Protein: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

ಸಾಮಾನ್ಯವಾಗಿ ಮಾಂಸಾಹಾರವನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಆದರೆ ಸಸ್ಯಾಹಾರಿ ಆಹಾರ ಸೇವಿಸುವವರು ಯಾವ ಮೂಲಗಳಿಂದ ಪ್ರೊಟೀನ್ ಅವಶ್ಯಕತೆಯನ್ನು ಪೂರೈಸಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಾಮಾನ್ಯವಾಗಿ ಪ್ರೊಟೀನ್ (Protein) ಎಲ್ಲರ ಅತೀ ಅವಶ್ಯಕತೆಯ ಅಂಶವಾಗಿದೆ. ಪ್ರೊಟೀನ್ ದೇಹದಲ್ಲಿ (Body) ಉಂಟಾಗುವ ತೊಂದರೆಗಳನ್ನು (Problems) ತೆಗೆದು ಹಾಕಿ ದೇಹವನ್ನು ದುರ್ಬಲವಾಗದಂತೆ ನೋಡಿಕೊಳ್ಳುತ್ತದೆ. ಪ್ರೋಟೀನ್ ನಮ್ಮ ದೇಹಕ್ಕೆ ಬೇಕಾದ ಮತ್ತು ಅಗತ್ಯವಿರುವ ಶಕ್ತಿಯನ್ನು (Energy) ನೀಡುವ ಕೆಲಸ ಮಾಡುತ್ತದೆ. ನಮ್ಮ ದೈನಂದಿನ ಆಹಾರದಲ್ಲಿ (Food) ಪ್ರೋಟೀನ್ ಅತ್ಯಗತ್ಯವಿದೆ. ಪ್ರೊಟೀನ್ ವ್ಯಕ್ತಿಯನ್ನು ಆರೋಗ್ಯವಾಗಿಡಲು ಸಹಕಾರಿ ಆಗಿದೆ. ಸಾಮಾನ್ಯವಾಗಿ ಮಾಂಸಾಹಾರವನ್ನು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಮಾಂಸದಲ್ಲಿ ಪ್ರೊಟೀನ್ ಪ್ರಮಾಣ ತುಂಬಾ ಹೆಚ್ಚಿಗೆ ಇರುತ್ತದೆ ಎಂಬುದು ನಿಜವಾದ ಸಂಗತಿ. ಆದರೆ ಸಸ್ಯಾಹಾರಿ ಆಹಾರ ಸೇವಿಸುವವರು ಯಾವ ಮೂಲಗಳಿಂದ ಪ್ರೊಟೀನ್ ಅವಶ್ಯಕತೆಯನ್ನು ಪೂರೈಸಿಕೊಳ್ಳಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ.

    ಸಸ್ಯಾಹಾರಿಗಳು ವಿವಿಧ ತರಕಾರಿ, ಕಾಳುಗಳಿಂದ ಬೇಕಾದಷ್ಟು ಪ್ರೊಟೀನ್ ನನ್ನು ಪಡೆಯಬಹುದು. ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ಹೋಗಲಾಡಿಸಲು ಸಸ್ಯಾಹಾರಿಗಳು ಕೆಲ ತರಕಾರಿ ಮತ್ತು ಬೇಳೆ ಕಾಳುಗಳನ್ನು ಆಹಾರದಲ್ಲಿ ಸೇರಿಸುವುದು ಅತೀ ಅವಶ್ಯಕ. ಪ್ರತಿದಿನ ನಿಮಗೆ ಸಾಕಷ್ಟು ಪ್ರೋಟೀನ್ ನೀಡುವ ಕೆಲವು ಸಸ್ಯಾಹಾರಿ ಆಹಾರಗಳು ಇಲ್ಲಿವೆ.

    ಆಹಾರದಲ್ಲಿ ಕಾಟೇಜ್ ಚೀಸ್ ಸೇರಿಸಿಕೊಳ್ಳಿ

    ಪನೀರ್ ಆರೋಗ್ಯಕ್ಕೂ ಮತ್ತು ತಿನ್ನಲು ತುಂಬಾ ರುಚಿಕರ ಹಾಗೂ ಅಷ್ಟೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ವಿಶೇಷವೆಂದರೆ ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಇದು ಮೂಳೆಗಳು, ಜೀವಕೋಶಗಳು, ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

    ಸಸ್ಯಾಹಾರಿಗಳು ಆಹಾರದಲ್ಲಿ ಸೋಯಾಬೀನ್ ಅನ್ನು ಸೇರಿಸಿ

    ಪ್ರೋಟೀನ್‌ನ ಉತ್ತಮ ಮೂಲವೆಂದು ಸೋಯಾಬೀನ್ ತುಂಡುಗಳನ್ನು ಪರಿಗಣಿಸಲಾಗುತ್ತದೆ. ಕಬ್ಬಿಣ, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಪೋಷಕಾಂಶಗಳು ಸೋಯಾಬೀನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತವೆ. ಬೇಗ ತೂಕ ಇಳಿಸಿಕೊಳ್ಳಲು ಬಯಸುವವರು ತಮ್ಮ ಆಹಾರದಲ್ಲಿ ಸೋಯಾಬೀನ್ ಅನ್ನು ಸೇರಿಸಿಕೊಳ್ಳುವ ಮೂಲಕ ಉತ್ತಮ ರಿಸಲ್ಟ್ ಪಡೆಯಬಹುದು.

    ಇದನ್ನೂ ಓದಿ: ಯಕೃತ್ತು ದಾನ ಹೇಗೆ ಮಾಡಲಾಗುತ್ತದೆ? ಆರೋಗ್ಯಕರ ಯಕೃತ್ತನ್ನು ಗುರುತಿಸುವುದು ಹೇಗೆ?

    ಬೇಳೆ ಕಾಳುಗಳು ಪ್ರೋಟೀನ್‌ನ ಅತ್ಯುತ್ತಮ ಮೂಲ

    ಬೇಳೆ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ. ನೀವು ಸಸ್ಯಾಹಾರಿಗಳಾಗಿದ್ದರೆ, ಖಂಡಿತವಾಗಿಯೂ ನಿಮ್ಮ ದೈನಂದಿನ ಆಹಾರದಲ್ಲಿ ಬೇಳೆ ಕಾಳುಗಳನ್ನು ಸೇರಿಸಿ. ಪ್ರೋಟೀನ್ ಜೊತೆಗೆ, ಹೆಚ್ಚಿನ ಪ್ರಮಾಣದ ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಹ ಬೆಲೆಯಲ್ಲಿ ಕಂಡು ಬರುತ್ತವೆ, ಇದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

    ನಾನ್ ವೆಜ್ ಬಿಡಬೇಕು ಎನ್ನುವವರಿಗೆ ಪ್ರೊಟೀನ್ ಚಿಂತೆ

    ಅನೇಕ ಜನರು ಉತ್ತಮ ಆರೋಗ್ಯಕ್ಕಾಗಿ ಮಾಂಸಾಹಾರ ಆಹಾರವನ್ನು ತ್ಯಜಿಸುತ್ತಿದ್ದಾರೆ. ಆದರೆ ನಾನ್ ವೆಜ್ ಅನ್ನು ಬಿಟ್ಟರೆ, ಸಸ್ಯಾಹಾರಿಯಾಗಲು ದೇಹದ ಪ್ರೋಟೀನ್ ಅಗತ್ಯವನ್ನು ಹೇಗೆ ಪೂರೈಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಮೊಟ್ಟೆ, ಚಿಕನ್, ಮಟನ್ ಇತ್ಯಾದಿಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ ಎಂದು ಎಲ್ಲರಿಗೂ ತಿಳಿದಿದೆ.

    ಸಸ್ಯಾಹಾರಿಯಾದ ನಂತರ ದೇಹದಲ್ಲಿನ ಪ್ರೋಟೀನ್ ಅಗತ್ಯಗಳನ್ನು ಪೂರೈಸುವ ಅಂತಹ ಅನೇಕ ಸಸ್ಯಾಹಾರಿ ಆಹಾರಗಳು ಕಂಡು ಬರುತ್ತವೆ. ಇದರಲ್ಲಿ ಮೊಟ್ಟೆ ಮತ್ತು ಕೋಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಕಂಡು ಬರುತ್ತದೆ.

    ಇದನ್ನೂ ಓದಿ: ಬೇಸಿಗೆಯಲ್ಲಿ ಕಚೇರಿಗೆ ಹೋಗುವ ಮೊದಲು ಯಾವ ರೀತಿಯ ಮೇಕಪ್ ಮಾಡಿದರೆ ಬೆಸ್ಟ್?   

    ದೇಹದಲ್ಲಿ ಪ್ರೋಟೀನ್ ಕೊರತೆಯಿಂದಾಗಿ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನೀವು ಸಸ್ಯಾಹಾರಿಯಾಗಿದ್ದರೆ ಅಥವಾ ಆಗಲು ಯೋಜಿಸುತ್ತಿದ್ದರೆ ಮೇಲೆ ಹೇಳಿದ ಈ ಆಹಾರ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನೀವು ಪ್ರೊಟೀನ್ ಪಡೆಯಬಹುದು.
    Published by:renukadariyannavar
    First published: