್ಲಿ (People) ಸಾಕಷ್ಟು ಕುತೂಹಲ ಕೆರಳಿಸುವುದು ಸಾಮಾನ್ಯ. ಆ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನೊಮ್ಮೆ ಓದಿ.


ಶ್ರೀಮಂತ ವ್ಯಕ್ತಿಗಳು ಪ್ರವಾಸ ಮಾಡುವ ಹಲವು ಆಸಕ್ತಿಕರ ವಿಷಯಗಳು
ಗಣ್ಯ ಅಥವಾ ಶ್ರೀಮಂತ ವ್ಯಕ್ತಿಗಳು ಪ್ರವಾಸ ಮಾಡುವಾಗ ಅವರಿಗೆ ಹಣ ದೊಡ್ಡ ಸಮಸ್ಯೆಯಲ್ಲ, ಬದಲಾಗಿ ಅವರು ವ್ಯಯಿಸುವ ಹಣಕ್ಕೆ ಸರಿಯಾದ ಮೌಲ್ಯವರ್ಧಿತ ಸೇವೆ ಸಿಗುತ್ತದೆಯೇ ಎಂಬುದು ಅವರ ಆದ್ಯತೆಯಾಗಿರುತ್ತದೆ. ಇಂತಹ ಕೆಲವು ಅವರ ನಿರೀಕ್ಷೆಗಳನ್ನು ಸಮರ್ಥವಾಗಿ ಬಲ್ಲ ಕೆಲ ಪ್ರವಾಸ ಆಯೋಜಕರು ಅಂತಹ ಪ್ರವಾಸಗಳನ್ನು ಅವರೇ ಆ ಶ್ರೀಮಂತ ವ್ಯಕ್ತಿಗಳಿಗಾಗಿ ಆಯೋಜಿಸುವುದು ಸಾಮಾನ್ಯ. ಇಂತಹುದ್ದೆ ಒಬ್ಬ ಪ್ರವಾಸ ಆಯೋಜಕಿಯಾಗಿರುವ ಜ್ಯಾಕ್ಲಿನ್ ಸಿಯೆನ್ನಾ ಇಂಡಿಯಾ ಎಂಬ ವೃತ್ತಿಪರ ಪ್ರವಾಸ ಮಾರ್ಗರ್ದರ್ಶಿ ಅವರು ಮಾಧ್ಯಮವೊಂದಕ್ಕೆ ನೀಡಿದ ತಮ್ಮ ಸಂದರ್ಶನದಲ್ಲಿ ಹಲವು ಆಸಕ್ತಿಕರ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ.


ಈ ಬಗ್ಗೆ ಸಿಯೆನ್ನಾ ಅವರ ಅನುಭವ ಹೇಗಿದೆ ಗೊತ್ತಾ?:


ಸಿಯೆನ್ನಾ ಅವರು ಪಂಚತಾರಾ ಹೋಟೆಲ್ ಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು ಆ ವೃತ್ತಿಯಿಂದಲೇ ಅವರು ಗಣ್ಯ ಹಾಗೂ ಸಿರಿವಂತರ ನಿರೀಕ್ಷೆಗಳು ಹೇಗಿರುತ್ತವೆ ಎಂಬುದನ್ನು ಬಹು ಹತ್ತಿರದಿಂದ ತಿಳಿದುಕೊಂಡಿದ್ದಾರೆ. ಅವರೇ ಸ್ವತಃ ಈ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡುತ್ತಾರೆ, "ನಾನು ಅತ್ಯುತ್ತಮವಾದ ಆಹಾರ, ವೈನ್ ಹಾಗೂ ಸೇವೆಗಳಿಗೆ ಆಕರ್ಷಿತಳಾಗಿದ್ದೆ, ನನ್ನ ಈ ಆಕರ್ಷಣೆಯೇ ನನ್ನನ್ನು ಪ್ರವಾಸ ಚಟುವಟಿಕೆಗೆ ತೆರೆದುಕೊಳ್ಳುವಂತೆ ಮಾಡಿತು, ಹಾಗಾಗಿ ನಾನು ಹಲವು ವೈವಿಧ್ಯಮಯ ಹೋಟೆಲ್ ಗಳಿಗೆ ಭೇಟಿ ನೀಡುವಂತಾದೆ, ವಿವಿಧ ಸ್ಥಳಗಳಿಗೆ ಹೋಗಿ ಅಲ್ಲಿನ ವಿಶೇಷ ಖಾದ್ಯಗಳ ಬಗ್ಗೆ ಅರಿಯುವಂತಾದೆ, ನನಗೆ ಮುಂಚೆಯಿಂದಲೂ ಅತಿ ಶ್ರೀಮಂತ ವ್ಯಕ್ತಿಗಳ ನಿರೀಕ್ಷೆಗಳು ಏನು ಇರುತ್ತವೆ ಎಂಬುದರ ಬಗ್ಗೆ ಅಂತಃಪ್ರಜ್ಞೆಯಿದೆ" ಎನ್ನುತ್ತಾರೆ.


ಹಾಗಾಗಿಯೇ ಅವರು, 2008 ರಲ್ಲಿ ತಮ್ಮದೆ ಆದ ಪ್ರವಾಸಿ ಕಂಪನಿ ಸಿಯೆನ್ನಾ ಚಾರ್ಲ್ಸ್ ಅನ್ನು ಸ್ಥಾಪಿಸಿದರು. ಅದೀಗ ಸಾಕಷ್ಟು ದೊಡ್ಡದಾಗಿ ಬೆಳೆದಿದ್ದು ಕೋಟಿ ರೂ. ಗಳಷ್ಟು ವಾರ್ಷಿಕ ಶುಲ್ಕ ಭರಿಸುವಂತಹ ಸಿರಿವಂತ ಸದಸ್ಯರನ್ನು ಹೊಂದಿದೆ. ಸಿಯೆನ್ನಾ ಹೇಳುವಂತೆ, ಅವರು ಈಗಾಗಲೇ 90 ದೇಶಗಳನ್ನು ಸುತ್ತಿದ್ದು ವರ್ಷದಲ್ಲಿ 200 ದಿನಗಳನ್ನು ಜಗತ್ತಿನಲ್ಲಿ ಯಾವ ಯಾವ ಮೂಲೆಗಳಲ್ಲಿ ಅತ್ಯುತ್ತಮವಾದ ಹೋಟೆಲ್, ಖಾದ್ಯ, ಯಾಟ್ ಸೇವೆಗಳಿವೆ ಎಂಬುದನ್ನು ಪರಿಶೀಲಿಸಿದ್ದಾರೆ.


ಪ್ರೀತಿ ಹಾಗೂ ಸಂತೃಪ್ತ ಮನೋಭಾವನೆಯಿಂದ ಮಾಡಿರುವ ಖಾದ್ಯಗಳು:


ಈ ಬಗ್ಗೆ ಅವರು ಹೀಗೆ ನುಡಿಯುತ್ತಾರೆ, "ನಾನು ಮೂರನೇ ಜಗತ್ತಿನ ರಾಷ್ಟ್ರಗಳಿಗೂ ಸಹ ಭೇಟಿ ನೀಡಿದ್ದು ಅಲ್ಲಿನ ಡಾಲರ್ ಗಿಂತಲೂ ಕಡಿಮೆ ಮೌಲ್ಯವಿರುವ ಊಟದ ಅತ್ಯದ್ಭುತತೆಯನ್ನು ಕಂಡಿರುವೆ, ಕೆಲವೊಮ್ಮೆ ಸಾವಿರ ಸಾವಿರ ಡಾಲರ್ ಮೌಲ್ಯಕ್ಕಿಂತಲೂ ಪ್ರೀತಿ ಹಾಗೂ ಸಂತೃಪ್ತ ಮನೋಭಾವನೆಯಿಂದ ಮಾಡಿರಬಹುದಾದ ಖಾದ್ಯಗಳು ಅತಿ ಅದ್ಭುತವಾಗಿರುತ್ತವೆ, ಜನರು ದೊಡ್ಡ ಮೊತ್ತಕ್ಕಿಂತಲೂ ಇಂತಹ ಸುಂದರವಾದವುಗಳನ್ನೆ ಹೆಚ್ಚು ಇಷ್ಟಪಡುತ್ತಾರೆ" ಎನ್ನುತ್ತಾರೆ ಅವರು.


ಜಾರ್ಜ್ ಬುಶ್, ಅವರ ಪತ್ನಿ ಹಾಗೂ ಇತರೆ ನಾಲ್ಕು ಜನ ಸ್ನೇಹಿತರ ಪ್ರವಾಸ:


2015 ರಲ್ಲಿ ಸಿಯೆನ್ನಾ ಅವರು ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಶ್, ಅವರ ಪತ್ನಿ ಹಾಗೂ ಇತರೆ ನಾಲ್ಕು ಜನ ಸ್ನೇಹಿತರಿಗೆ ಪ್ರವಾಸವೊಂದನ್ನು ಆಯೋಜಿಸಿದ್ದರು. ಆ ಪ್ರವಾಸ ಸ್ಥಳ ಇಥಿಯೋಪಿಯಾದ ಅತಿ ರಿಮೋಟ್ ಪ್ರದೇಶಗಳಾಗಿದ್ದವು.


ಇದನ್ನೂ ಓದಿ: Sugar: ಸಂಶೋಧನೆಗಳ ಪ್ರಕಾರ ಸಮುದ್ರದ ಕೆಳಭಾಗದಲ್ಲಿ ಇದ್ಯಂತೆ '32 ಬಿಲಿಯನ್ ಕ್ಯಾನ್ ಕೋಕ್'ಗೆ ಸಮಾನವಾದ ಸಕ್ಕರೆ!


ಸಿಯೆನ್ನಾ ಮುಂಚಿತವಾಗಿಯೇ ಆ ಪ್ರದೇಶದಲ್ಲಿ ತಮ್ಮ ಗ್ರಾಹಕರ ನಿರೀಕ್ಷೆಗಳಿಗನುಗುಣವಾಗಿ ಇರುವ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದರು. ಆದರೆ, ಅವರಿಗೆ ಯಾವುದೇ ರೀತಿಯ ತೃಪ್ತಿ ಸಿಗದೆ ಇದ್ದಾಗ ಅವರು ಸ್ವತಃ ಅಲ್ಲಿನ ಸ್ಥಳೀಯ ಪಾಲುದಾರರೊಂದಿಗೆ ಸೇರಿ ತಮ್ಮ ಗ್ರಾಹಕರಿಗಾಗಿ ಅಲ್ಲಿ ಲಕ್ಸುರಿ ಕ್ಯಾಂಪ್ ಒಂದನ್ನು ನಿರ್ಮಿಸಿದರು. ಅಲ್ಲಿ ಅವರು ತಮ್ಮ ಗ್ರಾಹಕರಿಗಿಷ್ಟವಾಗುವಂತಹ ಎಲ್ಲ ಪಾನೀಯ ಹಾಗೂ ಖಾದ್ಯಗಳು ಸಿಗುವಂತೆ ನೋಡಿಕೊಂಡರು.


ಅವರ ಈ ರೀತಿಯ ಆಯೋಜನೆಗಳು ಇಲ್ಲಿಗಷ್ಟೆ ಸೀಮಿತವಾಗಿಲ್ಲ, ಒಂದೊಮ್ಮೆ ಅವರು ತಮ್ಮ ಗ್ರಾಹಕರಿಗಾಗಿ ಪ್ಯಾರಿಸ್ ದೇಶದ ಒಂದು ಅದ್ಭುತ ದೃಶ್ಯವನ್ನು ಮಿಯಾಮಿಯಲ್ಲಿ ಸಂಘಟಿಸಿದ್ದರು ಹಾಗೂ ಅಲ್ಲಿ ಜನಪ್ರಿಯ ಬಾಣಸಿಗರೊಬ್ಬರಿಂದ ವಿಶೇಷವಾದ ಖಾದ್ಯದ ವಿನ್ಯಾಸ ಮಾಡಿಸಿದ್ದರು. ಇನ್ನೊಮ್ಮೆ ಲಾಸ್ ವೇಗಾಸ್ ನಲ್ಲಿ ಕಾರ್ಯಕ್ರಮ ಮುಗಿದ ಮೇಲೆ ಜನಪ್ರೀಯ ಗಾಯಕಿ ಹಾಗೂ ನಟಿ ಜೆನಿಫರ್ ಲೋಪೆಜ್ ಅವರು ತಮ್ಮ ಗ್ರಾಹಕರನ್ನು ಭೇಟಿ ಮಾಡುವಂತೆ ಆಯೋಜನೆ ಮಾಡಿದ್ದರು.


ಸಿರಿವಂತರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸುಲಭವಲ್ಲ:


ಸಿಯೆನ್ನಾ ಹೇಳುವಂತೆ ಸಿರಿವಂತರನ್ನು ಅವರ ಹಾಯಾದ, ಎಲ್ಲ ಐಷಾರಾಮಿ ಸೌಲಭ್ಯಗಳಿಂದ ಹೊರಬರುವಂತೆ ಮಾಡಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸುಲಭವಲ್ಲ. ಅವರು ಹೆಚ್ಚು ಹಣ ವ್ಯಯಿಸುತ್ತಾರೆಂದರೆ ಅವರ ನಿರೀಕ್ಷೆಗಳು ಸಹ ಹೆಚ್ಚಾಗಿಯೇ ಇರುತ್ತವೆ. ಕೆಲವೊಮ್ಮೆ ಪ್ರತಿ ಪ್ರವಾಸಿಗರು ಹೋಗುವಂತಹ ಸ್ಥಳಕ್ಕೆ ಪರ್ಯಾಯವಾಗಿ ಬೇರೆ ರೀತಿಯ ಎಲ್ಲರೂ ಪ್ರಯಾಣಿಸಲಾಗದ ಶಾಂತ ತಾಣಗಳಿಗೆ ಭೇಟಿ ನೀಡುವುದು ಉತ್ತಮ. ಅಲ್ಲದೆ, ಯಾಟ್ ಸೇವೆಗಳು ಸಿರಿವಂತರಲ್ಲಿ ಹೆಚ್ಚು ಆಕರ್ಷಣಿಯವಾಗಿದ್ದು ಸಿಯೆನ್ನಾ ಋತುಮಾನಗಳಿಗೆ ತಕ್ಕಂತೆ ತಮ್ಮ ಗ್ರಾಹಕರಿಗಾಗಿ ಯಾಟ್ ಗಳನ್ನು ಬುಕ್ ಮಾಡುತ್ತಲೇ ಇರುತ್ತಾರೆ.


ಹಣಕ್ಕೆ ತಕ್ಕ ಪ್ರತಿಸ್ಪಂದನೆಯನ್ನು ಅಪೇಕ್ಷಿಸುತ್ತಾರೆ:


ಸಿಯೆನ್ನಾ ಹೇಳುವಂತೆ ಸಿರಿವಂತರು ಸಾಮಾನ್ಯವಾಗಿ ತಮ್ಮ ಪ್ರವಾಸಕ್ಕಾಗಿ ಅತಿ ಹೆಚ್ಚು ಹಣ ವ್ಯಯಿಸುವುದರಿಂದ ಅದಕ್ಕೆ ತಕ್ಕುದಾದ ಪ್ರತಿಸ್ಪಂದನೆಯನ್ನು ಅಪೇಕ್ಷಿಸುತ್ತಾರೆ. ಅವರು ಭೇಟಿ ನೀಡುವ ಹೋಟೆಲ್ ಗಳಿಗೆ ಹೋಟೆಲ್ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸುವುದನ್ನು ಬಯಸುತ್ತಾರೆ, ಬಾಣಸಿಗರು ಸಂತಸದಿಂದ ತಮ್ಮ ವೃತ್ತಿಯನ್ನು ನಿರ್ವಹಿಸುವುದನ್ನು ಅವರು ಇಷ್ಟಪಡುತ್ತಾರೆ.


ಇದನ್ನೂ ಓದಿ:  Explained: ಪೆಸಿಫಿಕ್ ಮಹಾಸಾಗರದ ತಳದಲ್ಲಿ ಇದ್ಯಂತೆ 'ಹಳದಿ ಇಟ್ಟಿಗೆಯ ರಸ್ತೆ’! ಸಮುದ್ರ ತಜ್ಞರ ತಂಡದಿಂದ ಪತ್ತೆ


ಅವರು ಬೆಲೆಗೆ ತಕ್ಕ ಹಾಗೇ ಮೌಲ್ಯವರ್ಧಿತ ಸೇವೆಗಳನ್ನು ಬಯಸುತ್ತಾರೆ. ಹಾಗಾಗಿಯೇ ಅವರ ಎಲ್ಲ ನಿರೀಕ್ಷೆಗಳನ್ನು ಸರಿಯಾಗಿ ಅರ್ಥೈಸಿಕೊಂಡು ಸಿಯೆನ್ನಾರಂತಹ ಪ್ರವಾಸ ಆಯೋಜಕರು ಎಲ್ಲವನ್ನು ಮುಂಚಿತವಾಗಿಯೇ ಪರಿಶೀಲಿಸಿ ಬುಕ್ ಮಾಡುವ ಮೂಲಕ ಸಿರಿವಂತರು ಹಾಗೂ ಗಣ್ಯರು ಪ್ರವಾಸದ ಅದ್ಭುತ ಸವಿಯನ್ನು ಉಣ್ಣುವಂತೆ ತಮ್ಮ ಕೆಲಸ ನಿರ್ವಹಿಸುತ್ತಾರೆ.

Published by:Ashwini Prabhu
First published: